ವಿಷಯಕ್ಕೆ ಹೋಗು

ಸ್ಕಾಂದ ಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ಕಂದ ಪುರಾಣ ಇಂದ ಪುನರ್ನಿರ್ದೇಶಿತ)
A page from the Skanda Purana manuscript in Sanskrit language and Devanagari script
A leaf from a palm leaf of Skanda Purana manuscript book, held together by a thin rope

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಸ್ಕಂದ ಪುರಾಣ (स्कन्दपुराणम्) ಬಹುವಿಸ್ತಾರವಾದ ಪುರಾಣಗಳಲ್ಲಿ ಒಂದು. ಈಶ್ವರನ ಕುಮಾರನಾದ ಸುಬ್ರಹ್ಮಣ್ಯ ಸ್ವಾಮಿಯ ಜೀವನದ ಲೀಲೆ ಕುರಿತಾದ ವಿವರಣೆಯೇ ಈ ಪುರಾಣದ ಮುಖ್ಯ ವಿಷಯವಾಗಿದೆ. ಶಿವನ ಬಗ್ಗೆ ಇರುವ ಹಲವಾರು ಕಥೆಗಳು ಈ ಪುರಾಣದಲ್ಲಿ ಬರುತ್ತವೆ.

ಸ್ಕಂದಪ್ರೋಕ್ತವಾದುದು. ಶೈವತತ್ತ್ವಗಳಿದರಲ್ಲಿವೆ. ಈ ಹೆಸರಿನ ಪ್ರಾಚೀನಪುರಾಣವೀಗ ಅನುಪಲಬ್ಧ. ಸ್ಕಂದಪುರಾಣದ ಸಂಹಿತೆಗಳೆಂದೂ ಖಂಡಗಳೆಂದೂ ಹೇಳಿಕೊಳ್ಳುವ ಅನೇಕ ಕೃತಿಗಳಿದ್ದರೂ ಸ್ಕಂದಪುರಾಣವೆಂಬ ಹೆಸರುಳ್ಳ ಉಪಲಬ್ಧ ಪ್ರಾಚೀನಪ್ರತಿಯಲ್ಲಿ ಅವುಗಳಲ್ಲಾವುದೂ ಅಡಕವಾಗಿಲ್ಲ. ಇದರ ಪ್ರಾಚೀನ ಮೂಲದಲ್ಲಿ 81800 ಶ್ಲೋಕಗಳಿದ್ದುವೆಂದು ಹೇಳಿಕೆ. ಅದರ ಅಭಾವದಲ್ಲಿ ಅದಕ್ಕೀ ಉಪಲಬ್ಧ ಪ್ರತಿ ಎಲ್ಲ ಅಂಶಗಳಲ್ಲೂ ಸರಿಯಾಗಿ ಹೊಂದುತ್ತದೆಂದು ಹೇಳಲು ಸಾಧ್ಯವಿಲ್ಲ. ಸ್ಕಂದಪುರಾಣಕ್ಕೆ ಸೇರಿದುವೆಂದು ಹೇಳಿಕೊಳ್ಳುವ ಎಲ್ಲ ಕೃತಿಗಳ ಶ್ಲೋಕಗಳನ್ನೂ ಸೇರಿಸಿದರೆ 81800ಕ್ಕೂ ಹೆಚ್ಚು ಶ್ಲೋಕಗಳಾಗುತ್ತವೆ. ಉಪಲಬ್ಧ ಪ್ರತಿಯಲ್ಲಿ ಶಿವ, ಅಂಧಕಾಸುರರ ಯುದ್ಧಗಳೂ ನರಕ, ಸಂಸಾರ, ಯೋಗಗಳ ವಿವರಗಳೂ ಬಂದಿದ್ದರೂ ಪುರಾಣ ಪಂಚಲಕ್ಷಣಗಳು ಕಂಡುಬರುವುದಿಲ್ಲ.

ಸಂಹಿತೆಗಳು

[ಬದಲಾಯಿಸಿ]

ಇದಕ್ಕೆ ಆರು ಸಂಹಿತೆಗಳು : ಸನತ್ಕುಮಾರೀಯ, ಸೂತ, ಬ್ರಾಹ್ಮೀ, ವೈಷ್ಣವೀ, ಶಾಂಕರೀ, ಸೌರಿ ಸಂಹಿತೆಗಳೆಂದು. ಸನತ್ಕುಮಾರೀಯಸಂಹಿತೆ ಕಾಶಿಯ ಪವಿತ್ರಸ್ಥಳಗಳು ಮತ್ತು ಇತರ ಶೈವಕಥೆಗಳನ್ನು ಹೇಳುತ್ತದೆ. ಸೂತಸಂಹಿತೆಯಲ್ಲಿ ಶಿವಪೂಜೆ, ಯೋಗ, ವರ್ಣಾಶ್ರಮಧರ್ಮ, ಮೋಕ್ಷೋಪಾಯ, ವೈದಿಕಕರ್ಮ. ಧ್ಯಾನಯಜ್ಞ, ಜ್ಞಾನಯಜ್ಞ ಮತ್ತು ಶಿವಭಕ್ತಿಗಳನ್ನು ಪ್ರತಿಪಾದಿಸಲಾಗಿದೆ. ಶೈವ, ಬ್ರಹ್ಮಗೀತೆ, ವೇದಾಂತಪರವಾದ ಸೂತಗೀತೆಗಳೂ ಇವೆ. ಸೌರಸಂಹಿತೆಯಲ್ಲಿ ಸೃಷ್ಟಿಯ ವಿವರಗಳನ್ನು ಸೂರ್ಯ ಯಾಜ್ಞವಲ್ಕ್ಯನಿಗೆ ಹೇಳಿದ ಬಗೆಯಿದೆ. ಶಾಂಕರ ಸಂಹಿತೆಯನ್ನು ಅಗಸ್ತ್ಯಸಂಹಿತೆಯೆಂದೂ ಹೇಳುತ್ತಾರೆ. ಏಕೆಂದರೆ ಅದನ್ನು ಸ್ಕಂದ ಅಗಸ್ತ್ಯನಿಗೆ ಹೇಳಿದನೆಂದು ನಂಬಿಕೆ. ರಾಮಾವತಾರಿ ಯಾದ ವಿಷ್ಣುವಿನ ಆರಾಧನೆಯನ್ನು ಹೇಳುವ ಅಗಸ್ತ್ಯಸಂಹಿತೆ ಇದೇಯೋ ಬೇರೆಯೋ ಎಂಬುದು ಸಂಶಯಾಸ್ಪದ. ಕಾಶಿಪಟ್ಟಣದ ಮತ್ತು ಅದರ ಸುತ್ತಮುತ್ತಲಿನ ಶಿವದೇವಾಲಯಗಳ ವಿಸ್ತಾರವನ್ನು ಹೇಳುವ ಸುಪ್ರಸಿದ್ಧ ಕಾಶೀಖಂಡವಿಲ್ಲಿದೆ. ಇಲ್ಲೇ ಗಂಗಾಸಹಸ್ರನಾಮವೂ ಬಂದಿದೆ. ಕಾಶೀಖಂಡವೊಂದರ ಶ್ಲೋಕಸಂಖ್ಯೆಯೇ 15,000. ಉತ್ಕಲಖಂಡವನ್ನೂ ಸ್ಕಂದಪುರಾಣದ ಭಾಗವೆಂದು ಹೇಳುವುದುಂಟು. ಕಾಲ 7ನೆಯ ಶತಮಾನ.

ಬಾಹ್ಯಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: