ಶಿವ ಪುರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Creation of the Cosmic Ocean and the Elements, folio from the Shiva Purana, c. 1828.

ಶಿವ ಪುರಾಣ ಅಥವಾ ಶಿವ ಮಹಾಪುರಾಣ ಶಿವನಿಗೆ ಸಮರ್ಪಿತ ಪುರಾಣಗಳ ಪೈಕಿ ಒಂದು. ಈ ಪಠ್ಯದ ವಾಯವೀಯ ಸಂಹಿತಾದಲ್ಲಿ ಹೇಳಲಾಗಿರುವ ಒಂದು ಸಂಪ್ರದಾಯದ ಪ್ರಕಾರ, ಮೂಲ ಪಠ್ಯವು ಶೈವ ಪುರಾಣ ಎಂದು ಪರಿಚಿತವಾಗಿತ್ತು. ಶಿವ ಪುರಾಣವು ಒಂದು ತಾಮಸಿಕ ಪುರಾಣ.ಇದನ್ನು ವೇದವ್ಯಾಸರು ರಚಿಸಿದರು ಎಂದು ಹೇಳಲಾಗಿದೆ.[೧]ಶಿವ ಪುರಾಣವು ಹಿಂದುಗಳ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣವು ಶಿವ ಮತ್ತು ಪಾರ್ವತಿಯನ್ನು ಕುರಿತು ಬರೆಯಲಾಗಿದೆ. ಶಿವ ಪುರಾಣವನ್ನು ಹನ್ನೆರಡು ಸಂಹಿತಿಗಳಾಗಿ ವಿಂಗಡಿಸಲಾಗಿದೆ. ೧೯-೨೦ನೇ ಶತಮಾನಗಳಲ್ಲಿ ವಾಯು ಪುರಾಣವನ್ನು ಶಿವ ಪುರಾಣವಾಗಿ ಪರಿಗಣಿಸಲಾಗಿತ್ತು ಆನಂತರ ಈ ಪುರಾಣಗಳೆರಡು ಬೇರೆ ವಿಷಯವನ್ನು ಹೊಂದಿರುವುದರಿಂದ ಒಂದನ್ನು ಮಹಾ ಪುರಾಣ ಮತ್ತೊಂದನ್ನು ಉಪ ಪುರಾಣವೆಂದು ಪರಿಗಣಿಸಲಾಗಿತ್ತು.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Shri shiv mahapuran". Shivpuran.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]