ಭಾರತಿ (ನಟಿ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತಿ ವಿಷ್ಣುವರ್ಧನ್
ಭಾರತಿ ತಮ್ಮ ಪತಿ ವಿಷ್ಣುವರ್ಧನ್ ಅವರೊಡನೆ
ಜನನ ಭಾರತಿ
ಆಗಸ್ಟ್ ೧೫
ವೃತ್ತಿ ಚಲನಚಿತ್ರ ಕಲಾವಿದೆ


ಭಾರತಿ ವಿಷ್ಣುವರ್ಧನ್ ಭಾರತೀಯ ಚಲನಚಿತ್ರರಂಗದ ಪ್ರಖ್ಯಾತ ಬಹುಭಾಷಾ ಕಲಾವಿದೆ.

ಬಹು ಭಾಷಾ ಕಲಾವಿದೆ[ಬದಲಾಯಿಸಿ]

ಸ್ವಾತಂತ್ರ ದಿನೋತ್ಸವದಂದು ಹುಟ್ಟಿದವರು ಭಾರತಿ. ಮನೆಯಲ್ಲಿ ಮರಾಠಿ ಮಾತನಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ ಭಾರತಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕಿಂತ ಮುಂಚಿತವಾಗಿಯೇ ಹಿಂದಿ ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿದ್ದರು. ೧೯೬೪ರಲ್ಲಿ ಮೂಡಿಬಂದ ಹಿಂದಿ ಚಿತ್ರ ‘ಗೀತ್ ಗಾಯಾ ಪತ್ಥರೋನೆ’ ಭಾರತಿಯವರ ಪ್ರಥಮ ಚಿತ್ರ. ೧೯೬೬ರಲ್ಲಿ ತೆರೆಕಂಡ ‘ಲವ್ ಇನ್ ಬೆಂಗಳೂರ್’ ಭಾರತಿಯವರು ನಟಿಸಿದ ಪ್ರಥಮ ಕನ್ನಡ ಚಿತ್ರ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ಐದೂ ಭಾಷೆಗಳಲ್ಲಿ ಅಪೂರ್ವ ಯಶಸ್ಸು ಕಂಡ ಕೀರ್ತಿ ಭಾರತಿಯವರದ್ದು. ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್,ambarish, ರಾಜೇಶ್; ಹಿಂದಿಯಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ಮೆಹಮೂದ್, ವಿನೋದ್ ಖನ್ನ; ತೆಲುಗಿನಲ್ಲಿ ಅಕ್ಕಿನೇನಿ, ಎನ್. ಟಿ. ಆರ್; ತಮಿಳಿನಲ್ಲಿ ಎಂ. ಜಿ. ಆರ್, ಶಿವಾಜಿ, ಜೆಮಿನಿ, ಮುತ್ತುರಾಮನ್ ಹೀಗೆ ಅವರು ನಟಿಸದ ಶ್ರೇಷ್ಠ ನಟರೇ ಇಲ್ಲದಿರುವಷ್ಟು ಜನಪ್ರಿಯತೆ ಅವರದ್ದು. ಜೊತೆಗೆ ಆಕೆ ತನ್ನ ಯುವ ದಿನಗಳಲ್ಲಿ ಉತ್ತಮ ಆಟಗಾರ್ತಿಯಾಗಿದ್ದವರು.

ಕನ್ನಡ ಚಿತ್ರರಂಗದಲ್ಲಿ[ಬದಲಾಯಿಸಿ]

ಕನ್ನಡ ಚಿತ್ರರಂಗದಲ್ಲಿ 'ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಕುಲ ಗೌರವ’, ‘ದುಡ್ಡೇ ದೊಡ್ಡಪ್ಪ’, ‘ಬೀದಿ ಬಸವಣ್ಣ’, ‘ಭಲೇ ಜೋಡಿ’, ‘ಸಂಧ್ಯಾರಾಗ’, ‘ಹಸಿರು ತೋರಣ’, ‘ಸ್ವಯಂವರ’, ‘ಶ್ರೀಕೃಷ್ಣದೇವರಾಯ’, ’ಬಂಗಾರದ ಮನುಷ್ಯ’, ‘ದೂರದ ಬೆಟ್ಟ’, ‘ಬಿಡುಗಡೆ’, ‘ದೇವರಗುಡಿ’, ‘ನಾಗರಹೊಳೆ’, ‘ಭಾಗ್ಯಜ್ಯೋತಿ’, ‘ಕಾವೇರಿ’, ‘ಬಂಗಾರದ ಜಿಂಕೆ’, ‘ಋಣಮುಕ್ತಳು’ ಅಂತಹ ವಿಭಿನ್ನ ಯಶಸ್ವೀ ಚಿತ್ರಗಳಲ್ಲಿನ ಅವರ ಉತ್ತಮ ಪಾತ್ರ ನಿರ್ವಹಣೆಯನ್ನು ಕನ್ನಡಿಗರು ನಿರಂತರ ನೆನೆಯುತ್ತಿರುತ್ತಾರೆ.

ವಿಷ್ಣುವರ್ಧನರ ಪತ್ನಿಯಾಗಿ[ಬದಲಾಯಿಸಿ]

‘ನಾಗರಹಾವು’ ಚಿತ್ರದಿಂದ ಕನ್ನಡದಲ್ಲೊಂದು ಅಪೂರ್ವ ಪ್ರತಿಭೆಯಾಗಿ ಬೆಳಗಿದ ವಿಷ್ಣುವರ್ಧನ್ ಅವರನ್ನು ವರಿಸಿದ ಭಾರತಿಯವರು ಮುಂದೆ ವಿಷ್ಣುವರ್ಧನ್ ಅವರ ಯಶಸ್ಸಿನ ಹಾದಿಯಲ್ಲಿ ನೆರಳಿನಂತೆ ನಡೆದರು. ಅಷ್ಟೊಂದು ಸಾಧಿಸಿದ್ದರೂ ಸರಳತೆ, ಸಹೃದಯತೆಗಳಿಗೆ ಹೆಸರಾದವರು ಭಾರತಿ.

ಡಾಕ್ಟರೇಟ್ ಗೌರವ[ಬದಲಾಯಿಸಿ]

ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ ಸಂದಿದೆ.

ಭಾರತಿ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]