ಊರ್ವಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಊರ್ವಶಿ
ಚಿತ್ರ:Urvashi-3333.jpg
Urvashi
Born
ಕವಿತಾ ರಂಜಿನಿ[೧]

Spouse
  • ಮನೋಜ್ ಕೆ ಜಯನ್
Children
Relatives
  • ಕಲಾರಂಜಿನಿ (ಸಹೋದರಿ)
  • ಕಲ್ಪನಾ (ಸಹೋದರಿ)
  • ಸೂರ್ನಾಡ್ ಕುಂಜನ್ ಪಿಳ್ಳೆ

ಊರ್ವಶಿ ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಕಮಲ್ ಹಾಸನ್, ರಜನಿ ಕಾಂತ್, ವಿಷ್ಣುವರ್ಧನ್, ಅಂಬರೀಶ್, ಮೋಹನ್ ಲಾಲ್, ಮಮ್ಮೂಟಿ, ರವಿಚಂದ್ರನ್, ಡಾ. ರಾಜ್ ರೊಂದಿಗೆ 1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ಚಿತ್ರದಿಂದ ಕನ್ನಡ ಚಿತ್ರರಂಗದ ಪ್ರವೇಶ ಮಾಡಿದರು.

1980ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ನಟಿ 1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ನಾನು ನನ್ನ ಹೆಂಡತಿ’ ಚಿತ್ರಗಳಲ್ಲಿ ನಟಿಸಿದ್ದಾರೆ.

ಜನವರಿ 25 1967 ರಂದು ಕೇರಳದ ತಿರುವಂತಪುರಂನಲ್ಲಿ ಊರ್ವಶಿ ಜನಿಸಿದರು. ಹತ್ತನೇ ವಯಸ್ಸಿಗೆ ಮಲಯಾಳಂ ಸಿನಿಮಾಗಳಲ್ಲಿ ನಟನೆ ಆರಂಭಿಸಿದರು. 1980ರಲ್ಲಿ ಪರಿಪೂರ್ಣ ನಾಯಕ ನಟಿಯಾದರು. ಕನ್ನಡದಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯ ಪಾತ್ರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ, ತೆಲುಗು ಕನ್ನಡ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕನ್ನಡದಲ್ಲಿ ಹಬ್ಬ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಯಾರಿಗೆ ಸಾಲುತ್ತೆ ಸಂಬಳ, ರಾಮ ಶಾಮ ಭಾಮ ಚಿತ್ರಗಳಲ್ಲಿನ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

  1. "Kavitha Ranjini is the real name of actress Urvashi - Times of India".
"https://kn.wikipedia.org/w/index.php?title=ಊರ್ವಶಿ&oldid=1174412" ಇಂದ ಪಡೆಯಲ್ಪಟ್ಟಿದೆ