ಮಾಧವಿದಕ್ಷಿಣ ಭಾರತದ ಚಿತ್ರನಟಿ. ಇವರು ೧೭ ವರ್ಷಗಳ ಅವಧಿಯಲ್ಲಿ ತೆಲುಗು, ತಮಿಳು, ಕನ್ನಡ , ಬೆಂಗಾಲಿ, ಮಲಯಾಳಂ, ಒರಿಯಾ ಮತ್ತು ಹಿಂದಿ - ಈ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು ಹುಟ್ಟಿದ್ದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ. ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹದಿಹರೆಯದಲ್ಲಿ ಇವರಿಗೆ ದಾಸರಿ ನಾರಾಯಣರಾವ್ ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವನ್ನು ಕೊಟ್ಟರು. ಅದು ತುಂಬ ಯಶಸ್ವಿ ಆಯಿತು . ನಂತರ ಕೆ. ಬಾಲಚಂದರ್ ೧೯೭೯ರಲ್ಲಿ ಮರೋಚರಿತ್ರ ಚಿತ್ರದಲ್ಲಿ ಕಮಲಹಾಸನ್ ಜತೆಗೆ ಪ್ರಮುಖಪಾತ್ರವೊಂದನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ 'ಏಕ್ ದೂಜೆ ಕೇ ಲಿಯೆ' ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು.
ಮಾಧವಿಯವರು ಅಮಿತಾಭ್ ಬಚ್ಚನ್ ಜತೆ ಅಗ್ನಿಪಥ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಮಲಹಾಸನ್ ಜತೆಗೆ ರಾಜಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಮುಖ್ಯ ಛಿತ್ರಗಳು . ತೆಲುಗು ನಟ ಚಿರಂಜೀವಿ ಜತೆ ಅವರ ಅನೇಕ ಚಿತ್ರಗಳಿವೆ.