ಭಾಗ್ಯದ ಲಕ್ಷ್ಮಿ ಬಾರಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾಗ್ಯದ ಲಕ್ಷ್ಮಿ ಬಾರಮ್ಮ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಡಾ.ರಾಜ್‍ಕುಮಾರ್ ಮಾಧವಿ ಅಶ್ವಥ್, ಬಾಲಕೃಷ್ಣ, ಮೈಸೂರು ಲೋಕೇಶ್, ವಿಜಯಕಾಶಿ, ಶಿವರಾಂ, ಪರ್ವತವಾಣಿ, ಶ್ಯಾಮಲ,
ಸಂಗೀತಸಿಂಗೀತಂ ಶ್ರೀನಿವಾಸ ರಾವ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆದಾಕ್ಷಾಯಿಣಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್,ವಾಣಿ ಜಯರಾಂ,ಡಾ.ಎಸ್.ಪಿ.ಬಾಲಸುಬ್ರಮಣ್ಯಂ

ಕಥೆ[ಬದಲಾಯಿಸಿ]

ನಿರುದ್ಯೋಗಿ ಪಾಂಡುರಂಗ ತನ್ನ ಅಕ್ಕನ ಮತ್ತು ಅಜ್ಜಿಯ ಯೋಗ ಕ್ಷೇಮ ನೋಡಿಕೊಳ್ಳಲು ಪಡಿ ಪಾಟಲು ಪಡುವಾಗ ಮೂಕನಂತೆ ನಟಿಸಿ ಕೆಲಸ ಮುಗಿಸಿಕೊಳ್ಳುತ್ತಾನೆ.
ಆದರೆ ತನ್ನ ಸಹೋದ್ಯೋಗಿ ಪಾರ್ವತಿ, ಆತ ಮೂಕನಲ್ಲ ಎಂದು ಕಂಡುಹಿಡಿದಾಗ ಆಕೆಯೂ ಸಹ ಮೂಗಳಲ್ಲ ಎಂದು ತಿಳಿಯುತ್ತದೆ ಇಬ್ಬರು ಸೇರಿ ಹಣ ಗಳಿಸಲು ವಿಧಾನಗಳನ್ನು ಹುಡುಕುತ್ತಾರೆ . ನಾಯಿಯೊಂದನ್ನು ಕದ್ದು ನಾಯಿಗಳ ಪ್ರದರ್ಶನದಲ್ಲಿ ಬಹುಮಾನ ಗೆಲ್ಲಲು ಹೋದಾಗ ನಾಯಿ ಮಾಲೀಕರು ನಾಯಿಯನ್ನು ಕಂಡುಹಿಡಿದಿರುತ್ತಾರೆ. ಪಾರ್ವತಿ ತನ್ನ ತಾಯಿಯ ಆಭರಣವನ್ನು ಬಿಡಿಸಿಕೊಳ್ಳಲು ಹೆಣಗುತ್ತಿರುವ, ಆಕೆಯ ಜೊತೆ ಪ್ರೀತಿ ಶುರುವಾಗುತ್ತದೆ.ಮಗು ಒಂದನ್ನು ಪಾರ್ಕಿನಲ್ಲಿ ಕಂಡ ಪಾಂಡುರಂಗ ಆ ಮಗುವಿನ ಸುಳುಹು ಹುಡುಕತೊಡಗುತ್ತಾನೆ.
ಪತ್ರಿಕೆಯ ಜಾಹೀರಾತಿಯಲ್ಲಿ ಆನಂದ ಸಂಸ್ಥೆಯ ವತಿಯಿಂದ ಆದರ್ಶ ದಂಪತಿಗಳಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲ್ಪಡುವ ವಿಚಾರ ತಿಳಿಯುತ್ತಿದ್ದಂತೆಯೇ ,ಇಬ್ಬರು ದಂಪತಿಗಳಂತೆ ನಟಿಸಲು ನಿರ್ಧರಿಸುತ್ತಾರೆ ಆನಂದ ಗ್ರೂಪ್ ನಾಯಕಿಯ ತಾತನದೇ ಸಂಸ್ಥೆ ಇವರೇ ಒಳ ಅರ್ಥವನ್ನು ಅರಿತ ಮಾಲೀಕರು ಇವರನ್ನು ನಿಂದಿಸುತ್ತಾರೆ ಆದರೆ ಪಾಂಡುರಂಗ ಹಿಂದಿ ಮಾಲೀಕರ ಸೊಸೆಯ ಮಾನ ರಕ್ಷಣೆ ಮಾಡಿರುತ್ತಾನೆ. ಹೀಗಾಗಿ ಮಾಲೀಕರು ಒಂದು ಲಕ್ಷದ ಬಹುಮಾನವನ್ನು 5 ಲಕ್ಷಕ್ಕೆ ಸೇರಿಸಿದ್ದನ್ನು ವಿರೋಧಿಸುವ ಸೊಸೆ ಕಡೆಗೆ ಬಹುಮಾನದ ಮೊತ್ತ ಹೆಚ್ಚಿಸಿದ್ದನ್ನು ಒಪ್ಪಿಕೊಳ್ಳುತ್ತಾಳೆ ತನ್ನ ಮಾವ ತರಲೇ ತಮ್ಮಯ್ಯ ಚಿಕ್ಕ ಮಗು ಸ್ಪರ್ಧೆ ಇವೆಲ್ಲವುಗಳ ಮಧ್ಯದ ರಂಜನೆಯ ಘಟನೆಗಳ ಸಾರವೇ ಈ ಕತೆ

ತಾರಾಗಣ[ಬದಲಾಯಿಸಿ]