ವಿಷಯಕ್ಕೆ ಹೋಗು

ಪರ್ವತವಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರ್ವತವಾಡಿ ನರಸಿಂಗರಾಯರು : - ಕನ್ನಡದ ಪೌರಾಣಿಕ ನಾಟಕಕಾರರು. ೧೯೧೧ರಲ್ಲಿ ತಮಿಳುನಾಡಿನ ಹೊಸೂರಿನ ಹತ್ತಿರದ ಹಳ್ಳಿ ಪರ್ವತವಾಡಿಯಲ್ಲಿ ಜನಿಸಿದರು. ಇವರ ಕಂಚಿನ ಕಂಠವನ್ನು ಕೇಳಿದ ವಿ.ಕೆ.ಗೋಕಾಕರು ನೀಡಿದ ಸೂಚನೆಯ ಮೇರೆಗೆ ಪರ್ವತವಾಡಿಯವರು ಪರ್ವತವಾಣಿ ಆದರು. ಪರ್ವತವಾಣಿಯವರು ತಾರಾಮಂಡಲ ವೆಂಬ ಹವ್ಯಾಸಿ ನಾಟಕತಂಡವನ್ನು, ಆನಂತರ ನಂಕಪ್ನಿ ಎಂಬ ನಾಟಕತಂಡವನ್ನು ಕಟ್ಟಿ ಸಾವಿರಾರು ನಾಟಕಪ್ರಯೋಗಗಳನ್ನು ಮಾಡಿದರು. ಸ್ವತಃ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುವ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. []

ಪರ್ವತವಾಣಿಯವರು ೧೭-೩-೧೯೯೪ ರಂದು ತಮ್ಮ ೮೩ ನೆಯ ವಯಸ್ಸಿನಲ್ಲಿ ನಿಧನರಾದರು.

ನಾಟಕಗಳು

[ಬದಲಾಯಿಸಿ]
  1. ಹಣಹದ್ದು.
  2. ಬಹದ್ದೂರ ಗಂಡ.
  3. ಮುಕುತಿ ಮೂಗುತಿ.
  4. ಸತಿ ಸಾವಿತ್ರಿ.
  5. ಉಂಡಾಡಿನಗುಂಡ.
  6. ವಿಪರ್ಯಾಸ.
  7. ಕಿಚಕ.
  8. ಮಧ್ಯಪಾನ.
  9. ಹಗ್ಗದ ಕೊನೆ.
  10. ಕವಿಭಿಕ್ಷೆ

ಆತ್ಮಕಥನ

[ಬದಲಾಯಿಸಿ]
  1. ನನ್ನಕಥೆ.

ಉಲ್ಲೇಖ

[ಬದಲಾಯಿಸಿ]
  1. Https://kanaja.in/?tribe_events=ಪರ್ವತವಾಣಿ[ಶಾಶ್ವತವಾಗಿ ಮಡಿದ ಕೊಂಡಿ]