ದಿವ್ಯಾ ಸುರೇಶ್
ದಿವ್ಯಾ ಸುರೇಶ್ | |
---|---|
ದಿವ್ಯಾ ಸುರೇಶ್ | |
ಜನನ | [೧] | ೧೭ ಮಾರ್ಚ್ ೧೯೯೩
ವೃತ್ತಿ(ಗಳು) | ನಟಿ, ರೂಪದರ್ಶಿ |
ಸಕ್ರಿಯ ವರ್ಷಗಳು | ೨೦೧೭–ಇಲ್ಲಿಯವರೆಗೆ |
ದಿವ್ಯಾ ಸುರೇಶ್ ಅವರು ಒಬ್ಬ ಮಾಡೆಲ್ ಮತ್ತು ನಟಿ. ಇವರು ಕನ್ನಡ ಮತ್ತು ತೆಲುಗಿನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಮಾಡೆಲ್, ನಟಿ ಆದ ದಿವ್ಯಾ ಸುರೇಶ್ ಅವರು ಕನ್ನಡ ಧಾರಾವಾಹಿ "ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್" ಮತ್ತು "ಜೋಡಿ ಹಕ್ಕಿ" [೨] ಗಳಲ್ಲಿ ನಟಿಸಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಆಗಿರುವ ಇವರು ೨೦೧೭ರ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಗೆದ್ದಿದ್ದಾರೆ. [೩] ತಮ್ಮ ಸಿನಿ ಪಯಣವನ್ನು ೨೦೧೭ರ ಕನ್ನಡ ಚಿತ್ರ "#೯, ಹಿಲ್ಟನ್ ಕ್ರಾಸ್" ಮೂಲಕ ಪ್ರಾರಂಭಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ವೃತ್ತಿಪರ ಕಬಡ್ಡಿ ಆಟಗಾರ್ತಿಯಾಗಿದ್ದ ದಿವ್ಯಾ ಅವರು ಕರ್ನಾಟಕ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದ ರಿಯಾಲಿಟಿ ಶೋ "ಬಿಗ್ ಬಾಸ್ ೮" ರ ಮೂಲಕ ಇವರು ಪ್ರಖ್ಯಾತರಾದರು. ಇವರು ಬಿಗ್ ಬಾಸ್ ಎಂಟರ ಟಾಪ್-೫ ನಲ್ಲಿ ಆಯ್ಕೆಯಾಗಿದ್ದರು. ಬಿಗ್ ಬಾಸ್ನ ನಂತರ ಕಲರ್ಸ್ ಕನ್ನಡ ವಾಹಿನಿಯ "ತ್ರಿಪುರ ಸುಂದರಿ" ಧಾರಾವಾಹಿಯಲ್ಲಿ ಇವರು ಅಭಿನಯಿಸಲಿದ್ದಾರೆ. [೪] . ಇವರು ತೆಲುಗಿನ ಚಲನಚಿತ್ರಗಳಾದ "ಡಿಗ್ರಿ ಕಾಲೇಜ್" ಮತ್ತು "ಟೆಂಪ್ಟ್ ರಾಜ" ಎಂಬ ವಯಸ್ಕರ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ದಿವ್ಯಾ ಸುರೇಶ್ ಅವರ ಅಭಿನಯದ ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ | ನಾಯಕ ನಟ | ನಿರ್ದೇಶಕ | ಭಾಷೆ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|---|---|---|
೨೦೧೭ | ೯, ಹಿಲ್ಟನ್ ಹೌಸ್ | ಮಧು ಸಾಗರ್ | ಕೆ.ನರೇಂದ್ರ ಬಾಬು | ಕನ್ನಡ | [೫] | ||
೨೦೨೦ | ಥರ್ಡ್ ಕ್ಲಾಸ್ | ಜಗದೀಶ್ | ಅಶೋಕ್ ದೇವ್ | ಕನ್ನಡ | |||
೨೦೨೧ | ಟೆಮ್ಟ್ ರಾಜ | ವೀರ್ನಾಲ ರಾಮಕೃಷ್ಣ ರಾವ್ | ತೆಲುಗು | ||||
ರೌಡಿ ಬೇಬಿ | ಪೃಥ್ವಿ | ರವಿ ಗೌಡ | ರೆಡ್ಡಿ ಕೃಷ್ಣ | ಕನ್ನಡ | |||
ಡಿಗ್ರಿ ಕಾಲೇಜ್ | ತೆಲುಗು |
ಬಿಗ್ ಬಾಸ್ ೮
[ಬದಲಾಯಿಸಿ]ಕನ್ನಡದ ಕಲರ್ಸ್ ವಾಹಿನಿಯಲ್ಲಿ ಬರುವ "ಬಿಗ್ ಬಾಸ್" ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ಮಂಜು ಪಾವಗಡ ಅವರೊಂದಿಗಿನ ಸ್ನೇಹ ಮತ್ತು ಪ್ರಶಾಂತ್ ಸಂಬರಗಿಯವರೊಂದಿಗಿನ ಮಾತುಕತೆಗಳಿಂದ ಪ್ರಸಿದ್ಧರಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ "www.filmifeed.com ನಲ್ಲಿನ ದಿವ್ಯಾ ಸುರೇಶ್ ಅವರ ಬಗೆಗಿನ ಮಾಹಿತಿ". Archived from the original on 2021-09-12. Retrieved 2021-09-12.
- ↑ ದಿವ್ಯ ಸುರೇಶ್ ಅವರ ಧಾರಾವಾಹಿ ಮತ್ತು ಚಿತ್ರಗಳ ಬಗ್ಗೆ ಫಿಲ್ಮಿಬೀಟ್ ತಾಣದಲ್ಲಿನ ಮಾಹಿತಿ
- ↑ ದಿವ್ಯಾ ಸುರೇಶ್ ಅವರು ಮಿಸ್ ಇಂಡಿಯಾ ಸೌತ್ ಗೆದ್ದಿರುವ ಫೋಟೋ ಮತ್ತು ಮಾಹಿತಿ ಹೊಂದಿರುವ ಟೈಮ್ಸ್ ಆಫ್ ಇಂಡಿಯಾದ ವರದಿ
- ↑ "ದಿವ್ಯಾ ಸುರೇಶ್ ಅವರ ಅಭಿನಯದ ತ್ರಿಪುರ ಸುಂದರಿ ಧಾರಾವಾಹಿಯ ಬಗೆಗಿನ ಮಾಹಿತಿ". Archived from the original on 2021-09-13. Retrieved 2021-09-13.
- ↑ ದಿವ್ಯಾ ಸುರೇಶ್ ಅವರ ಅಭಿನಯದ ಚಿತ್ರಗಳ ಪಟ್ಟಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ದಿವ್ಯಾ ಸುರೇಶ್ ಐ ಎಮ್ ಡಿ ಬಿನಲ್ಲಿ