ವಿಷಯಕ್ಕೆ ಹೋಗು

ಮಹಾಲಕ್ಷ್ಮಿ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾಲಕ್ಶ್ಮಿ
ಇತರ ಹೆಸರುಮಹಾಲಕ್ಶ್ಮಿ
ವೃತ್ತಿಗಳುನಟಿ, model
ಪೋಷಕರುಎ.ವಿ.ಎಂ.ರಾಜನ್
ಪುಷ್ಪಲತಾ


ಮಹಾಲಕ್ಷ್ಮಿ ೧೯೮೦ ಮತ್ತು ೧೯೯೦ರ ದಶಕದ ಕನ್ನಡ ಚಿತ್ರರಂಗದ ಹೆಸರಾಂತ ನಟಿ. ಇವರು ತಮಿಳು ಚಿತ್ರರಂಗದ ತಾರಾ ಜೋಡಿ ಎ.ವಿ.ಎಂ.ರಾಜನ್ ಮತ್ತು ಪುಷ್ಪಲತಾ ಅವರ ಮಗಳು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲು ಈಕೆ ನಟಿಸಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ಟೈಗರ್ ಪ್ರಭಾಕರ್, ರವಿಚಂದ್ರನ್, ಶಶಿಕುಮಾರ್ ಮುಂತಾದವರೊಂದಿಗೆ ನಾಯಕಿಯಾಗಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ ಸ್ವರ್ಣ ಸಂಸಾರ, ದುರ್ಗಾಷ್ಟಮಿ, ಹೆಂಡ್ತಿಗೇಳ್ಬೇಡಿ, ಸಂಸಾರ ನೌಕೆ, ಸ್ವಾಭಿಮಾನ, ಜಯಸಿಂಹ ಮತ್ತು ಬಾರೆ ನನ್ನ ಮುದ್ದಿನ ರಾಣಿ.

[೧]

ಮಹಾಲಕ್ಷ್ಮಿ ಅಭಿನಯದ ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೪ಅಪರಂಜಿಬಿ.ವಿ.ರವಿ ಕೊಟ್ಟಾರಕರ್ಶ್ರೀನಿವಾಸಮೂರ್ತಿ, ಜಯಚಿತ್ರಾ, ಅಶೋಕ್
೧೯೮೪ಪೂಜಾಫಲಎನ್.ಎಸ್.ಧನಂಜಯಶ್ರೀನಾಥ್, ಆರತಿ, ಅರ್ಜುನ್ ಸರ್ಜಾ
೧೯೮೪ಬಡ್ಡಿ ಬಂಗಾರಮ್ಮಕೋಮಿನೇನಿ ಶೇಷಗಿರಿ ರಾವ್ಉಮಾ ಶಿವಕುಮಾರ್, ಶ್ರೀನಾಥ್, ಜೈಜಗದೀಶ್, ರಾಮಕೃಷ್ಣ, ಭವ್ಯಾ
೧೯೮೫ಕುಂಕುಮ ತಂದ ಸೌಭಾಗ್ಯಎ.ವಿ.ಶೇಷಗಿರಿ ರಾವ್ಶ್ರೀನಾಥ್, ಆರತಿ, ಚರಣ್ ರಾಜ್
೧೯೮೫ಸ್ವಾಭಿಮಾನಡಿ.ರಾಜೇಂದ್ರ ಬಾಬುರವಿಚಂದ್ರನ್
೧೯೮೬ಟೈಗರ್ರವಿರಾಜ್ಟೈಗರ್ ಪ್ರಭಾಕರ್, ಆರತಿ, ರಾಮಕೃಷ್ಣ
೧೯೮೬ಪ್ರೇಮಜಾಲಜೋಸೈಮನ್ಅನಂತ್ ನಾಗ್
೧೯೮೬ಮದುವೆ ಮಾಡು ತಮಾಷೆ ನೋಡುಸತ್ಯವಿಷ್ಣುವರ್ಧನ್, ಆರತಿ, ದ್ವಾರಕೀಶ್
೧೯೮೬ಲಂಚ ಲಂಚ ಲಂಚರವೀಂದ್ರನಾಥ್ಲೋಕೇಶ್, ಜಯಂತಿ, ಜೈಜಗದೀಶ್
೧೯೮೬ಸಂಸಾರದ ಗುಟ್ಟುರಾಘವಶಂಕರ್ ನಾಗ್
೧೯೮೭ತಾಯಿ ಕೊಟ್ಟ ತಾಳಿರವೀಂದ್ರನಾಥ್ಮುರಳಿ, ಲೋಕೇಶ್, ಜಯಂತಿ
೧೯೮೭ಜಯಸಿಂಹಪಿ.ವಾಸುವಿಷ್ಣುವರ್ಧನ್
೧೯೮೭ಭದ್ರಕಾಳಿರೇಣುಕಾ ಶರ್ಮಶ್ರೀಧರ್, ತಾರಾ
೧೯೮೭ಮಿಸ್ಟರ್ ರಾಜವಿ.ಸೋಮಶೇಖರ್ಅಂಬರೀಶ್, ತಾರಾ
೧೯೮೮ನವಭಾರತಕೆ.ವಿ.ರಾಜುಅಂಬರೀಶ್, ಗೀತಾ
೧೯೮೮ನೀ ನನ್ನ ದೈವಸುಂದರನಾಥ್ ಸುವರ್ಣಟೈಗರ್ ಪ್ರಭಾಕರ್, ಸಂಗೀತಾ
೧೯೮೮ಪ್ರಜಾ ಪ್ರಭುತ್ವಡಿ.ರಾಜೇಂದ್ರ ಬಾಬುಅಂಬರೀಶ್
೧೯೮೮ಬ್ರಹ್ಮ ವಿಷ್ಣು ಮಹೇಶ್ವರರಾಜಚಂದ್ರಅಂಬರೀಶ್, ಕಿರಣ್ ಜುನೇಜಾ, ಅನಂತ್ ನಾಗ್, ತುಳಸಿ(ನಟಿ), ರವಿಚಂದ್ರನ್
೧೯೮೮ಮಾತೃದೇವೋಭವಶ್ರೀನಿವಾಸಮೂರ್ತಿ, ಜಯಂತಿ, ರಾಮಕೃಷ್ಣ, ಜೈಜಗದೀಶ್, ತಾರಾ
೧೯೮೯ಇದು ಸಾಧ್ಯದಿನೇಶ್ ಬಾಬುಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ಟೈಗರ್ ಪ್ರಭಾಕರ್, ರೇವತಿ, ಶ್ರೀವಿದ್ಯಾ, ಅಂಜಲಿ
೧೯೮೯ಗಗನದೊರೈ-ಭಗವಾನ್ಅನಂತ್ ನಾಗ್, ಖುಷ್ಬೂ
೧೯೮೯ಜಾಕಿಬಿ.ಸುಬ್ಬರಾವ್ಅಂಬರೀಶ್, ಗೀತಾ
೧೯೮೯ಪದ್ಮವ್ಯೂಹಎ.ಟಿ.ರಘುಟೈಗರ್ ಪ್ರಭಾಕರ್, ಶ್ರೀನಾಥ್, ಮುರಳಿ, ಮಂಜುಳಾ ಶರ್ಮ, ತಾರಾ
೧೯೮೯ಪರಶುರಾಮ್ವಿ.ಸೋಮಶೇಖರ್ರಾಜ್ ಕುಮಾರ್, ವಾಣಿ ವಿಶ್ವನಾಥ್
೧೯೮೯ಮಹಾಯುದ್ಧಮುರಳೀಧರ್ ಕೌಶಿಕ್ಶಂಕರ್ ನಾಗ್, ಅಂಜಲಿ, ವಿನೋದ್ ಆಳ್ವ
೧೯೮೯ಸಂಸಾರ ನೌಕೆಡಿ.ರಾಜೇಂದ್ರ ಬಾಬುಅಂಬರೀಶ್, ಗೀತಾ
೧೯೮೯ಹೆಂಡ್ತಿಗೇಳ್ಬೇಡಿದಿನೇಶ್ ಬಾಬುಅನಂತ್ ನಾಗ್, ದೇವರಾಜ್, ತಾರಾ
೧೯೯೦ಇವಳೆಂಥಾ ಹೆಂಡ್ತಿಜಿ.ಕೆ.ಮುದ್ದುರಾಜ್ಅನಂತ್ ನಾಗ್, ತಾರಾ
೧೯೯೦ಬಾರೆ ನನ್ನ ಮುದ್ದಿನ ರಾಣಿಸಿದ್ಧಲಿಂಗಯ್ಯಶಶಿಕುಮಾರ್
೧೯೯೦ಸ್ವರ್ಣ ಸಂಸಾರಸಾಯಿಪ್ರಕಾಶ್ಅನಂತ್ ನಾಗ್
೧೯೯೧ದುರ್ಗಾಷ್ಠಮಿಗೀತಪ್ರಿಯಅಶೋಕ್
೧೯೯೧ಮಾತೃಭಾಗ್ಯಎನ್.ಚಂದ್ರಶೇಖರ್ ಶರ್ಮಟೈಗರ್ ಪ್ರಭಾಕರ್, ದೇವರಾಜ್, ವನಿತಾ ವಾಸು
೧೯೯೧ಮನೇಲಿ ಇಲಿ ಬೀದೀಲಿ ಹುಲಿಸಾಯಿಪ್ರಕಾಶ್ಅನಂತ್ ನಾಗ್, ಶಶಿಕುಮಾರ್, ತಾರಾ

[೨]

ಉಲ್ಲೇಖಗಳು

[ಬದಲಾಯಿಸಿ]
  1. ↑ "'ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ". ಕನ್ನಡ ಫಿಲ್ಮಿ ಬೀಟ್.
  2. ↑ "ಮಹಾಲಕ್ಷ್ಮಿ, ಚಿತ್ರಲೋಕ.ಕಾಮ್".