ವಿಷಯಕ್ಕೆ ಹೋಗು

ಅಂಜಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಜಲಿ
ಹುಟ್ಟು
ಶಾಂತ

ಮೇ ೨೨, ೧೯೭೨
ಕನಕಪುರ, ಬೆಂಗಳೂರು (ಈಗ ರಾಮನಗರಕ್ಕೆ ಸೇರಿದೆ), ಕರ್ನಾಟಕ
ಉದ್ಯೋಗಚಲನಚಿತ್ರ ಮತ್ತು ಕಿರುತೆರೆ ನಟಿ
ಸಕ್ರಿಯ ವರ್ಷಗಳು೧೯೮೯-೧೯೯೭
ಹೆಂಡತಿ/ಗಂಡಸುಧಾಕರ್

ಅಂಜಲಿ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ. ೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಅಂಜಲಿ ಅಭಿನಯದ ಪ್ರಮುಖ ಚಿತ್ರಗಳೆಂದರೆ ಅನಂತನ ಅವಾಂತರ(೧೯೮೯), ನೀನು ನಕ್ಕರೆ ಹಾಲು ಸಕ್ಕರೆ(೧೯೯೧) ಮತ್ತು ತರ್ಲೆ ನನ್ಮಗ(೧೯೯೨.[][]

ಆರಂಭಿಕ ಜೀವನ

[ಬದಲಾಯಿಸಿ]

ಅಂಜಲಿ ಜನಿಸಿದ್ದು ರಾಮನಗರದ ಕನಕಪುರದಲ್ಲಿ ೧೯೭೨ರ ಮೇ ೨೨ರಂದು. ಇವರ ಮೂಲ ಹೆಸರು ಶಾಂತ. ನಿರ್ದೇಶಕ ಕಾಶಿನಾಥ್ ಇವರ ಹೆಸರನ್ನು ಅಂಜಲಿ ಎಂದು ಬದಲಾಯಿಸಿದರು.[][]

ವೃತ್ತಿ ಜೀವನ

[ಬದಲಾಯಿಸಿ]

ಕಂಕಣ ಭಾಗ್ಯ(೧೯೮೮) ಚಿತ್ರದ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅಂಜಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಚಿತ್ರ ಕಾಶಿನಾಥ್ ನಿರ್ದೇಶನದ ಅನಂತನ ಅವಾಂತರ(೧೯೮೯). ದಾಂಪತ್ಯ ಜೀವನದ ಸಮಸ್ಯೆಗಳ ಕುರಿತಾಗಿದ್ದ ಈ ಹಾಸ್ಯಪ್ರಧಾನ ಚಿತ್ರದಲ್ಲಿ ಕಾಶಿನಾಥ್ ಅವರಿಗೆ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ಅಂಜಲಿ ಅವರಿಗೆ ದೊರೆತ ನಂತರದ ಪ್ರಮುಖ ಚಿತ್ರವೆಂದರೆ ನೀನು ನಕ್ಕರೆ ಹಾಲು ಸಕ್ಕರೆ(೧೯೯೧). ಐವರು ನಾಯಕಿಯರಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. ಉಪೇಂದ್ರ ಚೊಚ್ಚಲ ನಿರ್ದೇಶನದ ತರ್ಲೆ ನನ್ಮಗ(೧೯೯೨) ಚಿತ್ರದಲ್ಲಿ ಜಗ್ಗೇಶ್ ಅವರಿಗೆ ನಾಯಕಿಯಾಗಿ ಶಕ್ತ ಅಭಿನಯ ನೀಡಿದ ಅಂಜಲಿ ಶ್ರೀಧರ್ ಅವರೊಂದಿಗೆ ಜನ ಮೆಚ್ಚಿದ ಮಗ(೧೯೯೩), ರಮೇಶ್ ಭಟ್ ಅವರೊಂದಿಗೆ ಸಿಡಿದೆದ್ದ ಶಿವ(೧೯೯೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. ಮರ್ಡರ್(೧೯೯೪) ಚಿತ್ರದಲ್ಲಿ ಋಣಾತ್ಮಕ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಅಂಜಲಿ ಟೆನ್ನಿಸ್ ಕೃಷ್ಣ ಅಭಿನಯದ ಅಪ್ಪ ನಂಜಪ್ಪ ಮಗ ಗುಂಜಪ್ಪ(೧೯೯೪) ಚಿತ್ರದಲ್ಲಿ ನಾಯಕಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಅನಂತ್ ನಾಗ್ ನಾಯಕರಾಗಿ ಅಭಿನಯಿಸಿದ ಗಣೇಶನ ಮದುವೆ(೧೯೯೦) ಮತ್ತು ಉಂಡು ಹೋದ ಕೊಂಡು ಹೋದ(೧೯೯೧) ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಚೊಕ್ಕದಾದ ಅಭಿನಯ ನೀಡಿದ್ದಾರೆ.[]

ವಿಷ್ಣುವರ್ಧನ್, ಶ್ರೀಧರ್, ಕಾಶಿನಾಥ್, ಜಗ್ಗೇಶ್ ಮುಂತಾದ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜಲಿ ದೊರೈ-ಭಗವಾನ್, ಬಿ.ರಾಮಮೂರ್ತಿ, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಕಾಶಿನಾಥ್ ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.[]

ವೈಯಕ್ತಿಕ ಜೀವನ

[ಬದಲಾಯಿಸಿ]

೧೯೯೮ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ಅಂಜಲಿ ದುಬೈನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ.[][]

ಅಂಜಲಿ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೮ಕಂಕಣ ಭಾಗ್ಯಪೇರಾಲರಾಮಕೃಷ್ಣ, ಜೀವಿತ
೧೯೮೯ಅನಂತನ ಅವಾಂತರಕಾಶಿನಾಥ್ಕಾಶಿನಾಥ್
೧೯೮೯ಅವನೇ ನನ್ನ ಗಂಡಎಸ್.ಉಮೇಶ್-ಕೆ.ಪ್ರಭಾಕರ್ಕಾಶಿನಾಥ್, ಸುಧಾರಾಣಿ, ವನಿತಾ ವಾಸು
೧೯೮೯ಇದು ಸಾಧ್ಯದಿನೇಶ್ ಬಾಬುಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ರೇವತಿ, ಮಹಾಲಕ್ಷ್ಮಿ
೧೯೮೯ಹೆಂಡ್ತಿಗೇಳ್ಬೇಡಿದಿನೇಶ್ ಬಾಬುಅನಂತ್ ನಾಗ್, ಮಹಾಲಕ್ಷ್ಮಿ, ದೇವರಾಜ್‌, ತಾರ
೧೯೮೯ಮಹಾಯುದ್ಧಮುರಳೀಧರ್ ಕೌಶಿಕ್ಶಂಕರ್ ನಾಗ್, ಮಹಾಲಕ್ಷ್ಮಿ, ವಿನೋದ್ ಆಳ್ವ
೧೯೯೦ಕಾಲೇಜ್ ಹೀರೋಚಂದ್ರಹಾಸ್ ಆಳ್ವವಿನೋದ್ ರಾಜ್, ಮಧುಶ್ರೀ, ದೇವರಾಜ್‌, ಶಿವರಂಜಿನಿ
೧೯೯೦ಗಣೇಶನ ಮದುವೆಫಣಿ ರಾಮಚಂದ್ರಅನಂತ್ ನಾಗ್, ವಿನಯಾ ಪ್ರಸಾದ್
೧೯೯೧ಉಂಡು ಹೋದ ಕೊಂಡು ಹೋದನಾಗತಿಹಳ್ಳಿ ಚಂದ್ರಶೇಖರ್ಅನಂತ್ ನಾಗ್, ತಾರ
೧೯೯೧ನಗು ನಗುತ ನಲಿಭಾರ್ಗವಸುನೀಲ್, ಶ್ರುತಿ, ತಾರ
೧೯೯೧ನೀನು ನಕ್ಕರೆ ಹಾಲು ಸಕ್ಕರೆದೊರೈ-ಭಗವಾನ್ವಿಷ್ಣುವರ್ಧನ್, ರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ
೧೯೯೧ರೋಲ್‍ಕಾಲ್ ರಾಮಕೃಷ್ಣಬಿ.ರಾಮಮೂರ್ತಿಅನಂತ್ ನಾಗ್, ವಿದ್ಯಾಶ್ರೀ, ತಾರ
೧೯೯೧ಶ್ವೇತಾಗ್ನಿಬಿ.ರಾಮಮೂರ್ತಿದೇವರಾಜ್‌, ವಿನಯಾ ಪ್ರಸಾದ್, ತಾರ
೧೯೯೨ತರ್ಲೆ ನನ್ಮಗಉಪೇಂದ್ರಜಗ್ಗೇಶ್
೧೯೯೨ಪ್ರಣಯದ ಪಕ್ಷಿಗಳುಮಹೇಂದರ್ರಮೇಶ್ ಅರವಿಂದ್, ಕಾವ್ಯ
೧೯೯೨ಭಲೇ ಕೇಶವವಿಜಯ್ ಶೆಟ್ಟಿದೇವರಾಜ್‌, ಶಿವರಂಜಿನಿ
೧೯೯೨ಸಪ್ತಪದಿಭಾರ್ಗವಅಂಬರೀಶ್, ರೂಪಿಣಿ
೧೯೯೩ಜನ ಮೆಚ್ಚಿದ ಮಗಬಿ.ಡಿ.ಶೇಷುಶ್ರೀಧರ್, ಚಂದ್ರಿಕಾ
೧೯೯೩ಭವ್ಯ ಭಾರತಮಹಮ್ಮದ್ ಗೌಸ್ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ತಾರಾ
೧೯೯೪ಅಪ್ಪ ನಂಜಪ್ಪ ಮಗ ಗುಂಜಪ್ಪವಿ.ಶಿವರಾಂ, ಕಾಶಿನಾಥ್ ಎಸ್ಟೆನ್ನಿಸ್ ಕೃಷ್ಣ, ಅಭಿನಯ
೧೯೯೪ಗೋಪಿ ಕಲ್ಯಾಣಬಿ.ರಾಮಮೂರ್ತಿಟೈಗರ್ ಪ್ರಭಾಕರ್, ಅಂಜನಾ
೧೯೯೪ಮರ್ಡರ್ಮಂಡ್ಯ ನಾಗರಾಜ್ಸುರೇಶ್ ಹೆಬ್ಳೀಕರ್
೧೯೯೪ಸಿಡಿದೆದ್ದ ಶಿವಕೆ.ಸುರೇಶ್ ರೆಡ್ಡಿತ್ಯಾಗರಾಜ್, ರಮೇಶ್ ಭಟ್
೧೯೯೫ಕೋಣ ಈದೈತೆಬಿ.ಜಯಶ್ರೀ ದೇವಿವಿಷ್ಣುವರ್ಧನ್, ಕುಮಾರ್ ಗೋವಿಂದ್
೧೯೯೫ತುಂಬಿದ ಮನೆಎಸ್.ಉಮೇಶ್ವಿಷ್ಣುವರ್ಧನ್, ವಿನಯಾ ಪ್ರಸಾದ್, ಉಮಾಶ್ರೀ, ಶಶಿಕುಮಾರ್, ಶ್ರುತಿ, ತಾರ
೧೯೯೬ಯಾರುಬಿ.ಆರ್.ಕೇಶವ್ಆನಂದ್, ನಾಗೇಶ್ ಮಯ್ಯ

[]

ಉಲ್ಲೇಖಗಳು

[ಬದಲಾಯಿಸಿ]
  1. 1 2 3 4 "ಅಂಜಲಿ ಸುಧಾಕರ್". ನೆಟ್ ಟಿವಿ ಫಾರ್ ಯು.
  2. 1 2 3 "ಅಂಜಲಿ". ಚಿಲೋಕ.
  3. "ಅಂಜಲಿ ಸುಧಾಕರ್". ಐ ವಿಕಿ. Archived from the original on 2016-08-07. Retrieved 2016-09-30.
  4. "ಅಂಜಲಿ ಅಭಿನಯದ ಚಿತ್ರಗಳ ಪಟ್ಟಿ". ಚಿಲೋಕ.
"https://kn.wikipedia.org/w/index.php?title=ಅಂಜಲಿ&oldid=1333839" ಇಂದ ಪಡೆಯಲ್ಪಟ್ಟಿದೆ