ಆದವಾನಿ ಲಕ್ಷ್ಮಿ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆದವಾನಿ ಲಕ್ಷ್ಮಿದೇವಿ
Aadawani lakshmidevi
Born
ಆದವಾನಿ ಲಕ್ಷ್ಮಿದೇವಿ

ಆದವಾನಿ, ಬಳ್ಳಾರಿ, ಮದ್ರಾಸ್ ಸಂಸ್ಥಾನ (ಈಗ ಕರ್ನೂಲ್, ಆಂಧ್ರಪ್ರದೇಶ)
Occupationನಟಿ
Years active1954-2003
Childrenರೂಪಾದೇವಿ

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ನಾಯಕಿಯಾಗಿ ಮುಂದುವರಿದು ಪೋಷಕ ಪಾತ್ರಗಳಲ್ಲಿ ಇವರ ನಟನೆ ಇಂದಿಗೂ ಸ್ಮರಣೀಯ. ಶ್ರೀರಾಮಾಂಜನೆಯ ಯುದ್ಧ ಚಿತ್ರದಲ್ಲಿ ರಾಜ್ ಕುಮಾರ್ ಜೊತೆಯಲ್ಲಿ ನಾಯಕಿಯಾಗಿ ನಟಿಸಿ, ಮುಂದೆ ಬಂಗಾರದ ಮನುಷ್ಯ, ಜ್ವಾಲಾಮುಖಿ ಮುಂತಾದ ಚಿತ್ರಗಳಲ್ಲಿ ಅಕ್ಕ, ತಾಯಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಆರಂಭದ ದಿನಗಳು[ಬದಲಾಯಿಸಿ]

ಲಕ್ಷ್ಮೀದೇವಿ ಅವರು ಹುಟ್ಟಿದ್ದು ಆದವಾನಿ ಎಂಬಲ್ಲಿ. ಆಗ ಆದವಾನಿ ಬಳ್ಳಾರಿ ಜಿಲ್ಲೆಯಲ್ಲಿದ್ದು ಮದ್ರಾಸ್ ಸಂಸ್ಥಾನದ ಭಾಗವಾಗಿತ್ತು. ಪ್ರಸ್ತುತ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿದೆ. ಲಕ್ಷ್ಮೀದೇವಿ ಚಿಕ್ಕವರಿದ್ದಾಗಲೇ ಹಾಡು, ನಾಟಕಗಳ ಬಗ್ಗೆ ಒಲವುಳ್ಳವರಾಗಿದ್ದರು. ಹೀಗಾಗಿ ಆದವಾನಿಯಲ್ಲೇ ಆಗ ನಡೆಯುತ್ತಿದ್ದ ನಾಟಕಗಳಲ್ಲಿ ಭಾಗವಹಿಸುತ್ತ ಬಂದರು. ಕೊನೆಗೆ ಅವರು ಸೇರಿದ್ದ್ದು ಗುಬ್ಬಿ ನಾಟಕ ಕಂಪನಿಯನ್ನು. ಇಲ್ಲಿಂದ ಲಕ್ಷ್ಮೀದೇವಿ ರಂಗಭೂಮಿಯಲ್ಲಿ ಸಕ್ರಿಯರಾದರು.

ಬೆಳ್ಳಿತೆರೆ ಪ್ರವೇಶ

1953ರಲ್ಲಿ ತೆರೆಕಂಡ ಭಕ್ತ ವಿಜಯ ಲಕ್ಷ್ಮೀದೇವಿ ಅವರ ಮೊದಲ ಚಿತ್ರ. ಅಲ್ಲಿಂದ 2003ರಲ್ಲಿ ಬಿಡುಗಡೆಗೊಂಡ ಕುಟುಂಬ ಚಿತ್ರದವರೆಗೂ ದೇವಿ ಅವರ ಸಿನಿ ಪಯಣ ಒಂದು ವೈವಿಧ್ಯಮಯ ಅನುಭವಗಳ ರಾಶಿ.

ಆದವಾನಿ ಲಕ್ಷ್ಮಿ ದೇವಿ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

ಇವರು ಕನ್ನಡ ಚಿತ್ರರಂಗ ಕಂಡ ಅತಿ ಉತ್ತಮ ಪೋಷಕ ನಟಿಯರಲ್ಲಿ ಒಬ್ಬರು. ಇವರು ರಾಜಕುಮಾರ್ ರವರಿಗೆ ನಾಯಕಿಯಾಗಿ, ಅಕ್ಕ್ಕನಾಗಿ, ಅತ್ತೆ, ಅಮ್ಮನಾಗಿ ನಟಿಸಿದ್ದಾರೆ. ಖ್ಯಾತ ನಟಿ ರೂಪಾದೇವಿ ಇವರ ಮಗಳು.