ಸುಮಲತಾ

ವಿಕಿಪೀಡಿಯ ಇಂದ
Jump to navigation Jump to search
Sumalatha

ಸುಮಲತಾ - ಕನ್ನಡ ಚಿತ್ರರಂಗದ ಪ್ರಮುಖ ನಟಿ ಮತ್ತು ರಾಜಕಾರಿಣಿ. ಇವರು ತೆಲುಗು, ಮಲಯಾಳಂ, ಕನ್ನಡ, ತಮಿಳು, ಮತ್ತು ಹಿಂದಿ ಯಲ್ಲಿ ೨೨0ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಾಯಕ ನಟ, ಸಂಸತ್ ಸದಸ್ಯ ಅಂಬರೀಶ್ ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ.

೨೦೧೯ರಲ್ಲಿ ನಡೆದ ೧೭ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಕಾಂಗ್ರೆಸ್-ಜೆಡಿಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ೧,೨೮,೭೨೫ ಅಂತರದಿಂದ ಸೋಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಇದರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು.

ಸುಮಲತಾ ಅಭಿನಯಿಸಿದ ಕೆಲವು ಚಿತ್ರಗಳು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಸಹ ಕಲಾವಿದರು
೧೯೮೦ ರವಿಚಂದ್ರ ಎ.ವಿ.ಶೇಷಗಿರಿ ರಾವ್ ಡಾ.ರಾಜ್ ಕುಮಾರ್, ಲಕ್ಷ್ಮಿ
೧೯೮೫ ಆಹುತಿ ಟಿ.ಎಸ್.ನಾಗಾಭರಣ ಅಂಬರೀಶ್, ರೂಪಾದೇವಿ
೧೯೮೫ ತಾಯಿ ಕನಸು ವಿಜಯ್ ಶಂಕರ್ ನಾಗ್, ಚರಣ್ ರಾಜ್
೧೯೮೫ ತಾಯಿ ಮಮತೆ ಬಿ.ಸುಬ್ಬರಾವ್ ಟೈಗರ್ ಪ್ರಭಾಕರ್, ಶಾರದಾ
೧೯೮೫ ತಾಯಿಯ ಹೊಣೆ ವಿಜಯ್ ಅಶೋಕ್, ಚರಣ್ ರಾಜ್
೧೯೮೬ ಕಥಾನಾಯಕ ಪಿ.ವಾಸು ವಿಷ್ಣುವರ್ಧನ್
೧೯೮೬ ಕರ್ಣ ಭಾರ್ಗವ ವಿಷ್ಣುವರ್ಧನ್
೧೯೮೬ ಸತ್ಯಜ್ಯೋತಿ ಕೆ.ರಂಗರಾವ್ ವಿಷ್ಣುವರ್ಧನ್, ಊರ್ವಶಿ, ಜೈಜಗದೀಶ್
೧೯೮೭ ಹುಲಿ ಹೆಬ್ಬುಲಿ ವಿಜಯ್ ಶಂಕರ್ ನಾಗ್, ಟೈಗರ್ ಪ್ರಭಾಕರ್, ಅನಂತ್ ನಾಗ್, ಭವ್ಯಾ
೧೯೮೮ ತಾಯಿಗೊಬ್ಬ ಕರ್ಣ ರಾಜ್ ಕಿಶೋರ್ ಅಂಬರೀಶ್
೧೯೮೮ ನ್ಯೂಡೆಲ್ಲಿ ಜೋಶಿ ಅಂಬರೀಶ್, ಊರ್ವಶಿ, ಸುರೇಶ್ ಗೋಪಿ
೧೯೮೯ ಅವತಾರ ಪುರುಷ ರಾಜ್ ಕಿಶೋರ್ ಅಂಬರೀಶ್
೧೯೮೯ ನ್ಯಾಯಕ್ಕಾಗಿ ನಾನು ಎ.ಟಿ.ರಘು ಅಂಬರೀಶ್
೧೯೮೯ ರಾಜ ಯುವರಾಜ ರಾಜ್ ಕಿಶೋರ್ ಅಂಬರೀಶ್, ಟೈಗರ್ ಪ್ರಭಾಕರ್
೧೯೮೯ ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್ ಜೋ ಸೈಮನ್ ಅಂಬರೀಶ್, ಅಂಬಿಕಾ
೧೯೯೦ ಮಹೇಶ್ವರ ದಿನೇಶ್ ಬಾಬು ಶಂಕರ್ ನಾಗ್
೧೯೯೧ ಕಲಿಯುಗ ಭೀಮ ಟೈಗರ್ ಪ್ರಭಾಕರ್, ಖುಷ್ಬೂ
೧೯೯೩ ಒಲವಿನ ಕಾಣಿಕೆ ಅಂಬರೀಶ್
೨೦೦೧ ಶ್ರೀ ಮಂಜುನಾಥ ಕೆ.ರಾಘವೇಂದ್ರ ರಾವ್ ಅಂಬರೀಶ್, ಅರ್ಜುನ್ ಸರ್ಜಾ, ಚಿರಂಜೀವಿ, ಸೌಂದರ್ಯ, ಮೀನಾ
೨೦೦೩ ಎಕ್ಸ್‍ಕ್ಯೂಸ್ ಮಿ ಸುನೀಲ್ ರಾವ್, ಅಜಯ್ ರಾವ್, ರಮ್ಯಾ
೨೦೦೬ ಕಲ್ಲರಳಿ ಹೂವಾಗಿ ಟಿ.ಎಸ್.ನಾಗಾಭರಣ ಅಂಬರೀಶ್, ವಿಜಯ್ ರಾಘವೇಂದ್ರ, ಅನಂತ್ ನಾಗ್, ಭಾರತಿ, ಉಮಾಶಂಕರಿ
೨೦೧೫ ದೊಡ್ಮನೆ ಹುಡುಗ ದುನಿಯಾ ಸೂರಿ ಅಂಬರೀಶ್, ಪುನೀತ್ ರಾಜ್‍ಕುಮಾರ್, ರಾಧಿಕಾ ಪಂಡಿತ್, ಭಾರತಿ


"https://kn.wikipedia.org/w/index.php?title=ಸುಮಲತಾ&oldid=918224" ಇಂದ ಪಡೆಯಲ್ಪಟ್ಟಿದೆ