ಪ್ರತಿಮಾದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಿಮಾದೇವಿ
Pratimaadevi shankar singh
ಜನನ
ಮೋಹಿನಿ

೯ ಎಪ್ರಿಲ್ ೧೯೩೨[೧]
ಕಲ್ಲಡ್ಕ, ಕರ್ನಾಟಕ
ಮರಣ೬ ಏಪ್ರಿಲ್, ೨೦೨೧
ಸರಸ್ವತಿಪುರ, ಮೈಸೂರು
ವೃತ್ತಿನಟಿ
Years active೧೯೪೭–೨೦೦೦
ಸಂಗಾತಿಶಂಕರ್ ಸಿಂಗ್

ಪ್ರತಿಮಾದೇವಿ (ಏಪ್ರಿಲ್ ೯, ೧೯೩೨ - ಏಪ್ರಿಲ್ ೬, ೨೦೨೧), ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿ. ಇವರು ೧೯೪೭ರಲ್ಲಿ 'ಕೃಷ್ಣಲೀಲಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ೧೯೫೧ರಲ್ಲಿ ಬಿಡುಗಡೆಯಾದ 'ಜಗನ್ಮೋಹಿನಿ'ಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ದೇವಿ ಅವರ ಹುಟ್ಟುಹೆಸರು ಮೋಹಿನಿ. ಹುಟ್ಟಿದ್ದು ಫೆಬ್ರುವರಿ ೯, ೧೯೩೨ರಲ್ಲಿ. ಪ್ರತಿಮಾದೇವಿಯವರು ಕನ್ನಡ ಚಿತ್ರರಂಗದ ನಿರ್ಮಾಪಕ-ನಿರ್ದೇಶಕ, ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಪತ್ನಿ. ಕನ್ನಡದ ನಿರ್ಮಾಪಕ - ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು.

ಹಲವಾರು ಚಿತ್ರಗಳಲ್ಲಿ[ಬದಲಾಯಿಸಿ]

ಕೃಷ್ಣಲೀಲಾ, ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚೀನಾ, ಚಂಚಲಕುಮಾರಿ, ಧರ್ಮಸ್ಥಳ ಮಹಾತ್ಮೆ, ಪ್ರಭುಲಿಂಗ ಲೀಲೆಮಂಗಳ ಸೂತ್ರ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸುಮಾರು ಅರವತ್ತೈದು ಚಿತ್ರಗಳಲ್ಲಿ ಪ್ರತಿಮಾದೆವಿಯವರು ನಟಿಸಿದ್ದಾರೆ. ಜಗನ್ಮೋಹಿನಿ, ವರದಕ್ಷಿಣೆ, ಧರ್ಮಸ್ಥಳ ಮಹಾತ್ಮೆಯಲ್ಲಿನ ಅಭಿನಯಕ್ಕೆ ಪ್ರತಿಮಾದೇವಿಯವರು ಪ್ರಸಿದ್ಧಿ ಗಳಿಸಿದ್ದರು.

ನಿಧನ[ಬದಲಾಯಿಸಿ]

ಪ್ರತಿಮದೇವಿ ಅವರು ಏಪ್ರಿಲ್ ೬, ೨೦೨೧ರಂದು ಮೈಸೂರಿನ ಸರಸ್ವತೀಪುರದ ತಮ್ಮ ಮನೆಯಲ್ಲಿ ಸಾವನ್ನಪ್ಪಿದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು.[೩]

ಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೪೭ ಕೃಷ್ಣಲೀಲಾ ಸಿ.ವಿ.ರಾಜು ಕೆಂಪರಾಜ್ ಅರಸ್, ಮೇರಿ ರಾಯ್
೧೯೪೭ ಮಹಾನಂದ ಟಿ.ಜಾನಕಿರಾಮ್ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್
೧೯೪೯ ನಾಗಕನ್ನಿಕ ಜಿ.ವಿಶ್ವನಾಥನ್ ಜಯಶ್ರೀ
೧೯೫೦ ಶಿವ ಪಾರ್ವತಿ ಟಿ.ಜಾನಕಿರಾಮ್ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್
೧೯೫೧ ಜಗನ್ಮೋಹಿನಿ ಡಿ.ಶಂಕರ್ ಸಿಂಗ್ ಹರಿಣಿ
೧೯೫೨ ಶ್ರೀ ಶ್ರೀನಿವಾಸ ಕಲ್ಯಾಣ ಡಿ.ಶಂಕರ್ ಸಿಂಗ್, ಬಿ.ವಿಠ್ಠಲಾಚಾರ್ಯ
೧೯೫೩ ಚಂಚಲ ಕುಮಾರಿ ಡಿ.ಶಂಕರ್ ಸಿಂಗ್ ಇಂದುಶೇಖರ್
೧೯೫೩ ದಲ್ಲಾಳಿ ಡಿ.ಶಂಕರ್ ಸಿಂಗ್ ಸಂಪತ್, ಹರಿಣಿ
೧೯೫೪ ಮಾಡಿದ್ದುಣ್ಣೋ ಮಹಾರಾಯ ಡಿ.ಶಂಕರ್ ಸಿಂಗ್ ಸಂಪತ್, ಹರಿಣಿ
೧೯೫೪ ಮುಟ್ಟಿದ್ದೆಲ್ಲ ಚಿನ್ನ ಡಿ.ಶಂಕರ್ ಸಿಂಗ್ ಹರಿಣಿ, ಬಾಲಕೃಷ್ಣ
೧೯೫೫ ಶಿವಶರಣೆ ನಂಬಿಯಕ್ಕ ಡಿ.ಶಂಕರ್ ಸಿಂಗ್ ಕೆ.ಎಸ್.ಅಶ್ವಥ್
೧೯೫೭ ಪ್ರಭುಲಿಂಗ ಲೀಲೆ ಶ್ರೀ ಮಂಜುನಾಥ ಕೆ.ಎಸ್.ಅಶ್ವಥ್, ಹರಿಣಿ
೧೯೫೮ ಮಂಗಳ ಸೂತ್ರ ಡಿ.ಶಂಕರ್ ಸಿಂಗ್ ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ
೧೯೬೦ ಶಿವಲಿಂಗ ಸಾಕ್ಷಿ ಡಿ.ಶಂಕರ್ ಸಿಂಗ್ ಉದಯಕುಮಾರ್
೧೯೬೧ ಭಕ್ತ ಚೇತ ಎಂ.ಬಿ.ಗಣೇಶ್ ಸಿಂಗ್ ರಾಜ್ ಕುಮಾರ್
೧೯೬೧ ರಾಜ ಸತ್ಯವೃತ ಡಿ.ಶಂಕರ್ ಸಿಂಗ್ ಉದಯಕುಮಾರ್
೧೯೬೨ ಶ್ರೀ ಧರ್ಮಸ್ಥಳ ಮಹಾತ್ಮೆ ಡಿ.ಶಂಕರ್ ಸಿಂಗ್ ಡಿಕ್ಕಿ ಮಾಧವ್ ರಾವ್
೧೯೬೩ ಪಾಲಿಗೆ ಬಂದದ್ದು ಪಂಚಾಮೃತ ಎಂ.ಬಿ.ಗಣೇಶ್ ಸಿಂಗ್ ಡಿಕ್ಕಿ ಮಾಧವ್ ರಾವ್
೧೯೬೫ ಪಾತಾಳ ಮೋಹಿನಿ ಎಸ್.ಎನ್.ಸಿಂಗ್ ಬಿ.ಎಂ.ವೆಂಕಟೇಶ್, ವಾಣಿಶ್ರೀ
೧೯೮೦ ನಾರದ ವಿಜಯ ಸಿದ್ದಲಿಂಗಯ್ಯ ಅನಂತ್ ನಾಗ್, ಪದ್ಮಪ್ರಿಯ
೧೯೮೧ ಭಾರಿ ಭರ್ಜರಿ ಬೇಟೆ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಂಬರೀಶ್, ಶಂಕರ್ ನಾಗ್
೧೯೮೨ ಟೋನಿ ಭಾರ್ಗವ ಅಂಬರೀಶ್, ಶ್ರೀನಾಥ್
೧೯೮೩ ಧರಣಿ ಮಂಡಲ ಮಧ್ಯದೊಳಗೆ ಪುಟ್ಟಣ್ಣ ಕಣಗಾಲ್ ಶ್ರೀನಾಥ್, ಜೈಜಗದೀಶ್, ಪದ್ಮಾವಾಸಂತಿ
೨೦೦೨ ಲಾ ಅಂಡ್ ಆರ್ಡರ್ ಶಿವಮಣಿ ಸಾಯಿಕುಮಾರ್, ಶರತ್ ಬಾಬು
೨೦೦೫ ರಾಮ ಶ್ಯಾಮ ಭಾಮ ರಮೇಶ್ ಅರವಿಂದ್ ಕಮಲ್ ಹಾಸನ್, ರಮೇಶ್ ಅರವಿಂದ್, ಊರ್ವಶಿ, ಶ್ರುತಿ

ಉಲ್ಲೇಖಗಳು[ಬದಲಾಯಿಸಿ]

  1. "Prathima Devi : Kannada Actress Age, Movies, Biography". chiloka.com. Retrieved 19 March 2020.
  2. "An evening with Jaganmohini". The Hindu (in Indian English). 11 June 2011. Retrieved 19 March 2020.
  3. "ಹಿರಿಯ ನಟಿ ಪ್ರತಿಮಾ ದೇವಿ ನಿಧನ". Prajavani. 6 April 2021. Retrieved 7 April 2021.