ವಿಷಯಕ್ಕೆ ಹೋಗು

ಅಂಜನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಜನಾ
ಜನನ
Archana

19???
Bangalore, India
ವೃತ್ತಿಚಲನಚಿತ್ರ ನಟಿ
ಸಕ್ರಿಯ ವರ್ಷಗಳು1988-1997
ಪತ್ನಿ/ಪತಿSiddhanta Mahapatra (1994) (6 sons)

ಅಂಜನಾ (born 19??) ಕನ್ನಡದ ಜನಪ್ರಿಯ ಚಲನಚಿತ್ರ ನಟಿ. ೧೯೯೦ರ ದಶಕದಲ್ಲಿ ಸಕ್ರಿಯರಾಗಿದ್ದ ಅಂಜನಾ ಅಜಗಜಾಂತರ(೧೯೯೧), ಒಂದು ಸಿನಿಮಾ ಕಥೆ(೧೯೯೨), ಲೂಟಿ ಗ್ಯಾಂಗ್(೧೯೯೪) ಮತ್ತು ಬಂಗಾರದ ಕಳಶ(೧೯೯೫) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.[೧]

ವೃತ್ತಿಜೀವನ

[ಬದಲಾಯಿಸಿ]

ಶಬರಿಮಲೆ ಸ್ವಾಮಿ ಅಯ್ಯಪ್ಪ(೧೯೯೦) ಚಿತ್ರದಲ್ಲಿನ ಶ್ರೀಹರಿ ಮಾಯೆಯ ಅವತಾರ ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಪೋಲಿಸ್‍ನ ಹೆಂಡ್ತಿ(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದರು.
ಪ್ರಸಿದ್ಧ ನಟ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಅಜಗಜಾಂತರ(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ ಜುದಾಯಿ(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ ಶ್ರೀದೇವಿ ನಿರ್ವಹಿಸಿದ್ದರು.[೨]

ಅನಂತ್ ನಾಗ್ ಅಭಿನಯದ ಒಂದು ಸಿನಿಮಾ ಕಥೆ(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ ಟೈಗರ್ ಪ್ರಭಾಕರ್ ಅವರೊಂದಿಗೆ ಕಿಲಾಡಿ ತಾತ(೧೯೯೦) ಮತ್ತು ಸೆಂಟ್ರಲ್ ರೌಡಿ(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. ದೇವರಾಜ್‌ ಅಭಿನಯದ ರೋಷಗಾರ(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, ಲೂಟಿ ಗ್ಯಾಂಗ್(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ ಅಂಬರೀಶ್ ಅವರೊಂದಿಗೆ ಮೇಘ ಮಂದಾರ(೧೯೯೨) ಮತ್ತು ಮೈಸೂರು ಜಾಣ(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್ ಮತ್ತು ಸಿತಾರ ಅಭಿನಯದ ಬಂಗಾರದ ಕಳಶ(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.

ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಟೈಗರ್ ಪ್ರಭಾಕರ್, ಕಾಶಿನಾಥ್ ಮತ್ತು ದೇವರಾಜ್‌ರಂತಹ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜನಾ ಭಾರ್ಗವ, ಕೆ.ವಿ.ಜಯರಾಂ, ಓಂ ಸಾಯಿಪ್ರಕಾಶ್, ಎ.ಟಿ.ರಘು ಮತ್ತು ಫಣಿ ರಾಮಚಂದ್ರ ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಅಂಜನಾ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೯೦ಕಿಲಾಡಿ ತಾತಕನ್ನಡಸುಂದರನಾಥ್ ಸುವರ್ಣಟೈಗರ್ ಪ್ರಭಾಕರ್
೧೯೯೦ಪೋಲಿಸ್‍ನ ಹೆಂಡ್ತಿಕನ್ನಡಓಂ ಸಾಯಿಪ್ರಕಾಶ್ಶಶಿಕುಮಾರ್, ಮಾಲಾಶ್ರಿ, ದೇವರಾಜ್‌, ವಿನಯಾ ಪ್ರಸಾದ್
೧೯೯೦ಶಬರಿಮಲೆ ಸ್ವಾಮಿ ಅಯ್ಯಪ್ಪಕನ್ನಡರೇಣುಕಾ ಶರ್ಮಸಂಜಯ್, ಶ್ರೀನಿವಾಸಮೂರ್ತಿ, ಗೀತಾ, ಶ್ರೀಧರ್, ಸುಧಾರಾಣಿ
೧೯೯೧ಅಜಗಜಾಂತರಕನ್ನಡಕಾಶಿನಾಥ್ಕಾಶಿನಾಥ್, ಶ್ರೀರೇಖಾ
೧೯೯೧ವೀರ ಧೀರಕನ್ನಡಜಿ.ಕೆ.ಮುದ್ದುರಾಜ್ದೇವರಾಜ್‌
೧೯೯೧ಸೆಂಟ್ರಲ್ ರೌಡಿಕನ್ನಡಬಿ.ರಾಮಮೂರ್ತಿಟೈಗರ್ ಪ್ರಭಾಕರ್
೧೯೯೨ಒಂದು ಸಿನಿಮಾ ಕಥೆಕನ್ನಡಫಣಿ ರಾಮಚಂದ್ರಅನಂತ್ ನಾಗ್, ಅಭಿಲಾಷ
೧೯೯೨ನನ್ನ ತಂಗಿಕನ್ನಡಪೆರಾಲದೇವರಾಜ್‌, ಸೌಂದರ್ಯ
೧೯೯೨ಮೇಘ ಮಂದಾರಕನ್ನಡಸ್ನೇಹಾಕೆ.ವಿ.ಜಯರಾಂಅಂಬರೀಶ್, ಮಾಲಾಶ್ರೀ
೧೯೯೨ಮೈಸೂರು ಜಾಣಕನ್ನಡಎ.ಟಿ.ರಘುಅಂಬರೀಶ್, ವಿನಯಾ ಪ್ರಸಾದ್
೧೯೯೨ರೋಷಗಾರಕನ್ನಡಓಂ ಸಾಯಿಪ್ರಕಾಶ್ದೇವರಾಜ್‌
೧೯೯೨ಹಠಮಾರಿ ಹೆಣ್ಣು ಕಿಲಾಡಿ ಗಂಡುಕನ್ನಡರೇಣುಕಾ ಶರ್ಮಶ್ರೀಧರ್, ಮಾಲಾಶ್ರೀ
೧೯೯೩ಆತಂಕಕನ್ನಡಓಂ ಸಾಯಿಪ್ರಕಾಶ್ಅನಂತ್ ನಾಗ್, ವಿನಯಾ ಪ್ರಸಾದ್
೧೯೯೩ನಿಷ್ಕರ್ಷಕನ್ನಡಸುನಿಲ್ ಕುಮಾರ್ ದೇಸಾಯಿವಿಷ್ಣುವರ್ಧನ್, ಅನಂತ್ ನಾಗ್
೧೯೯೩ಮೋಜಿನ ಮದುವೆಕನ್ನಡವಿ.ನಾರಾಯಣ ಸ್ವಾಮಿದೇವರಾಜ್‌, ತಾರ
೧೯೯೪ಕಿಲಾಡಿಗಳುಕನ್ನಡದ್ವಾರಕೀಶ್ವಿಷ್ಣುವರ್ಧನ್, ದ್ವಾರಕೀಶ್, ಸುವರ್ಣ ಮಾಥ್ಯೂಸ್
೧೯೯೪ಗೋಪಿ ಕಲ್ಯಾಣಕನ್ನಡಬಿ.ರಾಮಮೂರ್ತಿಟೈಗರ್ ಪ್ರಭಾಕರ್
೧೯೯೪ಜಾಣಕನ್ನಡಶಿವಮಣಿರವಿಚಂದ್ರನ್, ಕಸ್ತೂರಿ, ಶ್ರುತಿ
೧೯೯೪ಲೂಟಿ ಗ್ಯಾಂಗ್ಕನ್ನಡಬಿ.ರಾಮಮೂರ್ತಿದೇವರಾಜ್‌
೧೯೯೫ಗಣೇಶನ ಗಲಾಟೆಕನ್ನಡಫಣಿ ರಾಮಚಂದ್ರಶಶಿಕುಮಾರ್, ಸಿತಾರ
೧೯೯೫ಬಂಗಾರದ ಕಳಶಕನ್ನಡಭಾರ್ಗವವಿಷ್ಣುವರ್ಧನ್, ಸಿತಾರ
೧೯೯೬ತಾಳಿ ಪೂಜೆಕನ್ನಡಚಂದ್ರಹಾಸ ಆಳ್ವಅನಂತ್ ನಾಗ್, ವಿನಯಾ ಪ್ರಸಾದ್
೧೯೯೬ವೀರಭದ್ರಕನ್ನಡನಂಜುಂಡೇ ಗೌಡದೇವರಾಜ್‌
೧೯೯೭ಏನೂಂದ್ರೆಕನ್ನಡರೇಲಂಗಿ ನರಸಿಂಹ ರಾವ್ಭವ್ಯ, ಅನಿಲ್

[೩]

ಉಲ್ಲೇಖಗಳು

[ಬದಲಾಯಿಸಿ]

Biography for ಅಂಜನಾ ಐ ಎಮ್ ಡಿ ಬಿನಲ್ಲಿ

  1. ↑ "ಈ ಜನ ಅಂಜನಾ". ಉದಯವಾಣಿ. Archived from the original on 2016-04-18. Retrieved 2016-06-24.
  2. ↑ "ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್". ಕನ್ನಡ ಫಿಲ್ಮಿ ಬಿಟ್.
  3. ↑ "ಅಂಜನಾ, ಚಿಲೋಕ.ಕಾಮ್". Archived from the original on 2016-05-18. Retrieved 2016-01-16.
"https://kn.wikipedia.org/w/index.php?title=ಅಂಜನಾ&oldid=1426135" ಇಂದ ಪಡೆಯಲ್ಪಟ್ಟಿದೆ