ಪ್ರಿಯಾಂಕ ತಿಮ್ಮೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿಯಾಂಕ ತಿಮ್ಮೇಶ್
ಜನನ (1996-09-04) ೪ ಸೆಪ್ಟೆಂಬರ್ ೧೯೯೬ (ವಯಸ್ಸು ೨೭)
ಭದ್ರಾವತಿ, ಕರ್ನಾಟಕ, ಭಾರತ.
ವಿದ್ಯಾಭ್ಯಾಸಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ
ವೃತ್ತಿನಟಿ
Years active೨೦೧೩ರಿಂದ ಇಲ್ಲಿಯವರೆಗೆ

ಪ್ರಿಯಾಂಕ ತಿಮ್ಮೇಶ್ ಒಬ್ಬ ಭಾರತೀಯ ಚಲನಚಿತ್ರ ನಟಿ. ಅವರು ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ . ಅವರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.ಅವರು ೨೦೧೫ ರಲ್ಲಿ ಕನ್ನಡ ಚಿತ್ರ "ಗಣಪ" ದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. [೧]

ಆರಂಭಿಕ ಜೀವನ[ಬದಲಾಯಿಸಿ]

ಪ್ರಿಯಾಂಕಾ ಕರ್ನಾಟಕಭದ್ರಾವತಿಯಲ್ಲಿ ತಿಮ್ಮೇಶ್ ಮತ್ತು ಗಿರಿಜಾ ದಂಪತಿಗಳಿಗೆ ಜನಿಸಿದರು. ಆಕೆಗೆ ಒಬ್ಬ ಹಿರಿಯ ಸಹೋದರನಿದ್ದಾನೆ. ಪ್ರಿಯಾಂಕಾ ಅವರು ಭದ್ರಾವತಿಯ ಸೇಂಟ್ ಚಾರ್ಲ್ಸ್ ಹೈಸ್ಕೂಲಿನಲ್ಲಿ ಶಾಲಾಶಿಕ್ಷಣವನ್ನು ಮತ್ತು ಶಿವಮೊಗ್ಗದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾವನ್ನೂ ಪಡೆದರು.

ವೃತ್ತಿ[ಬದಲಾಯಿಸಿ]

ಪ್ರಿಯಾಂಕ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ರೀತಿಯಿಂದ" ಧಾರಾವಾಹಿಯಲ್ಲಿ ಕಾಶ್ಮೀರಿ ಹುಡುಗಿ "ಗುಲಾಬಿ" ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು. ತಮ್ಮ ಮೊದಲ ಚಿತ್ರವಾದ "ಗಣಪ" ದಲ್ಲಿ ಅವರು "ಬೃಂದಾ" ಪಾತ್ರದಲ್ಲಿ ಕಾಣಿಸಿಕೊಂಡರು. ಅವರು ಅಕಿರಾ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅದರ ನಂತರ ಪಟಾಕಿ [೨] ಯಲ್ಲಿ ಗಣೇಶ್ ಮತ್ತು ಉತ್ಪಲ್ ಕುಮಾರ್ ಜೊತೆಗೆ "ಜಾನ್ ಸೇನ/ಸೀನ" ಚಿತ್ರದಲ್ಲಿ ಅಭಿನಯಿಸಿದರು. ಇದನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು. ಕಾರ್ತಿಕ್ ಸರಗೂರು ನಿರ್ದೇಶನದ ಮುಂಬರುವ "ಭೀಮಸೇನ ನಳ ಮಹಾರಾಜ" ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ [೩] ಮತ್ತುಇದನ್ನು ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ರೋಷನ್ ಆಂಡ್ರ್ಯೂಸ್ ನಿರ್ದೇಶನದ ನಿವಿನ್ ಪೌಲಿಯ ನಾಯಕತ್ವದ ಮಲಯಾಳಂ ಚಿತ್ರ ಕಾಯಂಕುಳಂ ಕೊಚ್ಚುನ್ನಿ [೪] ನಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. [೫]

ಪ್ರಿಯಾಂಕ ಅವರ ಚಲನಚಿತ್ರಗಳು[ಬದಲಾಯಿಸಿ]

ಕೀಲಿ
Films that have not yet been released ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೨೦೧೫ ಗಣಪ ಬೃಂದಾ ಕನ್ನಡ ಮುಖ್ಯ ಪಾತ್ರ
೨೦೧೬ ಅಕಿರಾ ಜಾನು
೨೦೧೭ ಪಟಾಕಿ ಮಾನ್ವಿತಾ
ವೈರಾ [೬]
೨೦೧೮ ಕಾಯಂಕುಲಂ ಕೊಚ್ಚುನ್ನಿ ಸುಹರಾ ಮಲಯಾಳಂ [೭]

[೮]

ಉತ್ತರವೂ ಮಹಾರಾಜ ಸಾಧನ ತಮಿಳು
ಜಾನ್ ಸೇನ/ಸೀನ [೯] ಕನ್ನಡ ಉತ್ಪಲ್ ಕುಮಾರ್, ವಿದ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ. ಇದನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ
೨೦೨೦ ಭೀಮಸೇನ ನಳಮಹಾರಾಜ ಸಾರಾ ಮೇರಿ ಕನ್ನಡ ಈ ಚಿತ್ರ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ.
೨೦೨೧ ಅರ್ಜುನ್ ಗೌಡ Films that have not yet been released ಚಿತ್ರ ಪೋಸ್ಟ್ -ಪ್ರೊಡಕ್ಷನ್ ಹಂತದಲ್ಲಿದೆ
ಶುಗರ್ ಲೆಸ್ Films that have not yet been released ಚಿತ್ರ ಇನ್ನೂ ಚಿತ್ರೀಕರಣ ಹಂತದಲ್ಲಿದೆ

ಪ್ರಿಯಾಂಕ ಅವರ ಅಭಿನಯದ ಧಾರಾವಾಹಿಗಳು ಮತ್ತು ಶೋಗಳು[ಬದಲಾಯಿಸಿ]

ವರ್ಷ ಧಾರಾವಾಹಿ/ಶೋ ಹೆಸರು ಪಾತ್ರ ವಾಹಿನಿ ಟಿಪ್ಪಣಿ
2011- 2013 ಪ್ರೀತಿಯಿಂದ ಗುಲಾಬಿ ಸ್ಟಾರ್ ಸುವರ್ಣ
2021 ಬಿಗ್ ಬಾಸ್ ಸೀಸನ್ 8 ಸ್ಪರ್ಧಿ ಕಲರ್ಸ್ ಕನ್ನಡ ವೈಲ್ಡ್ ಕಾರ್ಡ್ ಪ್ರವೇಶ
2021 ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಸ್ಪರ್ಧಿ ಕಲರ್ಸ್ ಕನ್ನಡ

ಉಲ್ಲೇಖಗಳು[ಬದಲಾಯಿಸಿ]

  1. "ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ "ಪಟಾಕಿ ಬಳಿಕ ಕುದುರಿದ ಲಕ್"".
  2. "I got to do more than dancing and supporting the hero in Pataki - Times of India". Retrieved 20 September 2017.
  3. "Priyanka signs Jeerjimbe director's next film - Times of India". Retrieved 20 September 2017.
  4. "Priyanka to get a big launch in Mollywood with Kayamkulam Kochunni". Retrieved 20 September 2017.
  5. "Priyanka bags lead role in Nivin Pauly's film - Times of India". Retrieved 20 September 2017.
  6. ಪ್ರಿಯಾಂಕಾ ತಿಮ್ಮೇಶ್ ಅಭಿನಯದ "ವೈರಾ" ಚಿತ್ರದ ಬಗ್ಗೆ IMDB ನಲ್ಲಿನ ಮಾಹಿತಿ
  7. "Popular Kannada actress riyanka Thimmesh Nivin Pauly - Malayalam Movie News - IndiaGlitz". Retrieved 20 September 2017.
  8. Priyanka bags lead role in Nivin Pauly's film - "ಟೈಂಸ್ ಆಫ್ ಇಂಡಿಯಾ"ದ ಸೆಪ್ಟೆಂಬರ್ ೨೦,೨೦೧೭ ರ ವರದಿ
  9. moviekoop.com ತಾಣದಲ್ಲಿ ಜಾನ್ ಸೇನ/ಸೀನ ಚಿತ್ರದ ಮಾಹಿತಿ


ಬಾಹ್ಯ ಕೊಂಡಿಗಳು[ಬದಲಾಯಿಸಿ]