ವೈಷ್ಣವಿ ಗೌಡ
ವೈಷ್ಣವಿ ಗೌಡ | |
---|---|
ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ | |
ಜನನ | [೧] | ೨೦ ಫೆಬ್ರವರಿ ೧೯೯೨
ಇತರೆ ಹೆಸರುಗಳು | ಸನ್ನಿಧಿ |
ವಿದ್ಯಾರ್ಹತೆ | ಬಿ.ಎ [೨] |
ಉದ್ಯೋಗ | ನಟಿ, ನಿರೂಪಕಿ |
ಸಕ್ರಿಯ ವರ್ಷಗಳು | ೨೦೧೧–ಇಲ್ಲಿಯವರೆಗೆ |
ಪೋಷಕರು |
|
ವೈಷ್ಣವಿ ಗೌಡ ಅವರು ಕನ್ನಡ ಧಾರಾವಾಹಿ ಮತ್ತು ಚಲನಚಿತ್ರ ನಟಿ. ಇವರು ಬಿಗ್ ಬಾಸ್ ಎಂಟರ ಟಾಪ್-೪ ಸ್ಪರ್ಧಿಗಳಲ್ಲಿ ಒಬ್ಬರು. ಇವರು ಇನ್ಸ್ಟಾಗ್ರಾಂ ನಲ್ಲಿ ಒಂದು ಮಿಲಿಯನ್(ಹತ್ತು ಲಕ್ಷ) ಹಿಂಬಾಲಕರನ್ನು ಹೊಂದಿದ್ದಾರೆ.
ವೈಷ್ಣವಿ ಗೌಡ ಅವರ ವೃತ್ತಿ ಜೀವನ[ಬದಲಾಯಿಸಿ]
೨೦೧೧ರಲ್ಲಿ "ದೇವಿ" ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ವೈಷ್ಣವಿ ಗೌಡ ಅವರು ಅದರಲ್ಲಿನ "ದೇವಿ" ಪಾತ್ರ ಮತ್ತು ೨೦೧೩ರಲ್ಲಿ ಪ್ರಸಾರವಾದ "ಅಗ್ನಿಸಾಕ್ಷಿ" ಧಾರಾವಾಹಿಯ "ಸನ್ನಿಧಿ" ಪಾತ್ರದ ಮೂಲಕ ಪ್ರಸಿದ್ಧರಾದರು. ಇವರು ೨೦೧೭ರಲ್ಲಿ "ಭರ್ಜರಿ ಕಾಮಿಡಿ" ಶೋನಲ್ಲಿ ನಿರೂಪಕರಾಗಿದ್ದರು ಮತ್ತು ೨೦೨೦ರಲ್ಲಿ ಬಿಗ್ ಬಾಸ್ನ ಎಂಟನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಇವರು "ಡ್ರೆಸ್ ಕೋಡ್" ಚಲನಚಿತ್ರದ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಇವರು "ಗಿರಿಗಿಟ್ಲೆ" ಚಿತ್ರದಲ್ಲೂ ಅಭಿನಯಿಸಿದ್ದಾರೆ
ಅಗ್ನಿಸಾಕ್ಷಿ[ಬದಲಾಯಿಸಿ]
ಡಿಸೆಂಬರ್ ೨, ೨೦೧೩ರಲ್ಲಿ ತೆರೆ ಕಂಡ ಅಗ್ನಿಸಾಕ್ಷಿ ಧಾರಾವಾಹಿಯು ೧೫೮೬ ಎಪಿಸೋಡುಗಳು ಕಾಲ ಪ್ರಸಾರವಾಗಿತ್ತು. ೬ ವರ್ಷಗಳ ಕಾಲ ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯು ೧೯.೭ ರಷ್ಟು ಟಿ.ಆರ್.ಪಿ ಹೊಂದಿತ್ತು. ಇದು ಈಗಲೂ ಕನ್ನಡ ಧಾರಾವಾಹಿಗಳ ಮಟ್ಟಿಗಿನ ಗರಿಷ್ಟ ಟಿ.ಆರ್.ಪಿ ಆಗಿದೆ.
ವೈಷ್ಣವಿ ಗೌಡ ಅವರ ಅಭಿನಯದ ಚಲನಚಿತ್ರಗಳು/ಧಾರಾವಾಹಿ/ಶೋಗಳು[ಬದಲಾಯಿಸಿ]
![]() |
ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ | ನಾಯಕ ನಟ | ನಿರ್ದೇಶಕ | ಭಾಷೆ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|---|---|---|
೨೦೧೧ | ದೇವಿ [೩] | ದೇವಿ | ಸೂರ್ಯ ಕಾಮತ್ | ರಮೇಶ್ ಇಂದಿರಾ | ಕನ್ನಡ | ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು | |
೨೦೧೩ | ಅಗ್ನಿ ಸಾಕ್ಷಿ [೪] | ಸನ್ನಿಧಿ | ವಿಜಯ್ ಸೂರ್ಯ | ಮೈಸೂರು ಮಂಜು | ಕನ್ನಡ | ||
ಪುನರ್ ವಿವಾಹ [೫] | ಕನ್ನಡ | ೨೦೧೩ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ [೬] ವೈಷ್ಣವಿ ಅವರು ಅಭಿನಯಿಸಿದ್ದರು. | |||||
೨೦೧೬ | ಡ್ರೆಸ್ ಕೋಡ್ [೭] | ಪೃಥ್ವಿ ದಯಾನಂದ್ | ಶಿವು ಕುಮಾರ್ | ಕನ್ನಡ | ಪೃಥ್ವಿ ದಯಾನಂದ್, ಹೇಮಾ, ದಿವ್ಯಾ ಉರುಡುಗ, ಕಾಂಚನಾ, ವೈಷ್ಣವಿ ಗೌಡ ಅವರು ಈ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ | ||
೨೦೧೭ | ಭರ್ಜರಿ ಕಾಮಿಡಿ [೮] | ಕನ್ನಡ | ದೊಡ್ಡಣ್ಣ, ರಾಗಿಣಿ ದ್ವಿವೇದಿ ಅವರು ನಿರ್ಣಾಯಕರಾಗಿದ್ದ ಈ ಶೋ ನಲ್ಲಿ ವೈಷ್ಣವಿ ಗೌಡ ಅವರು ನಿರೂಪಣೆ ಮಾಡಿದ್ದರು. | ||||
೨೦೧೯ | ಗಿರಿಗಿಟ್ಲೆ [೯] | ಚಂದ್ರಶೇಖರ್, ಗುರುರಾಜ್, ಪ್ರದೀಪ್ ರಾಜ್ | ರವಿ ಕಿರಣ್ | ಕನ್ನಡ | ಚಂದ್ರಶೇಖರ್, ಗುರುರಾಜ್, ಪ್ರದೀಪ್ ರಾಜ್ ನಾಯಕನಟರಾಗಿ ಅಭಿನಯಿಸಿದ್ದ ಈ ಚಿತ್ರದಲ್ಲಿ ವೈಷ್ಣವಿ ಗೌಡ ಮತ್ತು ಅದ್ವಿತಿ ಶೆಟ್ಟಿ ಅವರು ನಾಯಕಿಯರಾಗಿ ನಟಿಸಿದ್ದಾರೆ. | ||
೨೦೨೦ | ಬಿಗ್ ಬಾಸ್ ಸೀಸನ್- ಭಾಗ ೧,೨ [೧೦] | ಕನ್ನಡ | ೨೦೨೦ ರಲ್ಲಿ ಬಿಗ್ ಬಾಸ್-೮ ರ ಮೊದಲ ಆವೃತ್ತಿ ಕೊರೊನಾ ಕಾರಣದಿಂದ ಅರ್ಧಕ್ಕೇ ನಿಂತು ಹೋಗಿತ್ತು. ಅದನ್ನು ೨೦೨೧ರಲ್ಲಿ ಮುಂದುವರಿಸಲಾಯಿತು. |
ವೈಷ್ಣವಿ ಮತ್ತು ಬಿಗ್ ಬಾಸ್ ಎಂಟು[ಬದಲಾಯಿಸಿ]
ವೈಷ್ಣವಿ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ, ಬೈಯೋದನ್ನೂ ನಗುನಗುತ್ತಲೇ ಬಯ್ಯುತ್ತಿದ್ದ ಇವರು "ರೇಷ್ಮೆ ಸೀರೆ" ಎಂದು ಪ್ರಖ್ಯಾತರಾಗಿದ್ದರು. ಇವರು ಇದರ ಟಾಪ್-೪ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
ಉಲ್ಲೇಖಗಳು[ಬದಲಾಯಿಸಿ]
- ↑ ವೈಷ್ಣವಿ ಅವರ ಬಗೆಗಿನ ಮಾಹಿತಿ /
- ↑ ವೈಷ್ಣವಿ ಅವರ ವಿದ್ಯಾರ್ಹತೆಯ ಬಗೆಗಿನ ಮಾಹಿತಿ
- ↑ ದೇವಿ ಧಾರಾವಾಹಿಯ ಬಗೆಗಿನ nettv4u.com ತಾಣದಲ್ಲಿನ ಮಾಹಿತಿ
- ↑ ಅಗ್ನಿಸಾಕ್ಷಿ ಧಾರಾವಾಹಿಯ ಬಗೆಗಿನ ಐ.ಎಂ.ಡಿ.ಬಿ ಮಾಹಿತಿ
- ↑ "ಪುನರ್ ವಿವಾಹ ಧಾರಾವಾಹಿಯ ಬಗೆಗಿನ ಮಾಹಿತಿ". Archived from the original on 2021-09-28. Retrieved 2021-09-28.
- ↑ ಪುನರ್ ವಿವಾಹ ಧಾರಾವಾಹಿಯ ಯೂಟ್ಯೂಬ್ ಕೊಂಡಿ
- ↑ ಫಿಲ್ಮಿಬೀಟ್ ತಾಣದಲ್ಲಿ ಡ್ರೆಸ್ ಕೋಡ್ ಚಿತ್ರದ ಮಾಹಿತಿ
- ↑ imdb ಅಲ್ಲಿನ "ಭರ್ಜರಿ ಕಾಮಿಡಿ" ಶೋನ ಮಾಹಿತಿ
- ↑ ಫಿಲ್ಮಿಬೀಟ್ ತಾಣದಲ್ಲಿನ "ಗಿರಿಗಿಟ್ಲೆ" ಚಿತ್ರದ ಮಾಹಿತಿ
- ↑ IMDB ಅಲ್ಲಿ ಬಿಗ್ ಬಾಸ್ ಶೋನ ಬಗೆಗಿನ ಮಾಹಿತಿ
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ವೈಷ್ಣವಿ ಗೌಡ ಐ ಎಮ್ ಡಿ ಬಿನಲ್ಲಿ