ವಿಷಯಕ್ಕೆ ಹೋಗು

ಅಮೂಲ್ಯ (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೂಲ್ಯ ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮಾಜಿ ಭಾರತೀಯ ನಟಿ ಆಗಿದ್ದಾರೆ. ಅವರು ೨೦೦೦ ರ ದಶಕದ ಆರಂಭದಲ್ಲಿ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007 ರಲ್ಲಿ ಬಿಡುಗಡೆಯಾದ ಚೆಲುವಿನ ಚಿತ್ತಾರ ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ವಾಣಿಜ್ಯಿಕವಾಗಿ ಯಶಸ್ವಿಯಾದ ಚೈತ್ರದ ಚಂದ್ರಮ (2008), ನಾನು ನನ್ನ ಕನಸು (2010) ಮತ್ತು ಶ್ರಾವಣಿ ಸುಬ್ರಮಣ್ಯ (2013) ಚಿತ್ರಗಳಲ್ಲಿನ ಪಾತ್ರಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ [].

ಅಮೂಲ್ಯ
ಜನನ
ಮೌಲ್ಯ

(1993-09-24) ೨೪ ಸೆಪ್ಟೆಂಬರ್ ೧೯೯೩ (ವಯಸ್ಸು ೩೧)
ವೃತ್ತಿನಟಿ
ಸಕ್ರಿಯ ವರ್ಷಗಳು2001 – 2017
ಸಂಗಾತಿ
ಜಗದೀಶ್
(m. ೨೦೧೭)
ಮಕ್ಕಳು2

ಆರಂಭಿಕ ಜೀವನ

[ಬದಲಾಯಿಸಿ]

ಅಮೂಲ್ಯ ಕರ್ನಾಟಕದ ಬೆಂಗಳೂರಿನಲ್ಲಿ 1992ರಲ್ಲಿ[] ಜನಿಸಿದರು. ಇವರ ಆರಂಭಿಕ ಹೆಸರು ಮೌಲ್ಯ ಆಗಿತ್ತು. ಇವರ ತಂದೆ ಶೇಷಾದ್ರಿಪುರಂ ಮುಖ್ಯ ಕಾಲೇಜಿನಲ್ಲಿ ಮುಖ್ಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಜಯಲಕ್ಷ್ಮಿ ಗೃಹಿಣಿ ಆಗಿದ್ದರು. ಇವರ ತಂದೆ 2009 ರಲ್ಲಿ ತೀರಿಕೊಂಡರು[]. 2011ರಲ್ಲಿ ತೆರೆಕಂಡ 'ಮಾನಸಲಜಿ' ಚಿತ್ರವನ್ನು ಇವರ ಅಣ್ಣ ದೀಪಕ್ ಅರಸ್ ನಿರ್ದೇಶನ ಮಾಡಿದ್ದರು[].

ಶಿಕ್ಷಣ ಮತ್ತು ವೃತ್ತಿ ಜೀವನ

[ಬದಲಾಯಿಸಿ]

ಶಾಲೆಯಲ್ಲಿದ್ದಾಗ ಇವರು ಭರತನಾಟ್ಯ ನೃತ್ಯಕ್ಕೆ ತರಬೇತಿಯನ್ನು ಪಡೆದು ಕೊಂಡಿದ್ದಾರೆ ಮತ್ತು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದಿದ್ದಾರೆ[]. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ವಾಣಿಜ್ಯದಲ್ಲಿ ಪದವಿಪೂರ್ವ ಕೋರ್ಸ್ ಅನ್ನು ಪೂರ್ಣಗೊಳಿಸಿದರು. 2014 ರಲ್ಲಿ, ಇವರು ಇದೇ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ (B.Com.) ಪದವಿಯನ್ನು ಪಡೆದುಕೊಂಡರು[][] .

ಇವರು ಮೊದಲ ಬಾರಿಗೆ ಕನ್ನಡ ಧಾರಾವಾಹಿ ಸುಪ್ತ ಮನಸಿನ ಸಪ್ತ ಸ್ವರಗಳು ಮೂಲಕ ಪರದೆಯ ಮೇಲೆ ಆರು ವರ್ಷದವರಾಗಿದ್ದಾಗ ಕಾಣಿಸಿಕೊಂಡರು. ಅವರು ತಮ್ಮ ಬಾಲ್ಯವನ್ನು "ಕಾರ್ಯನಿರತ" ವಿವರಿಸುತ್ತಾರೆ.

ನಟನಾ ಜೀವನ

[ಬದಲಾಯಿಸಿ]

2001ರಲ್ಲಿ ತೆರೆಕಂಡ ವಿಷ್ಣುವರ್ಧನ್ ಅಭಿನಯದ 'ಪರ್ವ' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ಜೊತೆ ನಟಿಸಿ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಅವರು ಚೈತ್ರದ ಚಂದ್ರಮಾ, ಪ್ರೇಮಿಸಂ, ನಾನು ನನ್ನ ಕನಸುಗಳು ಮತ್ತು ಮನಸಾಲಜಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವು ಮಧ್ಯಮ ವ್ಯವಹಾರವನ್ನು ಮಾಡಿದವು ಅಥವಾ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಆದರೆ, ಅಮೂಲ್ಯ ಅವರ ಅಭಿನಯವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು[][]. ಎರಡು ವರ್ಷಗಳ ವಿರಾಮದ ನಂತರ, ಅವರು 2013 ರ ಹಿಟ್ ಚಿತ್ರ ಶ್ರಾವಣಿ ಸುಬ್ರಮಣ್ಯದಲ್ಲಿ ಗಣೇಶ್ ಜೊತೆ ಎರಡನೇ ಬಾರಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅಮೂಲ್ಯ ಅಭಿನಯವು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆಯಿತು. ಅದೇ ವರ್ಷ, ಶ್ರಾವಣಿ ಸುಬ್ರಮಣ್ಯ ಚಿತ್ರದ ಸಹನಟ ಗಣೇಶ್ ಅವರು ಇವರಿಗೆ 'ಗೋಲ್ಡನ್ ಕ್ವೀನ್' ಎಂಬ ಬಿರುದನ್ನು ನೀಡಿದರು[೧೦][೧೧]. ಈ ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ ಮೊದಲ ಫಿಲ್ಮ್ಫೇರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು[೧೨].

2015 ರಲ್ಲಿ ಅಮೂಲ್ಯ ಅವರು ಮೂರನೇ ಬಾರಿಗೆ ಗಣೇಶ್ ಗೆ ಖುಷಿ ಖುಷಿಯಾಗಿ ಸಿನಿಮಾದಲ್ಲಿ ಜೋಡಿಯಾದರು. ನಂದಿನಿ ಪಾತ್ರದಲ್ಲಿ ಅವರ ಅಭಿನಯವನ್ನು ವಿಮರ್ಶಕರು ಶ್ಲಾಘಿಸಿದರು; ದಿ ಟೈಮ್ಸ್ ಆಫ್ ಇಂಡಿಯಾದ ಜಿ.ಎಸ್.ಕುಮಾರ್ ಹೀಗೆ ಬರೆದಿದ್ದಾರೆ, "ಅಮೂಲ್ಯ ಅವರ ಪಾತ್ರದಲ್ಲಿ 'ಶ್ರಾವಣಿ ಸುಬ್ರಮಣ್ಯ'ದ ಛಾಯೆಗಳು ಗೋಚರಿಸುತ್ತವೆ." ಮಳೆಯಲ್ಲಿ ಅವರು ವರ್ಷಾ ಪಾತ್ರದಲ್ಲಿ ನಟಿಸಿದರು ಮತ್ತು ಪ್ರೇಮ್ ಕುಮಾರ್ ಅವರೊಂದಿಗೆ ಜೋಡಿಯಾದರು. 2015 ರಲ್ಲಿ ಎರಡನೇ ಬಿಡುಗಡೆಯಾದ ಪ್ರಣಯ-ನಾಟಕವಾದ ರಾಮ್ ಲೀಲಾದಲ್ಲಿ, ಅವರು ಡಾನ್ ನ ಸಹೋದರಿ ಚಂದ್ರಕಲಾ ಮತ್ತು ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. 2016 ರ ಇವರ ಮೊದಲ ಬಿಡುಗಡೆ, ಮದುವೆಯ ಮಮತೆಯಾ ಕರೆಯೋಲೆಯಲ್ಲಿ, ಅವರು "ಬುಲೆಟ್ ಸವಾರಿ ಮಾಡಲು ಇಚ್ಛಿಸುವ ಪಾತ್ರವಮನ್ನು ಮಾಡಿದರು. ಇವರು ಕುಟುಂಬ ನಾಟಕ-ಪ್ರಣಯ ಚಿತ್ರದಲ್ಲಿ ನಟ ಸೂರಜ್ ಗೌಡ ಅವರೊಂದಿಗೆ ಜೋಡಿಯಾದರು. ಟೈಮ್ಸ್ ಆಫ್ ಇಂಡಿಯಾ ಅವರ ಅಭಿನಯವನ್ನು "ಬಹುಮುಖ" ಎಂದು ಕರೆದಿದೆ.

ಫೆಬ್ರವರಿ 2016 ರಲ್ಲಿ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದಂತೆ, ಮಾಸ್ ಲೀಡರ್ ನಿರ್ಮಾಪಕರು ಅಮೂಲ್ಯ ಅವರನ್ನು ಶಿವ ರಾಜ್ ಕುಮಾರ್ ಅವರ ಸಹೋದರಿಯ ಪಾತ್ರವನ್ನು ನಿರ್ವಹಿಸಲು ಸಂಪರ್ಕಿಸಿದರು. ಇದನ್ನು ಸಹನಾ ಮೂರ್ತಿ ನಿರ್ದೇಶಿಸಲಿದ್ದಾರೆ. ನಾಗಶೇಖರ್ ಅವರ ಮಾಸ್ತಿಗುಡಿ ಚಿತ್ರದಲ್ಲಿ ದುನಿಯಾ ವಿಜಯ್ ಎದುರು ನಾಯಕಿಯಾಗಿ ನಟಿಸುವುದನ್ನು ಅವರು ದೃಢಪಡಿಸಿದರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಅಮೂಲ್ಯ 2017ರಲ್ಲಿ ಜಗದೀಶ್ ಎನ್ನುವವರನ್ನು ಮದುವೆಯಾದರು[೧೩] . ಇವರಿಗೆ ಇಬ್ಬರು ಅವಳಿ ಗಂಡು ಮಕ್ಕಳು ಇದ್ದಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಸಿನಿಮಾ ಪಾತ್ರ ಟಿಪ್ಪಣಿಗಳು
2002 ಪರ್ವ (2002) ಬಾಲಾ ಕಲಾವಿದೆ
2003 ಚಂದು(2002) ಬಾಲಾ ಕಲಾವಿದೆ
2003 ಲಾಲಿ ಹಾಡು ಅಮೂಲ್ಯ ಬಾಲಾ ಕಲಾವಿದೆ
2005 ಮಹಾರಾಜ ಬಾಲಾ ಕಲಾವಿದೆ
2006 ಮಂಡ್ಯ ಬಾಲಾ ಕಲಾವಿದೆ
2006 ಸುಂಟರಗಾಳಿ ರಾಜುಹುಲಿಯ ಮಗಳು ಮನ್ನಣೆ ಪಡೆಯದ ಪಾತ್ರ
2006 ಸಜನಿ ವಿಕ್ರಮ್ ನ ತಂಗಿ ಬಾಲಾ ಕಲಾವಿದೆ
2006 ನಮ್ಮ ಬಸವ ಬಾಲಾ ಕಲಾವಿದೆ
2006 ತನಂ ತನಂ ಮೌಲ್ಯ ಆಗಿ ಮನ್ನಣೆ as Maulya
2006 ಕಲ್ಲರಳಿ ಹೂವಾಗಿ ಉಮ ಮೌಲ್ಯ ಆಗಿ ಮನ್ನಣೆ
2007 ತಿಮ್ಮ ಬಾಲಾ ಕಲಾವಿದೆ
2007 ಚೆಲುವಿನ ಚಿತ್ತಾರ ಐಶ್ಚರ್ಯ "ಐಶು" ನಾಯಕಿಯಾಗಿ ಚೊಚ್ಚಲ ಸಿನಿಮಾ
2008 ಚೈತ್ರದ ಚಂದ್ರಮ ಅಮ್ಮು
2009 ಮಳೆಯಲಿ ಜೊತೆಯಲಿ ಐಶು ಅತಿಥಿ ಫಾತ್ರ
2010 ಪ್ರೇಮಿಸಂ ಅಮೂಲ್ಯ ಡಿಸೋಜಾ
2010 ನಾನು ನನ್ನ ಕನಸು ಕನಸು
2011 ಮನಸಲಾಜಿ ಸಿಹಿ
2013 ಶ್ರಾವಣಿ ಸುಬ್ರಮಣ್ಯ ಶ್ರಾವಣಿ
2014 ಗಜಕೇಸರಿ ಮೀರಾ
2015 ಖುಷಿ ಖುಷಿಯಾಗಿ ನಂದಿನಿ
2015 ಮಳೆ ವರ್ಷ
2015 ರಾಮಲೀಲಾ ಚಂದ್ರಕಲಾ
2016 ಮದುವೆಯ ಮಮತೆಯ ಕರೆಯೋಲೆ ಖುಷಿ
2016 ಕೃಷ್ಣ-ರುಕ್ಕು ರುಕ್ಮಿಣಿ
2017 ಮಾಸ್ತಿ ಗುಡಿ ಭವ್ಯ
2017 ಮುಗುಳು ನಗೆ ಪುಲಕೇಶಿಯ ಹೆಂಡತಿ ಅತಿಥಿ ಪಾತ್ರದಲ್ಲಿ

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
2007 ಉದಯ ಸಿನಿಮಾ ಅವಾರ್ಡ್ಸ ಉತ್ತಮ ನಟಿ ಗೆಲುವು ಚೆಲುವಿನ ಚಿತ್ತಾರದ ಐಶು ಪಾತ್ರಕ್ಕೆ [೧೪]
2013 ಫಿಲ್ಮಪೇರ್ ಅವಾರ್ಡ್ಸ ಉತ್ತಮ ನಟಿ (ಕನ್ನಡ) ಗೆಲುವು ಶ್ರಾವಣಿ ಸುಬ್ರಮಣ್ಯ ಚಿತ್ರದ ಶಾವ್ರಣಿ ಪಾತ್ರಕ್ಕೆ
2013 ಸೈಮಾ ಅವಾರ್ಡ್ಸ್ ಉತ್ತಮ ನಟಿ (ಕನ್ನಡ) Nominated

ಉಲ್ಲೇಖಗಳು

[ಬದಲಾಯಿಸಿ]
  1. Khajane, Muralidhara (7 March 2017). "Amulya to tie knot in May". The Hindu.
  2. "Kannada Actress Amulya's Diwali Pics With Her Twin Kids Is Pure Mother-son Goals". 14 ನವೆಂಬರ್ 2023. News18.
  3. "Amoolya shocked by her father's death". bharatstudent.com. 9 November 2009. Retrieved 21 August 2015.
  4. "Amoolya's brother Deepak is a director". The Times of India. 1 April 2014. Retrieved 6 June 2014.
  5. Amulya (13 May 2014). NANU NANNA CINEMA WITH AMULYA SEG01. India: Samaya News.
  6. "If fans want to see me in glamorous roles, I will do them". Rediff.com. 31 December 2014. Retrieved 21 August 2015.
  7. "People in Sandalwood respect me for the work I have done: Amulya". The Times of India. 3 December 2013. Retrieved 21 August 2015.
  8. "Amoolya steals the show in 'Premism'". Sify. 2 ಏಪ್ರಿಲ್ 2010. Archived from the original on 7 ಏಪ್ರಿಲ್ 2014. Retrieved 15 ಫೆಬ್ರವರಿ 2014.
  9. "Yet another golden opportunity!". Deccan Chronicle. 4 December 2013. Retrieved 15 February 2014.
  10. "Beauty of simple pleasures". Deccan Herald. 27 December 2013. Retrieved 15 February 2014.
  11. "Shravani Subramanya review". The Times of India. 28 December 2013. Retrieved 15 February 2014.
  12. "Amulya is now Golden Queen Amulya". The Times of India. 1 ಡಿಸೆಂಬರ್ 2013. Archived from the original on 6 ಜನವರಿ 2014. Retrieved 15 ಫೆಬ್ರವರಿ 2014.
  13. Amulya marries Jagadish. The Indian Express. 12 ಮೇ 2017. Retrieved 21 ಜುಲೈ 2018.
  14. "Amoolya is back in action". GM MIND HACKS. 23 February 2020. Retrieved 23 February 2020.