ವಿನಯಾ ಪ್ರಸಾದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿನಯಾ ಪ್ರಸಾದ್ ( ಇವರ ಹೆಸರು ವಿನಯಾ ಪ್ರಕಾಶ್ ಎಂದೂ ಕೆಲವೆಡೆ ಬಳಕೆಯಲ್ಲಿದೆ) ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ. ಇವರು ದೂರದರ್ಶನ ವಾಹಿನಿಗಳಲ್ಲಿಯೂ ನಟಿಸುತ್ತಾರೆ. ೧೯೮೮ ರಲ್ಲಿ ಜಿ.ವಿ. ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದರು. ಮುಂದೆ ಅನಂತನಾಗ್ ಎದುರಿಗೆ 'ಗಣೇಶನ ಮದುವೆ' ಚಿತ್ರದಲ್ಲಿ ನಾಯಕಿ ಆದರು. ಚಿತ್ರವು ಯಶಸ್ವಿ ಅಯಿತು . ಮುಂದೆ ಅವರು ಕನ್ನಡ, ತೆಲುಗು,ತಮಿಳು ಮತ್ತು ಮಲಯಾಳಂ ಭಾಷೆಗಳ ೬೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅವರ ಪ್ರಮುಖ ಕನ್ನಡ ಚಿತ್ರಗಳಲ್ಲಿ ನೀನು ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ, ಗೌರಿ ಗಣೇಶ , ಮೈಸೂರು ಜಾಣ ಮತ್ತು ಸೂರ್ಯೋದಯ ಸೇರಿವೆ. ಆತಂಕ ( ೧೯೯೩) ಮತ್ತು ಬಣ್ಣದ ಹೆಜ್ಜೆ (೨೦೦೧) ಚಿತ್ರಗಳಲ್ಲಿ ಅವರ ನಟನೆಗಾಗಿ ಕರ್ನಾಟಕ ರಾಜ್ಯದ ಉತ್ತಮನಟಿ ಪ್ರಶಸ್ತಿಗಳು ದೊರಕಿವೆ. ನಾಯಕಿಯಾಗಿ ಯಶಸ್ವೀ ವೃತ್ತಿಯ ನಂತರ ಅವರ ಚಾರಿತ್ರ್ಯಪಾತ್ರಗಳನ್ನು ದಕ್ಷಿಣ ಭಾರತದ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಅವರು ಉತ್ತಮ ಗಾಯಕಿಯೂ ಅಲ್ಲದೆ ನೃತ್ಯಗ್ರಾಮದಲ್ಲಿ ವಸಂತಹಬ್ಬ ಮತ್ತು ಮೈಸೂರು ದಸರಾದಂಥ ಕಾರ್ಯಕ್ರಮಗಳನ್ನು ನಡೆಸಿಯೂ ಕೊಡುತ್ತಾರೆ.

ಇವರು ಉಡುಪಿ ಯಲ್ಲಿ ಹುಟ್ಟಿ ಬೆಳೆದವರು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.