ಚಾರುಲತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾರುಲತಾ
ಜನನ
ಪಂಜಾಬ್, ಭಾರತ
ಉದ್ಯೋಗನಟಿ, ರೂಪದರ್ಶಿ
ಸಕ್ರಿಯ ವರ್ಷಗಳು೧೯೯೭-ಪ್ರಸ್ತುತ

ಚಾರುಲತಾ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ ಮತ್ತು ರೂಪದರ್ಶಿ. ಕನ್ನಡ ಸೇರಿದಂತೆ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಚಾರುಲತಾ ಜನಿಸಿದ್ದು ಉತ್ತರ ಭಾರತದ ಪಂಜಾಬ್ ರಾಜ್ಯದಲ್ಲಾದರೂ ಬೆಳೆದಿದ್ದು ಕೇರಳಕೋಳಿಕೋಡ್ನಲ್ಲಿ. ಇವರ ಮೂಲ ಹೆಸರು ಸೋನಿಯಾ

ವೃತ್ತಿ ಜೀವನ[ಬದಲಾಯಿಸಿ]

ವಿ.ಮನೋಹರ್ ನಿರ್ದೇಶನದ ಚೊಚ್ಚಲ ಚಿತ್ರ ಓ ಮಲ್ಲಿಗೆ(೧೯೯೭) ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಚಾರುಲತಾ ತಮ್ಮ ಮುಗ್ಧ, ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಪೂರ್ವ ಯಶಸ್ಸನ್ನು ಗಳಿಸಿತು. ಮೊದಲ ಚಿತ್ರವೇ ಯಶಸ್ವಿಯಾದ್ದರಿಂದ ಚಾರುಲತಾ ಅವರನ್ನು ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು. ಇದೇ ವರ್ಷ ಶಿವರಾಜ್ ಕುಮಾರ್ ಜೊತೆ ನಟಿಸಿದ ಜೋಡಿ ಹಕ್ಕಿ(೧೯೯೭) ಚಿತ್ರದಲ್ಲಿ ಎರಡು ವಿಭಿನ್ನ ಛಾಯೆಯಿರುವ ಪಾತ್ರದಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ. ಮದುವೆ(೧೯೯೭), ನೀ ನನ್ನ ಜೀವ(೨೦೦೦) ಮತ್ತು ಹೆಂಡ್ತಿ ಅಂದ್ರೆ ಹೆಂಡ್ತಿ(೨೦೦೪) ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನಗೆದ್ದಿರುವ ಚಾರುಲತಾ ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶಶಿಕುಮಾರ್, ದೇವರಾಜ್, ಸಾಯಿಕುಮಾರ್, ರಾಘವೇಂದ್ರ ರಾಜಕುಮಾರ್, ಜಗ್ಗೇಶ್ ಮತ್ತು ಕುಮಾರ್ ಗೋವಿಂದ್ರಂತಹ ಜನಪ್ರಿಯ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.[೨]

ಚಾರುಲತಾ ಅಭಿನಯದ ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೯೭ ಓ ಮಲ್ಲಿಗೆ ವಿ.ಮನೋಹರ್ ರಮೇಶ್ ಅರವಿಂದ್
೧೯೯೭ ಜೋಡಿ ಹಕ್ಕಿ ಡಿ.ರಾಜೇಂದ್ರ ಬಾಬು ಶಿವರಾಜ್ ಕುಮಾರ್, ವಿಜಯಲಕ್ಷ್ಮಿ
೧೯೯೭ ಮದುವೆ ವಿ.ಉಮಾಕಾಂತ್ ರಮೇಶ್ ಅರವಿಂದ್, ಕುಮಾರ್ ಗೋವಿಂದ್
೧೯೯೭ ಹಳ್ಳಿಯಾದರೇನು ಶಿವ ವಿ.ಉಮಾಕಾಂತ್ ಕುಮಾರ್ ಗೋವಿಂದ್
೧೯೯೮ ಗಡಿಬಿಡಿ ಕೃಷ್ಣ ಸಾಯಿಪ್ರಕಾಶ್ ಶಿವರಾಜ್ ಕುಮಾರ್, ರವಳಿ, ಇಂದ್ರಜಾ
೧೯೯೮ ಜಗತ್ ಕಿಲಾಡಿ ಟಿ.ಚಿಕ್ಕಣ್ಣ ಕಂಪ್ಲಿ ಜಗ್ಗೇಶ್
೧೯೯೮ ಜೈದೇವ್ ಎಚ್.ವಾಸುದೇವ್ ಜಗ್ಗೇಶ್
೧೯೯೮ ಮಾತಿನ ಮಲ್ಲ ಯೋಗೀಶ್ ಹುಣಸೂರ್ ಜಗ್ಗೇಶ್
೧೯೯೮ ಸಿಂಹದ ಗುರಿ ಯು ನಾರಾಯಣ್ ರಾವ್ ವಿಷ್ಣುವರ್ಧನ್
೧೯೯೮ ಸುವ್ವಿ ಸುವ್ವಲಾಲಿ ಎಸ್.ಮಹೇಂದರ್ ರಮೇಶ್ ಅರವಿಂದ್, ಶಿಲ್ಪಾ
೧೯೯೯ ಇದು ಎಂಥಾ ಪ್ರೇಮವಯ್ಯಾ ಕೂಡ್ಲು ರಾಮಕೃಷ್ಣ ರಮೇಶ್ ಅರವಿಂದ್, ಶಿಲ್ಪಾ
೧೯೯೯ ಮಿಸ್ಟರ್ ಎ‍‍‍ಕ್ಸ್ ಹ ಸು ರಾಜಶೇಖರ್ ದೇವರಾಜ್
೧೯೯೯ ಟುವ್ವಿ ಟುವ್ವಿ ಟುವ್ವಿ ಸಿಂಗೀತಂ ಶ್ರೀನಿವಾಸ್ ರಾವ್ ರಾಘವೇಂದ್ರ ರಾಜಕುಮಾರ್
೨೦೦೦ ಇಂಧ್ರ ಧನುಷ್ ವಿ.ಮನೋಹರ್ ಶಿವರಾಜ್ ಕುಮಾರ್
೨೦೦೦ ನೀ ನನ್ನ ಜೀವ ಸತ್ಯಜಿತ್ ಚರಣ್ ರಾಜ್
೨೦೦೦ ನಾಗದೇವತೆ ಸಾಯಿಪ್ರಕಾಶ್ ಸಾಯಿಕುಮಾರ್, ಪ್ರೇಮಾ
೨೦೦೦ ಭೂಮಿ ಗಂಧರ್ವ ದೇವರಾಜ್
೨೦೦೧ ನೀಲಾಂಬರಿ ಸೂರ್ಯ ರಮ್ಯಾ ಕೃಷ್ಣ, ದೇವರಾಜ್, ಪ್ರೇಮಾ, ಸುಮನ್
೨೦೦೩ ಹೃದಯಾಂಜಲಿ ಭಾಸ್ಕರ್ ರಾಜ್ ಕಮಲ್
೨೦೦೪ ಹೆಂಡ್ತಿ ಅಂದ್ರೆ ಹೆಂಡ್ತಿ ಆನಂದ್ ಪಿ ರಾಜು ಶಶಿಕುಮಾರ್, ಶ್ರುತಿ
೨೦೦೬ ಪಾಂಡವರು ಕೆ.ವಿ.ರಾಜು ಅಂಬರೀಶ್, ದೇವರಾಜ್, ಜಗ್ಗೇಶ್, ರಾಮ್ ಕುಮಾರ್, ಅಭಿಜಿತ್
೨೦೦೮ ಪಲ್ಲವಿ ಇಲ್ಲದ ಚರಣ ಶಿವಪ್ರಭು ನಾಗಕಿರಣ್, ಪಾಯಲ್

[೩]

ಉಲ್ಲೇಖಗಳು[ಬದಲಾಯಿಸಿ]

  1. "ಚೆಲುವೆ ಚಾರುಲತಾ ಸೆಕೆಂಡ್ ಇನ್ನಿಂಗ್ಸ್ ವಿದ್ ಮಂಜಿನ ಹನಿ". ಜಸ್ಟ್ ಕನ್ನಡ.ಇನ್.[ಶಾಶ್ವತವಾಗಿ ಮಡಿದ ಕೊಂಡಿ]
  2. "ಚಾರುಲತಾ". ಚಿತ್ರಲೋಕ.ಕಾಮ್.
  3. "ಚಾರುಲತಾ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.
"https://kn.wikipedia.org/w/index.php?title=ಚಾರುಲತಾ&oldid=1055043" ಇಂದ ಪಡೆಯಲ್ಪಟ್ಟಿದೆ