ವಿಷಯಕ್ಕೆ ಹೋಗು

ರಶ್ಮಿಕಾ ಮಂದಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಶ್ಮಿಕಾ ಮಂದಣ್ಣ
2022 ರಲ್ಲಿ ರಶ್ಮಿಕಾ ಮಂದಣ್ಣ
ಜನನ (1996-04-05) ೫ ಏಪ್ರಿಲ್ ೧೯೯೬ (ವಯಸ್ಸು ೨೮)[]
ವೃತ್ತಿ(ಗಳು)ನಟಿ, ರೂಪದರ್ಶಿ
ಸಕ್ರಿಯ ವರ್ಷಗಳು೨೦೧೬–ಇಲ್ಲಿಯವರೆಗೆ

ರಶ್ಮಿಕಾ ಮಂದಣ್ಣ (ಜನನ: ೫ ಏಪ್ರಿಲ್ ೧೯೯೬), ಒಬ್ಬ ಭಾರತೀಯ ರೂಪದರ್ಶಿ ಹಾಗೂ ಕನ್ನಡ ಚಿತ್ರನಟಿ. ತನ್ನ ವೃತ್ತಿಜೀವನವನ್ನು ಒಬ್ಬ ರೂಪದರ್ಶಿಯಾಗಿ ಪ್ರಾರಂಭಿಸಿದ ಅವರು ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿಯೊಂದಿಗೆ ೨೦೧೬ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.[] ಕಿರಿಕ್ ಪಾರ್ಟಿಯ ನಂತರ ಕರ್ನಾಟಕ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಅವರನ್ನು, ಇದೀಗ ನ್ಯಾಷನಲ್ ಕ್ರಶ್ 2020 ಎಂದು ಗೂಗಲ್ ಇಂಡಿಯಾ ಕರೆದಿದೆ.[]

ಆರಂಭಿಕ ಮತ್ತು ವೈಯಕ್ತಿಕ ಜೀವನ

[ಬದಲಾಯಿಸಿ]

ರಶ್ಮಿಕಾ ಅವರು ಕರ್ನಾಟಕಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು.[][] ಇವರು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿಧ್ಯಾಬ್ಯಾಸವನ್ನು ಪಡೆದರು, ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ರಶ್ಮಿಕಾ ರವರು ೨೦೧೪ ರ ಬೆಂಗಳೂರು ಟೈಮ್ಸ್ ನ ೨೫ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ತಮ್ಮ ಸ್ಥಾನವನದನು ಗಿಟ್ಟಿಸಿಕೊಂಡರು. ೨೦೧೬ ರಲ್ಲಿ ಅವರು ೨೪ನೇ ಸ್ಥಾನದಲ್ಲಿದ್ದರು ನಂತರ ೨೦೧೭ ರಲ್ಲಿ ಅವರು 'ಮೊದಲ ಬಾರಿಗೆ' ಬೆಂಗಳೂರ್ ಟೈಮ್ಸ್ ೨೦೧೭ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನಬನ್ನು ತಮ್ಮದಾಗಿಸಿಕೊಂಡರು.[]

ವೃತ್ತಿ ಜೀವನ

[ಬದಲಾಯಿಸಿ]

ರಶ್ಮಿಕಾ ಅವರು ೨೦೧೪ ರಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಅದೇ ವರ್ಷ ಅವರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು ಹಾಗು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ ೨೦೧೫ ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು. ಈ ಸ್ಪರ್ಧೆಯಲ್ಲಿ ಅವರ ಚಿತ್ರಗಳು ಕಿರಿಕ್ ಪಾರ್ಟಿ ಚಲನಚಿತ್ರದ ತಯಾರಕರನ್ನು ಆಕರ್ಷಿಸಿತು, ನಂತರ ಆಕೆಯು ೨೦೧೬ ರ ಆರಂಭದಲ್ಲಿ ನಾಯಕಿ ನಟಿಯಾಗಿ ನಟಿಸಿದರು. ದಿ ಟೈಮ್ಸ್ ಆಫ್ ಇಂಡಿಯಾ ದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದರು: "ಕಿರಿಕ್ ಪಾರ್ಟಿಯ ತಯಾರಕರು ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ೨೦೧೪ರ ಸ್ಪರ್ಧೆಯಿಂದ ನನ್ನ ಚಿತ್ರವನ್ನು ಕಂಡರು - ಅದರಲ್ಲಿ ನಾನು ಕಾಲೇಜು ಸುತ್ತಿನಲ್ಲಿ ನೃತ್ಯ ಮಾಡುತ್ತಿದ್ದೆ. ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡರು. ನಾನು ಯಾವಾಗಲೂ ಚಿತ್ರಗಳಲ್ಲಿ ನಟಿಸಬೇಕೆಂದು ಬಯಸಿದ್ದೆ."[] ಇವರು ಕಿರಿಕ್ ಪಾರ್ಟಿ ಚಲನಚಿತ್ರದಲ್ಲಿ ಕರ್ಣ(ರಕ್ಷಿತ್ ಶೆಟ್ಟಿ)ನ ಕಾಲೇಜು ಪ್ರೇಯಸಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ನಟಿಸಿದರು. ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಒಳ್ಳೆಯ ಪ್ರಶಂಸೆಗೆ ಪಾತ್ರವಾಯಿತು. ಜೊತೆಗೆ, ರಶ್ಮಿಕಾ ಅಭಿನಯವು ಮೆಚ್ಚುಗೆಯನ್ನು ಪಡೆಯಿತು ಹಾಗು ೨೦೧೬ ರ ಅತ್ಯುತ್ತಮ ನಟಿ (ಚೊಚ್ಚಲ) ಯಾಗಿ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಪ್ರಶಸ್ತಿಯನ್ನು ಗೆದ್ದುಕೊಂಡರು.[] []

ಮಾರ್ಚ್ ೨೦೧೭ರ ವೇಳೆಗೆ, ರಶ್ಮಿಕಾ ಅವರು ಪುನೀತ್ ರಾಜ್‍ಕುಮಾರ್ ನೊಂದಿಗೆ ಹರ್ಷ ನಿರ್ದೇಶನದ ಚಲನಚಿತ್ರ ಅಂಜನಿ ಪುತ್ರ ಚಲನಚಿತ್ರದಲ್ಲಿ ಅಭಿನಯಿಸಿದರು. ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸದ್ಯ ಆಕೆಯ ತೆಲುಗು ಚಿತ್ರರಂಗದ ಚೊಚ್ಚಲ ಚಿತ್ರ 'ಚಲೋ' ನಾಗಾ ಶೋರಿಯಾರವರೊಡನೆ ಅಭಿನಯಿಸಿದ್ದು ತೆರೆ ಕಾಣಲು ಸಿದ್ದವಾಗಿದೆ.[೧೦]

ವೈಯಕ್ತಿಕ ಜೀವನ

[ಬದಲಾಯಿಸಿ]

ನಟ ರಕ್ಷಿತ್ ಶೆಟ್ಟಿಯೊಂದಿಗೆ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡರು. ಕಿರಿಕ್ ಪಾರ್ಟಿ ಚಿತ್ರವನ್ನು ಮಾಡುವಾಗ ಅವರು ಡೇಟಿಂಗ್ ಮಾಡಿದರು ಮತ್ತು ೩ ಜುಲೈ ೨೦೧೭ ರಂದು ವಿರಾಜ್‌ಪೇಟ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.[೧೧] ಹೊಂದಾಣಿಕೆಯ ಸಮಸ್ಯೆಗಳನ್ನು ಉಲ್ಲೇಖಿಸಿ ದಂಪತಿಗಳು ಸೆಪ್ಟೆಂಬರ್ ೨೦೧೮ ರಲ್ಲಿ ಪರಸ್ಪರ ನಿಶ್ಚಿತಾರ್ಥವನ್ನು ಮುರಿದರು.[೧೨]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ಕೀಲಿ
Films that have not yet been released ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೨೦೧೬ ಕಿರಿಕ್ ಪಾರ್ಟಿ ಸಾನ್ವಿ ಜೋಸೆಫ್ ರಕ್ಷಿತ್ ಶೆಟ್ಟಿ ರಿಷಭ್ ಶೆಟ್ಟಿ ಕನ್ನಡ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಅತ್ಯುತ್ತಮ ನಟಿ (ಚೊಚ್ಚಲ)
ನಾಮ ನಿರ್ದೇಶನಗೊಂಡಿದೆ—IIFA ಉತ್ಸವಂ ಅತ್ಯುತ್ತಮ ನಟಿಗಾಗಿ ಪ್ರಶಸ್ತಿ
[೧೩]
೨೦೧೭ ಅಂಜನಿ ಪುತ್ರ ಗೀತಾ ಪುನೀತ್ ರಾಜ್‍ಕುಮಾರ್ ಹರ್ಷ ಕನ್ನಡ ಅತ್ಯುತ್ತಮ ನಟಿಗಾಗಿ ಲವ್-ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ
ಚಮಕ್ ಖುಷಿ ಗಣೇಶ್ ಸುನಿ ಕನ್ನಡ
೨೦೧೮ ಚಲೋ ಎಲ್.ಕಾರ್ತಿಕ್ ನಾಗ ಶೌರ್ಯ ವೆಂಕಿ ಕುಡುಮುಲ ತೆಲುಗು
ಗೀತಾ ಗೋವಿಂದಂ ಗೀತಾ ವಿಜಯ್ ದೇವರಕೊಂಡ ಪರಶುರಾಮ್
ದೇವದಾಸ್ ಇನ್ಸ್ಪೆಕ್ಟರ್ ಪೂಜ ನಾನಿ ಶ್ರೀರಾಮ್ ಆದಿತ್ಯ
ಯಜಮಾನ ಕಾವೇರಿ ದರ್ಶನ್ ತೂಗುದೀಪ್ ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಕನ್ನಡ ಶತದಿನೋತ್ಸವ ಆಚರಿಸಿದ ಈ ಚಿತ್ರ ಬಾಕ್ಸಾಫೀಸಿನಲ್ಲಿ ೫೦ ಕೋಟಿಗಳನ್ನು ಗಳಿಸಿತು.
ಪೊಗರು ಗೀತಾ ಧೃವ ಸರ್ಜಾ ನಂದಕೀಶೋರ್ ೨೦೨೧ರ ಕರೋನಾ ಹಿನ್ನೆಲೆಯಲ್ಲಿ ಅಮೇಝಾನ್ ಪ್ರೈಂನಲ್ಲಿ ಈ ಚಿತ್ರ ಬಿಡುಗಡೆಯಾಯಿತು.
೨೦೧೯ ಡಿಯರ್ ಕಾಮ್ರೇಡ್ ಅಪರ್ಣಾ "ಲಿಲ್ಲಿ" ದೇವಿ ವಿಜಯ್ ದೇವರಕೊಂಡ ಭರತ್ ಕಮ್ಮ ತೆಲುಗು ಈ ಚಿತ್ರ ೨೦೧೯ರ ಜುಲೈ ಇಪ್ಪತ್ತಾರರಂದು ಬಿಡುಗಡೆಯಾಯಿತು. ಇದರ ಕನ್ನಡ, ಮಲೆಯಾಳಂ, ತಮಿಳು ಡಬ್ಬಾದ ಅವತರಣಿಕೆಗಳೂ ಬಿಡುಗಡೆಯಾದವು.
ಭೀಷ್ಮ ಚೈತ್ರ ನಿತಿನ್ ವೆಂಕಿ ಕುಂದುಮುಲ ಈ ಚಿತ್ರ ಫೆಬ್ರವರಿ ೨೧, ೨೦೨೦ರಲ್ಲಿ ಬಿಡುಗಡೆಯಾಯಿತು
೨೦೨೧ ಪುಷ್ಪ ಅಲ್ಲು ಅರ್ಜುನ್ ಸುಕುಮಾರ್ ತೆಲುಗು
ಮಿಷನ್ ಮಜ್ನು Films that have not yet been released ಹಿಂದಿ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ


ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
Year Award Language Film Result
೨೦೧೭ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ನಟಿ ಕನ್ನಡ ಕಿರಿಕ್ ಪಾರ್ಟಿ ಗೆದ್ದ
ಐಐಎಫ್ಎ ಉತ್ಸವಮ್ ಪ್ರಶಸ್ತಿ - ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೮ ಲವ್ ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ - ಅತ್ಯುತ್ತಮ ನಟಿ ಅಂಜನಿ ಪುತ್ರ ಗೆದ್ದ
ಝೀ ಕನ್ನಡ ಹೆಮ್ಮೆಯ ಕನ್ನಡತಿ ಪ್ರಶಸ್ತಿ- ಅತ್ಯುತ್ತಮ ನಟಿ
ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ - ಅತ್ಯುತ್ತಮ ನಟಿ ಚಮಕ್ ನಾಮನಿರ್ದೇಶನ
ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ನಟಿ

ಉಲ್ಲೇಖಗಳು

[ಬದಲಾಯಿಸಿ]
  1. https://m.timesofindia.com/topic/Rashmika-Mandanna
  2. "A reel Virajpet beauty". Deccanchronicle.com. Retrieved 2017-01-22.
  3. "#NationalCrushRashmika trends after Google declares Rashmika Mandanna as the National Crush of India 2020". India TV. 24 Nov 2020. Retrieved 25 Nov 2020.
  4. Sharadhaa, A. (21 December 2016). "Rashmika mandanna says it's all luck by chance". The New Indian Express. Archived from the original on 25 ಡಿಸೆಂಬರ್ 2018. Retrieved 31 March 2017.
  5. "This Coorg lass who is all set to make her debut with Kirik Party, chats about her journey so far". www.deccanchronicle.com.
  6. "These hotties are the most desirable women". The Times of India.
  7. "Meet Saanvi, the hottie from Kirik Party".
  8. "Kirik Party Movie Review". The Times of India.
  9. "Youngsters Live The Kirik Life Here". The New Indian Express. 31 December 2016. Archived from the original on 23 ಸೆಪ್ಟೆಂಬರ್ 2022. Retrieved 17 ಮಾರ್ಚ್ 2018.
  10. Sharadhaa, A. (16 March 2017). "Rashmika mandanna 's tollywood debut with Naga Shourya". The New Indian Express. Retrieved 31 March 2017.
  11. "Rakshit, Rashmika get engaged in Virajpet". Deccan Herald (in ಇಂಗ್ಲಿಷ್). 4 July 2017. Retrieved 19 March 2020.
  12. ChennaiSeptember 9, India Today Web Desk; September 9, India Today Web Desk; Ist, India Today Web Desk. "Rashmika Mandanna breaks off engagement with Rakshit Shetty: Reports". India Today (in ಇಂಗ್ಲಿಷ್). Retrieved 19 March 2020.{{cite web}}: CS1 maint: numeric names: authors list (link)
  13. "Rashmika Mandanna: Meet Saanvi, the hottie from Kirik Party". The Times of India. 24 December 2016. Retrieved 22 January 2017.

ಬಾಹ್ಯ ಕೊಂಡಿಗಳು

[ಬದಲಾಯಿಸಿ]