ರಕ್ಷಿತ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ೨೦೧೯ರಲ್ಲಿ
೨೦೧೮ರಲ್ಲಿ ರಕ್ಷಿತ್ ಶೆಟ್ಟಿ
ಜನನ (1983-06-06) ೬ ಜೂನ್ ೧೯೮೩ (ವಯಸ್ಸು ೩೯)
ರಾಷ್ಟ್ರೀಯತೆಭಾರತೀಯ
ಹಳೆ ವಿದ್ಯಾರ್ಥಿNMAM ತಾಂತ್ರಿಕ ವಿದ್ಯಾಲಯ
ಉದ್ಯೋಗಚಿತ್ರನಟ, ಚಿತ್ರನಿರ್ಮಾಪಕ
ಸಕ್ರಿಯ ವರ್ಷಗಳು೨೦೦೯ರಿಂದ
Titleಸಿಂಪಲ್ ಸ್ಟಾರ್

ರಕ್ಷಿತ್ ಶೆಟ್ಟಿ ಒಬ್ಬ ಕನ್ನಡ ಚಲನಚಿತ್ರ ನಟ. ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ(NMAMIT)ದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದ ನಂತರ, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.[೧][೨]

ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒಂದಿನ. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ಉಳಿದವರು ಕಂಡಂತೆ ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.[೩] ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟಿತು.[೪] ನಂತರ ಅವರು ವಾಸ್ತು ಪ್ರಕಾರ (೨೦೧೫) ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸುಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ ಕಿರಿಕ್ ಪಾರ್ಟಿ.[೫]

ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ.  ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಸೃಷ್ಟಿಸಿದೆ.[೬][೭]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
೨೦೧೦ ನಮ್ ಏರಿಯಾಲ್ ಒಂದಿನ ಅರವಿಂದ
೨೦೧೨ ತುಘಲಕ್ ರಾಘು
೨೦೧೩ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಕುಶಾಲ್ "ಜೆರೀನ್"
೨೦೧೪ ಉಳಿದವರು ಕಂಡಂತೆ ರಿಚರ್ಡ್ "ರಿಚಿ" ಆಂಟನಿ ನಿರ್ದೇಶಕ, ಚಿತ್ರಕಥೆಗಾರ
೨೦೧೪ ಬಹುಪರಾಕ್ ರಿಚಿ ಅತಿಥಿಪಾತ್ರ
೨೦೧೫ ವಾಸ್ತು ಪ್ರಕಾರ ಕುಬೇರ
೨೦೧೫ ಜಾತ್ರೆ ಸ್ವತಃ ಅತಿಥಿಪಾತ್ರ
೨೦೧೬ ರಿಕ್ಕಿ ರಾಧಾಕೃಷ್ಣ "ರಿಕ್ಕಿ"
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಶಿವ ವಿ ರಾವ್
೨೦೧೬ ಜಿಗರ್ಥಂಡಾ ಸ್ವತಃ ಅತಿಥಿಪಾತ್ರ
೨೦೧೬ ಕಿರಿಕ್ ಪಾರ್ಟಿ ಕರ್ಣ ಸಹ ನಿರ್ಮಾಪಕ, ಬರಹಗಾರ
೨೦೧೯ ಅವನೇ ಶ್ರೀಮನ್‌ನಾರಾಯಣ ನಾರಾಯಣ ಸಹ ಚಿತ್ರಕಥೆಗಾರ[೮]
೨೦೨೨ 777 ಚಾರ್ಲೀ ಧರ್ಮ ಸಹ ನಿರ್ಮಾಪಕ
೨೦೨೩ ಸಪ್ತ ಸಾಗರದಾಚೆ ಎಲ್ಲೋFilm has yet to be released ಮನು
೨೦೨೪ ರಿಚರ್ಡ್ ಅಂತೋನಿFilm has yet to be released ರಿಚ್ಚಿ
೨೦೨೪ ಪುಣ್ಯಕೋಟಿFilm has yet to be released ಸ್ವತಃ ಸಹ ನಿರ್ದೇಶಕ
Films that have not yet been released ಇನ್ನೂ ಬಿಡುಗಡೆಯಾಗದ ಚಿತ್ರ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ[lower-alpha ೧] ವರ್ಗ ಪ್ರಶಸ್ತಿ ಚಿತ್ರ ಫಲಿತಾಂಶ
೨೦೧೫ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ಗೆದ್ದಿದ್ದಾರೆ[೯]
೨೦೧೫ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ನಾಮನಿರ್ದೇಶಿತ[೯]
೨೦೧೫ ಅತ್ಯುತ್ತಮ ಸಾಹಿತಿ ಫಿಲಂಫೇರ್ ಪ್ರಶಸ್ತಿ (ದಕ್ಷಿಣ) ಉಳಿದವರು ಕಂಡಂತೆ ನಾಮನಿರ್ದೇಶಿತ[೯]
೨೦೧೫ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉಳಿದವರು ಕಂಡಂತೆ ಗೆದ್ದಿದ್ದಾರೆ[೪]
೨೦೧೭ ಅತ್ಯುತ್ತಮ ಪೋಷಕ ನಟ ಐಐಫಆ ಉತ್ಸವಮ್ ಗೋದಿ ಬಣ್ಣ ಸಾಧಾರಣ ಮೈಕಟ್ಟು ಗೆದ್ದಿದ್ದಾರೆ
  1. ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ವರ್ಷ

ಉಲ್ಲೇಖಗಳು[ಬದಲಾಯಿಸಿ]

  1. "Rakshit Shetty is a BE Graduate". The Times of India.
  2. "Talking Cinema with Rakshit Shetty". The Manipal Journal. Archived from the original on 2014-12-29. Retrieved 2017-03-28.
  3. "A cult classic and then..." The Hindu.
  4. ೪.೦ ೪.೧ "Rakshit Shetty bagged state award the best debut director award for Ulidavaru Kandante". The Times of India.
  5. "Kirik Party does a Mungaru Male". The Hindu.
  6. "Is Rakshit Shetty Sandalwood's next Superstar?". New Indian Express.
  7. "Rakshit Shetty the storm that rocked Kannada Film Industry". Asianet News. Archived from the original on 2017-03-05. Retrieved 2017-03-28.
  8. "Rakshit opts for mass flick over romcom". New Indian Express.
  9. ೯.೦ ೯.೧ ೯.೨ "Winners of 62nd Britannia Filmfare Awards South". Filmfare.