ವಿಷಯಕ್ಕೆ ಹೋಗು

ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಪೋಸ್ಟರ್
ನಿರ್ದೇಶನಹೇಮಂತ್ M ರಾವ್
ನಿರ್ಮಾಪಕಪುಷ್ಕರ್ ಮಲ್ಲಿಕಾರ್ಜುನ್, Pushkar Films, Lost & Found Films
ಲೇಖಕಹೇಮಂತ್ M ರಾವ್
ಚಿತ್ರಕಥೆಹೇಮಂತ್ M ರಾವ್
ಕಥೆಹೇಮಂತ್ M ರಾವ್
ಪಾತ್ರವರ್ಗಅನಂತನಾಗ್, ರಕ್ಷಿತ್ ಶೆಟ್ಟಿ, ತ್ರಿವೇಣಿ ಚಿಂದೋಡಿ,ಶೃತಿ ಹರಿಹರನ್, ಅಚ್ಯುತ್ ಕುಮಾರ್, ವಸಿಷ್ಠ N ಸಿಂಹ, ರಾಧಾ ರಾಮಚಂದ್ರ, ಎ‍‍ಚ್.ಜಿ.ದತ್ತಾತ್ರೇಯ, ರವಿಕಿರಣ್
ಸಂಗೀತಚರಣ್ ರಾಜ್
ಛಾಯಾಗ್ರಹಣನಂದಕಿಶೋರ್ ನೀಲಕಂಠ ರಾವ್
ಸಂಕಲನಶ್ರೀಕಾಂತ್ S H
ವಿತರಕರುಜಯಣ್ಣ ಫಿಲಂಸ್
ಬಿಡುಗಡೆಯಾಗಿದ್ದು೦೩ ಜೂನ್ ೨೦೧೬[]
ಅವಧಿ೧೪೪ ನಿಮಿಶಗಳು
ದೇಶಭಾರತ
ಭಾಷೆಕನ್ನಡ

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ೨೦೧೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಇದನ್ನು 'ಹೇಮಂತ್ ರಾವ್' ನಿರ್ದೇಶಿಸಿದ್ದಾರೆ. ಹೇಮಂತ್ ರಾವ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದು[].

ಕಥಾಹಂದರ

[ಬದಲಾಯಿಸಿ]

ಕಾಣೆಯಾಗಿರುವ ತನ್ನ ತಂದೆಯನ್ನು ಹುಡುಕುವ ಮಗನೊಬ್ಬನ ಪಯಣದ ಕತೆ ಇದು. ವೆಂಕೋಬ್ ರಾವ್ (ಅನಂತನಾಗ್). ಈತ ಅಲ್ಜೈಮರ್ (ಮರೆವಿನ ಕಾಯಿಲೆ) ಎಂಬ ಕಾಯಿಲೆಗೆ ತುತ್ತಾಗಿರುತ್ತಾರೆ. ಈತನ ಮಗನೇ ಶಿವ (ರಕ್ಷಿತ್ ಶೆಟ್ಟಿ) ಸಾಫ್ಟ್‌ವೇರ್ ಉದ್ಯೋಗಿ. ಕೆಲಸದ ನಿಮಿತ್ತ ಶಿವ ಬೇರೊಂದು ಊರಿಗೆ ಹೋಗಬೇಕಾದ ಸಂದರ್ಭ ಬರುತ್ತದೆ. ಹಾಗಾಗಿ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಡುತ್ತಾನೆ. ಆದರೆ ಅಲ್ಲಿಂದ ವೆಂಕೋಬ್ ರಾವ್ ತಪ್ಪಿಸಿಕೊಳ್ಳುತ್ತಾರೆ. ಶಿವ ಮತ್ತು ವೆಂಕೋಬ್‌ರನ್ನು ನೋಡಿಕೊಳ್ಳುತ್ತಿದ್ದ ಡಾ.ಸಹನಾ (ಶ್ರುತಿ ಹರಿಹರನ್) ಒಟ್ಟಾಗಿ ವೆಂಕೋಬ್‌ರನ್ನು ಹುಡುಕುತ್ತಾರೆ. ಆ ಹುಡುಕಾಟದಲ್ಲಿ ಮಗ ಜೀವನ, ಪ್ರೀತಿ ಮತ್ತು ಸಂತೋಷದ ಬಗ್ಗೆ ಕಲಿಯುತ್ತಾನೆ.

ಪಾತ್ರ ವರ್ಗ

[ಬದಲಾಯಿಸಿ]
  • ವೆಂಕೋಬ್ ರಾವ್ ಆಗಿ ಅನಂತನಾಗ್
  • ಶಿವ ಆಗಿ ರಕ್ಷಿತ್ ಶೆಟ್ಟಿ
  • ಡಾ.ಸಹನಾ ಆಗಿ ಶ್ರುತಿ ಹರಿಹರನ್
  • ರಂಗ ಆಗಿ  ವಸಿಷ್ಠ N ಸಿಂಹ
  • ಕುಮಾರ್ ಆಗಿ ಅಚ್ಯುತ್ ಕುಮಾರ್

ಉಲ್ಲೇಖಗಳು

[ಬದಲಾಯಿಸಿ]


ಹೊರಕೊಂಡಿಗಳು

[ಬದಲಾಯಿಸಿ]