ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ
ಸಪ್ತ ಸಾಗರದಾಚೆ ಎಲ್ಲೊ - ಸೈಡ್ ಬಿ (ಅನುವಾದ. "Somewhere Beyond the Seven Oceans (Side B)" ಭಾರತೀಯ ಕನ್ನಡ ಭಾಷೆಯ ರೊಮ್ಯಾಂಟಿಕ್ ಡ್ರಾಮಾ ಸಪ್ತ ಸಾಗರದಾಚೆ ಎಲ್ಲೊ - ಸೈಡ್ ಎ ಚಲನಚಿತ್ರದ ಎರಡನೇ ಭಾಗವಾಗಿದೆ. ಹೇಮಂತ್ ಎಂ. ರಾವ್ ಚಿತ್ರವನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ ಮತ್ತು ಚೈತ್ರಾ ಜೆ. ಆಚಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. [೧]ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಛಾಯಾಗ್ರಹಣವನ್ನು ಅದ್ವೈತ ಗುರುಮೂರ್ತಿ ಮತ್ತು ಸುನಿಲ್ ಎಸ್. ಭಾರದ್ವಾಜ್ ಮತ್ತು ಹೇಮಂತ್ ಎಂ. ರಾವ್ ಸಂಕಲನವನ್ನು ನಿರ್ವಹಿಸಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ | |
---|---|
ನಿರ್ದೇಶನ | ಹೇಮಂತ್ ಎಮ್.ರಾವ್ |
ನಿರ್ಮಾಪಕ | ರಕ್ಷಿತ್ ಶೆಟ್ಟಿ |
ಲೇಖಕ | ಗುಂಡು ಶೆಟ್ಟಿ ಹೇಮಂತ್ ಎಮ್.ರಾವ್ |
ಪಾತ್ರವರ್ಗ | ರಕ್ಷಿತ್ ಶೆಟ್ಟಿ ರುಕ್ಮಿಣಿ ವಸಂತ್ ಚೈತ್ರ ಜೆ ಆಚಾರ್ |
ಸಂಗೀತ | ಚರಣ್ ರಾಜ್ |
ಛಾಯಾಗ್ರಹಣ | ಅದೈತ ಗುರುಮೂರ್ತಿ |
ಸಂಕಲನ | ಸುನೀಲ್ ಎಸ್. ಭಾರಾದ್ವಾಜಾ |
ಸ್ಟುಡಿಯೋ | ಪರಂವಃ ಸ್ಟುಡಿಯೋಸ್ |
ವಿತರಕರು | ಕೆವಿಎನ್ ಪ್ರೋಡಕ್ಷನ್ಸ್ (ಕನ್ನಡ)
ಪೀಪಲ್ ಮೀಡಿಯಾ ಫಾಕ್ಟರಿ (ತೆಲುಗು) ಶಕ್ತಿ ಫಿಲ್ಮ ಫಾಕ್ಟರಿ (ತಮಿಳು) ಪೃಥ್ವಿರಾಜ್ ಪ್ರೋಡಕ್ಷನ್ಸ್ (ಮಲಯಾಳಂ) |
ಬಿಡುಗಡೆಯಾಗಿದ್ದು | 17 ನವೆಂಬರ್ 2023 |
ಅವಧಿ | 148 ನಿಮಿಷಗಳು[೨] |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹೯.೦೧ crores (7 ದಿನಗಳು)[೩] |
ಕಥೆ
[ಬದಲಾಯಿಸಿ]ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಕಥೆಯು 2021 ರಲ್ಲಿ ಮನು 10 ವರ್ಷಗಳ ನಂತರ ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಜೈಲಿನಿಂದ ಹೊರಬಂದು ಪ್ರಿಯಾಳನ್ನು ಹುಡುಕುತ್ತಿರುತ್ತಾನೆ. ಅವನು ಮಧ್ಯದಲ್ಲಿ ಸುರಭಿ ಎಂಬ ಕರುಣಾಮಯಿ ಕಾಲ್ ಗರ್ಲ್ ನನ್ನು ಭೇಟಿಯಾಗುತ್ತಾನೆ. ಅವಳ ಸಹಾಯದ ಮೂಲಕ ಪ್ರಿಯಾಳ ವಿಳಾಸವನ್ನು ಪತ್ತೆ ಹಚ್ಚುತ್ತಾನೆ. ಮನುಗೆ ಪ್ರಿಯಾಳು ತನ್ನ ಮದುವೆ ಜೀವನದಲ್ಲಿ ಖುಷಿಯಾಗಿಲ್ಲ ಎಂಬುವುದು ಗೊತ್ತಾಗುತ್ತದೆ. ಕೋವಿಡ್ -19 ನಿಂದಾಗಿ ಪ್ರಿಯಾಳ ಪತಿ ತನ್ನ ರೆಸ್ಟೋರೆಂಟ್ ವ್ಯವಹಾರದಲ್ಲಿ ನಷ್ಟ ಹೊಂದಿರುವ ಬಗ್ಗೆ ತಿಳಿದುಕೊಳ್ಳುತ್ತಾನೆ.
ತನ್ನ ಸ್ನೇಹಿತ ಪ್ರಕಾಶ ಮೂಲಕ ಮನು ಪ್ರಿಯಾಳ ಕುಟುಂಬದ ಆರ್ಥಿಕ ಮತ್ತು ಭಾವನಾತ್ಮಕ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ. ಜೊತೆಗೆ ಜೈಲಿನಲ್ಲಿ ವೈರಿಯಾದ ಸೋಮ ಮತ್ತು ಅವನ ಗ್ಯಾಂಗ್ನಿಂದ ತೊಂದರೆಗಳನ್ನು ಎದುರಿಸುತ್ತಾ ಇರುತ್ತಾನೆ. ಜೈಲಿನಲ್ಲಿ ಮನು ಮತ್ತು ಸೋಮ ಮದ್ಯದಲ್ಲಿ ನಡೆದ ಜಗಳದ ಪರಿಣಾಮವಾಗಿ ಸೋಮನು ತನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ.
ಕಲಾವಿದರು
[ಬದಲಾಯಿಸಿ]- ರಕ್ಷಿತ್ ಶೆಟ್ಟಿ: ಮನು ಪಾತ್ರದಲ್ಲಿ
- ರುಕ್ಮಿಣಿ ವಸಂತ್: ಪ್ರಿಯಾ ಪಾತ್ರದಲ್ಲಿ
- ಚೈತ್ರಾ ಜೆ. ಆಚಾರ್: ಸುರಭಿ ಪಾತ್ರದಲ್ಲಿ
- ಅಚ್ಯುತ್ ಕುಮಾರ್: ಪ್ರಭು ಪಾತ್ರದಲ್ಲಿ
- ಜೆ. ಪಿ. ತುಮಿನಾದ್: ದೀಪಕ್ ಪಾತ್ರದಲ್ಲಿ
- ರಮೇಶ್ ಇಂದಿರಾ: ಸೋಮ ಪಾತ್ರದಲ್ಲಿ
- ಗೋಪಾಲ್ ಕೃಷ್ಣ ದೇಶಪಾಂಡೆ: ಪ್ರಕಾಶ್ ಪಾತ್ರದಲ್ಲಿ
- ಭರತ್ ಜಿ. ಬಿ: ವಿನೋದಾ ಪಾತ್ರದಲ್ಲಿ
- ಯಮುನಾ ಶ್ರೀನಿಧಿ
ಸೌಂಡ್ಟ್ರ್ಯಾಕ್
[ಬದಲಾಯಿಸಿ]ಚರಣ್ ರಾಜ್ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ.[೪]
Untitled | |
---|---|
ಹಾಡುಗಳು
[ಬದಲಾಯಿಸಿ]ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
---|---|---|---|---|
1. | "ಒಲವೇ ಒಲವೇ" | B R ಸುವರ್ಣ ಶರ್ಮ | ಶ್ರೀಲಕ್ಷ್ಮೀ ಬೆಳಣ್ಮು | 03:17 |
2. | "ಸಪ್ತ ಸಾಗರದಾಚೆ ಎಲ್ಲೋ ಟೈಟಲ್ ಟ್ರಾಕ್" | ಧನಂಜಯ್ ರಂಜನ್ | ಕಾರ್ತಿಕ್ ಚೆನ್ನೊಜಿ ರಾವ್ | 04:52 |
ಬಿಡುಗಡೆ
[ಬದಲಾಯಿಸಿ]ಚಿತ್ರಮಂದಿರ
[ಬದಲಾಯಿಸಿ]ಸಪ್ತ ಸಾಗರದಾಚೆ ಎಲ್ಲೊ (ಸೈಡ್ ಬಿ) ಅನ್ನು ಮೂಲತಃ ಅಕ್ಟೋಬರ್ 20,2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಚಲನಚಿತ್ರವು 2023ರ ನವೆಂಬರ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Hemanth Rao announces his next movie "Sapta Saagaradaache Ello"". Udayavani. 19 March 2020. Retrieved 6 August 2023.
- ↑ "All Details About Sapta Sagaradaache Ello – Side B Movie". FilmyZillaBlog. Archived from the original on 14 ನವೆಂಬರ್ 2023. Retrieved 2023-03-31.
- ↑ "Sapta Sagaradaache Ello Side B Box Office Collection Day 7: Rakshit Shetty-Led Kannada Film Witnesses A Dip". English Jagran (in ಇಂಗ್ಲಿಷ್). 2023-11-24. Retrieved 2023-11-25.
- ↑ "'Horaata', The First single from Rakshith Shetty's 'Sapta Saagaradaache Ello' Out". Udayavani. 21 ಜೂನ್ 2023. Archived from the original on 6 ಆಗಸ್ಟ್ 2023. Retrieved 6 ಆಗಸ್ಟ್ 2023.
ಇದನ್ನೂ ನೋಡಿ
[ಬದಲಾಯಿಸಿ]- Pages with non-numeric formatnum arguments
- CS1 ಇಂಗ್ಲಿಷ್-language sources (en)
- Pages using infoboxes with thumbnail images
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ಇನ್ಪುಟ್ ದೋಷಗಳನ್ನು ಹೊಂದಿರುವ ಟ್ರ್ಯಾಕ್ ಪಟ್ಟಿ
- ಕನ್ನಡ ಚಲನಚಿತ್ರಗಳು
- ಮನೋರಂಜನೆ
- ಚಲನಚಿತ್ರಗಳು
- ಕನ್ನಡ