ರಮ್ಯಾ ಕೃಷ್ಣನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಮ್ಯ ಕೃಷ್ಣ ಇಂದ ಪುನರ್ನಿರ್ದೇಶಿತ)
ರಮ್ಯಾ ಕೃಷ್ಣನ್
ರಮ್ಯಾ ಕೃಷ್ಣನ್
ಜನನ೧೫ ಸೆಪ್ಟೆ೦ಬರ್ ೧೯೭೦
ರಾಷ್ಟ್ರೀಯತೆಭಾರತೀಯ
ವೃತ್ತಿನಟಿ
Years active೧೯೮೪–
ಸಂಗಾತಿಕೃಷ್ಣ ವ೦ಶಿ (ವಿವಾಹ 2003)
ಮಕ್ಕಳು

ರಮ್ಯಾ ಕೃಷ್ಣನ್ (ಜನನ ೧೫ ಸೆಪ್ಟೆಂಬರ್ ೧೯೭೦) ಭಾರತೀಯ ನಟಿ. ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರೆ.[೧] ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ೨೦೦೯ರ ಕೊಂಚಮ್ ಇಷ್ಟಮ್ ಕೊಂಚಮ್ ಕಷ್ಟಮ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ. ೨೦೧೫ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದಿದ್ದಾರೆ.[೨] ಈ ಚಿತ್ರವು ಭಾರತದ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದು. ಇದರ ಎರಡನೆ ಭಾಗವೂ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಕೂಡ ಒಂದಾಗಿದೆ. ಬಾಹುಬಲಿ: ದ ಬಿಗಿನ್ನಿಂಗ್ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ, ಫಿಲ್ಮ್ಫೇರ್ ಪ್ರಶಸ್ತಿ, ನಂದಿ ಪ್ರಶಸ್ತಿ[೩] ದೊರೆತಿದೆ.[೪]

ಆರಂಭಿಕ ಜೀವನ[ಬದಲಾಯಿಸಿ]

ರಮ್ಯಾ ಚೆನ್ನೈನಲ್ಲಿ ಕೃಷ್ಣನ್ ಮತ್ತು ಮಾಯಾ ದಂಪತಿಗೆ ಜನಿಸಿದರು. ಅವರು ಹಿರಿಯ ತಮಿಳು ಹಾಸ್ಯನಟ ಚೋ ರಾಮಸ್ವಾಮಿಯ ಸೋದರ ಸೊಸೆ. ಅವರು ಭರತನಾಟ್ಯ, ಪಾಶ್ಚಾತ್ಯ ಮತ್ತು ಕುಚಿಪುಡಿ ನೃತ್ಯ ಪ್ರಕಾರಗಳಲ್ಲಿ ಆರಂಭಿಕ ತರಬೇತಿಯನ್ನು ಪಡೆದರು ಮತ್ತು ಅನೇಕ ರಂಗ ಪ್ರದರ್ಶನಗಳನ್ನು ನೀಡಿದ್ದಾರೆ.[೫][೬]

ವೈಯಕ್ತಿಕ ಜೀವನ[ಬದಲಾಯಿಸಿ]

ರಮ್ಯಾ ರವರು ೧೫ ಸೆಪ್ಟೆ೦ಬರ್ ೧೯೭೦ರಂದು ತಮಿಳು ಕುಟು೦ಬದಲ್ಲಿ ಜನಿಸಿದರು.[೭] ತ೦ದೆ ಕೃಷ್ಣನ್ ಹಾಗೂ ತಾಯಿ ಮಾಯಾ.ಇವರು ಭರತನಾಟ್ಯ೦,ಕೂಚಿಪೂಡಿ ಹಾಗೂ ಮು೦ತಾದ ನೃತ್ಯ ರೂಪುಗಳಲ್ಲಿ ತರಬೇತಿಯನ್ನು ಪಡೆದು ಹಲವಾರು ಹ೦ತದ ಪ್ರದರ್ಶನಗಳನ್ನು ನಿಡಿದ್ದಾರೆ. ರಮ್ಯಾ ರವರು ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ೦ಶಿ ರವರನ್ನು ೧೨ ಜೂನ್ ೨೦೦೩ ರ೦ದು ಮದುವೆಯಾದರು. ಇವರಿಗೆ ಒಬ್ಬ ಪುತ್ರನಿದ್ದಾನೆ.

ವೃತ್ತಿ ಜೀವನ[ಬದಲಾಯಿಸಿ]

ರಮ್ಯಾ ರವರು ೧೯೮೪ರಲ್ಲಿ ವೈ.ಜಿ ಮಹೇ೦ದ್ರ ರವರ ಜೊತೆ "ವೆಲ್ಲಿ ಮನಸ್ಸು" ಎ೦ಬ ತಮಿಳು ಚಲನಚಿತ್ರದಲ್ಲಿ ೧೪ ನೇ ವಯಸ್ಸಿನಲ್ಲಿ ನಟಿಸಿದ್ದಾರೆ. ಅವರ ಮೊದಲ ತೆಲುಗು ಚಿತ್ರ "ಭಲೆ ಮಿತ್ರುಲು" (1986). ಕಾಶಿನಾಧುನಿ ವಿಶ್ವನಾಥ್ ರವರ ಸೂತ್ರಧಾರುಲು ಚಿತ್ರದಿಂದ ಜನಪ್ರಿಯ ಹೊಂದಿದ್ದರು. ೧೯೯೦ ರಲ್ಲಿ ಸೌ೦ದರ್ಯ, ಮೀನಾ, ರೋಜಾ, ನಗ್ಮಾ ಹಾಗೂ ಮು೦ತಾದ ನಟಿಯರೊ೦ದಿಗೆ ತೆಲುಗು ಉದ್ಯಮದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದ್ದರು. ಇವರು ಎನ್.ಟಿ ರಾಮ ರಾವ್,ಕೃಷ್ಣ, ಚಿರ೦ಜೀವಿ, ಬಾಲಕೃಷ್ಣ, ವೆ೦ಕಟೇಶ್, ಮೋಹನ್ ಬಾಬು ,ಜಗಪತಿ ಬಾಬು, ರಾಜಶೇಖರ್, ರಜನಿಕಾಂತ್ ಹಾಗೂ ಕನ್ನಡದಲ್ಲಿ ರವಿಚಂದ್ರನ್,ಪುನೀತ್ ರಾಜ್‍ಕುಮಾರ್,ಉಪೇಂದ್ರ ಹಾಗೂ ಮು೦ತಾದ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಗಳು[ಬದಲಾಯಿಸಿ]

 • ವೆಲ್ಲಿ ಮನಸು
 • ತಮಿಳು
 • ನಲ್ಲ ಪ೦ಬು
 • ಅರ್ಯನ್
 • ಇದ್ದರು ಇದ್ದರೆ-
 • ಬಲರಾಮ ಕೃಷ್ಣಲು
 • ಮುದ್ದುಲು ಪ್ರಿಯುಡು
 • ಒನ್ನಾಮನ್[೮]
 • ಅಡವಿ ರಾಮುಡು
 • ನಾ ಅಲ್ಲುಡು
 • ಶ್ರಿ ಕೃಷ್ಣ [೯]
 • ರಾಜ ನರಸಿ೦ಹ [೧೦]
 • ಹೀರೋ
 • ಇ೦ದ್ರಜಿತ್ [೧೧]
 • ಕೊ೦ಚಮ್ ಇಷ್ಟಮ್ ಕೊ೦ಚಮ್ ಕಷ್ಟಮ್
 • ರಾಜು ಮಹರಾಜು
 • ರ೦ಗ ದಿ ದೊ೦ಗ
 • ಬೆಟ್ [೧೨]
 • ಮದುರೆ ಮಿನಾಷ್ಹೀ
 • ಆ೦ಬಲ[೧೩]
 • ಮಗ ಮಹಾರಾಜು [೧೪]
 • ಬಾಹುಬಲಿ (ಭಾಗ ೧)[೧೫]
 • ಮಾಮ ಮ೦ಚು ಅಲ್ಲುಡು ಕ೦ಚು[೧೬]
 • ಜಗನ್ಮಾಥ
 • ಹೆಲೋ
 • ಶೈಲಜಾ ರೆಡ್ಡಿ ಅಲ್ಲುಡು
 • ದೆವ್
 • ಪಾರ್ಟಿ
 • ಬಾಹುಬಲಿ (ಭಾಗ ೨)

ಕನ್ನಡ ಚಿತ್ರಗಳು[ಬದಲಾಯಿಸಿ]

 • ಅಂಜನಿ ಪುತ್ರ[೧೭]
  [೧೮]
 • ಜಾಗ್ವರ್[೧೯]
 • ಮಾಣಿಕ್ಯ
 • ಸ್ವಿಟಿ ನನ್ನ ಜೊಡಿ
 • ಬ ಬಾರೊ ರಸಿಕ
 • ಶ್ರೀ ಕಾಳಿಕಾಂಬ
 • ನಾನು ನಾನೆ
 • ರಕ್ತ ಕಣ್ಣೀರು
 • ರಾಜ ನರಸಿಂಹ
 • ಏಕಾಂಗಿ
 • ಚಾಮುಂಡಿ
 • ನೀಲಾಂಬರಿ[೨೦]
 • ಆಂಧ್ರ ಹೆಂಡ್ತಿ
 • ಯಾರೆ ನೀ ಅಭಿಮಾನಿ
 • ಮಾಂಗಲ್ಯಮ್ ತಂತುನಾನೆನ[೨೧]
 • ಗಡಿಬಿಡಿ ಗಂಡ
 • ಕೃಷ್ಣ ರುಕ್ಮಿಣಿ
 • ಶಕ್ತಿ

ಉಲ್ಲೇಖಗಳು[ಬದಲಾಯಿಸಿ]

 1. "Ramya Krishnan on 'Padayappa'". www.thenewsminute.com. Retrieved 2 January 2020.
 2. "Ramya Krishnan: The royal mother in Baahubali". The New Indian Express. Retrieved 2 January 2020.
 3. "Ramya Krishnan Profile, Bio, Age, Wiki, Family, Affairs". WoodGram. 11 June 2019. Retrieved 19 March 2020.
 4. https://www.filmfare.com/awards/filmfare-awards-south-2017/telugu/nominations/best-supporting-actor-female/ramya-krishna
 5. "Ramya Krishnan family photos | Celebrity family wiki". Retrieved 20 March 2020.
 6. "Eternal beauty 'Nilambari' Ramya Krishna celebrates her b'day - Tamil News". IndiaGlitz.com. 15 September 2008. Retrieved 20 March 2020.
 7. "Actress Ramya Krishnan celebrates her birthday". The New Indian Express. Retrieved 2 January 2020.
 8. http://vadama.blog.free.fr/index.php?post/2012/10/15/Onnaman-Movie-Theater
 9. https://www.youtube.com/watch?v=fwJNjZjUtdA
 10. "Raja Narasimha Movie: Showtimes, Review, Trailer, Posters, News & Videos | eTimes". Retrieved 19 March 2020.
 11. ChennaiDecember 5, India Today Web Desk; December 6, India Today Web Desk; Ist, India Today Web Desk. "Queen teaser out: Ramya Krishnan presents an interesting tale on J Jayalalithaa". India Today (in ಇಂಗ್ಲಿಷ್). Retrieved 19 March 2020.{{cite news}}: CS1 maint: numeric names: authors list (link)
 12. https://www.youtube.com/watch?v=9v0Awnw32uw
 13. "Aambala (Ambala) Cast & Crew, Aambala Tamil Movie Cast, Actor, Actress, Director". FilmiBeat (in ಇಂಗ್ಲಿಷ್). Retrieved 19 March 2020.
 14. "Maga Maharaju (2015) | Maga Maharaju Telugu Movie | Movie Reviews, Showtimes". NOWRUNNING (in ಇಂಗ್ಲಿಷ್). Retrieved 19 March 2020.
 15. "Ramya Krishnan: The royal mother in Baahubali". The New Indian Express. Retrieved 19 March 2020.
 16. Hooli, Shekhar H. (16 July 2015). "Mohan Babu to Act With Ramya, Meena in Allari Naresh's 'Mama Manchu Alludu Kanchu'". International Business Times, India Edition. Retrieved 2 January 2020. {{cite news}}: Cite has empty unknown parameter: |1= (help)
 17. "'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ". 20 May 2017. Retrieved 4 January 2020. {{cite news}}: Cite has empty unknown parameters: |1= and |2= (help)
 18. "Ramya Krishnan is Puneeth's mother in Anjaniputra - Times of India". The Times of India (in ಇಂಗ್ಲಿಷ್). Retrieved 19 March 2020.
 19. "Ramya Krishnan in Jaguar - Times of India". The Times of India (in ಇಂಗ್ಲಿಷ್). Retrieved 19 March 2020.
 20. www.thenewsminute.com https://www.thenewsminute.com/article/all-hail-ramya-krishnan-neelambari-and-goddess-rolled-one-52679. Retrieved 19 March 2020. {{cite news}}: Missing or empty |title= (help)
 21. https://chiloka.com/movie/mangalyam-thanthunanena-1998