ಬಾಹುಬಲಿ 2:ದ ಕನ್‍ಕ್ಲೂಝ಼ನ್

ವಿಕಿಪೀಡಿಯ ಇಂದ
Jump to navigation Jump to search

ಬಾಹುಬಲಿ 2: ದ ಕನ್‍ಕ್ಲೂಝ಼ನ್ ಇದು ಎಸ್. ಎಸ್. ರಾಜಮೌಳಿ ನಿರ್ದೇಶಿಸಿದ ೨೦೧೭ರ ಒಂದು ಭಾರತೀಯ ಕಾವ್ಯಾಧಾರಿತ ಕಲ್ಪನಾ ಚಲನಚಿತ್ರ. ಅದು ಬಾಹುಬಲಿ: ದ ಬಿಗಿನಿಂಗ್ ಚಿತ್ರದ ಮುಂದುವರಿದ ಭಾಗ. ಆರಂಭದಲ್ಲಿ, ಎರಡೂ ಭಾಗಗಳನ್ನು ೨೫೦ ಕೋಟಿ ರೂ. ನ ಬಜೆಟ್‍ನಲ್ಲಿ ಜಂಟಿಯಾಗಿ ನಿರ್ಮಿಸಲಾಗಿತ್ತು,[೧] ಆದರೆ ಎರಡನೇ ಭಾಗದ ಬಜೆಟ್ ಅನ್ನು ನಂತರ ಹೆಚ್ಚಿಸಲಾಯಿತು. ಬಾಹುಬಲಿ 2: ದ ಕನ್‍ಕ್ಲೂಝ಼ನ್ ೫೦೦ ಕೋಟಿ ರೂ. ದೊಂದಿಗೆ ಅತ್ಯಂತ ಹೆಚ್ಚಿನ ಬಿಡುಗಡೆಯ ಮೊದಲಿನ ವ್ಯಾಪಾರದ ದಾಖಲೆ ನಿರ್ಮಿಸಿದೆ. ಚಿತ್ರವನ್ನು ೨೮ ಎಪ್ರಿಲ್ ೨೦೧೭ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲಾಯಿತು. ಬಾಹುಬಲಿ 2 ಫ಼ೋರ್‍ಕೆ ಎಚ್‍ಡಿ ಫ಼ಾರ್ಮ್ಯಾಟ್‍ನಲ್ಲಿ ಬಿಡುಗಡೆ ಮಾಡಲಾದ ಮೊದಲ ತೆಲುಗು ಚಿತ್ರವಾಗಿತ್ತು. ಚಲನಚಿತ್ರದ ಬಿಡುಗಡೆ ದಿನಾಂಕಕ್ಕೆ ಮುಂಚೆ ಸುಮಾರು ೨೦೦ ಪರದೆಗಳನ್ನು ೪ಕೆ ಪ್ರಕ್ಷೇಪಕಗಳಿಗೆ ಉನ್ನತೀಕರಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಾಹುಬಲಿ 2 ಕೇವಲ ಮೂರು ದಿನಗಳಲ್ಲಿ ಎಲ್ಲ ಭಾಷೆಗಳಲ್ಲಿ ವಿಶ್ವಾದ್ಯಂತ ೫೦೦ ಕೋಟಿ ರೂ. ಗಿಂತ ಹೆಚ್ಚು ಗಳಿಕೆ ಮಾಡಿದ ಮೊದಲ ಭಾರತೀಯ ಚಲನಚಿತ್ರವೆನಿಸಿತು.

ತಾರಗಣದಲ್ಲಿ ಪ್ರಭಾಸ್, ರಾನಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ರಮ್ಯಾ ಕೃಷ್ಣ ಮುಂತಾದವರಿದ್ದಾರೆ. ಎಮ್. ಎಮ್. ಕೀರವಾಣಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


ತಾರಾಗಣ[ಬದಲಾಯಿಸಿ]

ಹಾಡುಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]