ಪ್ರಶಸ್ತಿ (ಅಭಿಲೇಖ)
ಗೋಚರ
(ಪ್ರಶಸ್ತಿ ಇಂದ ಪುನರ್ನಿರ್ದೇಶಿತ)
ಪ್ರಶಸ್ತಿ ಅಭಿಲೇಖಗಳು ಭಾರತೀಯ ಆಡಳಿತಗಾರರು ಕ್ರಿ.ಶ. ೧ನೇ ಸಹಸ್ರಮಾನದ ನಂತರ ಹೊರಡಿಸಲಾದ ಪ್ರಶಂಸಾತ್ಮಕ ಅಭಿಲೇಖಗಳು. ಕಾವ್ಯ ಅಥವಾ ಅಲಂಕಾರಮಯ ಗದ್ಯದ ರೂಪದಲ್ಲಿ ಬರೆಯಲಾದ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಆಸ್ಥಾನ ಕವಿಗಳು ರಚಿಸುತ್ತಿದ್ದರು.[೧]
ಪ್ರಶಸ್ತಿಗಳು ಸಾಮಾನ್ಯವಾಗಿ ರಾಜರ (ಅಥವಾ ಅವರಿಗೆ ಅಧೀನವಿದ್ದ ಹೊರಡಿಸುವವರ) ವಂಶಾವಳಿಗಳು, ಅವರ ಸಾಧನೆಗಳು (ವಿಶೇಷವಾಗಿ ಸೇನಾ ಚಟುವಟಿಕೆಗಳು), ಐತಿಹ್ಯದ ಮಹಾಪುರುಷರೊಂದಿಗೆ ಅವರ ಹೋಲಿಕೆಗಳು ಮತ್ತು ಇತರ ವಿವರಗಳನ್ನು ಒಳಗೊಂಡಿರುತ್ತಿದ್ದವು.[೧] ಅಧೀನರು ಹೊರಡಿಸಿದ ಅಭಿಲೇಖಗಳು ಹಲವುವೇಳೆ ರಾಜರನ್ನು ಒಬ್ಬ ದೇವತೆಯ ವಂಶಸ್ಥನೆಂದು ಗುರುತಿಸುತ್ತಿದ್ದವು, ಮತ್ತು ಅವರಿಗೆ ಬಿರುದುಗಳು ಹಾಗೂ ಗೌರವಗಳನ್ನು ನೀಡುತ್ತಿದ್ದವು.[೨]
ತಮಿಳು ಮೆಯ್ ಕೀರ್ತಿ ಅಭಿಲೇಖಗಳು ಪ್ರಶಸ್ತಿಗಳನ್ನು ಹೋಲುತ್ತವೆ, ಆದರೆ ಹೆಚ್ಚು ಪ್ರಮಾಣೀಕೃತ ರೂಪಗಳನ್ನು ಹೊಂದಿರುತ್ತವೆ.[೨]
ಉದಾಹರಣೆಗಳು
[ಬದಲಾಯಿಸಿ]- ನಾಶಿಕ್ ಪ್ರಶಸ್ತಿ (ಕ್ರಿ.ಶ. ೨ನೇ ಶತಮಾನ), ಸಾತವಾಹನ ರಾಜವಂಶ
- ಪ್ರಯಾಗ ಪ್ರಶಸ್ತಿ (ಕ್ರಿ.ಶ. ೪ನೇ ಶತಮಾನ), ಗುಪ್ತ ರಾಜವಂಶ
- ದೇವಪಾರಾ ಪ್ರಶಸ್ತಿ (ಕ್ರಿ.ಶ. ೧೨ನೇ ಶತಮಾನ), ಸೇನಾ ರಾಜವಂಶ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Kumkum Roy (2008). Historical Dictionary of Ancient India. Scarecrow Press. p. 252. ISBN 978-1-4616-5917-4.
- ↑ ೨.೦ ೨.೧ Bernard Bate (2013). Tamil Oratory and the Dravidian Aesthetic: Democratic Practice in South India. Columbia University Press. p. 151. ISBN 978-0-231-51940-3.