ವಿಷಯಕ್ಕೆ ಹೋಗು

ಅನು ಪ್ರಭಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನು ಪ್ರಭಾಕರ್
ಜನನ (1980-11-09) November 9, 1980 (age 45)
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿನಟಿ
ಪತ್ನಿ/ಪತಿ(s)ಕೃಷ್ಣಕುಮಾರ್(m. ೨೦೦೨)
ರಘು ಮುಖರ್ಜಿ(m. ೨೦೧೬)
ಪೋಷಕರು
  • ಎಂ.ವಿ.ಪ್ರಭಾಕರ್ (ತಂದೆ)
  • ಗಾಯತ್ರಿ ಪ್ರಭಾಕರ್ (ತಾಯಿ)

ಅನು ಪ್ರಭಾಕರ್ ಪ್ರಮುಖವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ನಟಿ. ಅವರು 1990ರ ದಶಕದಲ್ಲಿ ತನ್ನ ಅಭಿನಯದಿಂದ ಜನಪ್ರಿಯತೆ ಗಳಿಸಿದ್ದರು. ಅವರು ಸಾಕಷ್ಟು ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಅನು ಪ್ರಭಾಕರ್ ಅವರು ನವೆಂಬರ್ ೯,೧೯೮೦ರಂದು ಬೆಂಗಳೂರಿನಲ್ಲಿ ಜನಿಸಿದರು.ಇವರ ತಂದೆ ಎಂ.ವಿ.ಪ್ರಭಾಕರ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ನಲ್ಲಿ ಉದ್ಯೋಗಿಯಾಗಿದ್ದಾರೆ.ಇವರ ತಾಯಿ ಗಾಯತ್ರಿ ಅವರು ಡಬ್ಬಿಂಗ್ ಕಲಾವಿದೆ ಮತ್ತು ನಟಿಯಾಗಿದ್ದಾರೆ.ಇವರ ಸಹೋದರನ ಹೆಸರು ವಿಕ್ರಮ್.ಅನು ಅವರು ಬೆಂಗಳೂರಿನ ಉಪನಗರವಾದ ಮಲ್ಲೇಶ್ವರಂನಲ್ಲಿ ಬೆಳೆದರು.ಅಲ್ಲಿ ಅವರು ನಿರ್ಮಲಾ ರಾಣಿ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು.ಆ ಸಮಯದಲ್ಲಿ ಅವರು ಕನ್ನಡ ಚಲನಚಿತ್ರಗಳಾದ ಚಪಲ ಚೆನ್ನಿಗರಾಯ (೧೯೯೦), ಶಾಂತಿ ಕ್ರಾಂತಿ (೧೯೯೧) ಮತ್ತು ಇಂಗ್ಲಿಷ್ ಚಲನಚಿತ್ರ ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್(೧೯೯೦) ಎಂಬ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು.[೧]

ವೃತ್ತಿ ಜೀವನ

[ಬದಲಾಯಿಸಿ]

ಅನು ಅವರು ೧೯೯೯ರಲ್ಲಿ ಹೃದಯ ಹೃದಯಾ ಎಂಬ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಇವರು ಸೂರಪ್ಪ,ಜಮೀನ್ದಾರ್ರು,ಹೃದಯವಂತ,ಸಾಹುಕಾರ,ವರ್ಷ ಎಂಬ ಚಲನಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೊದಿಗೆ ಅಭಿನಯಿಸಿದರು.ಇವರು ಕೆಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ನಂತರ ೧೨ನೆಯ ಶತಮಾನದ ಕನ್ನಡ ಕವಿ ಅಕ್ಕಮಹಾದೇವಿಯ ಜೀವನವನ್ನು ಆಧರಿಸಿದ ಚಲನಚಿತ್ರದಲ್ಲಿ ಅನು ಅವರು ದ್ವಿಪಾತ್ರ ಪಾತ್ರವನ್ನು ವಹಿಸುತ್ತಾರೆ.[೨]

ವೈಯಕ್ತಿಕ ಜೀವನ

[ಬದಲಾಯಿಸಿ]

ಅನು ಅವರು ಮಾರ್ಚ್ ೨೦೦೨ರಲ್ಲಿ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು.ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು.ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ.[೩]

ಪ್ರಶಸ್ತಿಗಳು

[ಬದಲಾಯಿಸಿ]

ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು 'ಅಭಿನಯ ಸರಸ್ವತಿ' ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು.'ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧' ಮತ್ತು 'ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ' ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ.[೪]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಚಲನಚಿತ್ರಗಳು

[ಬದಲಾಯಿಸಿ]
YearFilmRoleLanguageNotes
೧೯೯೦ಚಪಲ ಚೆನ್ನಿಗರಾಯಕನ್ನಡ
೧೯೯೦ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್ಇಂಗ್ಲೀಷ್
೧೯೯೦ಸ್ವರ್ಣ ಸಂಸಾರಕನ್ನಡ
೧೯೯೧ಶಾಂತಿ ಕ್ರಾಂತಿಕನ್ನಡ
೧೯೯೯ಹೃದಯ ಹೃದಯಾಕನ್ನಡ
೧೯೯೯ಸ್ನೇಹಲೋಕಕನ್ನಡ
೨೦೦೦ಹ್ಞೂಂ ಅಂತೀಯಾ ಊಹ್ಞೂಂ ಅಂತೀಯಾಕನ್ನಡ
೨೦೦೦ಸೂರಪ್ಪಕನ್ನಡ
೨೦೦೦ಶ್ರೀರಸ್ತು ಶುಭಮಸ್ತುಕನ್ನಡ
೨೦೦೦ಯಾರಿಗೆ ಸಾಲುತ್ತೆ ಸಂಬಳಕನ್ನಡ
೨೦೦೧ಅಂಜಲಿ ಗೀತಾಂಜಲಿಕನ್ನಡ
೨೦೦೧ಶಾಪಕಾವೇರಿಕನ್ನಡಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ[೫]
೨೦೦೧ಕನಸುಗಾರಕನ್ನಡ
೨೦೦೧ಮಿಸ್ಟರ್ ಹರಿಶ್ಚಂದ್ರಕನ್ನಡ
೨೦೦೧ಶಿವಪ್ಪನಾಯಕಕನ್ನಡ
೨೦೦೧ವಿಶಾಲಾಕ್ಷಮ್ಮನ ಗಂಡಕನ್ನಡ
೨೦೦೨ಅರ್ಪುತಮ್ಪ್ರಿಯತಮಿಳು
೨೦೦೨ಜಮೀನ್ದಾರ್ರುಕನ್ನಡ
೨೦೦೨ಅಣ್ಣಯ್ಯ ತಮ್ಮಯ್ಯಕನ್ನಡ
೨೦೦೨ತವರಿಗೆ ಬಾ ತಂಗಿಗೌರಿಕನ್ನಡ
೨೦೦೨ಓಳು ಸಾರ್ ಬರೀ ಓಳುಕನ್ನಡ
೨೦೦೩ಅನ್ನೈ ಕಲಿಗಂಬಲ್ಈಶ್ವರಿತಮಿಳು
೨೦೦೩ನನ್ ಹೆಂಡ್ತಿ ಮದುವೆಕನ್ನಡ
೨೦೦೩ನೀ ಇಲ್ಲದೆ ನಾ ಇಲ್ಲ ಕಣೇಕನ್ನಡ
೨೦೦೩ಪ್ರೀತಿ ಪ್ರೇಮ ಪ್ರಣಯಕನ್ನಡ
೨೦೦೩ಹೃದಯವಂತಗೌತಮಿಕನ್ನಡ
೨೦೦೩ಅರ್ಧಾಂಗಿಕನ್ನಡ
೨೦೦೪ಬಿಸಿ ಬಿಸಿರಾಧ ರಮೇಶ್ಕನ್ನಡ
೨೦೦೪ಓಕೆ ಸಾರ್ ಓಕೆಕನ್ನಡ
೨೦೦೪ಪ್ರೀತಿ ನೀ ಇಲ್ಲದೆ ನಾ ಹೇಗಿರಲಿಚಂದ್ರಮತಿಕನ್ನಡ
೨೦೦೪ಸಾಹುಕಾರಕನ್ನಡ
೨೦೦೫ಕನಕಾಂಬರಿಕನ್ನಡ
೨೦೦೫ವರ್ಷಕನ್ನಡ
೨೦೦೫ಮಜಾಸೆಲ್ವಿತಮಿಳು
೨೦೦೫ಉಡೀಸ್ಸೀತಾಕನ್ನಡ
೨೦೦೬ಮೋಹಿನಿ 9886788888ಕನ್ನಡ
೨೦೦೬ಸಾವಿರ ಮೆಟ್ಟಿಲುಕನ್ನಡ
೨೦೦೭#73, ಶಾಂತಿ ನಿವಾಸನೀತಾಕನ್ನಡ
೨೦೦೭ಶ್ರೀ ದಾನಮ್ಮ ದೇವಿಶ್ರೀ ದಾನಮ್ಮ ದೇವಿಕನ್ನಡ
೨೦೦೭ಪ್ರಾರಂಭಕನ್ನಡ
೨೦೦೮ಮುಸ್ಸಂಜೆ ಮಾತುಶ್ವೇತಾಕನ್ನಡನಾಮನಿರ್ದೇಶನ, ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ (Kannada)
೨೦೦೮ನವಶಕ್ತಿ ವೈಭವಕನ್ನಡ
೨೦೦೯ಗುಬ್ಬಚ್ಚಿಗಳುಗಾಯತ್ರಿಕನ್ನಡ
೨೦೦೯ಭಾಗ್ಯದ ಬಳೆಗಾರಕನ್ನಡ
೨೦೧೦ಬನಶಂಕರಿ ದೇವಿ ಮಹಾತ್ಮೆಕನ್ನಡ
೨೦೧೦ಪರೀಕ್ಷೆಬಂಗಾರಿಕನ್ನಡಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೧೧ಕೋ ಕೋಕನ್ನಡ
೨೦೧೨ಶ್ರೀ ಕ್ಷೇತ್ರ ಆದಿಚುಂಚನಗಿರಿಕನ್ನಡ
೨೦೧೨ಸಂಸಾರದಲ್ಲಿ ಗೋಲ್ಮಾಲ್ರಾಗಿಣಿಕನ್ನಡ
೨೦೧೩ಗರ್ಭದ ಗುಡಿತೆರೆಸಾಕನ್ನಡ
೨೦೧೩ಸಕ್ಕರೆಸ್ನೇಹಕನ್ನಡ
೨೦೧೪ಫೇರ್ & ಲವ್ಲಿಕನ್ನಡ
೨೦೧೫ಆಟಗಾರಸಂಧ್ಯಾ ರಮಾಗೋಪಾಲ್ಕನ್ನಡ
೨೦೧೬ಶಿವಯೋಗಿ ಶ್ರೀ ಪುಟ್ಟಯ್ಯಜ್ಜಕನ್ನಡ
೨೦೧೭Once More ಕೌರವಕನ್ನಡ
೨೦೧೮ತುಂತುರುಕನ್ನಡ
೨೦೧೯ಅನುಕ್ತಾಕನ್ನಡ
೨೦೨೦ರತ್ನನ್ ಪ್ರಪಂಚತಬಸ್ಸುಂಕನ್ನಡ
೨೦೨೨ಜೇಮ್ಸ್ಕನ್ನಡ
TBAಅಕ್ಕಅಕ್ಕ ಮಹಾದೇವಿ / ಜ್ಯೋತಿಕನ್ನಡಚಿತ್ರೀಕರಣ

ಕಿರುತೆರೆ ಕಾರ್ಯಕ್ರಮಗಳು

[ಬದಲಾಯಿಸಿ]
  • ಬಾಳೆ ಬಂಗಾರ
  • ಹೋಮ್ ಮಿನಿಸ್ಟರ್
  • ಶ್ರೀಮತಿ ಕರ್ನಾಟಕ
  • ಮಂಜು ಮುಸುಕಿದ ಹಾದಿ
  • ನೂರು ದಿನಗಳು
  • ತ್ರಿವೇಣಿ ಸಂಗಮ[೬]

ಉಲ್ಲೇಖಗಳು

[ಬದಲಾಯಿಸಿ]
  1. ↑ https://timesofindia.indiatimes.com/entertainment/kannada/movies/news/Anu-Prabhakar-mum-on-her-separation-from-her-husband/articleshow/39359146.cms
  2. ↑ https://in.bookmyshow.com/person/anu-prabhakar/4848
  3. ↑ https://www.thehindu.com/features/metroplus/actors-anu-prabhakar-and-raghu-mukherjee-tie-the-knot/article8519872.ece
  4. ↑ https://www.filmibeat.com/celebs/anu-prabhakar/biography.html
  5. ↑ "'Mussanje' bags best film award". The Hindu. 29 May 2001. Retrieved 25 April 2017.
  6. ↑ https://www.imdb.com/name/nm2782609/