ಸುಧಾರಾಣಿ

ವಿಕಿಪೀಡಿಯ ಇಂದ
Jump to navigation Jump to search

ಸುಧಾರಾಣಿ ಪ್ರಮುಖವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ನಟಿ.

ಆರಂಭಿಕ ವರ್ಷಗಳಲ್ಲಿ[ಬದಲಾಯಿಸಿ]

ಸುಧಾರಾಣಿಯವರು ಗೋಪಾಲಕೃಷ್ಣ ಮತ್ತು ನಾಗಲಕ್ಷೀ ದಂಪತಿಗಳಿಗೆ ಜನಿಸಿದರು. ಐದನೇ ವಯಸ್ಸಿನಲ್ಲಿ ತಾಯಿ ನಾಗಲಕ್ಷೀಯವರು ಸುಧಾರಾಣಿಯವರನ್ನು ನೃತ್ಯ ತರಗತಿಗಳಗೆ ಸೇರಿಸಿದರು.

ಚಲನಚಿತ್ರ ವೃತ್ತಿಜೀವನ[ಬದಲಾಯಿಸಿ]

ರಾಜ್‍ಕುಮಾರ್ ರವರು ಸುಧಾರಾಣಿಯವರ ಪ್ರತಿಭೆಯನ್ನು ಗುರುತಿಸಿ ಆನಂದ್ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದರು.ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ,ಮುಂತಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಇವರು ತಮಿಳು ಭಾಷೆಯನ್ನು ತುಂಬಾ ಸರಾಗವಾಗಿ ಮಾತನಾಡುತ್ತಾರೆ.ರಮೇಶ್ ಅರವಿಂದ್‌ರವರ ಜೊತೆ ಪಂಚಮ ವೇದ, ಶ್ರೀಗ‍ಂಧ, ಅರಗಿಣಿ ಮತ್ತು ಅನುರಾಗ ಸಂಗಮ ಸೇರಿದಂತೆ ಎಂಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಅವರ ವೃತ್ತಿಜೀವನದ ಉತ್ತುಂಗದಲ್ಲಿ ರಾಣಿ ಯು.ಎಸ್. ಮೂಲದ ಅರಿವಳಿಕೆ ತಜ್ಞ ಡಾ. ಸಂಜಯ್ ಅವರನ್ನು ಮದುವೆಯಾದರು.

ಪ್ರಶಸ್ತಿಗಳು[ಬದಲಾಯಿಸಿ]

ಪಂಚಮ ವೇದ ಮತ್ತು ಮೈಸೂರು ಮಲ್ಲಿಗೆ ಚಿತ್ರಕ್ಕಾಗಿ ಸುಧಾರಾಣಿಯವರು ಎರಡು ಬಾರಿ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಅವರು ಬೆಂಗಳೂರಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.೨೦೦೦ರಲ ಸ್ಪರ್ಶ ಚಲನಚಿತ್ರಕ್ಕೆ ಅತ್ಯುತ್ತಮ ನಟಿಯಂದು ಫಿಲ್ಮ್ಫೇರ್ ಪ್ರಶಸ್ತಿ ಪಡೆದರು.[೨]೨೦೧೫ ವಾಸ್ತು ಪ್ರಕಾರ ಚಲನ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಿಯಾಗಿ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದರು.

ವರ್ಷ ಚಲನಚಿತ್ರ ಪ್ರಶಸ್ತಿ
೧೯೯೧ ಪಂಚಮ ವೇದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೧೯೯೨ ಮೈಸೂರು ಮಲ್ಲಿಗೆ ಫಿಲ್ಮ್ಫೇರ್ ಪ್ರಶಸ್ತಿ
೧೯೯೨ ಮೈಸೂರು ಮಲ್ಲಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೦೦ ಸ್ಪರ್ಶ ಫಿಲ್ಮ್ಫೇರ್ ಪ್ರಶಸ್ತಿ
೨೦೧೫ ವಾಸ್ತು ಪ್ರಕಾರಾ ಫಿಲ್ಮ್ಫೇರ್ ಪ್ರಶಸ್ತಿ

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಮಕ್ಕಳ ಪಾತ್ರಗಳು[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ನಿರ್ದೇಶಕರು
೧೯೭೮ ಕಿಲಾಡಿ ಕಿಟ್ಟ ಗೀತಾ ಕೆ. ಎಸ್. ಆರ್. ದಾಸ್
೧೯೮೦ ಕುಳ್ಳ-ಕುಳ್ಳಿ - ಎಚ್. ಆರ್. ಭಾರ್ಗವ
೧೯೮೧ ರಂಗನಾಯಕಿ - ಪುಟ್ಟಣ್ಣ ಕಣಗಾಲ್
೧೯೮೧ ಅನುಪಮ - ರೇಣುಕಾ ಶರ್ಮಾ
೧೯೮೧ ಭಾಗ್ಯವಂತ - ಬಿ. ಎಸ್. ರಂಗ
೧೯೮೨ ಬಾಡದ ಹೂ - ಕೆ.ವಿ. ಜಯರಾಮ್

ಉಲ್ಲೇಖಗಳು[ಬದಲಾಯಿಸಿ]