ಮಾಲಾಶ್ರೀ
ಮಾಲಾಶ್ರೀ | |
---|---|
![]() | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಚೆನ್ನೈ ತಮಿಳುನಾಡು | ಆಗಸ್ಟ್ ೧೦, ೧೯೭೩
ವರ್ಷಗಳು ಸಕ್ರಿಯ | ೧೯೮೯–ಪ್ರಸ್ತಕ |
ಪತಿ/ಪತ್ನಿ | ರಾಮು |
ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು ೧೯೮೯ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು. ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಗಜಪತಿ ಗರ್ವಭಂಗ, ಪೋಲಿಸ್‍ನ ಹೆಂಡ್ತಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರುಮನೆ ಉಡುಗೊರೆಯಂತಹ ಚಿತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು.