ಅಂಬಿಕಾ (ಚಿತ್ರನಟಿ)
ಅಂಬಿಕಾ | |
---|---|
ಜನನ | 06 ನವೆಂಬರ್, 1963 ಕಲ್ಲಾರ, ತಿರುವನಂತಪುರಮ್, ಕೇರಳ, ಭಾರತ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | 1978-present |
ಸಂಗಾತಿ(s) | ಶಿನು ಜೋನ್(ವಿಚ್ಛೇದಿತ),ರವಿಕಾಂತ್ |
ಪೋಷಕ(ರು) | ಎ.ಈ.ರಾಮ ಕುರುಪ್, ಎಮ್.ಕೆ.ಜಾನಕಿ. |
ಸಂಬಂಧಿಕರು | ರಾಧಾ (ಸಹೋದರಿ) |
ಅಂಬಿಕಾ (ಜನನ: ನವಂಬರ್ ೬ ೧೯೬೩) ಭಾರತದ ಒಬ್ಬ ಚಿತ್ರನಟಿ. ಅವರು ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ೧೯೭೯ರ ಮಲಯಾಳಮ್ ಚಲನಚಿತ್ರ ಮಾಮಂಗಮ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರು, ಮಲಯಾಳಮ್ ಅಲ್ಲದೆ ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲೂ ಬಿಡುವಿಲ್ಲದ ನಟಿಯಾದರು.ಕನ್ನಡದಲ್ಲಿ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ ನಟಿಸಿದ ಚಿತ್ರ "ಚಲಿಸುವ ಮೋಡಗಳು" ಬಹಳ ಜನಪ್ರಿಯವಾಗಿತ್ತು.ಅಂಬರೀಶ್ ಅಂಬಿಕಾ ಕನ್ನಡ ಚಿತ್ರ ರಂಗದ ಯಶಸ್ವೀ ಜೋಡಿಗಳು, ಇವರಿಬ್ಬರ ನಟನೆಯ "ಚಳಿ ಚಳಿ" ಹಾಡು ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು. [೧]
ವೈಯಕ್ತಿಕ ಜೀವನ
[ಬದಲಾಯಿಸಿ]ಅಂಬಿಕಾ ೧೯೬೨ರಲ್ಲಿ ತಿರುವನಂತಪುರಮ್ ಜಿಲ್ಲೆಯಲ್ಲಿರುವ ಕಲ್ಲಾರ ಗ್ರಾಮದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗೆ ಜನಿಸಿದರು. ಅವರ ತಾಯಿ ಕಲ್ಲಾರ ಸರಸಮ್ಮ ೨೦೧೪ ರಲ್ಲಿ ಮಹಿಳಾ ಕಾಂಗ್ರೆಸ್ ನ ನಾಯಕಿರಾಗಿದ್ದರು. ಅವರಿಗೆ ಇಬ್ಬರು ಕಿರಿಯ ಸಹೋದರಿಯರು, ರಾಧಾ ಮತ್ತು ಮಲ್ಲಿಕಾ, ಮತ್ತು ಇಬ್ಬರು ಕಿರಿಯ ಸಹೋದರರಾದ ಅರ್ಜುನ್ ಮತ್ತು ಸುರೇಶ್ ಇದ್ದಾರೆ. ಅಂಬಿಕಾ ೧೯೮೮ ರಲ್ಲಿ ಎನ್‌ಆರ್‌ಐ ಪ್ರೇಮ್‌ಕುಮಾರ್ ಮೆನನ್‌ರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ಮತ್ತು ಅಮೆರಿಕದಲ್ಲಿ ನೆಲೆಸಿದರು. ಅವರು ೧೯೯೭ ರಲ್ಲಿ ವಿಚ್ಛೇದನೆ ಪಡೆದ ನಂತರ ಅವರು ೨೦೦೦ ರಲ್ಲಿ ನಟ ರವಿಕಾಂತ್ ಅವರನ್ನು ವಿವಾಹವಾದರು,[೨] [೩]ಆದರೆ ಅವರು ೨೦೦೨ ರಲ್ಲಿ ವಿಚ್ಛೇದನೆ ಪಡೆದರು. ಪ್ರಸ್ತುತ ಅವರು ತಮ್ಮ ಪುತ್ರರೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ.[೪]
ಅಂಬಿಕಾ ಅಭಿನಯದ ಕೆಲವು ಚಿತ್ರಗಳು
[ಬದಲಾಯಿಸಿ]ಕನ್ನಡ
[ಬದಲಾಯಿಸಿ]
ಉಲ್ಲೇಖಗಳು
[ಬದಲಾಯಿಸಿ]- ↑ http://chiloka.com/celebrity/ambika
- ↑ "Ambika (Actress) Biography, Age, Husband, Height, Net Worth, Height, Interview". InformationCradle. 25 June 2019. Archived from the original on 20 ಮಾರ್ಚ್ 2020. Retrieved 20 March 2020.
- ↑ "Ambika - Malayalam actors who have married more than once". The Times of India. Retrieved 20 March 2020.
- ↑ "Ambika (actress): Indian actress - Biography and Life". peoplepill.com. Retrieved 20 March 2020.
- ↑ https://www.youtube.com/watch?v=sG5_BZv7n2k
- ↑ "ಆರ್ಕೈವ್ ನಕಲು". Archived from the original on 2020-03-20. Retrieved 2020-03-20.
- ↑ https://kannadamoviesinfo.wordpress.com/2013/06/21/indina-bharatha-1984/
- ↑ https://www.youtube.com/watch?v=MfoKQKG32c8
- Pages using infobox person with multiple spouses
- Pages using infobox person with multiple parents
- Articles with hCards
- Commons link is locally defined
- ತಮಿಳು ಚಲನಚಿತ್ರ ನಟಿಯರು
- ಕನ್ನಡ ಚಲನಚಿತ್ರ ನಟಿಯರು
- ತೆಲುಗು ಚಲನಚಿತ್ರ ನಟಿಯರು
- ಭಾರತದ ಚಲನಚಿತ್ರ ನಟಿಯರು
- ನಟಿಯರು
- ಕನ್ನಡ ಸಿನೆಮಾ
- ಚಿತ್ರರಂಗ
- ಚಲನಚಿತ್ರ ನಟಿಯರು
- ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ