ಕನಸುಗಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನಸುಗಾರ - ವಿ. ರವಿಚಂದ್ರನ್, [೧] ಪ್ರೇಮಾ ಮತ್ತು ಶಶಿಕುಮಾರ್, ಹೇಮಾ ಚೌಧರಿ ನಟಿಸಿದ 2001 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ತಮಿಳಿನ ಉನ್ನಿದತ್ತಿಲ್ ಎನ್ನೈ ಕೊಡುತೆನ್ (1998) ಚಿತ್ರದ ರಿಮೇಕ್ ಆಗಿರುವ ಈ ಚಲನಚಿತ್ರವನ್ನು ಕರಣ್ ನಿರ್ದೇಶಿಸಿದ್ದಾರೆ ಮತ್ತು ರಾಜೇಶ್ ರಾಮನಾಥ್ ಅವರ ಧ್ವನಿಪಥವನ್ನು ಒಳಗೊಂಡಿದೆ.

3 ಆಗಸ್ಟ್ 2001 ರಂದು ಬಿಡುಗಡೆಯಾದ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. [೨]ಚಿತ್ರಕ್ಕಾಗಿ ಪ್ರೇಮಾ ಕನ್ನಡದ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

ಪಾತ್ರವರ್ಗ[ಬದಲಾಯಿಸಿ]

ಚಿತ್ರಸಂಗೀತ[ಬದಲಾಯಿಸಿ]

ಎಲ್ಲಾ ಹಾಡುಗಳಿಗೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಎಸ್‌ಎ ರಾಜ್‌ಕುಮಾರ್ ಸಂಯೋಜಿಸಿದ ಮೂಲ ತಮಿಳು ಚಲನಚಿತ್ರದಲ್ಲಿರುವ "ಓಂ ನಮಃ" ಹಾಡನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಹಾಡುಗಳನ್ನು ಅದೇ ಧಾಟಿಗಳೊಂದಿಗೆ ಮರುಸಂಯೋಜಿಸಲಾಗಿದೆ, "ಓಂ ನಮಃ" ಹಾಡಿನ ಧಾಟಿಗೆ ಎಸ್.ಎ. ರಾಜ್‌ಕುಮಾರ್ ಸಂಯೋಜಿಸಿದ ಕಣ್ಣುಪಾದಪೋಗುತೈಯಾದಲ್ಲಿನ "ಕಾಥೋರಮೈ ಕಧೈ" ಮೂಲವಾಗಿದೆ.

ಕ್ರಮಸಂಖ್ಯೆ ಹಾಡು ಹಾಡುಗಾರರು ರಚನೆ
1 "ಚಿಟ್ಟೆ ಬಂತು ಚಿಟ್ಟೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೆ. ಕಲ್ಯಾಣ್
2 "ಕಾಮನ ಬಿಲ್ಲೇ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್.ಚಿತ್ರಾ ಕೆ. ಕಲ್ಯಾಣ್
3 "ಸೂರ್ಯನ ಗೆಳೆತನಕೆ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್.ಚಿತ್ರಾ ಕೆ. ಕಲ್ಯಾಣ್
4 "ಎಲ್ಲೋ ಅದು ಎಲ್ಲೋ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್.ಚಿತ್ರಾ ಕೆ. ಕಲ್ಯಾಣ್
5 "ಕೋಟಿ ಪಲ್ಲವಿ ಹಾಡಿನ" ಕೆ.ಎಸ್.ಚಿತ್ರಾ ಕೆ. ಕಲ್ಯಾಣ್
6 "ಓಂ ನಮಃ" ಎಸ್.ಪಿ.ಬಾಲಸುಬ್ರಹ್ಮಣ್ಯಂ , Manjula Gururaj ಕೆ. ಕಲ್ಯಾಣ್

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. "Kanasugara Cast & crew". Archived from the original on 2014-03-28. Retrieved 2021-11-22.
  2. Movie Review