ಪ್ರತಿಮಾದೇವಿ
ಪ್ರತಿಮಾದೇವಿ | |
---|---|
ಜನನ | ಮೋಹಿನಿ ೯ ಎಪ್ರಿಲ್ ೧೯೩೨[೧] ಕಲ್ಲಡ್ಕ, ಕರ್ನಾಟಕ |
ಮರಣ | ೬ ಏಪ್ರಿಲ್, ೨೦೨೧ ಸರಸ್ವತಿಪುರ, ಮೈಸೂರು |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೧೯೪೭–೨೦೦೦ |
ಸಂಗಾತಿ | ಶಂಕರ್ ಸಿಂಗ್ |
ಪ್ರತಿಮಾದೇವಿ (ಏಪ್ರಿಲ್ ೯, ೧೯೩೨ - ಏಪ್ರಿಲ್ ೬, ೨೦೨೧), ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿ. ಇವರು ೧೯೪೭ರಲ್ಲಿ 'ಕೃಷ್ಣಲೀಲಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ೧೯೫೧ರಲ್ಲಿ ಬಿಡುಗಡೆಯಾದ 'ಜಗನ್ಮೋಹಿನಿ'ಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು.[೨]
ವೈಯಕ್ತಿಕ ಜೀವನ
[ಬದಲಾಯಿಸಿ]ದೇವಿ ಅವರ ಹುಟ್ಟುಹೆಸರು ಮೋಹಿನಿ. ಹುಟ್ಟಿದ್ದು ಫೆಬ್ರುವರಿ ೯, ೧೯೩೨ರಲ್ಲಿ. ಪ್ರತಿಮಾದೇವಿಯವರು ಕನ್ನಡ ಚಿತ್ರರಂಗದ ನಿರ್ಮಾಪಕ-ನಿರ್ದೇಶಕ, ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಪತ್ನಿ. ಕನ್ನಡದ ನಿರ್ಮಾಪಕ - ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು.
ಹಲವಾರು ಚಿತ್ರಗಳಲ್ಲಿ
[ಬದಲಾಯಿಸಿ]ಕೃಷ್ಣಲೀಲಾ, ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚೀನಾ, ಚಂಚಲಕುಮಾರಿ, ಧರ್ಮಸ್ಥಳ ಮಹಾತ್ಮೆ, ಪ್ರಭುಲಿಂಗ ಲೀಲೆಮಂಗಳ ಸೂತ್ರ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸುಮಾರು ಅರವತ್ತೈದು ಚಿತ್ರಗಳಲ್ಲಿ ಪ್ರತಿಮಾದೆವಿಯವರು ನಟಿಸಿದ್ದಾರೆ. ಜಗನ್ಮೋಹಿನಿ, ವರದಕ್ಷಿಣೆ, ಧರ್ಮಸ್ಥಳ ಮಹಾತ್ಮೆಯಲ್ಲಿನ ಅಭಿನಯಕ್ಕೆ ಪ್ರತಿಮಾದೇವಿಯವರು ಪ್ರಸಿದ್ಧಿ ಗಳಿಸಿದ್ದರು.
ನಿಧನ
[ಬದಲಾಯಿಸಿ]ಪ್ರತಿಮದೇವಿ ಅವರು ಏಪ್ರಿಲ್ ೬, ೨೦೨೧ರಂದು ಮೈಸೂರಿನ ಸರಸ್ವತೀಪುರದ ತಮ್ಮ ಮನೆಯಲ್ಲಿ ಸಾವನ್ನಪ್ಪಿದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು.[೩]
ಚಿತ್ರಗಳ ಪಟ್ಟಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Prathima Devi : Kannada Actress Age, Movies, Biography". chiloka.com. Retrieved 19 March 2020.
- ↑ "An evening with Jaganmohini". The Hindu (in Indian English). 11 June 2011. Retrieved 19 March 2020.
- ↑ "ಹಿರಿಯ ನಟಿ ಪ್ರತಿಮಾ ದೇವಿ ನಿಧನ". Prajavani. 6 April 2021. Retrieved 7 April 2021.