ಹಿಂದೂ ಧರ್ಮದಲ್ಲಿ ಪ್ರಾಣಿಬಲಿ
ಹಿಂದೂ ಪ್ರಾಣಿಬಲಿಯ ಆಚರಣೆಗಳು ಬಹುತೇಕವಾಗಿ ಶಾಕ್ತ ಪಂಥ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳಲ್ಲಿ ಬಲವಾಗಿ ಬೇರೂರಿದ ಜಾನಪದ ಹಿಂದೂ ಧರ್ಮದ ಪ್ರವೃತ್ತಿಗಳೊಂದಿಗೆ ಸಂಬಂಧಿಸಿವೆ. ಭಾರತದಲ್ಲಿ ಪ್ರಾಚೀನ ಕಾಲದಲ್ಲಿ ಪ್ರಾಣಿಬಲಿಗಳನ್ನು ಮಾಡಲಾಗುತ್ತಿತ್ತು. ಭಗವದ್ಗೀತೆ ಮತ್ತು ಕೆಲವು ಪುರಾಣಗಳಂತಹ ಹಿಂದೂ ಧರ್ಮಗ್ರಂಥಗಳು ಪ್ರಾಣಿಬಲಿಯನ್ನು ನಿಷೇಧಿಸುತ್ತವೆ.[೧][೨]
ಕಾಳಿಕಾ ಪುರಾಣವು ಆಡುಗಳು, ಆನೆಗಳ ಧಾರ್ಮಿಕ ಕೊಲೆಯನ್ನು ಅನುಕ್ರಮವಾಗಿ ಬಲಿ, ಮಹಾಬಲಿ ಎಂದು ವ್ಯತ್ಯಾಸ ಮಾಡುತ್ತದೆ. ಆದರೆ ಶಾಕ್ತ ದೇವತಾಶಾಸ್ತ್ರದಲ್ಲಿ ಮನುಷ್ಯರಿಗೆ ಸಂಬಂಧ ಸೂಚಿಸುವುದು ಕೇವಲ ಸಾಂಕೇತಿಕವಾಗಿದೆ ಮತ್ತು ಆಧುನಿಕ ಕಾಲದಲ್ಲಿ ಪ್ರತಿಕೃತಿಯೊಂದಿಗೆ ಮಾಡಲಾಗುತ್ತದೆ.
ಕುದುರೆಯನ್ನು ಬಲಿಕೊಡುವ ಅಶ್ವಮೇಧ ಆಚರಣೆಯನ್ನು ಯಜುರ್ವೇದದಂತಹ ವೈದಿಕ ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣ ಮಹಾಕಾವ್ಯದಲ್ಲಿ, ಚಕ್ರವರ್ತಿಯಾಗಲು ರಾಮನು ಅಶ್ವಮೇಧ ಯಾಗವನ್ನು ಮಾಡಿದನು. ಮಹಾಭಾರತ ಮಹಾಕಾವ್ಯದಲ್ಲಿ, ಯುಧಿಷ್ಠಿರನು ಚಕ್ರವರ್ತಿಯಾಗಲು ಕುರುಕ್ಷೇತ್ರ ಯುದ್ಧ ಗೆದ್ದ ನಂತರ ಅಶ್ವಮೇಧ ಯಾಗವನ್ನು ಮಾಡಿದನು. ಮಹಾಭಾರತವು ಚೇದಿ ರಾಜನಾದ ಉಪರಿಚರ ವಸುವು ಮಾಡಿದ ಅಶ್ವಮೇಧ ಯಾಗದ ವರ್ಣನೆಯನ್ನೂ ಹೊಂದಿದೆ. ಆದರೆ ಇದರಲ್ಲಿ ಯಾವುದೇ ಪ್ರಾಣಿಗಳನ್ನು ಬಲಿಕೊಡಲಾಗಲಿಲ್ಲ. ಗುಪ್ತ ಸಾಮ್ರಾಜ್ಯ, ಚಾಲುಕ್ಯ, ಚೋಳ ವಂಶದ ಅರಸರು ಎಲ್ಲರೂ ಅಶ್ವಮೇಧ ಯಾಗವನ್ನು ಮಾಡಿದರು.
ಪ್ರಾಣಿಬಲಿಯು ಮುಖ್ಯ ಪಾತ್ರವಹಿಸಿದ್ದ ಎಲ್ಲ ಸೋಮ ಬಲಿಗಳಲ್ಲಿ ಅಗ್ನಿಸೋಮೀಯವು ಅತ್ಯಂತ ಸುಲಭದ್ದಾಗಿತ್ತು; ಇದರಲ್ಲಿ ದೇವತೆಗಳಿಗೆ ಅಮೃತವನ್ನು ಅರ್ಪಿಸುವ ದಿನದ ಹಿಂದಿನ ದಿನದಂದು ಅಗ್ನಿ ಮತ್ತು ಸೋಮನಿಗೆ ಆಡನ್ನು ಬಲಿಕೊಡಬೇಕಾಗಿತ್ತು. ಸವನೀಯ ಬಲಿಯಲ್ಲಿ, ಅಗ್ನಿಗೆ ಅರ್ಪಣೆಯ ದಿನದಂದು ದಿನದಾದ್ಯಂತ ಪ್ರಾಣಿಗಳನ್ನು ಬಲಿಕೊಡಲಾಗುತ್ತಿತ್ತು.
ಇಂದು, ಭಾರತದ ಪೂರ್ವದ ರಾಜ್ಯಗಳಲ್ಲಿ ನವರಾತ್ರಿಯ ಅವಧಿಯಲ್ಲಿ ಪ್ರಾಣಿಬಲಿಯು ಕೆಲವು ದುರ್ಗಾ ಪೂಜಾ ಆಚರಣೆಗಳ ಭಾಗವಾಗಿದೆ. ಈ ಆಚರಣೆಯಲ್ಲಿ ಬಲಿಯು ಮಹಿಷಿ ರಾಕ್ಷಸಿಯ ವಿರುದ್ಧ ದೇವಿಯ ಹಿಂಸಾತ್ಮಕ ಪ್ರತೀಕಾರನವನ್ನು ಪ್ರಚೋದಿಸುತ್ತದೆ ಎಂಬ ನಂಬಿಕೆಯಲ್ಲಿ ದೇವಿಗೆ ಪ್ರಾಣಿಯನ್ನು ಅರ್ಪಿಸಲಾಗುತ್ತದೆ. ಆದರೆ ಹಿಂದೂಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಪ್ರಾಣಿಬಲಿಯ ಅಭ್ಯಾಸ ಅಪರೂಪವಾಗಿದೆ. ಶಾಕ್ತ ಸಂಪ್ರದಾಯದ ಹೊರಗೆ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಮ್‍ನಂತಹ ಕೆಲವು ಪೂರ್ವದ ರಾಜ್ಯಗಳಲ್ಲಿ ಇತರ ಸಂದರ್ಭಗಳಲ್ಲಿ ಬಲಿಕೊಡುವ ಅಭ್ಯಾಸವಿದೆ.
ಉಲ್ಲೇಖಗಳು
[ಬದಲಾಯಿಸಿ]