ಮಾತೃಭಾಗ್ಯ
ಮಾತೃಭಾಗ್ಯ | |
---|---|
ಮಾತೃಭಾಗ್ಯ | |
ನಿರ್ದೇಶನ | ಕೆ.ಎನ್.ಚಂದ್ರಶೇಖರ್ ಶರ್ಮ |
ನಿರ್ಮಾಪಕ | ಎನ್.ಮುನಿರಾಮು |
ಪಾತ್ರವರ್ಗ | ಪ್ರಭಾಕರ್, ಮಹಾಲಕ್ಶ್ಮಿ, ದೇವರಾಜ್, ವಜ್ರಮುನಿ, ಡಿಸ್ಕೋಶಾಂತಿ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಎನ್.ಕೆ.ಸುರೇಶ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ವಿ.ಎಂ.ಎ.ಪ್ರೊಡಕ್ಷನ್ |
ಮಾತೃಭಾಗ್ಯ ಕೆ.ಎನ್.ಚಂದ್ರಶೇಖರ್ ಶರ್ಮ ಅವರ ನಿರ್ದೇಶನದಲ್ಲಿ ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯ ಮಹತ್ವ, ಆಕೆ ನಿರ್ವಹಿಸುವ ವಿವಿಧ ಜವಾಬ್ದಾರಿಗಳು, ಅತ್ಯಂತ ಕ್ಲಿಷ್ಟ ಪರಿಸ್ಥಿತಿಗಳಲ್ಲಿಯೂ ಜಾಗೃತವಾಗುವ ಆಕೆಯ ಮಾತೃ ಹೃದಯ ಇಂತಹ ಹೊಳಹುಗಳನ್ನು ಇರಿಸಿಕೊಂಡು ತಯಾರಾದ ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಮತ್ತು ಮಹಾಲಕ್ಷ್ಮಿ ಮುಖ್ಯ ತಾರಾಗಣದಲ್ಲಿ ಇದ್ದಾರೆ.
ಪರಿಚಯ
[ಬದಲಾಯಿಸಿ]ಮಹಿಳೆ ಒಂದು ಮನೆಯ ಹೆಣ್ಣು ಮಗುವಾಗಿ ಹುಟ್ಟಿ, ಮಗಳಾಗಿ, ಅಕ್ಕ, ತಂಗಿಯರಾಗಿ ನಂತರ ಮದುವೆಯಾಗಿ ಮಾಡಿಕೊಟ್ಟ ಮನೆಯ ಸೊಸೆಯಾಗಿ ಅಲ್ಲಿ ಅತ್ತಿಗೆ, ನಾದಿನಿಯಾಗಿ, ನಂತರ ಅದೇ ಮನೆಯಲ್ಲಿ ಅತ್ತೆಯಾಗಿ ಕಡೆಯಲ್ಲಿ, ಅಜ್ಜಿಯಾದಾಗ ಹೆಣ್ಣಾಗಿ ಹುಟ್ಟಿದವಳು ಪರಿಪಕ್ವವಾದ ಹೆಣ್ಣಾಗುತ್ತಾಳೆ.ಈ ಎಲ್ಲ ಭಾಗ್ಯಗಳಲ್ಲಿಯೂ ಹೆಣ್ಣಾದವಳಿಗೆ ಹೆಚ್ಚು ಪೂರ್ಣತೆ ತರುವುದು 'ಮಾತೃಭಾಗ್ಯ'.ಈ ಮಾತನ್ನು ನಾವು ಟೈಗರ್ ಪ್ರಭಾಕರ್, ಮಹಾಲಕ್ಷ್ಮಿ, ವಜ್ರಮುನಿ, ಡಿಸ್ಕೋಶಾಂತಿ, ದೇವರಾಜ, ವನಿತಾ ವಾಸು, ಕಾಮಿನಿಧರಣ್, ಕೆ.ಎಸ್.ಅಶ್ವಥ್, ಲಕ್ಷ್ಮಣ್, ಅರವಿಂದ್ ಸಾಯಿ ಕುಮಾರ್, ಶಶಿ ಕಿರಣ್, ವೆಂಕಟೇಶ್, ಅಭಿಷೇಕ್ ಮತ್ತು ಇತರರು ನಟಿಸಿರುವ ಕನ್ನಡ ಚಲನಚಿತ್ರ "ಮಾತೃಭಾಗ್ಯ"ದಲ್ಲಿ ಕಾಣುತ್ತೇವೆ.[೧]
ವಸ್ತು ವಿಷಯ
[ಬದಲಾಯಿಸಿ]ಈ ಚಿತ್ರ ವಿ.ಎಮ್.ಎ. ಮೂವೀಸ್ ಅವರ ಚಿತ್ರ ನಿರ್ಮಾಣ ಸಂಸ್ಥೆಯಿಂದ ಬಂದಿತ್ತು. ಈ ಚಿತ್ರವನ್ನು ಶ್ರೀಮತಿ ಕಮಲಮ್ಮ ಅವರು ಪ್ರಸ್ತುತಗೊಳಿಸಿದ್ದಾರೆ. ಇಪ್ಪತ್ತನೇ ನವೆಂಬರ್ ೧೯೯೧ ರಲ್ಲಿ ಬಿಡುಗದೆಯಾದ ಈ ೧೩೭ ನಿಮಿಷಗಳ ಚಲನಚಿತ್ರ. ಇದರ ನಿರ್ಮಾಪಕರು ಶ್ರೀ.ಪುರುಷೋತ್ತಮ್ ಮತ್ತು ಎನ್.ಮುನಿರಾಮ್ ಅವರುಗಳು. ಕುಣಿಗಲ್ ನಾಗಭೂಷಣ ಕಥೆ ಹಾಗೂ ಸಂಭಾಷಣೆ ಬರೆದ ಈ ಚಿತ್ರವನ್ನು ನಿರ್ದೇಶಿಸಿದವರು ಕೆ.ಎನ್.ಚಂದ್ರಶೇಖರ ಶರ್ಮಾ. ಸಹನಿರ್ದೇಶಕರಾಗಿ ಸುಂದರ್ ಮತ್ತು ರಮೇಶ್ ಕಾರ್ಯನಿರ್ವಹಿಸಿದ್ದರು. ಚಿತ್ರ ಸಂಪಾದನೆ ವಿಕ್ಟರ್ ಯಾದವ್, ಸಾಹಸ ಶಿವಯ್ಯ, ನೃತ್ಯ ಡಾನ್ಸ್ ಮಾಸ್ಟರ್ ಸತೀಶ್, ಛಾಯಾಗ್ರಹಣ ಎನ್.ಕೆ.ಸತೀಶ್ ಹಾಗು ವೇಷ-ಭೂಷಣಗಳನ್ನು ಸುಂದರ್ ಮತ್ತು ಪರಮೇಶ್ ನಿರ್ವಹಿಸಿದ್ದಾರೆ. ಉಪೇಂದ್ರ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಗೀತೆಗಳನ್ನು ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್, ದೊಡ್ಡರಂಗೇಗೌಡ ಅವರುಗಳು ಬರೆದಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ ಇವರು ಹಾಡಿದ 'ನೀ ನಗಲು' ಹಾಗೂ 'ತಾಳಳಾರೆ ನಾ' ಗೀತೆಗಳು ಪ್ರಸಿದ್ಧಗೊಂಡಿವೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 'ನಗುತಾ ಬಾಳಲ್ಲಿ' ಮತ್ತು ಮಂಜುಳಾ ಗುರುರಾಜ್ ಅವರು 'ಹಾಡುತ್ತ ಹಾಡುತ್ತ' ಎಂಬ ಹಾಡುಗಳನ್ನು ಹಾಡಿದ್ದಾರೆ. ಎಲ್ಲಾ ಹಾಡುಗಳೂ ಕೇಳುವವರ ಕಿವಿ ಮತ್ತು ಮನಸ್ಸಿಗೆ ಇಂಪು ನೀಡುತ್ತವೆ.[೨]
ತಾರಾಗಣ
[ಬದಲಾಯಿಸಿ]ಚಿತ್ರದ ನಾಯಕ ನಟ ಟೈಗರ್ ಪ್ರಭಾಕರ್ ಅವರನ್ನು ಕನ್ನಡ ಪ್ರಭಾಕರ್ ಎಂದು ಕರೆಯುವರು. ಇವರು ತಮ್ಮ ಚಿತ್ರರಂಗದ ಪಯಣವನ್ನು ಖಳನಾಯಕನಾಗಿ 'ಕಾಡಿನ ರಹಸ್ಯ' ಚಿತ್ರದಲ್ಲಿ ಪ್ರಾರಂಭಿಸಿದರು. ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ ೧೯೩ ಚಿತ್ರಗಳಲ್ಲಿ ನಟಿಸಿದ್ದಾರೆ. ಮಾತೃಭಾಗ್ಯ ಇವರ ೧೫೭ನೇ ಚಿತ್ರ. ಈ ಚಿತ್ರದ ಇನ್ನೊಬ್ಬ ನಾಯಕ ನಟ ದೇವರಾಜ್ ಅವರು. ಇವರೂ ಕೂಡ ಖಳನಾಯಕನಾಗಿ ತಮ್ಮ ಚಿತ್ರರಂಗದ ಪ್ರಯಾಣವನ್ನು ಪ್ರಾರಂಭಿಸಿದರು. ಇವರು ಹಲವು ನಾಟಕಗಳಲ್ಲಿ ಪಾತ್ರ ವಹಿಸಿ ಮೊಟ್ಟ ಮೊದಲು ೧೯೮೫ರಲ್ಲಿ ತ್ರಿಶೂಲ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇವರನ್ನು 'ಡೈನಾಮಿಕ್ ಸ್ಟಾರ್' ಎಂಬ ಹೆಸರಿನಿಂದ ಕರೆಯುತ್ತಾರೆ. ಟೈಗರ್ ಪ್ರಭಾಕರ್ ಮತ್ತು ದೇವರಾಜ್ ದೇಶಪ್ರೇಮಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಈ ಚಿತ್ರದಲ್ಲೂ ನಾವು ಇದನ್ನು ಕಾಣುತ್ತೇವೆ.