ವಿಷಯಕ್ಕೆ ಹೋಗು

ಬಂಗಾರದ ಜಿಂಕೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗಾರದ ಜಿಂಕೆ (ಚಲನಚಿತ್ರ)
ಬಂಗಾರದ ಜಿಂಕೆ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕಬಿ.ಎಸ್.ಸೋಮಸುಂದರ್
ಪಾತ್ರವರ್ಗವಿಷ್ಣುವರ್ಧನ್, ಭಾರತಿ, ಆರತಿ, ಸುಂದರ್ ರಾಜ್, ಶಕ್ತಿಪ್ರಸಾದ್, ಮುಸುರಿ ಕೃಷ್ಣಮೂರ್ತಿ, ಮೈಕೋ ಚಂದ್ರು
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಕವಿತಾ ಕೋಮಲ್ ಪ್ರೊಡಕ್ಷನ್ಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ

ಬಂಗಾರದ ಜಿಂಕೆ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಟಿ.ಎಸ್ ನಾಗಾಭರಣ ನಿರ್ದೇಶನದ ಮತ್ತು ಬ್ಯಾನರ್ ಕವಿತಾ ಕೋಮಲ್ ಪ್ರೊಡಕ್ಷನ್ಸ್ ಅಡಿಯಲ್ಲಿ ಬಿ.ಎಸ್.ಸೋಮಸುಂದರ್ ಮತ್ತು ಟಿ.ಎಸ್ ನರಸಿಂಹನ್ ನಿರ್ಮಾಣದ ಚಿತ್ರ. ಇಲ್ಲಿ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಭಾರತಿ, ಆರತಿ, ಲೀಲಾವತಿ ಮತ್ತು ಸುಂದರ್ ರಾಜ್ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಕೂಡಿದೆ. ಇದೇ ಸಮಯದಲ್ಲಿ ಜನ್ಮ ಜನ್ಮದ ಅನುಬಂಧ ಎಂಬ ಇನ್ನೊಂದು ಇದೇ ರೀತಿಯ ಕಥೆಯ ಚಿತ್ರವೂ ಬಿಡುಗಡೆಯಾಗಿತ್ತು

ಕಥಾವಸ್ತು

[ಬದಲಾಯಿಸಿ]

(ಸ್ಪಾಯಿಲರ್ಸ್ ಬರೆಯುವುದಿಲ್ಲ.) ವೀರು ಎಂಬ ಯುವಕನಿಗೆ ಒಂದು ಕೆಟ್ಟ ಕನಸು ಬೀಳುತ್ತಿರುತ್ತದೆ- ಯಾವುದೋ ಒಂದು ಗುಹೆಯ ಕತ್ತಲಲ್ಲಿ ನಡೆದಂತೆ, ವಿಚಿತ್ರ ಸದ್ದುಗಳು ಬಂದಂತೆ, ಅಲ್ಲಿ ಒಬ್ಬ ಅನಾಮಧೇಯ ಬಂದು ಮಲಗಿದ್ದ ತನಗೆ ಚುಚ್ಚಿ ಕೊಲೆ ಮಾಡಿದಂತೆ. ಅವನು ಕಿರುಚಿಕೊಂಡು ಏಳುತ್ತಾ "ಆ ಬಂಗಾರದ ಜಿಂಕೆ, ಗುಹೆ, ಕೊಲೆ" ಎಂದು ಬಡಬಡಿಸುತ್ತಾನೆ. ಅವನ ಗೆಳಯ ಪೀಟರ್ ಅವನಿಗೆ ಸಮಾಧಾನ ಮಾಡಿ ಏನೆಂದು ವಿಚಾರಿಸುತ್ತಾನೆ. ವೀರು ಒಬ್ಬ ವಿದ್ಯಾವಂತ ಆದರೆ ಬಡ ಯುವಕ, ಅವನು ತಾಯಿಯ ಜೊತೆ ಬಾಳುತ್ತಿರುತ್ತಾನೆ. ಆಕೆ ಹಪ್ಪಳ ಸಂಡಿಗೆ ಮಾರಿಕೊಂಡು ಇವನನ್ನೂ ಸಾಕುತ್ತಿರುತ್ತಾಳೆ. ಒಮ್ಮೆ ಇವನಿಗೆ ದೂರದ ಬೆಟ್ಟದಲ್ಲಿ ಬಂಗಾರನಾಯಕನೆಂಬ ರಾಜನ ಕೋಟೆಯಲ್ಲಿ ಚಿನ್ನದ ಸಂಪತ್ತು ಅಡಗಿಸಿರುವುದಾಗಿ ಕೇಳಿದಾಗ ಅಲ್ಲೊಂದು ಬಂಗಾರದ ಜಿಂಕೆ ಇದೆಯೆಂದೂ ಅದನ್ನು ತಾನು ಕಂಡುಹಿಡಿಯಲೇ ಬೇಕೆಂದು ಕಾಲೇಜಿನ ಲೆಕ್ಚರರ್ ವಾಚನ ಕೇಳಿ ಪ್ರೇರಣೆಯಾಗುತ್ತದೆ. ಆ ಕಾಲೇಜಿನ ಕ್ಲಾಸ್ ಮೇಟ್ ಆಶಾ ದೊಡ್ಡ ಶ್ರೀಮಂತರ ಮನೆಯ ಹುಡುಗಿ, ಅವನೂ ಇವನೂ ಪ್ರೇಮಿಸುತ್ತಿರುತ್ತಾರೆ. ಅಲ್ಲೂ ಅವನಿಗೆ ಬಡವನೆಂದು ಆ ಮನೆಯವರ ವಿರೋಧವಿರುತ್ತದೆ. ಅಲ್ಲಿ ಅವನಿಗೆ ತಾನೂ ಅವಳನ್ನು ವರಿಸಲು ಬಂಗಾರದ ಜಿಂಕೆ , ಸಂಪತ್ತು ತಂದು ಆಕೆಯನ್ನು ಮದುವೆಯಾಗಬೇಕೆಂದು ಚಲದಿಂದ ಹೊರಟು ನಿಲ್ಲುತ್ತಾನೆ. ಆ ಕೋಟೆಯ ಬಳಿ ಅವನಿಗೆ ಭಾಗೀ ಎಂಬ ವಯಸ್ಸಾದ ಹೆಣ್ಣಿನ ದರ್ಶನವಾಗುತ್ತದೆ,. ಆಕೆಯೇ ತನ್ನ ಹಿಂದಿನ ಜನ್ಮದ ಹೆಂಡತಿ, ಆಗ ತನ್ನ ಹೆಸರು ಚಾರು ಆಗಿತ್ತೆಂದು ಅವನಿಗೆ ಬಂಡೆಯ ಮೇಲಿನ ಬರಹದಿಂದ ಗೊತ್ತಾಗಿ ಎಲ್ಲವೂ ನೆನೆಪಿಗೆ ಬರುತ್ತದೆ. ಆದರೆ ಆಕೆಗೆ ನೆನೆಪಿಗೆ ಬರುತ್ತಿಲ್ಲ, ಇವನೇ ತನ್ನ ಬೆಟ್ಟಕ್ಕೆ ನಿಧಿ ಹುಡುಕಲು ಹೋಗಿದ್ದ ಗಂಡ ಎಂದು ನಂಬಲು ಆಕೆಯ ಮನಸು ಒಪ್ಪುತ್ತಿಲ್ಲ. ಆ ಊರಿನಲ್ಲಿ ಅವನನ್ನು ಕೊಂದ ಕಿರಾತಕರು ಇನ್ನೂ ಬದುಕಿದ್ದಾರೆ, ಅಲ್ಲಿ ಪೀಟರ್ ಜೊತೆ ವೀರು ನಿಧಿ ಶೋಧನೆಗೆ ಹೊರಟು ನಿಲ್ಲುತ್ತಾನೆ. ಆದರೆ ಅವನು ಈಗ ಆಶಾಳನ್ನು ಮರೆತು ಭಾಗೀ ಜೊತೆ ಇರಲು ನಿರ್ಧರಿಸಿದ್ದಾನೆ. ಮುಂದೆ ಏನಾಯಿತು, ಆ ನಿಧಿ ಇತ್ತೆ? ಚಾರು ನಿಜಕ್ಕೂ ವೀರು ಆಗಿ ಹುಟ್ಟಿದ್ದಾನೆಯೆ? ಅವನನ್ನು ನಂಬಿದ್ದ ಭಾಗೀ ಮತ್ತು ಆಶಾ ಇಬ್ಬರು ನಾಯಕಿಯರ ಕಥೆಯೇನಾಯಿತು? ಇವೆಲ್ಲವನ್ನೂ ಚಿತ್ರದಲ್ಲಿ ನೋಡಿಯೇ ಆನಂದಿಸಿ.

ಧ್ವನಿಮುದ್ರಿಕೆ

[ಬದಲಾಯಿಸಿ]
Tracklist
ಸಂ.ಹಾಡುಸಾಹಿತ್ಯಗಾಯಕ/ಕಿಸಮಯ
1."ಸಂಗಾತಿಯು ಬಳಿ ಬಾರದೆ"ದೊಡ್ಡರಂಗೇಗೌಡವಾಣಿ ಜಯರಾಂ 
2."ಒಲುಮೆ ಸಿರಿಯ ಕಂಡು"ದೊಡ್ಡರಂಗೇಗೌಡಎಸ್.ಪಿ.ಬಾಲಸುಬ್ರಹ್ಮಣ್ಯಂ ವಾಣಿ ಜಯರಾಂ 
3."ಕೆಣಕಿರುವೆ"ದೊಡ್ಡರಂಗೇಗೌಡವಾಣಿ ಜಯರಾಂ 
4."ಒಲುಮೆ ಸಿರಿಯ ಕಂಡು"ದೊಡ್ಡರಂಗೇಗೌಡಎಸ್.ಪಿ.ಬಾಲಸುಬ್ರಹ್ಮಣ್ಯಂ 


ಪಾತ್ರ

[ಬದಲಾಯಿಸಿ]