ಸುಂದರ್ ರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದರ್ ರಾಜ್

ಸುಂದರ್ ರಾಜ್ ಭಾರತದ ಚಲನಚಿತ್ರ ನಟ. ಸುಂದರ್ ರಾಜ್ ನಟಿಸಿರುವ ಕೆಲವು ಗಮನಾರ್ಹ ಚಿತ್ರಗಳೆಂದರೆ ಕುರಿಗಳು ಸಾರ್ ಕುರಿಗಳು(೨೦೦೧),ಮತದಾನ(೨೦೦೧),ಆಕಸ್ಮಿಕ(೧೯೯೩).[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಸುಂದರ್ ರಾಜ್ ಅವರು ಪ್ರಮೀಳಾ ಜೋಷಾಯಿರವರನ್ನು ಮದುವೆಯಾಗಿದ್ದಾರೆ.ಇವರಿಬ್ಬರಿಗೆ ಒಬ್ಬಳು ಮಗಳಿದ್ದಾಳೆ.ಅವಳ ಹೆಸರು ಮೇಘನಾ ರಾಜ್.ಪ್ರಮೀಳಾ ಜೋಷಾಯಿ ಮತ್ತು ಮೇಘನಾ ರಾಜ್ ಇಬ್ಬರೂ ಕನ್ನಡ ಚಲನಚಿತ್ರ ರಂಗದ ನಟಿಯರಾಗಿದ್ದಾರೆ. ಮೇಘನಾರವರು ಹಲವು ಮಲಯಾಳಂ ಹಾಗೂ ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.[೨]

ಉದ್ಯೋಗ[ಬದಲಾಯಿಸಿ]

ಸುಂದರ್ ರಾಜ್ ಕನ್ನಡದಲ್ಲಿ ಸುಮಾರು ೧೮೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಫೋಷಕ ಪಾತ್ರಗಳಲ್ಲಿ ಕಾಣಿಸುತ್ತಿದ್ದ ಅವರು ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿಯೂ ಅಭಿನಯಿಸಿದ್ದಾರೆ. ಅವರು ಕನ್ನಡ ಸಿನೆಮಾ ಅಸೋಸಿಯೇಷನ್ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.[೩]

ಚಲನಚಿತ್ರಗಳು[ಬದಲಾಯಿಸಿ]

  • ಸ್ಟೈಲ್ ಕಿಂಗ್(೨೦೧೬)
  • ಆಟಗಾರ(೨೦೧೫)
  • ರಾವಣ(೨೦೦೯)
  • ಸಮರಸಿಂಹ ನಾಯ್ಕ(೨೦೦೫)
  • ನ್ಯಾಯಕ್ಕಾಗಿ ಸವಾಲ್(೧೯೯೪)
  • ವಿಜಯ ಕ್ರಾಂತಿ(೧೯೯೩)
  • ಮನ ಗೆದ್ದ ಮಗ(೧೯೯೨)
  • ಗಗನ(೧೯೮೯)
  • ಬದ್ರಕಾಳಿ(೧೯೮೭)
  • ಸಂಸಾರದ ಗುಟ್ಟು(೧೯೮೬)
  • ಒಂದೇ ರಕ್ತ(೧೯೮೪)
  • ನನ್ನ ದೇವರು(೧೯೮೨)
  • ಇಮ್ಮಡಿ ಪುಲಿಕೇಶಿ(೧೯೬೭)[೪]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-09-30. Retrieved 2018-09-15.
  2. https://timesofindia.indiatimes.com/topic/Sundar-Raj
  3. https://www.revolvy.com/page/Sundar-Raj?
  4. https://chiloka.com/celebrity/sundararajan