ವಿಷಯಕ್ಕೆ ಹೋಗು

ಎಸ್. ರಾಮಚಂದ್ರ ಐತಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ರಾಮಚಂದ್ರ
ಗುಲಾಬಿ ಟಾಕೀಸ್ ಚಿತ್ರೀಕರಣದ ವೇಳೆ, ೨೦೦೬
Born(೧೯೪೮-೧೧-೧೬)೧೬ ನವೆಂಬರ್ ೧೯೪೮
ಬೆಂಗಳೂರು, ಮೈಸೂರು ರಾಜ್ಯ
Diedಜನವರಿ 10, 2011(2011-01-10)
Education ಎಫ್.ಟಿ.ಐ.ಐ ಛಾಯಾಗ್ರಹಣ ಪದವೀಧರ
Occupationಛಾಯಾಗ್ರಾಹಕ
Awards

ಎಸ್. ರಾಮಚಂದ್ರ ಎಂದೇ ಖ್ಯಾತರಾದ ಶಿವರಾಮಯ್ಯ ರಾಮಚಂದ್ರ ಐತಾಳ (೧೬ ನವೆಂಬರ್ ೧೯೪೮ – ೧೦ ಜನವರಿ ೨೦೧೧) ಕನ್ನಡ ಚಿತ್ರರಂಗದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ಛಾಯಾಗ್ರಾಹಕ. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.[].

ಪರಿಚಯ

[ಬದಲಾಯಿಸಿ]

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.

ವೃತ್ತಿ

[ಬದಲಾಯಿಸಿ]

ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ಘಟಶ್ರಾದ್ಧವಲ್ಲದೆ, ನಂತರ ಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು. ನಿರ್ದೇಶಕ ರಾಮದಾಸ್‌ ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಚಿಕ್ಕ ವಯಸ್ಸಿನಿಂದಲೇ ಪೋಲಿಯೋದ ಕಾರಣ ತುಸು ಕುಂಟುನಡಿಗೆಯಿದ್ದರೂ ಅದನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು.

ಪ್ರಶಸ್ತಿ

[ಬದಲಾಯಿಸಿ]

೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರ ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ.

ಇವರು ಕ್ಯಾನ್ಸರಿನಿಂದ ಬಳಲುತ್ತಿದ್ದು ಜನವರಿ 10, 2011(2011-01-10)ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ ಹಾಗು ಪುತ್ರಿಯರು ಚೈತ್ರಾ ಮತ್ತು ವರ್ಷಾ.

ಚಿತ್ರಪಟ್ಟಿ

[ಬದಲಾಯಿಸಿ]

ಟಿವಿ ಚಿತ್ರ

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಇತರ ಸಂಗತಿ
1987 ಮಾಲ್ಗುಡಿ ಡೇಸ್ (ಟಿವಿ ಸರಣಿ) ಹಿಂದಿ ಛಾಯಾಗ್ರಹಣ
1988 ಸ್ಟೋನ್ ಬಾಯ್ (ಟಿವಿ ಸರಣಿ) ಹಿಂದಿ ಛಾಯಾಗ್ರಹಣ
1991 ಸ್ವಾಮಿ ಎಂಡ್ ಫ್ರೆಂಡ್ಸ್ (ಪಾರ್ಟ್ 1) ಹಿಂದಿ ಛಾಯಾಗ್ರಹಣ[]
2002 ಒಂದು ಸಾವಿನ ಸುತ್ತ (ಟೆಲಿ ಚಿತ್ರ) ಕನ್ನಡ ಛಾಯಾಗ್ರಹಣ
2002 ಸಾಕ್ಷಿ (ಟೆಲಿ ಚಿತ್ರ) ಕನ್ನಡ ಚಿತ್ರಕತೆ, ನಿರ್ದೇಶನ, ಛಾಯಾಗ್ರಹಣ
2003 ಗೃಹಭಂಗ (ಟಿವಿ ಸರಣಿ) ಕನ್ನಡ ಛಾಯಾಗ್ರಹಣ

ಚಲನಚಿತ್ರಗಳು

[ಬದಲಾಯಿಸಿ]

ಹಲವು ಪ್ರಶಸ್ತಿ ವಿಜೇತ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿರುವುದನ್ನು ತೋರುವ ಎಸ್. ರಾಮಚಂದ್ರ ಚಿತ್ರಗಳ ಅಪೂರ್ಣ ಪಟ್ಟಿ. []

ವರ್ಷ ಚಿತ್ರ ನಿರ್ದೇಶಕರು ಇತರ ಸಂಗತಿ
1972 ವಂಶವೃಕ್ಷ ಬಿ. ವಿ. ಕಾರಂತ & ಗಿರೀಶ್ ಕಾರ್ನಾಡ್ ಸಹಾಯಕ ಛಾಯಾಗ್ರಾಹಣ
1972 ಸಂಕಲ್ಪ ಪಿ. ವಿ. ನಂಜರಾಜ ಅರಸ್ ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ[]
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1974 ಕಂಕಣ ಎಂ.ಬಿ.ಎಸ್.ಪ್ರಸಾದ್ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1975 ಚೋಮನ ದುಡಿ ಬಿ. ವಿ. ಕಾರಂತ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1976 ಪಲ್ಲವಿ ಪಿ.ಲಂಕೇಶ್ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1976 ಋಷ್ಯಶೃಂಗ ವಿ.ಆರ್.ಕೆ.ಪ್ರಸಾದ್ ವಿಜೇತ : ರಾಷ್ಟ್ರೀಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
1977 ಘಟಶ್ರಾದ್ಧ ಗಿರೀಶ್ ಕಾಸರವಳ್ಳಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1978 ಗ್ರಹಣ ಟಿ. ಎಸ್. ನಾಗಾಭರಣ ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ(ಕಪ್ಪು/ಬಿಳುಪು)
ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1978 ಗೀಜಗನ ಗೂಡು ಟಿ. ಎಸ್. ರಂಗಾ
1978 ಹೊಂಬಿಸಿಲು ಗೀತಪ್ರಿಯ
1978 ಮಲಯ ಮಕ್ಕಳು ಕೆ. ಶಿವರಾಮ ಕಾರಂತ
1978 ಪರಸಂಗದ ಗೆಂಡೆತಿಮ್ಮ ಮಾರುತಿ ಶಿವರಾಂ
1979 ಆಕ್ರಮಣ ಗಿರೀಶ್ ಕಾಸರವಳ್ಳಿ
1979 ದಂಗೆ ಎದ್ದ ಮಕ್ಕಳು ಪಿ. ವಾದಿರಾಜ್
1979 ನಮ್ಮಮ್ಮನ ಸೊಸೆ ಪಿ. ವಾದಿರಾಜ್
1980 ಬಂಗಾರದ ಜಿಂಕೆ ಟಿ. ಎಸ್. ನಾಗಾಭರಣ
1980 ವಾತ್ಸಲ್ಯ ಪಥ ಎ. ಎಸ್. ಆರ್. ರಾವ್
1980 ಸಂಗೀತಾ ಚಂದ್ರಶೇಖರ ಕಂಬಾರ
1981 ಜಾಲ ಎಸ್. ರಂಗನಾಥ್
1981 ಚದುರಿದ ಚಿತ್ರಗಳು ಎನ್. ಟಿ. ಜಯರಾಮ ರೆಡ್ಡಿ
1983 ಬ್ಯಾಂಕರ್ ಮಾರ್ಗಯ್ಯ ಟಿ. ಎಸ್. ನಾಗಾಭರಣ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1983 ಅನ್ವೇಷಣೆ ಟಿ. ಎಸ್. ನಾಗಾಭರಣ
1983 ಗಂಧರ್ವಗಿರಿ ಎನ್. ಎಸ್. ಧನಂಜಯ (ದತ್ತು)
1983 ಮುದುಡಿದ ತಾವರೆ ಅರಳಿತು ಕೆ. ವಿ. ಜಯರಾಂ
1983 ನ್ಯಾಯ ಗೆದ್ದಿತು ಜೋ ಸೈಮನ್
1983 ಪ್ರೇಮಯುದ್ಧ ಟಿ. ಎಸ್. ನಾಗಾಭರಣ
1983 ಸಿಂಹಾಸನ ಸಿ. ಆರ್. ಸಿಂಹ
1984 ಒಲವೆ ಬದುಕು ಕೆ. ವಿ. ಜಯರಾಂ
1986 ಪ್ರೇಮ ಜಾಲ ಜೋ ಸೈಮನ್
1987 ಹುಲಿ ಹೆಬ್ಬುಲಿ ವಿಜಯ್
1987 ಅವಸ್ಥೆ ಕೃಷ್ಣ ಮಾಸಡಿ
1987 ನ್ಯಾಯಕ್ಕೆ ಶಿಕ್ಷೆ ಶ್ರೀನಿವಾಸ್
1987 ರೋಮಾಂಚನ ಜಿ. ಎಸ್. ಪಣಿಕ್ಕರ್
1987 ಸಂಪ್ರದಾಯ ಮಾಸ್ಟರ್ ಹಿರಣ್ಣಯ್ಯ
1988 ಭುಜಂಗಯ್ಯನ ದಶಾವತಾರ ಲೋಕೇಶ್ ಅತ್ಯುತ್ತಮ ರಾಷ್ಟ್ರೀಯ ಐಕ್ಯತಾ ಚಿತ್ರ ಪ್ರಶಸ್ತಿ
1988 ಆಸ್ಫೋಟ ಟಿ. ಎಸ್. ನಾಗಾಭರಣ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1988 ಮಾತೃದೇವೋಭವ ಎನ್. ಎಸ್. ಧನಂಜಯ (ದತ್ತು)
1989 ಹಾಂಕಾಂಗಿನಲ್ಲಿ ಏಜೆಂಟ್ ಅಮರ್ ಜೋ ಸೈಮನ್
1989 ಸಿಂಗಾರಿ ಬಂಗಾರಿ ಚಂದ್ರಹಾಸ ಆಳ್ವ
1990 ಸಂತ ಶಿಶುನಾಳ ಷರೀಫ ಟಿ. ಎಸ್. ನಾಗಾಭರಣ
1990 ಸ್ವಾಮಿ ಶಂಕರ್ ನಾಗ್ []
1991 ಮನೆ ಗಿರೀಶ್ ಕಾಸರವಳ್ಳಿ ವಿಜೇತ : ಕರ್ನಾಟಕ ರಾಜ್ಯ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1991 ಏಕ್ ಘರ್ ಗಿರೀಶ್ ಕಾಸರವಳ್ಳಿ ಭಾಷೆ : ಹಿಂದಿ
1992 ಉಂಡೂ ಹೋದ ಕೊಂಡೂ ಹೋದ ನಾಗತಿಹಳ್ಳಿ ಚಂದ್ರಶೇಖರ
1993 ಕಾದಂಬರಿ ಕೂಡ್ಲು ರಾಮಕೃಷ್ಣ
1994 ಯಾರಿಗೂ ಹೇಳ್ಬೇಡಿ ಕೂಡ್ಲು ರಾಮಕೃಷ್ಣ
1995 ನಿಲುಕದ ನಕ್ಷತ್ರ ಕೂಡ್ಲು ರಾಮಕೃಷ್ಣ
1995 ಕ್ರೌರ್ಯ ಗಿರೀಶ್ ಕಾಸರವಳ್ಳಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
1996 ಜನನಿ ಶ್ರೀವತ್ಸ ರಂಗನಾಥ್
1996 ಪೂಜ ಭಾರತಿ ಶಂಕರ್
1997 ಗಂಗವ್ವ ಗಂಗಾಮಾಯಿ ವಸಂತ ಮೊಕಾಶಿ []
1998 ದಿ ಔಟ್ ಹೌಸ್ ಲೆಸ್ಲೀ ಕರ್ವಾಲೋ []
1999 ದೇವೀರಿ ಕವಿತಾ ಲಂಕೇಶ್ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
1999 ಕಾನೂರು ಹೆಗ್ಗಡಿತಿ ಗಿರೀಶ್ ಕಾರ್ನಾಡ್ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2001 ಅಲೆಮಾರಿ ಕವಿತಾ ಲಂಕೇಶ್ []
2003 ಅರ್ಥ ಬಿ. ಸುರೇಶ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2004 ಹಸೀನಾ ಗಿರೀಶ್ ಕಾಸರವಳ್ಳಿ ರಾಷ್ಟ್ರೀಯ ಅತ್ಯುತ್ತಮ ಕುಟುಂಬ ಕಲ್ಯಾಣ ಚಿತ್ರ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2004 ಬೇರು ಪಿ. ಶೇಷಾದ್ರಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2004 ಪ್ರವಾಹ ಪಿ. ಆರ್. ರಾಮದಾಸ್ ನಾಯ್ಡು ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2005 ನಾಯಿ ನೆರಳು ಗಿರೀಶ್ ಕಾಸರವಳ್ಳಿ ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2005 ಮುಖಾಮುಖಿ ಎನ್. ಸುದರ್ಶನ್
2006 ಬನದ ನೆರಳು ಉಮಾಶಂಕರ್ ಸ್ವಾಮಿ ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2007 ಗುಲಾಬಿ ಟಾಕೀಸು ಗಿರೀಶ್ ಕಾಸರವಳ್ಳಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
ಕರ್ನಾಟಕ ರಾಜ್ಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
2008 ವಿಮುಕ್ತಿ ಪಿ. ಶೇಷಾದ್ರಿ ಅತ್ಯುತ್ತಮ ಕನ್ನಡ ಚಿತ್ರ ರಾಷ್ಟ್ರೀಯ ಪ್ರಶಸ್ತಿ
2008 ಮೊಗ್ಗಿನ ಜಡೆ ಪಿ. ಆರ್. ರಾಮದಾಸ್ ನಾಯ್ಡು
2008 ಹಾರು ಹಕ್ಕಿಯನೇರಿ ಏ. ಎನ್. ಪ್ರಸನ್ನ
2009 ದಾಟು ಕೆ. ಶಿವರುದ್ರಯ್ಯ
2009 ಮುಖಪುಟ ರೂಪ ಅಯ್ಯರ್ ಕರ್ನಾಟಕ ರಾಜ್ಯ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಲನಚಿತ್ರ ಪ್ರಶಸ್ತಿ
2009 ಕರಾವಳಿ ಹುಡುಗಿ ಕೂಡ್ಲು ರಾಮಕೃಷ್ಣ
2010 ಗಾಂಧಿ ಸ್ಮೈಲ್ಸ್ ಕ್ರಿಶ್ ಜೋಶಿ
2010 ಬೇಲಿ ಮತ್ತು ಹೊಲ ಪಿ. ಆರ್. ರಾಮದಾಸ್ ನಾಯ್ಡು
2010 ಹೆಜ್ಜೆಗಳು ಪಿ. ಆರ್. ರಾಮದಾಸ್ ನಾಯ್ಡು
2010 ಪ್ರಾರ್ಥನೆ ಸದಾಶಿವ ಶೆಣೈ

[]

ಉಲ್ಲೇಖಗಳು

[ಬದಲಾಯಿಸಿ]
  1. "Award winning cameraman S.Ramachandra dead". Archived from the original on 2012-10-18. Retrieved 2015-06-03.
  2. http://www.deccanherald.com/content/128146/s-ramachandra.html
  3. ೩.೦ ೩.೧ ೩.೨ ೩.೩ ೩.೪ http://www.bfi.org.uk/films-tv-people/4ce2baa487522
  4. https://Kannadamoviesinfo.wordpress.com
  5. Hero Behind the Frame
  6. http://www.bfi.org.uk/films-tv-people/4ce2b82a9e7a4