ಸಿ. ಆರ್. ಸಿಂಹ
(೧೯೪೨, ಜೂನ್, ೧೬-೨೦೧೪, ಫೆಬ್ರವರಿ, ೨೮)
ಸಿ. ಆರ್. ಸಿಂಹರವರು ಕರ್ನಾಟಕದ ನಾಟಕ ಹಾಗೂ ಚಲನಚಿತ್ರ ನಿರ್ದೇಶಕ ಮತ್ತು ನಟರು.
ಜನನ
[ಬದಲಾಯಿಸಿ]೧೯೪೨ ರ ಜೂನ್ ೧೬ ರಂದು ಚನ್ನಪಟ್ಟಣದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಶಾಸ್ತ್ರಿ. ತಾಯಿ ಲಲಿತಮ್ಮ. ತಮ್ಮ ೧೨ ನೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದರು. ೧೯೭೨ ರಲ್ಲಿ 'ನಟರಂಗ' ವೆಂಬ ಒಂದು ಕಲಾತಂಡವನ್ನು ಕಟ್ಟಿದ್ದರು. ೧೯೮೩ ರಲ್ಲಿ 'ವೇದಿಕೆ' ತಂಡವನ್ನು ಸ್ಥಾಪಿಸಿದರು. ಕಾಕನಕೋಟೆ, ತುಘಲಕ್, ಸಂಕ್ರಾಂತಿ, ಮೊದಲಾದ ಖ್ಯಾತ ನಾಟಕಗಳನ್ನು ನಿರ್ದೆಶಿಸಿದರು. ಸುಮಾರು ೧೫೦ ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಹಿಸಿದ್ದ ಸಿಂಹ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ೨೦೦೩ ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ
- ಕರ್ನಾಟಕ ರಾಜ್ಯ ಅಕ್ಯಾಡೆಮಿ ಪ್ರಶಸ್ತಿ
- ಕೆಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ
- ಆರ್ಯಭಟ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
ಚಲನಚಿತ್ರಗಳಲ್ಲಿ ಮತ್ತು ಟೆಲಿವಿಶನ್ ಧಾರಾವಾಹಿಗಳಲ್ಲಿ ನಟನೆ
[ಬದಲಾಯಿಸಿ]ಇಂದಿನ ರಾಮಾಯಣ, ನೀ ಬರೆದ ಕಾದಂಬರಿ, ಪರಮೇಶಿ ಪ್ರೇಮಪ್ರಸಂಗ,ರಾಯರು ಬಂದರುಮಾವನ ಮನೆಗೆ, ನೀ ತಂದ ಕಾಣಿಕೆ, ಮೊದಲಾದ ಕನ್ನಡ ಚಿತ್ರಗಳಲ್ಲಿ ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು, ಸುಪ್ರಸಿದ್ಧ ನಟ ನಿರ್ದೇಶಕ ಶಂಕರ್ ನಾಗ್ ರವರ,'ಮಾಲ್ಗುಡಿ ಡೇಸ್ ಟೆಲಿವಿಶನ್ ಧಾರಾವಾಹಿ'ಯಲ್ಲೂ ಅಭಿನಯಿಸಿದ್ದರು.
ನಟಿಸಿದ ಚಿತ್ರಗಳು
[ಬದಲಾಯಿಸಿ]• ವೀರ
• ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
• ಗಾಂಧಿ ಸ್ಮೈಲ್ಸ್
• ಐದೊಂದ್ಲ ಐದು
• ಗಾನ ಬಜಾನಾ
• ಪೃಥ್ವಿ
• ರಸಋಷಿ ಕುವೆಂಪು
• ಸವಾರಿ
• ಸ್ವತಂತ್ರ ಪಾಳ್ಯ
• ಚಿಕ್ಕಮಗಳೂರ ಚಿಕ್ಕಮಲ್ಲಿಗೆ
• ಆತ್ಮೀಯ
• ಹನಿ ಹನಿ
• ಮಾತಾಡ್ ಮಾತಾಡು ಮಲ್ಲಿಗೆ
• ಲಂಚ ಸಾಮ್ರಾಜ್ಯ
• ಗಂಡುಗಲಿ ಕುಮಾರರಾಮ
• ಪತಿ ಪತ್ನಿ ಅವಳು
• ಓಂ ಗಣೇಶ್
• ದೇವರ ಮಕ್ಕಳು
• ಬಲರಾಮ
• ನನ್ನಾಸೆಯ ಹೂವೇ
• ಆಹಾ
• ಟುವ್ವಿ ಟುವ್ವಿ ಟುವ್ವಿ
• ರಂಭೆ ನೀ ವಯ್ಯಾರದ ಗೊಂಬೆ
• ಕುಬೇರ
• ಗಡಿಬಿಡಿ ಕೃಷ್ಣ
• ಸುವ್ವಿ ಸುವ್ವಲಾಲಿ
• ಕುರುಬನ ರಾಣಿ
• ಜಗದೀಶ್ವರಿ
• ಮೊಮ್ಮಗ
• ಲಾಲಿ
• ಕಂಡಲ್ಲಿ ಗುಂಡು
• ಮುದ್ದಿನ ಕಣ್ಮಣಿ
• ಜಾಕೀಚಾನ್
• ಅಮೆರಿಕಾ ಅಮೆರಿಕಾ
• ಜೇನಿನ ಹೊಳೆ
• ಛೂಬಾಣ
• ಶಿವಸೈನ್ಯ
• ಎಮರ್ಜೆನ್ಸಿ
• ಹಿಮಪಾತ
• ತುಂಬಿದ ಮನೆ
• ಕೋಣ ಈದೈತೆ
• ಕೆರಳಿದ ಸರ್ಪ
• ಚಮತ್ಕಾರ
• ಅಪೂರ್ವ ಜೋಡಿ
• ರಾಯರು ಬಂದರು ಮಾವನ ಮನೆಗೆ
• ಬಹದ್ದೂರ್ ಹೆಣ್ಣು
• ಝೇಂಕಾರ
• ಬೆಳ್ಳಿಯಪ್ಪ ಬಂಗಾರಪ್ಪ
• ಕ್ಷೀರಸಾಗರ
• ಎಸ್. ಪಿ. ಭಾರ್ಗವಿ
• ನವತಾರೆ
• ನಕ್ಕಳಾ ರಾಜಕುಮಾರಿ
• ಪೋಲಿ ಕಿಟ್ಟಿ
• ಕಿಲಾಡಿ ತಾತ
• ನಮ್ಮೂರ ಹಮ್ಮೀರ
• ಕೃಷ್ಣ ನೀ ಕುಣಿದಾಗ
• ಹೊಸ ಕಾವ್ಯ
• ಪರಶುರಾಮ್
• ಸಂಕ್ರಾಂತಿ
• ಶರವೇಗದ ಸರದಾರ
• ಅವತಾರ ಪುರುಷ
• ಅಮಾನುಷ
• ಅವನೇ ನನ್ನ ಗಂಡ
• ರಣರಂಗ
• ಕಾಡಿನ ಬೆಂಕಿ
• ಬಾಳೊಂದು ಭಾವಗೀತೆ
• ನ್ಯೂಡೆಲ್ಲಿ
• ಶಿವ ಮೆಚ್ಚಿದ ಕಣ್ಣಪ್ಪ
• ಬೇಡಿ
• ದಿಗ್ವಿಜಯ
• ಬೇಟೆ
• ನೆನಪಿನ ದೋಣಿ
• ಮದುವೆ ಮಾಡು ತಮಾಷೆ ನೋಡು
• ಬೀಗರ ಪಂದ್ಯ
• ನಾ ನಿನ್ನ ಪ್ರೀತಿಸುವೆ
• ನೀ ತಂದ ಕಾಣಿಕೆ
• ಜೀವನಚಕ್ರ
• ತಾಯಿ ತಂದೆ
• ನೀ ಬರೆದ ಕಾದಂಬರಿ
• ಸಾವಿರ ಸುಳ್ಳು
• ಬ್ರಹ್ಮಗಂಟು
• ಪರಮೇಶಿ ಪ್ರೇಮ ಪ್ರಸಂಗ
• ತಾಯಿ ಕನಸು
• ರಾಮಾಪುರದ ರಾವಣ
• ಇಂದಿನ ರಾಮಾಯಣ
• ಸುಖ ಸಂಸಾರಕ್ಕೆ 12 ಸೂತ್ರಗಳು
• ಸಿಂಹಾಸನ
• ಬರ
• ಅಜಿತ್
• ಪ್ರಾಯ ಪ್ರಾಯ ಪ್ರಾಯ
• ಭೂಮಿಗೆ ಬಂದ ಭಗವಂತ
• ಚಿತೆಗೂ ಚಿಂತೆ
• ಅನುರೂಪ
• ಕನ್ನೇಶ್ವರ ರಾಮ
• ಸಂಕಲ್ಪ
• ಸಂಸ್ಕಾರ
ನಾಟಕಗಳು
[ಬದಲಾಯಿಸಿ]- ತಲೆದಂಡ
- ತುಘಲಕ್
- ಕಾಕನಕೋಟೆ
- ಟಿಪಿಕಲ್ ಟಿಪಿ ಕೈಲಾಸಂ
ನಿಧನ
[ಬದಲಾಯಿಸಿ]ಹಿರಿಯ ನಟ ಸಿಂಹ, ಬಹಳ ವರ್ಷಗಳಿಂದ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಸೇವಾಕ್ಷೇತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅದು ಫಲಕಾರಿಯಾಗದೆ, ೨೦೧೪ ರ, ಫೆಬ್ರವರಿ, ೨೮, ಶುಕ್ರವಾರದಂದು ಕೊನೆಯುಸಿರೆಳೆದರು.[[೧]] ಅವರು ಪತ್ನಿ,ಶಾರದಾಮಣಿ, ಮಗ ಋತ್ವಿಕ್, ಸೊಸೆ ಜಸ್ಲಿನ್, ಮತ್ತು ಮಗಳು ಅಖಿಲಾ,ಅಳಿಯ ದಿನೇಶ್ ರವಿರಾಜ್, ಸಹೋದರ ನಟ ಶ್ರೀನಾಥ್, ಮತ್ತು ಅಸಂಖ್ಯಾತ ಬಂಧುಗಳು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ೧, ಮಾರ್ಚ್, ಶನಿವಾರದಂದು ಬೆಂಗಳೂರಿನ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- [[೨]]