ವಿಷಯಕ್ಕೆ ಹೋಗು

ಕಬೀರ್ ಬೇಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kabir Bedi

Kabir Bedi at the launch of a film in 2009.
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1946-01-16) ೧೬ ಜನವರಿ ೧೯೪೬ (ವಯಸ್ಸು ೭೮)
Punjab, India
ವೃತ್ತಿ Actor, Television presenter
ವರ್ಷಗಳು ಸಕ್ರಿಯ 1971–present
ಪತಿ/ಪತ್ನಿ Protima Bedi (divorced)
Susan Humphreys (divorced)
Nikki Bedi (divorced)

ಕಬೀರ್ ಬೇಡಿ (ಜನನ 1946ರ ಜನವರಿ 16ರಂದು) ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿರುವ ಭಾರತದ ಓರ್ವ ದೂರದರ್ಶನ ಹಾಗೂ ಚಲನಚಿತ್ರ ನಟ. ಅವನ ಚಲನಚಿತ್ರ ಹಾಗೂ ದೂರದರ್ಶನ ಸಂಬಂಧಿ ವೃತ್ತಿಜೀವನವು ಭಾರತ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಯುರೋಪ್‌‌ನ ಅನೇಕ ದೇಶಗಳಾದ್ಯಂತ ವ್ಯಾಪಿಸಿದೆ. ....Taj Mahal: An Eternal Love Story ನಲ್ಲಿನ ಷಹಜಹಾನ್‌ ಸಾಮ್ರಾಟನ ಪಾತ್ರದಿಂದಾಗಿ ಆತ ಗಮನ ಸೆಳೆದಿದ್ದಾನೆ. ಕಿರು TV ಸರಣಿಯಲ್ಲಿನ ಸಂದೋಕನ್‌ ಎಂಬ ಕಡಲುಗಳ್ಳನ ಪಾತ್ರ ನಿರ್ವಹಣೆಯಿಂದಾಗಿ ಮತ್ತು 1983ರಲ್ಲಿ ಬಂದ ಜೇಮ್ಸ್‌ ಬಾಂಡ್‌ ಚಲನಚಿತ್ರವಾದ ಆಕ್ಟೋಪಸಿ ಯಲ್ಲಿ ಆತ ನಿರ್ವಹಿಸಿದ ಗೋಬಿಂದನ ಪಾತ್ರದಿಂದಾಗಿ ಆತ ಯುರೋಪ್‌ನಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದಾನೆ. ನಿರ್ದಿಷ್ಟವಾಗಿ ಹೇಳುವುದಾದರೆ ಅವನು ಇಟಲಿಯಲ್ಲಿ ಅತ್ಯಂತ ಜನಪ್ರಿಯ ಹಾಗೂ ಇಟಲಿ ಭಾಷೆಯನ್ನು ಆತ ನಿರರ್ಗಳವಾಗಿ ಮಾತಾಡಬಲ್ಲ.

ಕಬೀರ್ ಬೇಡಿ ಈಗಲೂ ಭಾರತದಲ್ಲಿ ನೆಲೆಗೊಂಡಿದ್ದು, ಮುಂಬಯಿಯಲ್ಲಿ ವಾಸಿಸುತ್ತಿದ್ದಾನೆ.

ಜೀವನ ಚರಿತ್ರೆ

[ಬದಲಾಯಿಸಿ]

ಆರಂಭಿಕ ಜೀವನ

[ಬದಲಾಯಿಸಿ]

ಭಾರತದಲ್ಲಿನ ಪಂಜಾಬಿ ಕುಟುಂಬವೊಂದರಲ್ಲಿ ಮೂವರು ಮಕ್ಕಳ ಪೈಕಿ ಒಬ್ಬನಾಗಿ ಜನಿಸಿದವನು ಕಬೀರ್ ಬೇಡಿ. ಬ್ರಿಟಿಷ್‌ ವಸಾಹತು ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಹುಟ್ಟಿಕೊಂಡ ಭಾರತದ ಹೋರಾಟಕ್ಕೆ ಅವನ ಕುಟುಂಬವು ತನ್ನನ್ನು ಸಮರ್ಪಿಸಿಕೊಂಡಿತ್ತು. ಅವನ ತಾಯಿಯಾದ ಫ್ರೇದಾ ಬೇಡಿಯು ಕಾಲಾನಂತರದಲ್ಲಿ ಟಿಬೆಟ್ಟಿನ ಬೌದ್ಧಮತಕ್ಕೆ ಮತಾಂತರಗೊಂಡಳು.[] ಅವನ ತಂದೆಯಾದ ಬಾಬಾ ಪ್ಯಾರೆ ಲಾಲ್‌ ಬೇಡಿ, ಸಿಖ್‌ ಧಾರ್ಮಿಕಪಂಥಕ್ಕೆ ಸೇರಿದ್ದ ಓರ್ವ ಲೇಖಕ ಮತ್ತು ದಾರ್ಶನಿಕನಾಗಿದ್ದ ಮತ್ತು ಅವನ ವಂಶವು ಸಿಖ್ಖರ ಮೊದಲ ಗುರುವಿನಲ್ಲಿ ತನ್ನ ಬೇರುಗಳನ್ನು ಕಂಡುಕೊಂಡಿತು.[]

ಕಬೀರ್ ಬೇಡಿ ತನ್ನ ಶಾಲಾ ಶಿಕ್ಷಣವನ್ನು ನೈನಿತಾಲ್‌ನಲ್ಲಿನ ಷೇರ್‌ವುಡ್‌ ಕಾಲೇಜಿನಲ್ಲಿ ಪಡೆದ.

ವೈಯಕ್ತಿಕ ಜೀವನ

[ಬದಲಾಯಿಸಿ]

ಬೇಡಿಯು ಮೂರು ಬಾರಿ ಮದುವೆಯಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದಾನೆ. ಅವರೆಂದರೆ, ಪೂಜಾ, ಸಿದ್ಧಾರ್ಥ್‌ ಮತ್ತು ಆಡಂ. ಓರ್ವ ಒಡಿಸ್ಸಿ ನೃತ್ಯಪಟುವಾಗಿದ್ದ ಪ್ರೊತಿಮಾ ಬೇಡಿಯನ್ನು ಅವನು ಮದುವೆಯಾಗಿದ್ದ, ಮತ್ತು ಅವರ ಮಗಳಾದ ಪೂಜಾ ಬೇಡಿಯು ಹಿಂದಿ ಚಲನಚಿತ್ರಗಳಲ್ಲಿ ಓರ್ವ ನಟಿಯಾಗಿ ಬೆಳೆದಳು. ಈಗ ಅವಳು ಒಂದು ನಿಯತಕಾಲಿಕ/ವೃತ್ತಪತ್ರಿಕೆಯಲ್ಲಿ ಅಂಕಣಗಾರ್ತಿಯಾಗಿದ್ದಾಳೆ. USAಯಲ್ಲಿನ ವಿಶ್ವವಿದ್ಯಾಲಯಕ್ಕೆ ತೆರಳಿದ್ದ ಅವರ ಮಗನಾದ ಸಿದ್ಧಾರ್ಥ್‌, ಸ್ಕೀಜೋಫ್ರೇನಿಯಾದ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದ್ದ ಮತ್ತು 1997ರಲ್ಲಿ ತನ್ನ 26ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ.

ಪ್ರೊತಿಮಾಳೊಂದಿಗಿನ ಅವನ ವಿವಾಹ ಬಂಧನವು ಮುರಿದುಬೀಳುತ್ತಿದ್ದಂತೆ, ಆತ ಪರ್ವೀನ್‌ ಬಾಬಿಯೊಂದಿಗೆ ಭರ್ಜರಿಯಾಗಿ ಒಂದು ಸಂಬಂಧವನ್ನು ಶುರುಮಾಡಿದ. ಅವರೆಂದೂ ಮದುವೆಯಾಗಲಿಲ್ಲ. ನಂತರ ಆತ ಸುಸಾನ್‌ ಹಂಫ್ರೇಸ್‌ ಎಂಬ ಬ್ರಿಟಿಷ್‌ ಸಂಜಾತೆ ಫ್ಯಾಷನ್‌ ವಿನ್ಯಾಸಕಿಯನ್ನು ಮದುವೆಯಾದ, ಮತ್ತು ಅವರ ಮಗನಾದ ಆಡಂ ಬೇಡಿ ಓರ್ವ ಅಂತರರಾಷ್ಟ್ರೀಯ ರೂಪದರ್ಶಿಯಾಗಿದ್ದಾನೆ. ಆಡಂ ಬೇಡಿ ಇತ್ತೀಚೆಗಷ್ಟೇ ರೋಮಾಂಚಕಾರಿ ಚಿತ್ರವೊಂದರಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್‌ಗೆ ತನ್ನ ಪಾದಾರ್ಪಣ ಮಾಡಿದ್ದಾನೆ. ಆ ಚಿತ್ರದ ಹೆಸರು: ಹಲೋ? ಕೌನ್‌ ಹೈ! .[] ಸುಸಾನ್‌ಳೊಂದಿಗಿನ ಈ ಮದುವೆಯೂ ವಿಚ್ಛೇದನದಲ್ಲಿ ಕೊನೆಗೊಂಡಿತು.

1990ರ ದಶಕದ ಅಂತ್ಯದಲ್ಲಿ, ನಿಕ್ಕಿ ಬೇಡಿ ಎಂಬ TV ಮತ್ತು ರೇಡಿಯೋ ನಿರೂಪಕಿಯನ್ನು ಬೇಡಿಯು ಮದುವೆಯಾದ. ಅವರು ಮಕ್ಕಳನ್ನು ಹೊಂದಿರಲಿಲ್ಲ ಮತ್ತು 2005ರಲ್ಲಿ ಅವರು ವಿಚ್ಛೇದನವನ್ನು ಪಡೆದರು. ತೀರಾ ಇತ್ತೀಚೆಗೆ, ಪರ್ವೀನ್‌ ದುಸಾಂಜ್‌ ಎಂಬ ಲಂಡನ್‌-ಮೂಲದ ಮಹಿಳೆಯೊಂದಿಗೆ ಬೇಡಿಯು ಸಂಬಂಧ ಹೊಂದಿದ್ದಾನೆ.[]

ಕಬೀರ್ ಬೇಡಿ ಬರ್ಮಾದಲ್ಲಿನ ಸ್ವಾತಂತ್ರ್ಯ ಹೋರಾಟದ ಓರ್ವ ಅಚಲ ಬೆಂಬಲಿಗನಾಗಿದ್ದಾನೆ, ಮತ್ತು UKಯ ಬರ್ಮಾ ಆಂದೋಲನದ ಓರ್ವ ಅಧಿಕೃತ ರಾಯಭಾರಿಯಾಗಿ ರೂಪುಗೊಂಡಿದ್ದಾನೆ.[]

ವೃತ್ತಿ ಜೀವನ

[ಬದಲಾಯಿಸಿ]

ಕಬೀರ್ ಬೇಡಿ ತನ್ನ ವೃತ್ತಿಜೀವನವನ್ನು ಭಾರತೀಯ ರಂಗಭೂಮಿಯಲ್ಲಿ ಶುರುಮಾಡಿದ ಮತ್ತು ನಂತರದಲ್ಲಿ ಹಿಂದಿ ಚಲನಚಿತ್ರಗಳೆಡೆಗೆ ಸಾಗಿದ. ಒಂದೆರಡು ಹಾಲಿವುಡ್‌ ಚಲನಚಿತ್ರಗಳಲ್ಲೂ ಹಾಗೂ ಯುರೋಪ್‌ನಲ್ಲಿನ ಕೆಲವೊಂದು ದೂರದರ್ಶನ ಕಾರ್ಯಕ್ರಮಗಳಲ್ಲೂ ಅವನು ಕಾರ್ಯನಿರ್ವಹಿಸಿದ್ದಾನೆ. ವಿಶೇಷವಾಗಿ ಯುರೋಪ್‌ನಲ್ಲಿ ಅವನು ಜನಪ್ರಿಯನಾಗಿದ್ದಾನೆ.

ರಂಗಮಂಚದ ಮೇಲಿನ ಅಭಿನಯ

[ಬದಲಾಯಿಸಿ]

ಓರ್ವ ರಂಗಮಂಚದ ನಟನಾಗಿ, ಕಬೀರ್‌ ಬೇಡಿಯು ಷೇಕ್ಸ್‌ಪಿಯರ್‌ಒಥೆಲೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ತುಘಲಕ್‌ ಎಂಬ ಭಾರತದ ಓರ್ವ ಐತಿಹಾಸಿಕ ಹುಚ್ಚುದೊರೆಯ ಪಾತ್ರದಲ್ಲಿ; ಮತ್ತು ದಿ ವಲ್ಚರ್ಸ್‌ ನಲ್ಲಿ ಓರ್ವ ಆತ್ಮಘಾತುಕ ಮದ್ಯವ್ಯಸನಿಯಾಗಿ ಅವನು ಕಾಣಿಸಿಕೊಂಡಿದ್ದಾನೆ. ಲಂಡನ್‌‌ನಲ್ಲಿ ಆತ ದಿ ಫಾರ್‌ ಪೆವಿಲಿಯನ್ಸ್‌‌ ನಲ್ಲೂ ಕಾಣಿಸಿಕೊಂಡ. ಇದು M. M. ಕಾಯೆಯ ಕಾದಂಬರಿಯ ವೆಸ್ಟ್‌ ಎಂಡ್‌ ವಲಯದ ಒಂದು ಸಂಗೀತಮಯ ರೂಪಾಂತರವಾಗಿದ್ದು, ಷಾಫ್ಟ್ಸ್‌ಬರಿ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತು.

ಚಲನಚಿತ್ರ ವೃತ್ತಿಜೀವನ

[ಬದಲಾಯಿಸಿ]

ಜೇಮ್ಸ್‌ ಬಾಂಡ್‌ ಚಲನಚಿತ್ರವಾದ ಆಕ್ಟೋಪಸಿ ಯಲ್ಲಿ, ಗೋಬಿಂದ ಎಂಬ, ಖಳನಾಯಕನ ಸಹಾಯಕನ ಪಾತ್ರವನ್ನು ಅವನು ನಿರ್ವಹಿಸಿದ. ಆರಂಭದಿಂದ ಅಂತ್ಯದವರೆಗೂ ರೋಜರ್‌ ಮೂರ್‌‌ನೊಂದಿಗೆ ಸೆಣಸುವುದು ಅವನ ಪಾತ್ರವಾಗಿತ್ತು.

60ಕ್ಕೂ ಹೆಚ್ಚಿನ ಭಾರತೀಯ ಬಾಲಿವುಡ್‌ ಚಲನಚಿತ್ರಗಳಲ್ಲಿ ಕಬೀರ್‌ ನಟಿಸಿದ್ದಾನೆ. ಐತಿಹಾಸಿಕ ಮಹಾಕಾವ್ಯವಾದ .....Taj Mahal: An Eternal Love Story ದಲ್ಲಿ, ಷಹಜಹಾನ್‌ ಸಾಮ್ರಾಟನಾಗಿ ಕಬೀರ್‌ ಕಾಣಿಸಿಕೊಂಡ. ಬಾಲಿವುಡ್‌ ಚಿತ್ರಗಳಲ್ಲಿ ಅವನು ಕಾಣಿಸಿಕೊಂಡ ಇತರ ಪಾತ್ರಗಳಲ್ಲಿ, ರಾಜ್‌ ಖೋಸ್ಲಾಕಚ್ಚೆ ಧಾಗೆ , ರಾಕೇಶ್‌ ರೋಷನ್‌‌ಖೂನ್‌ ಭರೀ ಮಾಂಗ್‌ ಮತ್ತು ಫರಾಹ್‌ ಖಾನ್‌‌ಮೈ ಹೂಂ ನಾ ಚಿತ್ರಗಳ ಪಾತ್ರಗಳು ಸೇರಿವೆ. ಭಾರತೀಯ TVಯಲ್ಲಿನ ಡೈರೆಕ್ಟರ್ಸ್‌ ಕಟ್‌ ಎಂಬ ಹೆಸರಿನ, ತನ್ನದೇ ಸ್ವಂತದ ಚಲನಚಿತ್ರರಂಗಕ್ಕೆ ಸಂಬಂಧಿಸಿದ ಮಾತುಕತೆಗಳ ಕಾರ್ಯಕ್ರಮದಲ್ಲಿ ಆತ ಕಾಣಿಸಿಕೊಂಡಿದ್ದ. ಇದು ದೇಶದ ಅಗ್ರಗಣ್ಯ ನಿರ್ದೇಶಕರನ್ನು ಸಂದರ್ಶಿಸುವುದನ್ನು ಒಳಗೊಂಡಿದ್ದ 13-ಭಾಗಗಳ ವಿಶೇಷ ಸರಣಿಯಾಗಿತ್ತು.

ಪ್ರಸ್ತುತ, ಹೃತಿಕ್‌ ರೋಷನ್‌ (ಕೈಟ್ಸ್‌ ), ಗೋವಿಂದಾ (ಷೋಮನ್‌ ), ಮತ್ತು ಅಕ್ಷಯ್‌ ಕುಮಾರ್‌ (ಬ್ಲೂ ) ಮೊದಲಾದ ಕಲಾವಿದರೊಂದಿಗೆ ಕಬೀರ್‌ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾನೆ.[] ಕಾಮಗಾಟ ಮಾರು ಎಂಬ ಹೆಸರಿನ ದೀಪಾ ಮೆಹ್ತಾಳ ಮುಂದಿನ ಚಲನಚಿತ್ರದಲ್ಲಿ ಆತ ಅಮಿತಾಭ್‌ ಬಚ್ಚನ್‌ ಹಾಗೂ ಜಾನ್‌ ಅಬ್ರಹಾಂರೊಂದಿಗೆ ಕಾಣಿಸಿಕೊಳ್ಳಲಿದ್ದಾನೆ.

ಕೊಲಂಬಿಯಾ ಪಿಕ್ಚರ್ಸ್‌‌ದಿ ಬೀಸ್ಟ್‌ ಆಫ್‌ ವಾರ್‌ ಎಂಬ ಚಲನಚಿತ್ರದಲ್ಲಿ ಕಬೀರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಆಫ್ಘಾನಿಸ್ತಾನದಲ್ಲಿನ ರಷ್ಯಾದ ಯುದ್ಧವನ್ನು ಕುರಿತಾದ ಈ ಚಲನಚಿತ್ರವನ್ನು ಕೆವಿನ್‌ ರೆನಾಲ್ಡ್ಸ್‌ ನಿರ್ದೇಶಿಸಿದ್ದಾನೆ. ಇಷ್ಟೇ ಅಲ್ಲದೇ, ಮಾರ್ಕೋ ಪೋಂಟಿ ನಿರ್ದೇಶಿಸಿದ ಆಂಡಾಟಾ ರಿಟೊರ್ನೊ ಎಂಬ ಇಟಲಿ ಭಾಷೆಯ ಚಿತ್ರದಲ್ಲಿ ಕಬೀರ್‌ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದು, ಇದು ಪ್ರತಿಷ್ಠಿತ ಡೇವಿಡ್‌ ಡಿ ಡೊನಾಟೆಲ್ಲೋ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ದೂರದರ್ಶನದ ವೃತ್ತಿಜೀವನ

[ಬದಲಾಯಿಸಿ]

ಅಮೆರಿಕಾದ ದೂರದರ್ಶನದ ಪರಮಾವಧಿಯ ಮತ್ತು ದಿನದ ಅವಧಿಯ ಸರಣಿಗಳು ಮತ್ತು ಕಿರುಸರಣಿಗಳಲ್ಲಿ ಕಬೀರ್‌ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಹಾಲ್‌ಮಾರ್ಕ್‌ನ ಆಫ್ರಿಕಾದ ಮಹಾಕಾವ್ಯ ಫರ್ಬಿಡನ್‌ ಟೆರಿಟರಿ ಹಾಗೂ ಕೆನ್‌ ಫೊಲೆಟ್‌ಆನ್‌ ವಿಂಗ್ಸ್‌ ಆಫ್‌ ಈಗಲ್ಸ್‌ ಹಾಗೂ ರೆಡ್‌ ಈಗಲ್‌‌ ಕೂಡಾ ಈ ಸರಣಿಯಲ್ಲಿ ಸೇರಿವೆ. NBCಗಾಗಿ ನಿರ್ಮಾಣಗೊಂಡ ದಿ ಲಾಸ್ಟ್‌ ಎಂಪೈರ್‌ ನಲ್ಲಿ ಆತ ಫ್ರೈಯಾರ್‌ ಸ್ಯಾಂಡ್ಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಡೈನಾಸ್ಟಿ , ಮರ್ಡರ್‌ ಷೀ ರೋಟ್‌ , ಮ್ಯಾಗ್ನಮ್‌, P.I. , ಹಂಟರ್‌ , ನೈಟ್‌ ರೈಡರ್‌ ಮತ್ತು ...Highlander: The Series ಇವೇ ಮೊದಲಾದವು ಆತ ಪಾತ್ರ ನಿರ್ವಹಿಸಿದ ಇತರ ಸರಣಿಗಳಾಗಿವೆ.

ಯುರೋಪ್‌ನಲ್ಲಿ, ಸಂದೋಕನ್‌ ಪಾತ್ರವು ಅವನಿಗೆ ಅತೀವವಾದ ಯಶಸ್ಸನ್ನು ತಂದುಕೊಟ್ಟಿತು. ಬ್ರಿಟಿಷ್‌ ವಸಾಹತು ಕಾಲಗಳಲ್ಲಿನ ಅವಧಿಯ ಏಷ್ಯಾದ ಓರ್ವ ಸಾಹಸ ಪ್ರಣಯಶೀಲ ಕಡಲುಗಳ್ಳನ ಸುದೀರ್ಘ ಕಥೆಯನ್ನೊಳಗೊಂಡಿದ್ದ ಇದು ಒಂದು ಇಟಲಿ-ಜರ್ಮನ್‌-ಫ್ರೆಂಚ್‌ TV ಸರಣಿಯಾಗಿದ್ದು, ಯುರೋಪ್‌ನಾದ್ಯಂತದ ವೀಕ್ಷಕವೃಂದದ ದಾಖಲೆಗಳನ್ನು ಅದು ಮುರಿಯಿತು‌.[ಸೂಕ್ತ ಉಲ್ಲೇಖನ ಬೇಕು]. ಇಟಲಿ ದೇಶದ ಅತಿದೊಡ್ಡ ಪ್ರಸಾರಕನಾದ RAI TVಯಲ್ಲಿ ಪ್ರಸಾರವಾಗುವ ಅನ್‌ ಮೆಡಿಕೊ ಇನ್‌ ಫೆಮಿಗ್ಲಿಯಾ ಎಂಬ ಇಟಲಿ ಭಾಷೆಯಲ್ಲಿನ ಪರಮಾವಧಿಯ ಒಂದು ದೂರದರ್ಶನ ಸರಣಿಯಲ್ಲೂ ಸಹ ಕಬೀರ್‌ ಇತ್ತೀಚೆಗೆ ಕಾಣಿಸಿಕೊಂಡಿದ್ದಾನೆ.

ಅಬ್ರಹಾಂ ಎಂಬ ಪ್ರಾಚೀನಕಾಲದ ಮಾನವ ಕುಲಜನಕನ ಪಾತ್ರದಲ್ಲಿನ ಆತನ ಒಂದು ಪ್ರಭಾವಪೂರ್ಣ ಪಾತ್ರನಿರ್ವಹಣೆಯು ಒಂದು ಅತ್ಯಂತ ವಿಭಿನ್ನ ಹಾಗೂ ಇಲ್ಲಿಯವರೆಗೆ ಬಹಿರಂಗಗೊಳ್ಳದಿದ್ದ ಅವನ ಅಭಿನಯದ ಮತ್ತೊಂದು ಮಗ್ಗುಲನ್ನು ಪರಿಚಯಿಸಿತು. ಅಬ್ರಹಾಂನ ಯುವ ವಯಸ್ಸಿನ ಹಾಗೂ ವಯಸ್ಸಾದವನ ಪಾತ್ರಗಳೆರಡರಲ್ಲೂ ಅವನು ಹೀಗೆ ಕಾಣಿಸಿಕೊಂಡಿದ್ದು ಭಾರತದ ದೂರದರ್ಶನದಲ್ಲಿ 1995ರಲ್ಲಿ ಪ್ರಸಾರವಾದ ಬೈಬಲ್‌ ಕಿ ಕಹಾನಿಯಾ ಎಂಬ ಒಂದು ಬೃಹತ್‌ ಸರಣಿಯಲ್ಲಿ. ಸರಣಿಯ ನಿರ್ಮಾಪಕರು ಹಾಗೂ ಪ್ರಾಯೋಜಕರ ನಡುವೆ ತಲೆದೋರಿದ ತೊಂದರೆಗಳ ಪರಿಣಾಮವಾಗಿ ಈ ಸರಣಿಯು ನಂತರದಲ್ಲಿ ಮುಂದುವರಿಯಲಿಲ್ಲ.

ಒಂದು ವರ್ಷಕ್ಕೂ ಹೆಚ್ಚಿನ ಅವಧಿಯ ನಂತರ ದಿ ಬೋಲ್ಡ್‌ ಅಂಡ್‌ ದಿ ಬ್ಯೂಟಿಫುಲ್‌‌ ಕಾರ್ಯಕ್ರಮದಲ್ಲಿ ಕಬೀರ್‌ ಕಾಣಿಸಿಕೊಂಡ. ವಿಶ್ವದಲ್ಲಿನ ಎರಡನೇ ಅತಿ-ಹೆಚ್ಚಿನ ವೀಕ್ಷಣೆಗೊಳಗಾದ ಈ ಕಾರ್ಯಕ್ರಮವನ್ನು 149 ದೇಶಗಳಿಗೆ ಸೇರಿದ ಒಂದು ಶತಕೋಟಿಗೂ ಹೆಚ್ಚಿನ ಜನರು ವೀಕ್ಷಿಸಿದರು.

ಪ್ರಶಸ್ತಿಗಳು ಮತ್ತು ಸಾಧನೆಗಳು

[ಬದಲಾಯಿಸಿ]

ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಅಂಡ್‌ ಸೈನ್ಸಸ್‌ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಬೀರ್‌ ಮತದಾನದ ಹಕ್ಕನ್ನು ಹೊಂದಿರುವ ಓರ್ವ ಸದಸ್ಯನಾಗಿದ್ದು, ಈ ಸದಸ್ಯರು ಆಸ್ಕರ್‌ ಪ್ರಶಸ್ತಿಗಳನ್ನು ಸಾದರಪಡಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ಗೂ ಸಹ ಅವನು ಓರ್ವ ಮತದಾನದ ಹಕ್ಕಿರುವ ಸದಸ್ಯನಾಗಿದ್ದಾನೆ.

ಯುರೋಪ್‌ ಮತ್ತು ಭಾರತದಾದ್ಯಂತ ಹಲವಾರು ಚಲನಚಿತ್ರ, ಜಾಹೀರಾತು ಮತ್ತು ಜನಪ್ರಿಯತೆ ಸಂಬಂಧಿ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ.[]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಚಲನಚಿತ್ರಗಳು

[ಬದಲಾಯಿಸಿ]

ಕಿರುತೆರೆ

[ಬದಲಾಯಿಸಿ]

ಮತದಾನದ ಸದಸ್ಯತ್ವಗಳು

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ಫ್ರೇದಾ ಬೇಡಿ
  2. ಕಬೀರ್ ಬೇಡಿ ಜೀವನಚರಿತ್ರೆ (1946-)
  3. ದೀಕ್ಷಸ್ನಾನ ಮಾಡಿಸಲ್ಪಟ್ಟ ಆಡಂ ಬೇಡಿ
  4. "Another Parveen is Kabir Bedi's love". The Times of India.
  5. "Kabir Bedi's voice for Burma's Mandela". Daily News & Analysis.
  6. ಕಬೀರ್ ಬೇಡಿಯ ಕುರಿತಾದ ಲೇಖನಗಳ ಸಂಗ್ರಹ
  7. ಕಬೀರ್ ಬೇಡಿ: ಪ್ರಶಸ್ತಿಗಳ ಪುಟ


ಹೊರಗಿನ ಕೊಂಡಿಗಳು

[ಬದಲಾಯಿಸಿ]