ವಿಷಯಕ್ಕೆ ಹೋಗು

ಸುಮಿತ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಮಿತ್ರಾ
ಹುಟ್ಟು
ಉದ್ಯೋಗಚಲನಚಿತ್ರ ನಟಿ
ಸಕ್ರಿಯ ವರ್ಷಗಳು೧೯೭೩–ಪ್ರಸ್ತುತ
ಹೆಂಡತಿ/ಗಂಡಡಿ.ರಾಜೇಂದ್ರ ಬಾಬು


ಸುಮಿತ್ರಾ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸುಮಿತ್ರಾ ಅಭಿನಯದ ಗಮನಾರ್ಹ ಚಿತ್ರಗಳೆಂದರೆ ತಮಿಳಿನ ಅವಳುಂ ಪೆಣ್ ತಾನೆ(೧೯೭೪), ಅಣ್ಣನ್ ಒರು ಕೋಯಿಲ್(೧೯೭೭), ನಿಳಲ್ ನಿಜಮಾಗಿರದು(೧೯೭೮) ಮಲಯಾಳಂನ ನಿರ್ಮಾಲ್ಯಂ(೧೯೭೩), ಕನ್ನಡದ ಮುಗಿಯದ ಕಥೆ(೧೯೭೬), ಮಕ್ಕಳ ಸೈನ್ಯ(೧೯೮೦) ಮತ್ತು ರಾಮಾಚಾರಿ(೧೯೯೧)[].

ಆರಂಭಿಕ ಜೀವನ

[ಬದಲಾಯಿಸಿ]

ಕೇರಳದ ತ್ರಿಶೂರ್ನಲ್ಲಿ ರಾಘವನ್ ನಾಯರ್ ಮತ್ತು ಜಾನಕಿ ದಂಪತಿಯ ಮಗಳಾಗಿ ಜನಿಸಿದ ಸುಮಿತ್ರಾರಿಗೆ ಮೂವರು ಸಹೋದರರಿದ್ದಾರೆ. ಸುಮಿತ್ರಾರ ತಂದೆ ತೈಲ ಸಂಸ್ಕರಣಾ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಸುಮಿತ್ರಾ ತಮ್ಮ ಬಾಲ್ಯದಲ್ಲಿ ಮುರುಗಪ್ಪನ್ ಅವರಲ್ಲಿ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿದ್ದರು[].

ವೃತ್ತಿ ಜೀವನ

[ಬದಲಾಯಿಸಿ]

೧೯೭೨ರಲ್ಲಿ ತೆರೆಗೆ ಬಂದ ಮಲಯಾಳಂ ಚಿತ್ರ ನಿರ್ತನಸಾಲದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಲಯಾಳಂನ ನಿರ್ಮಾಲ್ಯಂ(೧೯೭೩). ಪ್ರಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರು ತಮ್ಮ ಕಿರುಗಥೆಯನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ಈ ಹೊಸ ಅಲೆಯ ಚಿತ್ರದಲ್ಲಿ ಸುಮಿತ್ರಾ ನೀಡಿದ ಉತ್ತಮ ನೈಜ ಅಭಿನಯ ಚಿತ್ರಪಂಡಿತರ ಗಮನ ಸೆಳೆಯಿತು. ಈ ಚಿತ್ರ ೧೯೭೩ನೇ ಸಾಲಿನ ಅತ್ತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿತ್ತು[]. ಸುಮಿತ್ರಾ ಅಭಿನಯದ ಮೊದಲ ತಮಿಳು ಚಿತ್ರ ಅವಳುಂ ಪೆಣ್ ದಾನೆ(೧೯೭೪). ಕೆಟ್ಟ ಸನ್ನಿವೇಶಕ್ಕೆ ಸಿಲುಕಿ ವೇಶ್ಯೆಯಾಗುವ ಯುವತಿಯೊಬ್ಬಳು ಸಹೃದಯಿ ನಾಯಕನನ್ನು ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಮಾಜದಲ್ಲಿನ ಕುತ್ಸಿತ ಮನೋಭಾವ ಜನರ ಕುಹಕದ ಮಾತುಗಳಿಗೆ ಬೇಸತ್ತು ಬಲಿಯಾಗುವ ದುರಂತ ಕಥಾನಕವಿದ್ದ ಈ ಚಿತ್ರದಲ್ಲಿ ವೇಶ್ಯೆಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು. ಶಿವಾಜಿ ಗಣೇಶನ್ ನಾಯಕರಾಗಿ ಅಭಿನಯಿಸಿದ ಅಣ್ಣನ್ ಒರು ಕೋಯಿಲ್(೧೯೭೭) ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ತನ್ನ ಹಳೆಯ ನೆನಪುಗಳನ್ನು ಕಳೆದುಕೊಂಡ ಹುಡುಗಿಯಾಗಿ, ರಜನೀಕಾಂತ್ ಮತ್ತು ಶಿವಕುಮಾರ್ ಅವರೊಂದಿಗಿನ ಭುವನ ಒರು ಕೇಳ್ವಿಕುರಿ(೧೯೭೭) ಎಂಬ ಸಾಮಾಜಿಕ ಚಿತ್ರದಲ್ಲಿ ಲಂಪಟನೊಬ್ಬನಿಂದ ಅನ್ಯಾಯಕ್ಕೊಳಗಾದರೂ ಧೃತಿಗೆಡದೆ ನಾಯಕನ ನೆರವಿನಿಂದ ಹೊಸ ಜೀವನ ಕಂಡುಕೊಳ್ಳುವ ಹುಡುಗಿಯಾಗಿ ಸುಮಿತ್ರಾ ಅವರ ಅಭಿನಯ ಅಮೋಘ. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ಆ ನಂತರದಲ್ಲಿ ಇವಳ್ ಒರು ಸೀತೈ(೧೯೭೮), ವಟತುಕ್ಕುಳ್ ಚದುರಂ(೧೯೭೮), ಮಚ್ಚಾನೈ ಪಾರ್ತೆಂಗಳ(೧೯೭೮) ಮುಂತಾದ ಚಿತ್ರಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ಶಕ್ತವಾಗಿ ನಿರ್ವಹಿಸಿದ ಸುಮಿತ್ರಾ ಕೆ.ಬಾಲಚಂದರ್ ಅವರ ಕಮಲ್ ಹಾಸನ್ ನಾಯಕರಾಗಿ ಅಭಿನಯಿಸಿದ ನಿಳಲ್ ನಿಜಮಾಗಿರದು(೧೯೭೮) ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಶ್ಲಾಘನೀಯ ಅಭಿನಯ ನೀಡಿದ್ದಾರೆ.

ಪ್ರತಿಭಾವಂತ ನಟ ಶಿವಕುಮಾರ್ ಅವರೊಂದಿಗೆ ಕಣ್ಣನ್ ಒರು ಕೈ ಕುಳಂದೈ(೧೯೭೮), ಚಿಟ್ಟುಕುರುವಿ(೧೯೭೮), ಕಡವುಳ್ ಅಮೈತ್ತ್ ಮೇಡೈ(೧೯೭೯), ಮುದಲ್ ಇರವು(೧೯೭೯) ಮತ್ತು ಮಂಜಳ್ ನಿಲಾ(೧೯೮೨) ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಪ್ರಬುದ್ಧ ಅಭಿನಯ ನೀಡಿದ ಸುಮಿತ್ರಾ ಮಲಯಾಳಂನ ಮೇರುನಟ ಪ್ರೇಮ್ ನಜೀರ್ ಅವರೊಂದಿಗೆ ದುರ್ಗಾ(೧೯೭೪), ನೀಲಪೊಣ್ಣ್ಮಾನ್(೧೯೭೫), ಕಡಮಟ್ಟತಾಚನ್(೧೯೮೪) ಮತ್ತು ಸನ್ನಾಹಂ(೧೯೮೫) ಮುಂತಾದ ಮಲಯಾಳಂ ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡೀದ್ದಾರೆ.

ಅವಳುಂ ಪೆಣ್ ದಾನೆ ಚಿತ್ರದ ಕನ್ನಡ ಅವತರಣಿಕೆಯಾದ ಮುಗಿಯದ ಕಥೆ(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ವಿಷ್ಣುವರ್ಧನ್ ಅವರೊಂದಿಗೆ ಮಕ್ಕಳ ಸೈನ್ಯ(೧೯೮೦) ಮತ್ತು ಸತ್ಯಂ ಶಿವಂ ಸುಂದರಂ(೧೯೮೮) ಚಿತ್ರದಲ್ಲಿ ಅಪೂರ್ವ ಅಭಿನಯ ನೀಡಿದ್ದಾರೆ. ೧೯೮೦ರ ದಶಕದ ಮಧ್ಯದಿಂದ ಪೋಷಕ ಪಾತ್ರಗಳಿಗೆ ಸೀಮಿತರಾದ ಸುಮಿತ್ರಾ ರಾಮಾಚಾರಿ(೧೯೯೧) ಚಿತ್ರದಲ್ಲಿ ನಾಯಕನ ತಾಯಿಯಾಗಿ ನೀಡಿದ ಹೃದಯಸ್ಪರ್ಶಿ ಅಭಿನಯ ಕನ್ನಡ ಚಿತ್ರರಸಿಕರ ಮನಸೂರೆಗೊಂಡಿತ್ತು. ಕರ್ಣ(೧೯೮೬) ಮತ್ತು ಒಂದಾಗಿ ಬಾಳು(೧೯೮೯) ಚಿತ್ರದಲ್ಲಿ ನಾಯಕನ ವಾತ್ಸಲ್ಯಮಯಿ ಅತ್ತಿಗೆಯಾಗಿ ಪ್ರಶಂಸನೀಯ ಅಭಿನಯ ನೀಡಿದ ಸುಮಿತ್ರಾ ಗೋಪಿ ಕೃಷ್ಣ(೧೯೯೨) ಚಿತ್ರದಲ್ಲಿ ಮೋಹಕ ಅತ್ತೆಯಾಗಿ ಮಿಂಚಿದ್ದಾರೆ. ಶ್ರೀರಾಮಚಂದ್ರ(೧೯೯೨), ಕುರುಬನ ರಾಣಿ(೧೯೯೮), ಅಪ್ಪು(೨೦೦೦), ಅಭಿ(೨೦೦೩), ಮಿಲನ(೨೦೦೭), ಜಾಕಿ(೨೦೧೦), ಮೈನಾ(೨೦೧೩) ಸುಮಿತ್ರಾ ಪೋಷಕ ಪಾತ್ರದಲ್ಲಿ ನಟಿಸಿದ ಯಶಸ್ವಿ ಕನ್ನಡ ಚಿತ್ರಗಳು. ಅಗ್ನಿ ನಚತಿರಮ್(೧೯೮೮), ಚಿನ್ನ ತಂಬಿ(೧೯೯೧), ಸಿಂಗಾರವೇಲನ್(೧೯೯೨), ಸಿಂಗಂ(೨೦೧೦), ಸಿಂಗಂ ೨(೨೦೧೩) ಸುಮಿತ್ರಾ ಪೋಷಕ ನಟಿಯಾಗಿ ಅಭಿನಯಿಸಿದ ಪ್ರಮುಖ ತಮಿಳು ಚಿತ್ರಗಳಾಗಿವೆ.

ತಮ್ಮ ಸಹಜ ಸೌಂದರ್ಯ, ನೈಜ ಭಾವಪೂರ್ಣ ಅಭಿನಯದಿಂದ ದಕ್ಷಿಣ ಭಾರತದ ಚಿತ್ರರಸಿಕರ ಮೆಚ್ಚುಗೆ ಗಳಿಸಿರುವ ಸುಮಿತ್ರಾ ವೃತ್ತಿ ಜೀವನದಲ್ಲಿ ಅನೇಕ ಪ್ರಭಾವಶಾಲಿ ಪಾತ್ರಗಳನ್ನು ನಿರಾಯಾಸವಾಗಿ ನಿಭಾಯಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟರಾದ ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಮಧು, ರಜನೀಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್, ರಾಜೇಶ್, ಶಿವಕುಮಾರ್, ವಿಜಯಕುಮಾರ್, ಸುಕುಮಾರನ್ ಮತ್ತು ಎಂ.ಜಿ.ಸೋಮನ್ ಮುಂತಾದವರೊಂದಿಗೆ ನಾಯಕಿಯಾಗಿ ಅಭಿನಯಿಸಿರುವ ಸುಮಿತ್ರಾ ರಜನೀಕಾಂತ್, ಕಮಲ್ ಹಾಸನ್ ಮತ್ತು ವಿಷ್ಣುವರ್ಧನ್ ಅವರಿಗೆ ತಾಯಿಯಾಗಿಯೂ ಅಭಿನಯಿಸಿದ ಹೆಗ್ಗಳಿಕೆಗೆ ಪಾತ್ರರು. ಎ.ಭೀಮ್ ಸಿಂಗ್, ಕೆ.ಬಾಲಚಂದರ್, ಎಸ್.ಪಿ.ಮುತ್ತುರಾಮನ್, ಭಾರ್ಗವ ಮತ್ತು ಡಿ.ರಾಜೇಂದ್ರ ಬಾಬು ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಸುಮಿತ್ರಾ ಕನ್ನಡದ ಜನಪ್ರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಪತ್ನಿ. ಪುತ್ರಿಯರಾದ ಉಮಾಶಂಕರಿ ಮತ್ತು ನಕ್ಷತ್ರಾ ಕೂಡ ನಟಿಯರಾಗಿದ್ದಾರೆ. ಇವರ ಪತಿ ಡಿ.ರಾಜೇಂದ್ರ ಬಾಬು ಅವರು ನವೆಂಬರ್ ೩, ೨೦೧೩ರಂದು ನಿಧನರಾಗಿದ್ದಾರೆ.

ಪ್ರಶಸ್ತಿ/ಪುರಸ್ಕಾರ

[ಬದಲಾಯಿಸಿ]
  • ಕಲೈಮಾಮಣಿ - ತಮಿಳುನಾಡು ಸರ್ಕಾರ[]

ಸುಮಿತ್ರಾ ಅಭಿನಯದ ಚಿತ್ರಗಳು

[ಬದಲಾಯಿಸಿ]

ಮಲಯಾಳಂ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೩ನಿರ್ಮಾಲ್ಯಂಎಂ.ಟಿ.ವಾಸುದೇವನ್ ನಾಯರ್ಪಿ.ಜೆ.ಆಂಟನಿ, ಸುಕುಮಾರನ್
೧೯೭೪ಉದಯಂ ಕಿಳಕ್ಕು ತನ್ನೆಪಿ.ಎಸ್.ಮೆನನ್ಸುಕುಮಾರನ್, ರವಿ ಮೆನನ್, ಸುಜಾತ
೧೯೭೪ಚಕ್ರವಾಕಂತೊಪ್ಪಿಲ್ ಭಾಸಿಪ್ರೇಮ್ ನಜೀರ್, ಸುಜಾತ
೧೯೭೪ಚಂದ್ರಕಾಂತಂಶ್ರೀಕುಮಾರನ್ ತಂಬಿಪ್ರೇಮ್ ನಜೀರ್, ಜಯಭಾರತಿ
೧೯೭೪ತುಂಬೋಲಾರ್ಚಕುಂಚಕೊಶೀಲಾ, ಪ್ರೇಮ್ ನಜೀರ್, ಶ್ರೀವಿದ್ಯಾ
೧೯೭೪ದುರ್ಗಾಎಂ.ಕುಂಚಕೊಪ್ರೇಮ್ ನಜೀರ್, ವಿಜಯನಿರ್ಮಲ
೧೯೭೪ನಗರಂ ಸಾಗರಂಕೆ.ಪಿ.ಪಿಳ್ಳೈರಾಘವನ್
೧೯೭೪ನಡೀನಡನ್ಮಾರೆ ಅವಸ್ಯಮುಂಡುಕ್ರಾಸ್ ಬೆಲ್ಟ್ ಮಣಿವಿನ್ಸೆಂಟ್
೧೯೭೪ನೆಲ್ಲುರಾಮು ಕರ್ಯಾತ್ಪ್ರೇಮ್ ನಜೀರ್, ಜಯಭಾರತಿ, ಮೋಹನ್ ಶರ್ಮ
೧೯೭೪ಹನಿಮೂನ್ಎ.ಬಿ.ರಾಜ್ಪ್ರೇಮ್ ನಜೀರ್, ಕೆ.ಆರ್.ವಿಜಯಾ
೧೯೭೫ನೀಲಪೊಣ್ಣ್ಮಾನ್ಎಂ.ಕುಂಚಕೊಪ್ರೇಮ್ ನಜೀರ್
೧೯೭೫ನೀಲಸಾರಿಎಂ.ಕೃಷ್ಣನ್ ನಾಯರ್ರವಿಕುಮಾರ್
೧೯೭೫ಮಧುರ ಪದಿನೇಳುಹರಿಹರನ್ಸುಧೀರ್
೧೯೭೫ಮನಿಷದಕುಂಚಕೊಪ್ರೇಮ್ ನಜೀರ್, ಶ್ರೀವಿದ್ಯಾ
೧೯೭೬ಅರುತುರವಿಮಧು, ಕಮಲ್ ಹಾಸನ್
೧೯೭೬ಚರಿತ್ರಂ ಆವರ್ತಿಕ್ಕುನ್ನಿಲ್ಲಪಿ.ಭಾಸ್ಕರನ್ಕಮಲ್ ಹಾಸನ್, ಜಯಭಾರತಿ
೧೯೭೬ಮುತ್ತುಎನ್.ಎನ್.ಪೀಜಾರ್ದೆಮಧು, ಮೋಹನ್ ಶರ್ಮ
೧೯೭೬ಸ್ವಿಮ್ಮಿಂಗ್ ಪೂಲ್ಶಶಿಕುಮಾರ್ಕಮಲ್ ಹಾಸನ್
೧೯೭೬ವಳಿವಿಲಕ್ಕುಪಿ.ಭಾಸ್ಕರನ್ಪ್ರೇಮ್ ನಜೀರ್, ಜಯಭಾರತಿ, ನಂದಿತಾ ಭೋಸ್
೧೯೭೭ಅಭಿನಿವೇಶಂಐ.ವಿ.ಶಶಿರವಿಕುಮಾರ್, ಪದ್ಮಪ್ರಿಯಾ
೧೯೭೭ಚಕ್ರವರ್ತಿನಿಚಾರ್ಲ್ಸ್ ಅಯ್ಯಂಪಳ್ಳಿಎಂ.ಜಿ.ಸೋಮನ್, ಮಲ್ಲಿಕಾ ಸುಕುಮಾರನ್
೧೯೭೭ನಿರಪರಯುಂ ನಿಲವಿಲಕ್ಕುಂಸಿಂಗೀತಂ ಶ್ರೀನಿವಾಸ್ ರಾವ್ಶೀಲಾ, ವಿನ್ಸೆಂಟ್, ರವಿ ಮೆನನ್
೧೯೭೭ವರದಕ್ಷಿಣಶಶಿಕುಮಾರ್ಪ್ರೇಮ್ ನಜೀರ್, ಜಯಭಾರತಿ
೧೯೭೮ಅಡಿಕ್ಕೆ ಅಡಿಕರ್ಣನ್ವಿನ್ಸೆಂಟ್
೧೯೭೮ಜಲತರಂಗಂಪಿ.ಚಂದ್ರಕುಮಾರ್ಮಧು, ಶೀಲಾ
೧೯೮೦ಲಾವಾಹರಿಹರನ್ಪ್ರೇಮ್ ನಜೀರ್, ಪ್ರಮೀಳಾ
೧೯೮೨ಇವನ್ ಒರು ಸಿಂಹಂಎನ್.ಪಿ.ಸುರೇಶ್ಪ್ರೇಮ್ ನಜೀರ್, ಶ್ರೀವಿದ್ಯಾ, ಎಂ.ಜಿ.ಸೋಮನ್, ಸುಕುಮಾರನ್
೧೯೮೪ಅಮ್ಮೆ ನಾರಾಯಣಎನ್.ಪಿ.ಸುರೇಶ್ಶ್ರೀವಿದ್ಯಾ, ಪ್ರೇಮ್ ನಜೀರ್
೧೯೮೪ಕಡಮಟ್ಟತಾಚನ್ಎನ್.ಪಿ.ಸುರೇಶ್ಪ್ರೇಮ್ ನಜೀರ್
೧೯೮೫ಸನ್ನಾಹಂಜೋಸ್ ಕಲ್ಲೆನ್ಪ್ರೇಮ್ ನಜೀರ್, ರತೀಶ್

ತಮಿಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೪ಅವಳುಮ್ ಪೆಣ್ ದಾನೆದುರೈಮುತ್ತುರಾಮನ್
೧೯೭೪ಕಣ್ಮಣಿ ರಾಜದೇವರಾಜ್ ಮೋಹನ್ಶಿವಕುಮಾರ್
೧೯೭೬ಮೊಗಮ್ ಮುಪ್ಪದು ವರುಷಂಎಸ್.ಪಿ.ಮುತ್ತುರಾಮನ್ಕಮಲ್ ಹಾಸನ್, ಶ್ರೀಪ್ರಿಯಾ
೧೯೭೬ಲಲಿತಾವಾಲಂಪುರಿ ಸೋಮನಾಥನ್ಸುಜಾತ, ಜೆಮಿನಿ ಗಣೇಶನ್, ಕಮಲ್ ಹಾಸನ್
೧೯೭೭ಅಣ್ಣನ್ ಒರು ಕೋಯಿಲ್ಕೆ.ವಿಜಯನ್ಶಿವಾಜಿ ಗಣೇಶನ್, ಸುಜಾತ
೧೯೭೭ನಾನ್‌ದಾ ಎನ್ ನಿಲಾಎ.ಜಗನ್ನಾಥನ್ವಿಜಯಕುಮಾರ್, ಫಟಾಫಟ್ ಜಯಲಕ್ಷ್ಮಿ
೧೯೭೭ನೀ ವಾಳ ವೇಂಡುಂಎ.ಭೀಮ್ ಸಿಂಗ್ರವಿಚಂದ್ರನ್, ಮುತ್ತುರಾಮನ್, ಭಾರತಿ
೧೯೭೭ಭುವನ ಒರು ಕೇಳ್ವಿಕುರಿಭುವನಎಸ್.ಪಿ.ಮುತ್ತುರಾಮನ್ಶಿವಕುಮಾರ್, ರಜನೀಕಾಂತ್
೧೯೭೭ರಘುಪತಿ ರಾಘವ ರಾಜಾ ರಾಮ್ದುರೈರಜನೀಕಾಂತ್, ವಿಜಯಕುಮಾರ್
೧೯೭೮ಇವಳ್ ಒರು ಸೀತೈಎ.ಜಗನ್ನಾಥನ್ವಿಜಯಕುಮಾರ್
೧೯೭೮ಇರೈವನ್ ಕೊಡುತ ವರಂಎ.ಭೀಮ್ ಸಿಂಗ್ರಜನೀಕಾಂತ್, ವಿಜಯಕುಮಾರ್
೧೯೭೮ಕಣ್ಣನ್ ಒರು ಕೈ ಕುಳಂದೈಎನ್.ವೆಂಕಟೇಶ್ಶಿವಕುಮಾರ್, ಜೈಗಣೇಶ್
೧೯೭೮ಕಣ್ಣಮೂಚಿಆರ್.ಪಟ್ಟಾಭಿರಾಮನ್ಶಿವಕುಮಾರ್
೧೯೭೮ಚಿಟ್ಟುಕುರುವಿದೇವರಾಜ್ ಮೋಹನ್ಶಿವಕುಮಾರ್
೧೯೭೮ನಿಳಲ್ ನಿಜಮಾಗಿರದುಕೆ.ಬಾಲಚಂದರ್ಕಮಲ್ ಹಾಸನ್, ಶೋಭಾ
೧೯೭೮ಪಾವತ್ತಿನ್ ಸಂಬಳಂದುರೈಮುತ್ತುರಾಮನ್, ಪ್ರಮಿಳಾ, ರಜನೀಕಾಂತ್
೧೯೭೮ಮಚ್ಚಾನೈ ಪಾರ್ತೆಂಗಳವಿ.ಸಿ.ಗುಹನಾಥನ್ಶಿವಕುಮಾರ್, ಶ್ರೀದೇವಿ
೧೯೭೮ರುದ್ರತಾಂಡವಂವಿ.ಕೆ.ರಾಮಸಾಮಿವಿಜಯಕುಮಾರ್
೧೯೭೮ವಟತುಕ್ಕಿಳ್ ಚದುರಂಎಸ್.ಪಿ.ಮುತ್ತುರಾಮನ್ಲತಾ, ಶ್ರೀಕಾಂತ್, ಶರತ್ ಬಾಬು
೧೯೭೮ಸೊನ್ನದು ನೀ ದಾನಸಿ.ಎನ್.ಮುತ್ತುವಿಜಯಕುಮಾರ್, ಜೈಗಣೇಶ್
೧೯೭೯ಅನ್ಬೆ ಸಂಗೀತಕೆ.ನಾರಾಯಣ್ಜೈಗಣೇಶ್
೧೯೭೯ಕಡವುಳ್ ಅಮೈತ್ತ್ ಮೇಡೈಎಸ್.ಪಿ.ಮುತ್ತುರಾಮನ್ಶಿವಕುಮಾರ್
೧೯೭೯ಚೆಲ್ಲ ಕಿಳಿಕೆ.ಎಂ.ಬಾಲಕೃಷ್ಣನ್ವಿಜಯಕುಮಾರ್
೧೯೭೯ನೀ ಸಿರಿತಾಳ್ ನಾ ಸಿರಿಪ್ಪೇನ್ವಿ.ರಾಜಗೋಪಾಲ್ಶಿವಚಂದ್ರನ್, ಶ್ರೀಕಾಂತ್
೧೯೭೯ಮುಗತ್ತಿಲ್ ಮುಗಂ ಪಾರ್ಕಲಾಂಎ.ಜಗನ್ನಾಥನ್ವಿಜಯಕುಮಾರ್, ರಾಧಿಕಾ
೧೯೭೯ಮುದಲ್ ಇರವುಎ.ಜಗನ್ನಾಥನ್ಶಿವಕುಮಾರ್
೧೯೮೦ಒರೆ ಮುತಂಸಿ.ಎ.ಮುಗಿಲನ್ಜೈಗಣೇಶ್, ಶ್ರೀಕಾಂತ್
೧೯೮೦ಕಣ್ಣಿಲ್ ತೆರಿಯುಂ ಕಥೈಗಳ್ದೇವರಾಜ್ ಮೋಹನ್ಶರತ್ ಬಾಬು, ವಡಿವುಕ್ಕರಸಿ
೧೯೮೧ಎಂಗಮ್ಮ ಮಹಾರಾಣಿಎಂ.ಎ.ಕಾಜಾದೆಲ್ಲಿ ಗಣೇಶ್, ರೂಪಾ, ವಿಜಯ್ ಬಾಬು
೧೯೮೧ತಿರುಪ್ಪಂಗಳ್ಜೋಸೆಫ್ ಆನಂದನ್ಜೈಗಣೇಶ್
೧೯೮೧ಪಾಕ್ಕು ವೇತಾಳೈಆರ್.ಎಸ್.ವೈರವನ್ರಾಜೇಶ್
೧೯೮೧ನೆಲ್ಲಿಕಣಿಶಿವಕುಮಾರ್
೧೯೮೧ವಸಂತ ಕಾಲಂಏಂ.ಎ.ಕಾಜಾಸುರುಳಿರಾಜನ್
೧೯೮೨ಇರಟ್ಟೈ ಮನಿದನ್ಕೆ.ಶಂಕರ್ಎಸ್.ಎಸ್.ರಾಜೇಂದ್ರನ್, ಲತಾ, ಜೈಗಣೇಶ್, ಭವಾನಿ
೧೯೮೨ಮಂಜಳ್ ನಿಲಾರಂಜಿತ್ಶಿವಕುಮಾರ್
೧೯೮೨ಸಂಗಿಳಿಸಿ.ವಿ.ರಾಜೇಂದ್ರನ್ಶಿವಾಜಿ ಗಣೇಶನ್, ಶ್ರೀಪ್ರಿಯಾ, ಪ್ರಭು ಗಣೇಶನ್
೧೯೮೩ಅಣ್ಣೆ ಅಣ್ಣೆಮೌಳಿಮೌಳಿ
೧೯೮೫ವೆಳಿಜೈಶಂಕರ್, ರಾಜೇಶ್, ಸರಿತಾ
೧೯೮೬ಒರು ಮನಿದನ್ ಒರು ಮನೈವಿದುರೈಅಶೋಕ್
೧೯೮೭ವೀರ ಪಾಂಡ್ಯನ್ಕಾರ್ತಿಕ್ ರಘುನಾಥ್ಶಿವಾಜಿ ಗಣೇಶನ್, ವಿಜಯಕಾಂತ್
೧೯೯೧ನಟ್ಟಿ ತಿರುಡಾತೆಸೆಂದಿಲ್ ನಾಥನ್ಜನಕರಾಜ್
೧೯೯೧ನಾನ್ ಪಡಿಚ್ಚ ಮಾಪಿಳ್ಳೈವಿ.ಶೇಖರ್ನಿಳಲ್ಗಳ್ ರವಿ, ಜನಕರಾಜ್
೧೯೯೨ಸತ್ಯಂ ಅದು ನಿತ್ಯಂಟಿ.ದುರೈರಾಜ್ಶಿವಕುಮಾರ್

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೬ಮುಗಿಯದ ಕಥೆದೊರೈರಾಜೇಶ್
೧೯೮೦ಮಕ್ಕಳ ಸೈನ್ಯಲಕ್ಷ್ಮಿವಿಷ್ಣುವರ್ಧನ್
೧೯೮೧ರಾಜೇಶ್ವರಿಎಚ್.ಎಂ.ಕೃಷ್ಣಮೂರ್ತಿಅಶೋಕ್
೧೯೮೪ರವಿ ಮೂಡಿ ಬಂದವಿ.ವಿ.ಎ.ರಂಗಾಚಾರ್ಚಂದ್ರಶೇಖರ್, ಜೈಜಗದೀಶ್
೧೯೮೬ಅಗ್ನಿಪರೀಕ್ಷೆನಾಗಶ್ರೀನಿವಾಸ್ಟೈಗರ್ ಪ್ರಭಾಕರ್, ಜಯಂತಿ, ಶಂಕರ್ ನಾಗ್, ಭವ್ಯಾ
೧೯೮೬ಅಸಂಭವಡಿ.ರಾಜೇಂದ್ರ ಬಾಬುರವಿಚಂದ್ರನ್, ಅಂಬಿಕಾ
೧೯೮೬ಕರ್ಣಭಾರ್ಗವವಿಷ್ಣುವರ್ಧನ್, ಸುಮಲತಾ
೧೯೮೭ಸತ್ಯಂ ಶಿವಂ ಸುಂದರಂಕೆ.ಎಸ್.ಆರ್.ದಾಸ್ವಿಷ್ಣುವರ್ಧನ್, ರಾಧಿಕಾ
೧೯೮೯ಒಂದಾಗಿ ಬಾಳುಕೆ.ಎಸ್.ಆರ್.ದಾಸ್ವಿಷ್ಣುವರ್ಧನ್, ರಾಜೇಶ್, ಮಂಜುಳಾ ಶರ್ಮ
೧೯೯೧ರಾಮಾಚಾರಿಡಿ.ರಾಜೇಂದ್ರ ಬಾಬುವಿಷ್ಣುವರ್ಧನ್, ರಾಧಿಕಾ

ಉಲ್ಲೇಖಗಳು

[ಬದಲಾಯಿಸಿ]
  1. 1 2 3 "Biography of Tamil Actress Sumithra". ತಮಿಳ್ ಸ್ಪೈಡರ್. Archived from the original on 2016-07-31. Retrieved 2016-08-17. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "ನಿರ್ಮಾಲ್ಯಂ-೧೯೭೩". ದಿ ಹಿಂದು.