ಜೆಮಿನಿ ಗಣೇಶನ್
ರಾಮಸ್ವಾಮಿ ಗಣೇಶನ್ ಅವರು ೧೭ ನವೆಂಬರ್ ೧೯೨೦ ರಲ್ಲಿ ಜನಿಸಿದರು. ಜೆಮಿನಿ ಎಂಬ ವೇದಿಕೆಯ ಹೆಸರಿನಿಂದ ಇಂದಿಗು ಪ್ರಸಿದರಾಗಿದ್ದಾರೆ. ಭಾರತ ಚಲನಚಿತ್ರಗಾರರು, ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ನಟ್ಟಿಸಿದ್ದಾರೆ. ಅವರು ಪ್ರಣಯ ಪಾತ್ರ ಮಾಡಿರುವುದಿಂದಾಗಿ, ಅವರ ಅಡ್ಡಹೆಸರು ಕಾದಲ್ ಮನನ್ ಅಂದರೆ ಪ್ರಣಯ ರಾಜ. ತಮಿಳು ಸಿನಿಮಗಳಲ್ಲಿ ಹೆಸರುವಾಸಿಯಾದ ಮೂರು ಚಲನಚಿತ್ರಗಾರರಲ್ಲಿ ಇವರು ಒಬ್ಬರು.ಉಳಿದ ಏರಡು ಹೆಸರು ವಾಸಿಯಾದ ಚಿತ್ರಗಾರರು ಎಂ.ಜಿ. ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್. ಶಿವಜಿ ಗಣೇಶನ್ ಚಿತ್ರದಲ್ಲಿ ನಾಟಕ ಮಾಡುವುದರಲ್ಲಿ ಖ್ಯಾತರು ಮತ್ತು ಎಂ.ಜಿ.ರಾಮಚಂದ್ರನ್ ಹೋರಾಟ ಅನುಕ್ರಮ ಒಳಗೊಂಡಿರುವ ಚಿತ್ರಗಳನ್ನು ಮಾಡಿ ಜನರ ಮನಸನ್ನು ಗೆದ್ದರು. ಜೆಮಿನಿ ಗಣೇಶನ್ ಇವರಿಬ್ಬರಿಂದ ಭಿನ್ನವಾಗಿದ್ದರು, ಅವರು ಹಂಬಲ ಪ್ರೇಮಿಯಾಗಿ ಚಿತ್ರರಂಗದಲ್ಲಿ ಕಣಿಸಿಕೂಂಡು ಜನರ ಒಲವಿನಲ್ಲಿ ತಮ್ಮಗಾಗಿ ಸ್ಥಾನಹಿಡಿದಿದ್ದಾರೆ. ಅವರು ಪದ್ಮಶ್ರೇ ಪ್ರಶಸ್ತಿಯ ಪುರಸ್ಕೃತರಾಗಿದ್ದರೆ. ಇತರ ಇನ್ನು ಆನೇಕ ಪ್ರತಿಷ್ಕಿತ ಪ್ರಶಸ್ತಿಗಳನ್ನು ಪಡೆದಿದ್ದರೆ ಉದಾಹರಣೆಗೆ "ಕಲೈಮಾಮಣಿ" "ಎಂ.ಜಿ.ಆರ್ ಚಿನ್ನದ ಪದಕ" "ಸ್ಕ್ರೀನ್ ಜೀವಮಾನ ಸಾಧನೆಯ ಪ್ರಶಸ್ತಿ".ಅವರು ಒಂದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಆ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ಕೆಲುವು ಪದವಿಧರರ ಪೈಕಿಯಲ್ಲಿ ಇವರು ಒಬ್ಬರಾಗಿದ್ದರು. ಜೆಮಿನಿ ಗಣೇಶನ್ ೧೯೪೭ ರಲ್ಲಿ ಮಿಸ್ ಮಾಲಿನಿಯ ಜೊತೆ ಮೊದಲು ಚಿತ್ರರಂಗದಲ್ಲಿ ಪ್ರವೇಶಿಸಿದ್ದರು. ಅವರು ೧೯೫೩ ರಲ್ಲಿ ಮಾಡಿದ ತಾಯಿ ಉಲಮ್ಚಿತ್ರದಲ್ಲಿ ಖಳನಾಯಕನಾಗಿ ಕಾನಿಸಿಕೂಂಡು ಎಲ್ಲರ ಗಮನ ಸೆಳೆದರು. 'ಮನಂಪೋಲ್ ಮಾಂಗಲ್ಯಂ'ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೂಂಡು ಎಲರ ಮನಸ್ಸಿನಲು ಜಾಗ ಹಿಡಿದರು. ಗಣೇಶನ್ ತಮಿಳಿನಲ್ಲಿ ೨೦೦ ಕ್ಕೊ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಐದು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸಮಾಡಿದ್ದಾರೆ. ಗಣೇಶನ್ ಹಿಂದಿ, ತೆಲುಗು, ಮಲಯಳಂ ಭಾಷೆಗಳಲ್ಲಿಯು ಕಾಣಿಸಿಕೂಂಡಿದಾರೆ. ಅವರ ಚಿತ್ರದಲ್ಲಿ ಎ.ಎಂ.ರಾಜಾ, ಪಿ.ಬಿ.ಶ್ರೀವಾಸ್ ಹಾಗು ಹಲವಾರು ಯಶಸ್ವಿದಯಾದ ಹಿನಲೆ ಗಾಯಕರು ಕೆಲಸಮಾಡಿದ್ದಾರೆ. ಇವರು ರಾಜಕೀಯಗಾರರು ಅಲ್ಲ. ಗಣೇಶನ್ ತನ್ನ ವೈಯಕ್ತಿಕ ಜೀವನದಲ್ಲಿ ಅನೇಕ ಮಹಿಳೆಯರ ಸಂಬಂಧವನ್ನು ಬೆಳೆಸಿಕೂಂಡಿದರು. ಆದರಿಂದ ಅವರನ್ನು 'ಲಂಪಟ' ಎಂದು ಕರೆಯುತಿದ್ದರು. ಇದು ಟೀಕೆಯ ವಿಷಯವಾಗಿತ್ತು.
ಆರಂಭಿಕ ಜೀವನ:
[ಬದಲಾಯಿಸಿ]ಜೆಮಿನಿ ಗಣೇಶನ್ ರವರು ೧೯೨೦ ರಲ್ಲಿ ಜನಿಸಿದ್ದರು. ಇವರ ಹುಟ್ಟು ಹೆಸರು ಗಣಪತಿ ಸುಬ್ರಮಣ್ಯ ಶರ್ಮ. ಇವರ ತಂದೆ ರಾಮಸ್ವಾಮಿ ಹಾಗೂ ತಾಯಿ ಗಂಗಮ್ಮ. ಇವರ ಅಜ್ಜ ನಾರಯಣಸ್ವಾಮಿ. ನಾರಯಣಸ್ವಾಮಿ ಬ್ರಾಹ್ಮಣ ಹುಡುಗಿಯನ್ನು ಮದುವೆಯಾದರು. ಅದರೆ ಮದುವೆಯಾಗಿ ಕೆಲವು ವರ್ಷಗಳಲ್ಲಿಯೇ ತೀರಿಹೋದದರಿಂದ ಚಂದ್ರಮ್ಮ ಎನ್ನುವವರನ್ನು ಮದುವೆಯಾದರು. ಇವರ ಮಕ್ಕಳು ಮುತ್ತುಲಕ್ಷ್ಮೀ ಹಾಗೂ ರಾಮಸ್ವಾಮಿ ಜೆಮಿನಿ. ಗಣೇಶನವರ ಹುಟ್ಟುರು ಪುದುಕೂಟೈ[೧]. ನಾರಯಣಸ್ವಾಮಿಯವರು, ಗಣೇಶನ್ ಆರನೇ ತರಗತಿಯಲ್ಲಿರುವಾಗ ನಿಧನರಾದರು. ಕೆಲುವು ದಿನಗಳ ನಂತರ ಅವರ ತಂದೆಯೂ ತೀರಿಹೋದರು, ಅಗ ಅವರ ಅಜ್ಜಿ ಹಾಗೂ ತಾಯಿಯೊಡನೆ ಗಣೇಶನ್ ಅವರು ತನ್ನ ಅತ್ತೆಯಾದ ಮುತ್ತು ಲಕ್ಷ್ಮೀಯವರ ಮನೆಗೆ ಹೋದರು. ಮುತ್ತುಲಕ್ಷ್ಮೀಯವರು ಮದ್ರಾಸಿನಲ್ಲಿ ವಾಸಿಸುತ್ತಿದ್ದರು. ಆದರೆ, ಅವರ ತಾಯಿ ಗಂಗಮ್ಮನಿಗೆ ಅಲ್ಲಿನ ವಾತವರಣ ಸರಿಹೊಂದದ ಕಾರಣದಿಂದಾಗಿ ಅವರು ಪುದುಕೋಟೈಗೆ ಹಿಂತಿರುಗಿದರು.
ವಿದ್ಯಾಭ್ಯಾಸ:
[ಬದಲಾಯಿಸಿ]ಜೆಮಿನಿ ಗಣೇಶನ್ ರವರ ಅತ್ತೆ, ಮುತ್ತುಲಕ್ಷ್ಮೀಯವರು ಶ್ರೀ ರಾಮಕೃಷಣ ಪರಮಹಂಸರವರ ಅನುಯಾಯಿಯಗಳಾಗಿದ್ದರಿಂದ ಗಣೇಶನ್ ರವರನ್ನು ರಾಮಕೃಷ್ಣ ಮಿಶನ್ ಸಂಸ್ಥೆಗೆ ಸೇರಿಸಲು ನಿರ್ಧರಿಸಿದರು. ಅಲ್ಲಿ ಅವರಿಗೆ ಯೋಗ, ಸಂಸ್ಕೃತ, ಉಪನಿಷದ್, ವೇದಗಳು ಹಾಗೂ ಭಗವದ್ಗೀತೆಯನ್ನು ಕಲಿಸಿದರು. ಅವರು ತಮ್ಮ ಜೀವನವನ್ನು ಬಹಳ ನಿಷ್ಠೇಯಿಂದ ನಡೆಸುತ್ತಿದ್ದರು ಹಾಗೂ ಯೋಗ ಮಾಡುವುದರಲ್ಲಿ ನಿಪುಣರಾದರು. ಆದರು ತಮ್ಮ ತಾಯಿಯಿಂದ ದೂರವಿರಲಾರದೆ ಪುದುಕೋಟೈಗೆ ಹಿಂದಿರುಗಿದರು. ಅಲ್ಲಿಯೇ ಹಿರಿಯ ಶಿಕ್ಷಣವನ್ನು ಮುಗಿಸಿದರು. ನಂತರ ಮಹಾರಾಜ ಕಾಲೇಜಿನಲ್ಲಿ ಸೇರಿದರು. ಆದರು ತಮ್ಮ ಪದವಿ ಶಿಕ್ಷಣವನ್ನು ಮದ್ರಾಸು ಕ್ರಿಸ್ಟಿಯನ್ ಕಾಲೇಜು, ಚೆನೈನಲ್ಲಿ ಮುಗಿಸಿದರು.
ಆರಂಭಿಕ ಕಾರ್ಯಗಳು:
[ಬದಲಾಯಿಸಿ]ಗಣೇಶನ್ ರವರಿಗೆ ವೈದ್ಯರಾಗಬೇಕೆಂಬ ಆಸೆ ಇತ್ತು. ೧೯೪೦ ಏಪ್ರಲ್ ನಲ್ಲಿ ತ್ರಿಚಿಗೆ[೨] ಟಿ.ಆರ್.ಅಲಮೇಲು ಎಂಬವರನ್ನು ಬೇಟಿಯಾಗಲು ಹೋದರು. ಟಿ.ಆರ್. ಅಲಮೇಲುರವರ ತಂದೆ ತಮ್ಮ ಮಗಳನ್ನು ಮದುವೆಯಾದರೆ ಗಣೇಶನ್ ರವರಿಗೆ ವೈದ್ಯರಾಗಲು ಅವಕಾಶ ಮಾಡಿಕೂಡುವುದಾಗಿ ಹೇಳಿದ್ದರು. ಆದರಿಂದ ಗಣೇಶನ್ ರವರು ಜೂನ್ ೧೯೪೦ರಲ್ಲಿ ಅಲಮೇಲುರವರನ್ನು ಮದುವೆಯಾದರು. ಆದರೆ ಗಣೇಶನ್ ರವರ ದುರದೃಷ್ಟದಿಂದ ಅಲಮೇಲುರವರ ತಂದೆ ಮದುವೆಯಾದ ತಿಂಗಳಿಗೆ ತೀರಿಹೋದರು. ಆದ್ದರಿಂದ ವೈದ್ಯರಾಗಬೇಕೆಂಬ ಆಸೆಗೆ ನೀರು ಹರಿಯಿತ್ತು. ಅವರಿಗೆ ಬೇರೆ ಅವಕಾಶವಿರದೆ ಉದ್ಯೋಗಗಳನ್ನು ಹುಡುಕಳು ಆರಂಭಿಸಿದರು. ಆ ಸಂದರ್ಭದಲ್ಲಿ "ಇಂಡಿಯನ್ ಏರ್ ಫೋರ್ಸ್" ನಿಂದ ಸಂದರ್ಶನೆಯ ಕರೆ ಲಭಿಸಿತ್ತು. ಆದ್ದರಿಂದ ಗಣೇಶನ್ ರವರು ಡೆಲ್ಲಿಗೆ ಹೋದರು. ಅಲ್ಲಿ ಅವರ ಹೈತೃಷಿಯೂಬ್ಬರು ಅವರಿಗೆ ಶಿಕ್ಷಕರಾಗಲು ಪ್ರೋತ್ಸಾಹಿಸಿದರು. ಅಗ ಗಣೇಶನ್ ರವರು ರಾಸಯನಿಕ ಶಾಸ್ತ್ರ ವಿಭಾಗದಲ್ಲಿ ಗುರುಗಳಾಗಿ ಸೇವೆಸಲ್ಲಿಸುತ್ತಿದ್ದರು. ಆನಂತರ ಜೆಮಿನಿ ಸ್ಟೂಡಿಯೋನಲ್ಲಿ ಕೆಲಸಕ್ಕೆ ಸೇರಿದರು. ಅಂದಿನಿಂದ ಅವರ ಹೆಸರು ಜಿಮಿನಿ ಗಣೇಶನ್ ಎಂದು ಬದಲಾಯಿತು. ಅಲ್ಲಿ ಕೆಲಸ ಮಾಡುತಿರುವಾಗ ಅವರಿಗೆ ಚಲನಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಲಭಿಸಿತ್ತು.
ವೃತ್ತಿ:
[ಬದಲಾಯಿಸಿ]ಗಣೇಶನ್ ರವರಿಗೆ ಬೇರೆ ನಟರ ತರಹ ಇವರಿಗೆ ಹಂತ ಹಿನ್ನಲೆ ಇರಲಿಲ್ಲ.ಅವರು ಮೊದಲು ೧೯೪೭ರಲ್ಲಿ ಬಿಡುಗಡೆಯಾದ ಮಿಸ್ ಮಾಲಿನಿ ಎಂಬ ಚಿತ್ರದಲ್ಲಿ ಒಂದು ಸಣ್ಣ ಪತ್ರದ ಮೂಲಕ ಪರಿಚಯವಾದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತ್ತು. ಈ ಚಿತ್ರದ ಮುದ್ರಣ ಈಗ ಅಸ್ತಿತ್ವದಲ್ಲಿ ಇಲ್ಲ. ನಂತರ 'ಚಕ್ರದಾರಿ' ಚಿತ್ರದಲ್ಲಿ ಕೃಷ್ಣನ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಅವರ ನಟನೆಯನ್ನು ಈ ಚಿತ್ರದಲ್ಲಿ ಗುರುತಿಸಲಾಗಿಲ್ಲ. ಅವರು 'ತಾಯಿ ಉಲಮ್' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ ನಂತರ ಎಲ್ಲರು ಈ ಚಿತ್ರದ ಮುಖೇನ ಗುರುತಿಸಲು ಆರಂಭೀಸಿದರು. ಪ್ರಥಮ ಬಾರಿಗೆ 'ಮನಂಪೂಲ್ ಮಾಗಲ್ಯಂ' ಚಿತ್ರದಲ್ಲಿ ನಾಯಕರಾಗಿ ನಟಿಸಿದರು. ಈ ಚಿತ್ರದಲ್ಲಿ ತನ್ನ ಭವಿಷ್ಯದ ಪತ್ನಿ ಸಾವಿತ್ರಿಯ ಜೋಡಿಯಾಗಿ ನಟಿಸಿದರು. ಅಂದಿನಿಂದ ಅವರು ತಮಿಳು ಚಿತ್ರರಂಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿಕೊಂಡರು. ಅವರು ಪ್ರಣಯ ಚಿತ್ರಗಳಲ್ಲಿ ಅಧಿಕ ಕಾಣಿಸಿಕೊಂಡಿದ್ದಾರೆ. ಅವರು ೫೦ ವರ್ಷಗಳ ವೃತ್ತಿಯಲ್ಲಿ ಅನೇಕ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು.' ಅಭೀಮನ್ಯು', 'ಮಾಯಾಬಜಾರ್', 'ಕಪಲ್ ವೋಟಿಯೆ ತಮಿಳನ್', 'ಪೆನಿನ್ ಪೆರುಮೈ', ಎಂಬುವುದು ಅವರು ನಟಿಸಿದ ಕೆಲವು ತಮಿಳು ಚಿತ್ರಗಳು. ೧೯೬೧ ರಲ್ಲಿ ತಮಿಳು ಚಿತ್ರರಂಗದಲ್ಲಿ ಮೊದಲನೆಯಸಲ 'ನಿಲವು'ಎಂಬ ಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಕವಾಗಿ ತೆಗೆದರು. ತನ್ನ ಪ್ರತಿಸ್ಪರ್ಧಿ ನಟ ಎಂ.ಜಿ.ಆರ್ ಜೊತೆ ಒಂದು ಚಿತ್ರವನ್ನು ಮಾಡಿದಾರೆ, ಅದರ ಹೆಸರು 'ಮುಹರಾಸಿ'.
ಬಾಲಿವುಡ್ ವೃತಿ:
[ಬದಲಾಯಿಸಿ]ಜೆಮಿನಿ ಗಣೇಶನ್ ರವರು ಹಿಂದಿ ಚಿತ್ರದಲ್ಲೂ ನಟಿಸಿದ್ದಾರೆ. ಅನೇಕ ಚಿತ್ರಗಳ್ನ್ನು ತಮಿಳಿನಿಂದ ಹಿಂದಿಗೆ ಅನುವಾದಿಸಿದ್ದಾರೆ,ಅವರು ೧೯೫೭ ರಲ್ಲಿ ಮೂದಲು ನಟಿಸಿದ ಹಿಂದಿ ಚಲನಚಿತ್ರ 'ಮೀಸ್ ಮೇರಿ'. ಇದರಲ್ಲಿ ಗಣೇಶನ್ ನ ಜೋಡಿಯಾಗಿ ಕಾಣಿಸಿಕೂಂಡವರು ಮೀನಾ ಕುಮರಿ. ಆ ವರ್ಷದಲ್ಲಿ ಯಶಸ್ವಿ ಚಿತ್ರಗಳಲ್ಲಿ ಇದು ಒಂದು.
ವೈಯಕ್ತಿಕ ಜೀವನ:
[ಬದಲಾಯಿಸಿ]ಗಣೇಶನ್ ಅವರು ೧೯ ವಯಸ್ಸಿನಲ್ಲಿರುವಾಗ ಅವರಿಗೆ ಅಲಮೇಲು ಜೊತೆಗೆ ಮದುವೆಯಾಯಿತು. ಅವರು ತನ್ನ ಹೆಂಡತಿಯನ್ನು ಪ್ರೀತಿಯಿಂದ ಭೊಂಬಜಿ ಎಂದು ಕೆರೆಯುತಿದ್ದರು. ಅಲಮೇಲು ಜೊತೆಗೆ ಕಾನೂನುಬದ್ಧವಾಗಿ ಮದುವೆಯಾದರು. ಅವರಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು. ಪುಷ್ಪವಳಿ, ಸಾವಿತ್ರಿ ಇವರಿಬರನ್ನು ಕ್ರಮಬಧವಾಗಿ ಮದುವೆ ಮಾಡದಿದ್ದರು ಸಹ ಅವರಿಗೆ ಹೆಂಡತಿಯ ಸ್ಧಾನವನ್ನು ಗಣೇಶನ್ ನೀಡಿದರು. ಅವರಿಗೆ ಒಟ್ಟು ಏಳು ಹೆಣ್ಣುಮಕ್ಕಳು ಹಾಗೂ ಒಂದು ಮಗು. ಅಲಮೇಲು ಮತ್ತು ಗಣೇಶನ್ ಅವರಿಗೆ ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದರು. ಅವರುಗಳು ರೇವತಿ, ಕಮಲ, ಜಯಲಕ್ಷ್ಮೀ ಮತ್ತು ನಾರಯಣಿ. ಪುಷ್ಪವಳಿಯ ಮಕ್ಕಳು ರೇಖ, ರಾಧ. ಇವರಿಬ್ಬರು ಹಿಂದಿ ಚಿತ್ರದ ನಟಿಯರು. ಸವಿತ್ರಿಯವರಿಂಗೆ ವಿಜಯಚಾಮುಂಡೇಶ್ವರಿ ಎನ್ನುವ ಮಗಳು. ಗಣೇಶನ್ ಅವರ ಒಬ್ಬ ಮಗನ ಹೆಸರು ಸತೀಶ್ ಕುಮಾರ್. ಗಣೇಶನ್ ಅವರು ೭೮ ವರ್ಷವಿರುವಾಗ ೩೬ ವಯಸ್ಸಿನ ಜೂಲಿಯನ್ ನನ್ನು ಮದುವೆಯಾದರು. ಇದ್ದೇ ಕೊನೆಯೆ ಮೆದುವೆ. ಆದರೆ ಅವರು ತನ್ನ ಮೊದಲನೆಯ ಹೆಂಡತಿ ಅಲುಮೇಲು ಜೊತೆ ತುಂಬ ಪ್ರೀತಿಯಿಂದ ಪಳಗಿದ್ದರು.
ಡಾಕ್ಯುಮೆಂಟರಿ:
[ಬದಲಾಯಿಸಿ]'ಕಾದಲ್ ಮನನ್' ಎಂಬ ಹೆಸರಿನಲ್ಲಿ ದಂತಕಥೆಯನ್ನು ೨೦೧೧ ರಲ್ಲಿ ಡಾ.ಕಮಲಾ ಸೆಲ್ವರಾಜ್ ನಿರ್ಮಿಸಿದ್ದಾರೆ ಹಾಗೂ ಅಶೋಕ ಕುಮಾರರವರು ನಿರ್ದೇಶಿಸಿದ್ದಾರೆ.ಈ ಚಿತ್ರಕ್ಕೆ ಅಗಾಧ ಪ್ರತಿಕ್ರಿಯೆ ದೊರಕಿತ್ತು.
ಮರಣ:
[ಬದಲಾಯಿಸಿ]ಜೆಮಿನಿ ಗಣೇಶನ್ ರವರು ದೀರ್ಘಕಾಲ ಮೂತ್ರಪಿಂಡಗಳ ವಿಫಲ್ಯದಿಂದ ಹಾಗೂ ಅನೇಕ ಅಂಗಗಳ ವಿಫಾಲತೆಯ ಕಾರಣ ಆನಾರೋಗ್ಯ ಪೀಡಿತರಾಗಿದ್ದರು. ಕೊನೆಗೆ ಗಣೇಶನ್ ಅವರು ಮಾರ್ಚ್ ೨೨, ೨೦೦೫, ೧೩:೩೦ಗೆ ನಿಧನರಾದರು. ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣನಿಧಿ[೩] ಮತ್ತು ಹಿರಿಯ ನಟಿಯಾದ ಜಯಾಲಲಿತ[೪] ಅಂತಿಮ ಸಂಸ್ಕಾರಕೆ ಸೇರಿದರು. ಅಂತ್ಯಕ್ರಿಯೆಗೆ ಅವರ ಮಗಳು ರೇಖಾ ಹಾಜರಾಗಿರಲಿಲ್ಲ, ಅವಳು ಒಂದು ಚಿತ್ರದ ಚಿತ್ರೀಕರಣದಲ್ಲಿ ಕಾರ್ಯನಿರತಲಾಗಿದ್ದಳು.
ಪುರಸ್ಕಾರಗಳು:
[ಬದಲಾಯಿಸಿ]೧೯೭೦- ಕಾವಿಯೆ ತಲೈವಿ(ತಮಿಳು) ಅತ್ಯುತ್ತಮ ನಟನೆಗಾಗಿ ತಮಿಳ್ಯ್ನಾಡಿನ ರಾಜ್ಯ ಚಲನಚಿತ್ರ ಪ್ರಶಸ್ತಿ ೧೯೭೧- ಪದ್ಮಶ್ರೀ ಪ್ರಶಸ್ತಿ ೧೯೭೪- ನಾನ್ ಅವನಿಲೈ(ತಮಿಳು) ಫಿಲಂಫೇರ್ ಪ್ರಶಸ್ತಿ ೧೯೯೩- ಜೀವಮಾನದ ಸಾಧನೆಗೆ ಫಿಲಂಫೇರ್ ಪ್ರಶಸ್ತಿ ಸ್ಕ್ತೀನ್ ಜೀವಮಾನ ಸಧನೆಯ ಪಶಸ್ತಿ ಕಲೈಮಾಮಣಿ ಪ್ರಶಸ್ತಿ
ಪ್ರಖ್ಯಾತ ಚಲನಚಿತ್ರಗಳು:
[ಬದಲಾಯಿಸಿ]೧೯೪೭-ತಮಿಳಿನಲ್ಲಿ ಮಿಸ್ ಮಾಲಿನಿ ೧೯೫೨-ತಾಯಿ ಉಲಮ್ (ತಮಿಳು) ೧೯೫೩-ಮನಂಪೋಲ್ ಮಾಂಗಲ್ಯಂ ೧೯೫೬-ಪೆನಿನ್ ಪೆರುಮೈ ೧೯೫೭-ಮಾಯಾಬಜಾರ್ ೧೯೫೭-ಮಿಸ್ ಮೇರಿ (ಹಿಂದಿ) ೧೯೫೯-ವೀರಪಾಂಡ್ಯನ್ ಕಟ್ಟಬೊಮ್ಮನ್ ೧೯೫೯- ಕಲ್ಯಾಣ ಪರಿಸು ೧೯೭೪- ನಾನ್ ಅವನ್ ಇಲೈ
ಉಲ್ಲೇಖಗಳು
[ಬದಲಾಯಿಸಿ]- ↑ "Pudukkottai". ಅಕ್ಟೋ 30, 2025 – via Wikipedia.
{{cite web}}: Check date values in:|date=(help) - ↑ "Tiruchirappalli". ನವೆಂ 10, 2025 – via Wikipedia.
{{cite web}}: Check date values in:|date=(help) - ↑ "M. Karunanidhi". ನವೆಂ 9, 2025 – via Wikipedia.
{{cite web}}: Check date values in:|date=(help) - ↑ "J. Jayalalithaa". ನವೆಂ 6, 2025 – via Wikipedia.
{{cite web}}: Check date values in:|date=(help)