ವಿಷಯಕ್ಕೆ ಹೋಗು

ಚಿತ್ರಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Chitrakoot
city
ಚಿತ್ರಕೂಟದ ರಾಮ್‍ಘಾಟ್ ಪ್ರದೇಶದ ದೃಶ್ಯ
ಚಿತ್ರಕೂಟದ ರಾಮ್‍ಘಾಟ್ ಪ್ರದೇಶದ ದೃಶ್ಯ
ದೇಶಭಾರತ
ರಾಜ್ಯಮದ್ಯ ಪ್ರದೇಶ
ಜಿಲ್ಲೆಸತ್ನಾ
Population
 (2001)
 • Total
೨೨,೨೯೪
Languages
 • Officialಹಿಂದಿ
Time zoneUTC+5:30 (IST)

ಚಿತ್ರಕೂಟ ಭಾರತದ ಮಧ್ಯಪ್ರದೇಶ ರಾಜ್ಯದ ಸತ್ನಾ ಜಿಲ್ಲೆಯ ಒಂದು ಪಟ್ಟಣ ಮತ್ತು ಇದು ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಗಡಿಯಲ್ಲಿದ್ದು, ಬುಂದೇಲ್ಖಂಡ್ ಪ್ರದೇಶದಲ್ಲಿ ಇದೆ. ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿದ ಒಂದು ಪಟ್ಟಣ. ಚಿತ್ರಕೂಟ ಧಾಮ್ (Karwi) ಇದು ಹತ್ತಿರದ ಪಟ್ಟಣ. ಇದು ದೇವಾಲಯಗಳು ಮತ್ತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಅನೇಕ ತಾಣಗಳಿಗೆ ಹೆಸರುವಾಸಿಯಾಗಿದೆ.

ಅನೇಕ ಜನರು ಪ್ರತಿ ಅಮಾವಾಸ್ಯೆಯೂ ಇಲ್ಲಿ ಒಂದುಗೂಡುತ್ತಾರೆ.ಸೋಮವತಿ ಅಮಾವಾಸ್ಯೆ, ದೀಪಾವಳಿ, ಶರದ್-ಪೂರ್ಣಿಮ, ಮಕರ ಸಂಕ್ರಾಂತಿ ಮತ್ತು ರಾಮನವಮಿ ಇಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷ ಆಚರಣೆಗಳು ಉಚಿತ ಕಣ್ಣಿನ ಆಸ್ಪತ್ರೆ ಶಿಬಿರಗಳಿಂದಾಗಿ ವರ್ಷ ಪೂರ್ತಿ ಜನಸಂದಣಿಯನ್ನು ಆಕರ್ಷಿಸುತ್ತದೆ. 'ಆರೋಗ್ಯಧಾಮ' ದಂತಹ ಖ್ಯಾತ 'ಆಯುರ್ವೇದ' ಮತ್ತು 'ಯೋಗ' ಕೇಂದ್ರಗಳು ಚಿತ್ರಕೂಟ ನೆಲೆಗೊಂಡಿವೆ.

ಚಿತ್ರಕೂಟ 'ಅನೇಕ ಅದ್ಭುತಗಳ ಬೆಟ್ಟ ' ಎಂದರ್ಥ. ಚಿತ್ರಕೂಟ ಪ್ರದೇಶವು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹರಡಿರುವ ಉತ್ತರ ವಿಂಧ್ಯಾ ಪರ್ವತಗಳ ವ್ಯಾಪ್ತಿಯಲ್ಲಿ ಬರುತ್ತಿದ್ದು. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲೂ ಮತ್ತು ಮಧ್ಯಪ್ರದೇಶದ ಸತ್ನ ಜಿಲ್ಲೆಯಲ್ಲೂ ಚಿತ್ರಕೂಟವನ್ನು ಸೇರಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಇದು ರಾಮ, ಸೀತಾ ಮತ್ತು ಅವರ ಸಹೋದರ ಲಕ್ಷ್ಮಣ ತಮ್ಮ ವನಸವಾಸದ ಹದಿನಾಲ್ಕು ವರ್ಷಗಳಲ್ಲಿನ ಹನ್ನೊಂದುವರೆ ವರ್ಷಗಳ ಕಾಲ ಈ ಆಳವಾದ ಕಾಡುಗಳಲ್ಲಿ ಕಳೆದರು. ; ಮಹಾ ಸಂತ ಅತ್ರಿ, ಸತಿ ಅನಸೂಯೆ, ದತ್ತಾತ್ರೇಯ, ಮಹರ್ಷಿ ಮಾರ್ಕಾಂಡೇಯ,ಮುಂತಾದವರು ಇಲ್ಲಿದ್ದರು. ಇಲ್ಲಿ ಬ್ರಹ್ಮ, ವಿಷ್ಣು ಮತ್ತು ಈಶ್ವರ ಈ ತ್ರಿಮೂರ್ತಿಗಳು ಅವತಾರ ಎತ್ತಿದರು..