ವಿಷಯಕ್ಕೆ ಹೋಗು

ಹೆಲೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಲನ್
ಚಿತ್ರನಟಿ ಹೆಲನ್
ಜನನ
ಹೆಲನ್ ರಿಚರ್ಡ್ಸನ್

(1939-11-21) ೨೧ ನವೆಂಬರ್ ೧೯೩೯ (ವಯಸ್ಸು ೮೪)
ವೃತ್ತಿ(ಗಳು)ನಟಿ, ನಾಟ್ಯಗಾರ್ತಿ
Years active೧೯೫೧–
ಸಂಗಾತಿಸಲೀಂ ಖಾನ್ (೧೯೮೦–)

ಹೆಲನ್ ಜೈರಾಗ್ ರಿಚರ್ಡ್ಸನ್ (ಜನನ ೨೧ ಅಕ್ಟೋಬರ್ ೧೯೩೯, ಬರ್ಮಾದಲ್ಲಿ) ಭಾರತೀಯ ಚಲನಚಿತ್ರ ನಟಿ ಮತ್ತು ನಾಟ್ಯಗಾರ್ತಿ. ಇವರು ಆಂಗ್ಲೋ-ಬರ್ಮೀಸ್ ಜನಾಂಗಕ್ಕೆ ಸೇರಿದವರು.[೧]

ಹಿಂದಿ ಚಲನಚಿತ್ರದ 'ಕ್ಲಬ್ ಡಾನ್ಸರ್', ಆಗಿ ಹಲವಾರು-ವರ್ಷಗಳಕಾಲ ಅಭಿನಯಿಸಿದರು[ಬದಲಾಯಿಸಿ]

ಹಿಂದಿ ಚಿತ್ರರಂಗದಲ್ಲಿ ಡಾನ್ಸರ್ ಆಗಿ ಹಲವಾರು ಚಿತ್ರಗಳಲ್ಲಿ ಮೆರೆದು, ವಿಜೃಂಭಿಸಿದ, ಹೆಲೆನ್, ರವರ ಹೆಸರು, 'ಹೆಲೆನ್ ಜೈರಾಗ್ ರಿಚರ್ಡ್ ಸನ್' ಯೆಂದು. ಆ ದಿನಗಳಲ್ಲಿ 'ಕ್ಲಬ್ ಡಾನ್ಸ್' ಮಾಡುವವರ ಸಂಖ್ಯೆಯೂ ಕಡಿಮೆಯಿತ್ತು. ಮೇಲಾಗಿ 'ಕ್ಲಬ್ ಡಾನ್ಸ್' 'ಹೆಲೆನ್' ರ ತರಹ ಬೇರೆ ಯಾರಿಗೂ ಮಾಡುವ ಧರ್ಯವಿರಲಿಲ್ಲ.

ಜನನ[ಬದಲಾಯಿಸಿ]

ಹೆಲೆನ್ ಜನಿಸಿದ್ದು, ಬರ್ಮಾ ದೇಶದಲ್ಲಿ, ೨೧ ಅಕ್ಟೋಬರ್,೧೯೩೯, ರಂದು. ಅವರಿಗೆ, ಒಬ್ಬ ಸೋದರ, ರೋಜರ್, ಮತ್ತು ಸೋದರಿ, ಜೆನಿಫರ್, ಇದ್ದಾರೆ. ೨ ನೇ ವಿಶ್ವಯುದ್ಧದಲ್ಲಿ ತಂದೆಯವರು ನಿಧನರಾದರು. ೧೯೪೩ ರಲ್ಲಿ ಪರಿವಾರ ಬೊಂಬಾಯಿಗೆ ವಲಸೆಬಂದರು. ತಾಯಿ 'ನರ್ಸ್' ಆಗಿ ಕೆಲಸಮಾಡುತ್ತಿದ್ದರು. ಶಾಲೆಯಲ್ಲಿ ಓದುತ್ತಿದ್ದ ಹೆಲೆನ್, ಅಮ್ಮನಿಗೆ ಸಹಾಯಕ್ಕಾಗಿಯೇ ಮನೆಯಲ್ಲಿ ಉಳಿದರು. ಹೆಲೆನ್ ಪರಿವಾರಕ್ಕೆ ಗೊತ್ತಿದ್ದ ನ್ಪರಿವಾರದ ಸದಸ್ಯೆ,ನಟಿ-ಕುಕೂ,ಯೆಂಬುವರು,ಶಬಿಸ್ತಾನ್ ಮತ್ತು ಆವಾರಚಲನಚಿತ್ರಗಳಲ್ಲಿ (೧೯೫೧)ಸಮೂಹ ನೃತ್ಯದಲ್ಲಿ ಕೆಲಸಮಾಡಲು, ಕರೆದುಕೊಂಡು ಹೋದರು. ಹೆಲೆನ್, ಕ್ರಮವಾಗಿ ಹೀಗೆ ಬಂದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಕೊನೆಗೆ, ಸ್ವತಃ 'ತಾವೊಬ್ಬರೆ ಡಾನ್ಸ್', ಮಾಡಲು ಕಲಿತರು.

ಸಿನಿಮಾರಂಗದಲ್ಲಿ ಪಾದಾರ್ಪಣೆ[ಬದಲಾಯಿಸಿ]

 • 'ಆಲಿಫ್ ಲೈಲಾ' (1954),
 • 'ಹೂರ್-ಎ-ಅರಬ್'(1953),
 • ’ಇಮಾಮ್ ಧರಮ್’,
 • ’ಡಾನ್’,
 • ’ದೋಸ್ತಾನ’,
 • ’ಶೊಲೆ’
 • ’ಲಹು ಕೆ ದೊ ರಂಗ್’ (೧೯೭೯),
 • 'ಮಿಸ್ಟರ್ ಜಾನ್, ಓ ಬಾಬಾ ಖಾನ್," 'ಬಾರಿಶ್', ಚಿತ್ರದಲ್ಲಿ.

"ಮೇರಾ ನಾಮ್ ಚಿನ್, ಚಿನ್, ಚು" ಡಾನ್ಸ್ ನಂಬರ್, ಜನಪ್ರಿಯತೆಯ ಶಿಖರವನ್ನು ಮುಟ್ಟಿತು[ಬದಲಾಯಿಸಿ]

ಸನ್, ೧೯೫೮, ರಲ್ಲಿ, ಶಕ್ತಿ ಸಾಮಂತರ, ಹೌರಾ ಬ್ರಿಡ್ಜ್ ನಲ್ಲಿ, "ಮೇರಾ ನಾಮ್ ಚಿನ್, ಚಿನ್, ಚು" ಯೆಂಬ ಗೀತಾದತ್ ಹಾಡಿದ ಗೀತೆಗೆ ತಕ್ಕಂತೆ ಮಾಡಿದ ನೃತ್ಯ, ಅಪಾರ ಜನಪ್ರಿಯತೆಯನ್ನು ಹಾಸಿಲ್ ಮಾಡಿತು. ಹೆಲೆನ್ ರವರ ಪಾತ್ರಕ್ಕೆ ತಕ್ಕಂತಹ ಹಲವಾರು ಹಾಡುಗಳನ್ನು, 'ಗೀತಾ ದತ್' ಹಾಡಿದರು. ನಂತರ ಬಂದ ಆಶಾ ಭೌಸ್ಲೆ ಯವರೂ ೧೯೬೦-೭೦ ರ ಘಟ್ಟದಲ್ಲಿ ಹಾಡಿದರು.

ಹೆಲೆನ್ ಪಾತ್ರವಹಿಸಿದ ಚಿತ್ರಗಳು[ಬದಲಾಯಿಸಿ]

೧೯೬೫ ರ ಗುಮ್ ನಾಮ್ ಚಿತ್ರದಲ್ಲಿ ಮಾಡಿದ ಪಾತ್ರಕ್ಕೆ, ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ ಯೆಂದು ಫಿಲ್ಮ್ ಫೇರ್ ಪ್ರಶಸ್ತಿಗಾಗಿ ಅವರ ಹೆಸರನ್ನು 'ನಾಮಾಂಕಿತ' ಮಾಡಲಾಗಿತ್ತು.(೧೯೭೦).ರಲ್ಲಿ ಶಕ್ತಿ ಸಾಮಂತ ರ 'ಪಗ್ಲ ಕಹಿ ಕ', ಎಂಬ ಚಿತ್ರಕ್ಕೆ, 'ರೇಪ್ ಆದ ಹುಡುಗಿ'ಯ ಪಾತ್ರವನ್ನು ನಟಿಸಿದ್ದರು. ಚಿತ್ರದಲ್ಲಿ 'ಪಟ್ ಕಥಾ ಲೇಖಕ, 'ಸಲಿಮ್ ಖಾನ್', ಸಹಾಯದಿಂದ, ಅವರ ಸೋದರ, ಜಾವಿದ್ ಅಖ್ತರ್ ರ, ಬರೆದ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು.

ನಿವೃತ್ತಿಯ ಬಳಿಕ, ಅತಿಥಿ,ಪಾತ್ರದಲ್ಲಿ[ಬದಲಾಯಿಸಿ]

ಮಹೇಶ್ ಭಟ್ ನಿರ್ಮಿಸಿದ ಚಿತ್ರ, ’ಫಿಲ್ಮ್ ಫೇರ್ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ ಅವಾರ್ಡ್’ ಗೆ ನಾಮಾಂಕಿತವಾಗಿತ್ತು. ಹೆಲೆನ್,ನಿವೃತ್ತಿಯನ್ನು ಘೋಶಿಸಿ, ೧೯೯೯ ಮತ್ತು ೨೦೦೦ ರಲ್ಲಿ ’ಅತಿಥಿ ನಟಿ’ ಯಾಗಿ ಮಾತ್ರ ಪಾತ್ರವಹಿಸಿದ್ದರು.

ಪದ್ಮಶ್ರೀ ಪ್ರಶಸ್ತಿ[ಬದಲಾಯಿಸಿ]

ಮೊಹಬತೆ’ ಚಿತ್ರದಲ್ಲಿ ಹೈಸ್ಕೂಲಿನ ಮುಖ್ಯಸ್ಥೆಯಾಗಿ,ಅಭಿನಯಿಸಿ, ಎಲ್ಲರನ್ನೂ ಚಕಿತಗೊಳಿಸಿದ್ದರು. ಸಲ್ಮಾನ್ ಖಾನ್ ರ ತಾಯಿಯ ಪಾತ್ರದಲ್ಲಿ, ಹಮ್ ದಿಲ್, ದೇ ಚುಕೆ ಸನಮ್, ನಲ್ಲಿ ಕಾಣಿಸಿಕೊಂಡರು. ಸನ್, ೨೦೦೯ ರಲ್ಲಿ ಪದ್ಮಶ್ರೀ ಪ್ರಶಸ್ತಿ, ಯನ್ನು ಹೆಲೆನ್, ಐಶ್ವರ್ಯ ರಾಯ್, ಹಾಗೂ ಅಕ್ಷಯ್ ಕುಮಾರ್, ಗೆ,ಕೊಡಲಾಯಿತು.

ಸ್ಟೇಜ್ ಶೋಗಳು[ಬದಲಾಯಿಸಿ]

ಹೆಲೆನ್, ಲಂಡನ್, ಪ್ಯಾರಿಸ್ ಮತ್ತು ಹಾಂಗ್ ಕಾಂಗ್ ನಲ್ಲಿ ಸ್ಟೇಜ್ ಶೋ ಗಳನ್ನು ಪ್ರಸ್ತುತಪಡಿಸಿದರು.

ಫಿಲ್ಮ್-ಫೇರ್ ಅವಾರ್ಡ್ ಗಳು[ಬದಲಾಯಿಸಿ]

ಮದುವೆ[ಬದಲಾಯಿಸಿ]

೧೯೮೦ ರಲ್ಲಿ, 'ಹೆಲೆನ್', 'ಸಲಿಮ್ ಖಾನ್' ರ ಎರಡನೆಯ ಪತ್ನಿಯಾಗಿ ವಿವಾಹವಾದರು. ಇವರ, ಸಾಕುಮಗಳು, ಅರ್ಪಿತಾ 'ಹೆಲೆನ್' ರವರ ಮಲಮಗ,'ಸಲ್ಮಾನ್ ಖಾನ್' ,ಹಮ್ ದಿಲ್ ದೆ ಚುಕೆ ಸನಮ್, ಚಿತ್ರದಲ್ಲಿ ಅವನ ತಾಯಿಯ ಪಾತ್ರವನ್ನು ಹೆಲೆನ್ನರೇ ಅಭಿನಯಿಸಿದ್ದಾರೆ. ಖಾಮೊಶಿ,ಚಿತ್ರದಲ್ಲಿ, ಅವನ ಅತ್ತೆಯ ಪಾತ್ರದಲ್ಲಿ, ಕಾಣಿಸಿಕೊಂಡಿದ್ದಾರೆ. 'ಮೆರಿಗೋಲ್ಡ್',ನಲ್ಲಿಯೂ -the Musical " & "Dil ne jise apna kahA" ಪಾತ್ರದಲ್ಲಿ ಇದ್ದಾರೆ.

ಪ್ರಶಸ್ತಿಗಳು ಮತ್ತು ನೇಮಕಗಳು[ಬದಲಾಯಿಸಿ]

 • Filmfare Nomination as 'Best Supporting Actress for Gumnaam' (1965)
 • Filmfare Nomination as 'Best Supporting Actress for Shikar' (1968)
 • Filmfare Nomination as 'Best Supporting Actress for Elan' (1971)
 • Filmfare 'Best Supporting Actress Award for Lahu Ke Do Rang' (1979)
 • Filmfare Nomination as 'Best Supporting Actress for Khamoshi': The Musical (1996)
 • Filmfare 'Lifetime Achievement Award' (1998)[6]
 • 'Padma Shri,'- a civilian honour from the Indian

ಉಲ್ಲೇಖಗಳು[ಬದಲಾಯಿಸಿ]

 1. "Bollywood Actresses - Helen". Iloveindia.com. 21 October 1939. Retrieved 16 October 2011.
"https://kn.wikipedia.org/w/index.php?title=ಹೆಲೆನ್&oldid=1174870" ಇಂದ ಪಡೆಯಲ್ಪಟ್ಟಿದೆ