ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ಕನ್ನಡ ಸಾಹಿತ್ಯ ಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲ್ಮಿಡಿ ಶಾಸನನದ ಸ್ಮಾರಕ
ಕಪ್ಪೆ ಅರಭಟ್ಟಬಾದಾಮಿ ಶಾಸನ

ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮೈಸೂರಿನಲ್ಲಿ ಪೂರ್ವಭಾವಿಯಾಗಿ ೨೦೧೬ರ ಜನವರಿ ತಿಂಗಳಲ್ಲಿ ಕನ್ನಡ ವಿಕಿಪೀಡಿಯಕ್ಕೆ ನಡೆಸಿದ ಸಂಪಾದನೋತ್ಸವದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿ ಬಂದ ಲೇಖನಗಳ ವಿವರ ಈ ಪುಟದಲ್ಲಿದೆ.

  • ವಿವಿಧ ಪ್ರಕಾರಗಳಲ್ಲಿ ಕನ್ನಡದ ಸಮಗ್ರ ಬರಹಗಾರರು, ಕನ್ನಡ ನಾಡಿನ ವಿವಿಧ ಕ್ಷೇತ್ರದ ಸಾಧಕರು, ಸಾಧಕಿಯರ ಮಾಹಿತಿ ನೀಡುವ ಲೇಖನಗಳ ತಯಾರಿ.
    • ವ್ಯಕ್ತಿ ಪರಿಚಯ ಮಾಡುವಾಗ ಕವಿ, ಕಾಲ, ಕೃತಿ, ಸಾಧನೆ, ಪುರಸ್ಕಾರ/ಪ್ರಶಸ್ತಿಗಳ ಪರಿಚಯ ನೀಡುವುದು.
  • ವಿವಿಧ ಶಿಸ್ತಿಗೆ ಸಂಬಂಧಿಸಿದ ವಿಷಯ ನಿಷ್ಟ ಮಾಹಿತಿಗಳು.
    • ಸಾಹಿತ್ಯ ಪ್ರಕಾರಗಳ, ಕೃತಿಗಳ ಪರಿಚಯ, ಕನ್ನಡ ನಾಡಿನ ಚರಿತ್ರೆ, ಕರ್ನಾಟಕದ ಆಳರಸರ ಕನ್ನಡ ಕೊಡುಗೆ, ಕನ್ನಡಕ್ಕೆ ಸಂಬಂಧಿಸಿದ ಶಾಸನಗಳು ಮತ್ತು ಅವುಗಳ ಚಾರಿತ್ರಿಕ, ಸಾಂಸ್ಕೃತಿಕ ವಿವರಗಳು, ಕನ್ನಡ ಛಂದಸ್ಸಿನ ಚರಿತ್ರೆ, ಕನ್ನಡ ವ್ಯಾಕರಣದ ಚರಿತ್ರೆ, ಕನ್ನಡ ಭಾಷೆ ಬೆಳೆದು ಬಂದ ಬಗೆಗೆ ವಿವರಣೆ, ಕನ್ನಡ ಜಾನಪದ ಬೆಳೆದು ಬಂದ ಬಗೆ ಮತ್ತು ಜಾನಪದ ಕೃತಿಗಳು, ಕನ್ನಡ ವಿಮರ್ಶೆ ಬೆಳೆದು ಬಂದ ಬಗೆ, ಕನ್ನಡಿಗರ ಬಗೆಗೆ ಬಂದ ಜೀವನ ಚರಿತ್ರೆಗಳು ಇತ್ಯಾದಿಯಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಪೂರಕವಾದ ಲೇಖನಗಳನ್ನು ಮಾಹಿತಿಯಾಗಿ ನೀಡುವ ಪ್ರಯತ್ನವನ್ನು ಮಾಡುವುದು.
  1. ಕನ್ನಡದ ಶಾಸನಗಳು, ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆ, ಪೂರ್ವದ ಹಳಗನ್ನಡ ಸಾಹಿತ್ಯದ ಪ್ರೇರಣೆ, ಹಳಗನ್ನಡ ಸಾಹಿತ್ಯ ಪ್ರೇರಣೆ, ನಡುಗನ್ನಡ ಸಾಹಿತ್ಯ ಪ್ರೇರಣೆ, ಹೊಸಗನ್ನಡ ಸಾಹಿತ್ಯ ಪ್ರೇರಣೆ, ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನ ಬೆಳೆದುಬಂದ ಬಗೆ, ಕನ್ನಡ ವ್ಯಾಕರಣ ಬೆಳೆದು ಬಂದ ಬಗೆ, ಕನ್ನಡ ಛಂದಸ್ಸು ಬೆಳೆದುಬಂದ ಬಗೆ, ಕನ್ನಡ ಜಾನಪದ ಬೆಳೆದುಬಂದ ಬಗೆ, ಕನ್ನಡ ಸಾಹಿತ್ಯ ವಿಮರ್ಶೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಜೀವನ ಚರಿತ್ರೆ ಬೆಳೆದುಬಂದ ಬಗೆ, ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ಆತ್ಮಕಥನ ಬೆಳೆದು ಬಂದ ಬಗೆ, ಕನ್ನಡದಲ್ಲಿ ಪ್ರವಾಸಿ ಸಾಹಿತ್ಯ ಬೆಳೆದು ಬಂದ ಬಗೆ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆದು ಬಂದ ಬಗೆ ಇತ್ಯಾದ ಸಮಗ್ರ ವಿಚಾರಗಳನ್ನು ಕನ್ನಡಕ್ಕೆ ಅನ್ವಯಿಸಿ ಚರ್ಚಿಸಲಾಗುವುದು.

ಕನ್ನಡ ಸಾಹಿತ್ಯ

[ಬದಲಾಯಿಸಿ]

ಕನ್ನಡ ಸಾಹಿತ್ಯವೆಂಬುದು ವಿಶಾಲವಾದ ವಿವರವುಳ್ಳ, ವಿಚಾರವುಳ್ಳ ಶಿಸ್ತು. ಈ ಭಾಗದಲ್ಲಿ ಕನ್ನಡ ಸಾಹಿತ್ಯ ಚರಿತ್ರೆ, ಕನ್ನಡದ ಕವಿಗಳು, ಕನ್ನಡ ಕೃತಿಗಳು ಕುರಿತಂತೆ ಮಾಹಿತಿಗಳು ಸಮಗ್ರವಾಗಿ ಇಲ್ಲ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಎಲ್ಲಾ ಮಜಲುಗಳಲ್ಲಿ ಆದ, ಆಗಬೇಕಾದ ವಿಚಾರಗಳನ್ನು, ಚಿಂತನೆಗಳನ್ನು ಈ ಪುಟದಲ್ಲಿ ನೀಡಲು ಬಯಸಲಾಗಿದೆ.

ಕನ್ನಡನಾಡು ನುಡಿ ಮತ್ತು ಶಾಸನಗಳು

[ಬದಲಾಯಿಸಿ]

ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಸಾರುವ ಉಲ್ಲೇಖಗಳು ಪ್ರಾಚೀನ ಕಾಲದಲ್ಲಿ ಇದ್ದುವು ಎನ್ನುವುದಕ್ಕೆ ಹಲವಾರು ಸಾಕ್ಷಿಗಳಿವೆ. ಶಾಸನಗಳಲ್ಲಿ ಕನ್ನಡ ನುಡಿ, ಕನ್ನಡ ಲಿಪಿ, ಕನ್ನಡ ಪ್ರಾಚೀನತೆಯನ್ನು ಸಾರುವ ಅಂಶಗಳಿವೆ. ಅಲ್ಲದೆ ಈ ಕಾಲದ ಕೃತಿಗಳು ಶಿಲಾ ಶಾಸನ, ತಾಮ್ರಶಾಸನ, ತಾಳೆಗರಿ

ಕಾಲ ಶಾಸನ ರಾಜ ಮನೆತನ/ದೇಶ
ಗ್ರೀಕ್ ಪ್ರಹಸನ ಗ್ರೀಕ್ ಗ್ರೀಕ್
೩ನೇ ಶ. ಶಿಲಾಲಿಪಿ/ತಾಮ್ರಲಿಪಿ ಪ್ರಾಕೃತ/ಸಂಸ್ಕೃತ ಅಶೋಕ
೪೫೦ ಕ್ರಿ. ಶ. ಹಲ್ಮಿಡಿ ಶಾಸನ ಕನ್ನಡ ಕಾಕುತ್ಸವರ್ಮ
೬೩೪ ಕ್ರಿ.ಶ ಐಹೋಳೆ ಶಾಸನ ಸಂಸ್ಕೃತ ಇಮ್ಮಡಿ ಪುಲಿಕೇಶಿ
೭ನೇ ಶ. ಕಪ್ಪೆ ಅರಭಟ್ಟ ಶಾಸನ ಕನ್ನಡ
೯-೧೦ನೇ ಶ ಗಂಗಾಧರ ಶಾಸನ ಕನ್ನಡ ಸಂಸ್ಕೃತ ತೆಲುಗು ಜಿನವಲ್ಲಭ
೧೩೬೫ ಕ್ರಿ ಶ. ಶ್ರವಣಬೆಳಗೊಳ ಶಾಸನ ಕನ್ನಡ ಜೈನ ಪರಂಪರೆ

ಕನ್ನಡ ಸಾಹಿತ್ಯಕ್ಕೆ ಪ್ರಾಕೃತ ಮತ್ತು ಸಂಸ್ಕೃತ ಸಾಹಿತ್ಯದ ಪ್ರೇರಣೆ

[ಬದಲಾಯಿಸಿ]
  1. ಪ್ರಾಕೃತ ಮತ್ತು ಸಂಸ್ಕೃತ ಕವಿಗಳು ಹಾಗೂ ಅವರ ಕೃತಿಗಳ ಪರಿಚಯವನ್ನು ಕನ್ನಡ ಸಾಹಿತ್ಯಕ್ಕೆ ಪೂರಕವಾಗುವ ಅಂಶಗಳೆಂದು ಪರಿಗಣಿಸಿ ವಿವರಸಬಹುದು.

ಪ್ರೇರಣೆಗಳು-

ಇದರಲ್ಲಿ ನಾಲ್ಕು ಅಂಶಗಳು ಇವೆ ಅವು ಯಾವವು ಅಂದರೆ 1=ಮತ ಧರ್ಮಗಳ ಪ್ರಭಾವ 2=ರಾಜಶ್ರಯ 3=ಯುಗಧರ್ಮ 4=ಕವಿಯ ಸೃಜನಶೀಲತೆ

ಕನ್ನಡ ಸಾಹಿತ್ಯ ಚರಿತ್ರೆಯ ಭಿನ್ನ ಘಟ್ಟ

[ಬದಲಾಯಿಸಿ]

ಕನ್ನಡ ಸಾಹಿತ್ಯ ಬೆಳೆದುಬಂದ ಬಗೆಯನ್ನು ಈ ಮುಂದಿನ ಪಟ್ಟಿಯಲ್ಲಿ ವಿವರಿಸಲಾಗುತ್ತದೆ.[]

ಘಟ್ಟ ಕಾಲ ಯುಗ ಛಂದಸ್ಸು
ಪೂರ್ವದ ಹಳಗನ್ನಡ ೧೦ನೇ ಶತಮಾನಕ್ಕಿಂತ ಪೂರ್ವ ಪಂಪ ಪೂರ್ವ ಯುಗ ಸಂಸ್ಕೃತ ಮತ್ತು ಪ್ರಾಕೃತ
ಹಳಗನ್ನಡ ೧೦ ರಿಂದ ೧೨ನೇ ಶತಮಾನದ ವರೆಗೆ ಪಂಪ ಯುಗ ಚಂಪೂ - ವೃತ್ತ ಮತ್ತು ಕಂದ
ನಡುಗನ್ನಡ ೧೨ ರಿಂದ ೧೫ ನೇ ಶತಮಾನದ ವರೆಗೆ ಬಸವಯುಗ ವಚನ
ನಡುಗನ್ನಡ ೧೫ ರಿಂದ ೧೮ನೇ ಶತಮಾನದ ವರೆಗೆ ಕುಮಾರವ್ಯಾಸ ಯುಗ ಷಟ್ಪದಿ
ಹೊಸಗನ್ನಡ ೧೯ನೇ ಶತಮಾನದಿಂದ ಈ ವರೆಗೆ ಹೊಸಯುಗ ಹೊಸ ಚಳುವಳಿಗಳು

ಕನ್ನಡ ಸಾಹಿತ್ಯ ವಿಭಾಗಕ್ರಮ

[ಬದಲಾಯಿಸಿ]

ನಮ್ಮಲ್ಲಿ ಕೆಲವು ಭಾಷಾ ವಿದ್ವಾಂಸರು ಸಾಹಿತ್ಯ ಚರಿತ್ರೆ ಬರೆಯುವಾಗ ಬಹಳ ಮುಖ್ಯವಾಗಿ ಒಂದೊಂದು ಬಗೆಯ ವಿಭಾಗ ಕ್ರಮಗಳನ್ನು ಅನುಸರಿಸಿದ್ದಾರೆ. ಅವರ ಹೆಸರುಗಳು ಈ ರೀತಿಯಾಗಿದೆ.

ರೆವರೆಂಡ್ ಎಫ್ ಕಿಟ್ಟಲ್

[ಬದಲಾಯಿಸಿ]
  1. ಆರಂಭಕಾಲ (ಕ್ರಿ.ಶ.ಸು.807-1300)
  2. ಅನಂತರ ಲಿಂಗಾಯಿತ ಮತ್ತು ಶೈವಕಾಲ (ಕ್ರಿ.ಶ.1300-1500)
  3. ವೈಷ್ಣವ, ಲಿಂಗಾಯಿತ ಶೈವಕಾಲ (ಕ್ರಿ.ಶ.ಸು.1300-1874)

ಕೆ.ವೆಂಕಟರಾಮಪ್ಪ

[ಬದಲಾಯಿಸಿ]
  1. ಆರಂಭಕಾಲ - ಕ್ರಿ.ಶ.900 ರವರೆಗೆ
  2. ಪಂಪನ ಕಾಲ - ಕ್ರಿ.ಶ.900 ರಿಂದ 1200
  3. ಸ್ವತಂತ್ರಯುಗ – ಕ್ರಿ.ಶ.12 ರಿಂದ 17 ನೇ ಶತಮಾನ
  4. ಚಿಕ್ಕದೇವರಾಯರ ಕಾಲ - ಕ್ರಿ.ಶ.17ನೇ ಶತಮಾನದಿಂದ
  5. ಸಂಧಿಕಾಲ - ಕ್ರಿ.ಶ.1794 ರಿಂದ 1864 ವರೆಗೆ

ಬಿ.ಎಲ್.ರೈಸ್

[ಬದಲಾಯಿಸಿ]
  1. ಪೂರ್ವದ ಹಳಗನ್ನಡ (ಆರಂಭದಿಂದ ಕ್ರಿ.ಶ.7ನೇ ಶತಮಾನ)
  2. ಹಳಗನ್ನಡ ( ೮ ರಿಂದ ೧೨ನೇ ಶತಮಾನ)
  3. ಆರಂಭಕಾಲದಿಂದ ಕ್ರಿ.ಶ.ಸು 1300 ರವರೆಗೆ ಜೈನರು
  4. ಕ್ರಿ.ಶ.ಸು.1300 ರಿಂದ 1500 ರವರೆಗೆ ಲಿಂಗಾಯಿತರು
  5. ಕ್ರಿ.ಶ.ಸು 1500 ರಿಂದ ಬ್ರಾಹ್ಮಣರು ಮತ್ತು ವೈಷ್ಣವರು
  6. ಹೊಸಗನ್ನಡ (14ನೇ ಶತಮಾನದಿಂದ ಮುಂದೆ)

ಬಿ.ಎಂ.ಶ್ರೀಕಂಠಯ್ಯ

[ಬದಲಾಯಿಸಿ]
  1. ಆರಂಭಕಾಲ - 10ನೇ ಶತಮಾನದವರೆಗೆ
  2. ಮತಪ್ರಾಬಲ್ಯ ಕಾಲ - 10 -19 ಶತಮಾನಗಳು
  3. ಜೈನಕವಿಗಳು – 10 ನೇ ಶತಮಾನದಿಂದ
  4. ವೀರಶೈವ ಕವಿಗಳು – 12 ನೇ ಶತಮಾನದಿಂದ
  5. ಬ್ರಾಹ್ಮಣ ಕವಿಗಳು – 15 ನೇ ಶತಮಾನದಿಂದ
  6. ನವೀನ ಕಾಲ - 19 ನೇ ಶತಮಾನದಿಂದ

ಆರ್.ನರಸಿಂಹಾಚಾರ್ಯ

[ಬದಲಾಯಿಸಿ]
  1. ಜೈನಯುಗ : ಆರಂಭ ಕಾಲದಿಂದ ಕ್ರಿ.ಶ.12 ಶತಮಾನದವರೆಗೆ
  2. ವೀರಶೈವ ಯುಗ : ಕ್ರಿ.ಶ.12 ರಿಂದ 15 ರವರೆಗೆ
  3. ಬ್ರಾಹ್ಮಣಯುಗ : ಕ್ರಿ.ಶ.15 ರಿಂದ 19 ರವರೆಗೆ

ರಂ.ಶ್ರೀ.ಮುಗಳಿ

[ಬದಲಾಯಿಸಿ]
  1. ಪಂಪಪುರ್ವಯುಗ
  2. ಪಂಪಯುಗ
  3. ಬಸವಯುಗ
  4. ಕುಮಾರವ್ಯಾಸ ಯುಗ

ಇ.ಪಿ.ರೈಸ್

[ಬದಲಾಯಿಸಿ]
  1. ಜೈನ – ಆರಂಭದಿಂದ 12 ನೇ ಶತಮಾನ
  2. ಲಿಂಗಾಯತ ಅಥವಾ ವೀರಶೈವ – 12 ರಿಂದ 16ನೇ ಶತಮಾನ
  3. ವೈಷ್ಣವ – 17 ರಿಂದ 19 ನೇ ಶತಮಾನದವೆರೆ
  4. ಆಧುನಿಕ ಕಾಲ - 20ನೇ ಶತಮಾನದಿಂದ ಮುಂದಕ್ಕೆ

ಎಂ.ಮರಿಯಪ್ಪ ಭಟ್ಟ

[ಬದಲಾಯಿಸಿ]
  1. ಪೂರ್ವದ ಹಳಗನ್ನಡ
  2. ಹಳಗನ್ನಡ ಗದ್ಯ ಸಾಹಿತ್ಯ
  3. ಚಂಪು ಕಾವ್ಯಗಳು
  4. ಶಾಸನ ಸಾಹಿತ್ಯ
  5. ಶತಕ ಸಾಹಿತ್ಯ
  6. ಲಕ್ಷಣ ಸಾಹಿತ್ಯ
  7. ಶಾಸ್ತ್ರೀಯ ಸಾಹಿತ್ಯ
  8. ನಡುಗನ್ನಡ ಸಾಹಿತ್ಯ
  9. ಜಾನಪದ ವಾಙ್ಮಯ
  10. ಹೊಸಗನ್ನಡ ಸಾಹಿತ್ಯ

ಎಂ.ಎ.ದೊರೆಸ್ವಾಮಯ್ಯಂಗಾರ್

[ಬದಲಾಯಿಸಿ]
  1. ಮೂಲಗನ್ನಡಕಾಲ - ಕ್ರಿ,ಶ.750 ರವರೆಗೆ
  2. ಹಳಗನ್ನಡ ಕಾಲ - ಕ್ರಿ.ಶ.750 ರಿಂದ 1150 ರವೆರೆಗೆ
  3. ಮಧ್ಯಕನ್ನಡ ಕಾಲ - ಕ್ರಿ.ಶ.1150 ರಿಂದ 1500 ರವರೆಗೆ
  4. ಹೊಸಗನ್ನಡ ಕಾಲ - ಕ್ರಿ.ಶ.1500 ರಿಂದ 1850 ರವರೆಗೆ
  5. ನವಗನ್ನಡಕಾಲ - ಕ್ರಿಶ.1857 ರ ಮುಂದೆ

ತಿ.ತಾ.ಶರ್ಮ

[ಬದಲಾಯಿಸಿ]
  1. ಕ್ಷಾತ್ರಯುಗ – ಕ್ರಿ.ಶ. 10 ರಿಂದ 12 ರವರೆಗೆ
  2. ಮತ ಪ್ರಚಾರಯುಗ – ಕ್ರಿ.ಶ.12 ರಿಂದ 16 ರವರೆಗೆ
  3. ಸಾರ್ವಜನಿಕ ಯುಗ – ಕ್ರಿ.ಶ.16 ರಿಂದ 19ರವರೆಗೆ
  4. ಆಧುನಿಕ ಯುಗ – ಕ್ರಿ.ಶ.19 ರಿಂದ ಮುಂದಕ್ಕೆ

ತ.ಸು.ಶಾಮರಾಯ

[ಬದಲಾಯಿಸಿ]
  1. ಪಂಪ ಪುರ್ವಯುಗ
  2. ಪಂಪ ಯುಗ
  3. ಹರಿಹರ ಯುಗ
  4. ಕುಮಾರವ್ಯಾಸ ಯುಗ

ಪೂರ್ವದ ಹಳಗನ್ನಡ ಕಾಲಘಟ್ಟ

[ಬದಲಾಯಿಸಿ]

ಹಳಗನ್ನಡಕ್ಕಿಂತ ಪೂರ್ವದ ಕಾಲವನ್ನು ಪೂರ್ವದ ಹಳಗನ್ನಡವೆಂದು ಕರೆಯುತ್ತಾರೆ.

  1. ಗದ್ಯ-ಪದ್ಯ ಮಿಶ್ರಿತ ಕಾವ್ಯ
  2. ಗದ್ಯ ಕಾವ್ಯ
  3. ಗದ್ಯದ ಲಕ್ಷಣ
ಸಂಖ್ಯೆ ಕಾಲ ಗ್ರಂಥಕಾರ ಮತ ಗ್ರಂಥ ಗ್ರಂಥ ಸ್ವರೂಪ
೫೫೦-೬೦೦ ದುರ್ವಿನೀತ ಜೈನ ಬೃಹತ್ಕಥೆ | ವಡ್ಡಕಥೆ|ಶಬ್ದಾವತಾರ|ಟೀಕೆ ಸಂಸ್ಕೃತದಲ್ಲಿ ?
೬೫೦ ತುಂಬಲೂರಾಚಾರ್ಯ ಜೈನ ಚೂಡಾಮಣಿ ವ್ಯಾಖ್ಯಾನ ಗ್ರಂಥ
೬೫೦ ಶ್ಯಾಮಕುಂದಾಚಾರ್ಯ ಜೈನ ಕನ್ನಡ ಪ್ರಾಭೃತ ಇಲ್ಲವೆ ಪರಾಪದ್ಧತಿ ಶಾಸ್ತ್ರಗಂಥ
೮೦೦ ಸೈಗೊಟ್ಟ ಶಿವಕುಮಾರ ಜೈನ ಶಿವಕುಮಾರ ಮತ ಗಜಶಾಸ್ತ್ರಗಂಥ
೮೧೫-೮೭೭ ಶ್ರೀವಿಜಯ ಜೈನ ಕವಿರಾಜಮಾರ್ಗ ಕಾವ್ಯಲಕ್ಷಣ ಗ್ರಂಥ
೮೫೪ ಅಸಗ ಜೈನ ಕರ್ನಾಟಕ ಕುಮಾರಸಂಭವ ಕಾವ್ಯ ?
೯೦೦ ಗುಣನಂದಿ ಜೈನ ? ?
೯೦೦ ? ಗುಣವರ್ಮ-೧ ಜೈನ ಹರಿವಂಶ|ಶೂದ್ರಕ ಚಂಪೂಕಾವ್ಯ
೯೨೫ ಶಿವಕೋಟ್ಯಾಚಾರ್ಯ ಜೈನ ವಡ್ಡಾರಾಧನೆ ಗದ್ಯಕಥೆ

ಹಳಗನ್ನಡ ಕಾಲಘಟ್ಟ

[ಬದಲಾಯಿಸಿ]
  1. ಹಳಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು
  2. ಹಳಗನ್ನಡ ಚರಿತ್ರೆ - ಹಳಗನ್ನಡ ಕಾಲಘಟ್ಟವನ್ನು ನಿರ್ಧರಿಸುವ ಅಂಶಗಳು
  3. ಚಂಪೂ - ಚಂಪೂವಿನ ಲಕ್ಷಣ, ಚಂಪೂ ಕವಿಗಳು, ಚಂಪೂ ಕೃತಿಗಳು
  4. ಗದ್ಯ-ಪದ್ಯ ಮಿಶ್ರಿತ ಕಾವ್ಯ
  5. ಗದ್ಯದ ಲಕ್ಷಣ
  6. ರತ್ನತ್ರಯ
  7. ಕವಿ ಚಕ್ರವರ್ತಿ
  8. ಆಸ್ಥಾನ ಕವಿ
  9. ಬಿರುದು

ಕವಿಗಳು ಮತ್ತು ಕೃತಿಗಳು

[ಬದಲಾಯಿಸಿ]
ಸಂಖ್ಯೆ ಕಾಲ ಕವಿ ಬಿರುದು ಮತ ರಾಜಾಶ್ರಯ ಗ್ರಂಥ ಪ್ರಕಾರ
೯೦೨-೯೪೨ ಪಂಪ ಜೈನ ಚಾಲುಕ್ಯ ಅರಸು ಅರಿಕೇಸರಿ ೧.ಆದಿಪುರಾಣ

೨.ವಿಕ್ರಮಾರ್ಜುನ ವಿಜಯ/ಪಂಪಭಾರತ

ಚಂಪೂಕಾವ್ಯ
೯೫೦ ಪೊನ್ನ ಜೈನ ರಾಷ್ಟ್ರಕೂಟ ೩ನೆಯ ಕೃಷ್ಣ .ಶಾಂತಿಪುರಾಣ

೨.ಭುವನೈಕ ರಾಮಾಭ್ಯದಯ/ರಾಮಕಥೆ

೩. ಜಿನಾಕ್ಷರಮಾಲೆ

ಚಂಪೂಕಾವ್ಯ

ಕಂದ ಪದ್ಯ

೯೭೫ ಚಾವುಂಡರಾಯ ಜೈನ ಗಂಗರಾಚಮಲ್ಲ ೧. ಚಾವುಂಡರಾಯ ಪುರಾಣ ಗದ್ಯ ಗ್ರಂಥ
೯೯೦ ನಾಗವರ್ಮ-೧ ಬ್ರಾಹ್ಮಣ ರಕ್ಕಸಗಂಗ ? ೧. ಛಂದೋಂಬುಧಿ ಶಾಸ್ತ್ರಗ್ರಂಥ
೯೯೦ ರನ್ನ ಜೈನ ಚಾಲುಕ್ಯ ತೈಲಪ ಸತ್ಯಾಶ್ರಯ ಇರಿವಬೆಡಂಗ ೧. ಸಾಹಸಭೀಮವಿಜಯ/ಗದಾಯುದ್ಧಂ

೨. ಪರಶುರಾಮಚರಿತೆ

೩. ಚಕ್ರೇಶ್ವರಚರಿತೆ

೪. ಅಜಿತಪುರಾಣ

೫. ರನ್ನ ಕಂದ

ಚಂಪೂ
೧೦೨೪ ಚಾವುಂಡರಾಯ.೨ ಬ್ರಾಹ್ಮಣ ಚಾಲುಕ್ಯ ಜಯಸಿಂಹ ಜಗದೇಕಮಲ್ಲ ೧. ಲೋಕೋಪಚಾರ ೧. ವೃತ್ತಪದ್ಯ

೨. ಕಂದಪದ್ಯ

೧೦೩೦ ದುರ್ಗಸಿಂಹ ಬ್ರಾಹ್ಮಣ ಚಾಲುಕ್ಯ ಜಯಸಿಂಹ ಜಗದೇಕಮಲ್ಲ ಪಂಚತಂತ್ರ ಚಂಪೂಕಾವ್ಯ,

ಗದ್ಯ ಕಾವ್ಯ

೧೦೪೦ ಚಂದ್ರರಾಜ ಬ್ರಾಹ್ಮಣ ಮಹಾ ಸಾಮಂತ ರೇಚ ಮದನತಿಲಕ ಚಂಪೂ
೧೦೫೦ ಶ್ರೀಧರಾಚಾರ್ಯ ಜೈನ ಚಾಳುಕ್ಯ ಅಹಮಲ್ಲ - ೧ನೆಯ ಸೋಮೇಶ್ವರ ೧. ಜಾತಕ ತಿಲಕ

೨. ಚಂದ್ರಪ್ರಭಚರಿತ

ಶಾಸ್ತ್ರ - ಕಂದಪದ್ಯ, ವೃತ್ತ
೧೦ ೧೦೭೦ ಶಾಂತಿನಾಥ ಜೈನ ಭುವನೈಕಮಲ್ಲ ಪಸಾಯಿತ ಲಕ್ಷ್ಮನೃಪ ಸುಕುಮಾರಚರಿತ ಚಂಪೂ
೧೧ ೧೦೭೦ ನಾಗವರ್ಮಾಚಾರ್ಯ ಬ್ರಾಹ್ಮಣ ಭುವನೈಕಮಲ್ಲ ದಂಡನಾಯಕ ಉದಯಾದಿತ್ಯ ಚಂದ್ರಚೂಡಾಮಣಿ ಶತಕ ಶತಕ [ವೃತ್ತ]
೧೨ ೧೧೦೦ ನಾಗಚಂದ್ರ ಜೈನ ಹೊಯ್ಸಳ ಒಂದನೆಯ ಬಲ್ಲಾಳ ೧. ಮಲ್ಲಿನಾಥಪುರಾಣ

೨. ರಾಮಚಂದ್ರಚರಿತ ಪುರಾಣ - ಪಂಪರಾಮಾಯಣ

ಚಂಪೂ
೧೩ ೧೧೦೦? ಕಂತಿ ಜೈನ ಹೊಯ್ಸಳ ಒಂದನೆಯ ಬಲ್ಲಾಳ ಕಂತಿಹಂಪನ ಸಮಸ್ಯೆಗಳು ಕಂದ ಪದ್ಯ
೧೪ ೧೧೦೦ ನಯಸೇನ ಜೈನ - ಧರ್ಮಾಮೃತ ಚಂಪೂ

ಗದ್ಯ ಕಾವ್ಯ

೧೫ ೧೧೫೦ ಬ್ರಹ್ಮಶಿವ ಜೈನ - ೧. ಸಮಯಪರೀಕ್ಷೆ

೨. ತ್ರೈಲೋಕ್ಯಚೂಡಾಮಣಿ ಸ್ತೋತ್ರ

ವೃತ್ತ

ಕಂದ

೧೬ ೧೧೫೦ ಕರ್ಣಪಾರ್ಯ ಜೈನ ಲಕ್ಷ್ಮಣರಾಜ ನೇಮಿನಾಥಪುರಾಣ ಚಂಪೂ
೧೭ ೧೧೫೦ ನಾಗವರ್ಮ ೨ ಜೈನ ಚಾಲುಕ್ಯ ಜಗದೇಕಮಲ್ಲ ೧. ಭಾಷಾಭೂಷಣ

೨. ಕಾವ್ಯಾವಲೋಕನ

೩. ವಸ್ತುಕೋಶ

ಸೂತ್ರ

ಕಂದ ವೃತ್ತ

೧೮ ೧೧೫೦ ಸುಮನೋಬಾಣವ ಜೈನ ಹೊಯ್ಸಳ ನರಸಿಂಹ ಜೈನಪುರಾಣ ? -
೧೯ ೧೧೫೦ ಜಗದ್ಗಳ-ಸೋಮನಾಥ ಜೈನ - ಕರ್ನಾಟಕ ಕಲ್ಯಾಣಕಾರ್ಕ ಕಂದ, ವೃತ್ತ

ನಡುಗನ್ನಡ ಕಾಲಘಟ್ಟ

[ಬದಲಾಯಿಸಿ]
  1. ನಡುಗನ್ನಡ ಕಾಲಘಟ್ಟವನ್ನು ಚರ್ಚಿಸಬೇಕಾದ ಅಂಶಗಳು - ವಚನಕಾರರ ವಚನ ಸಾಹಿತ್ಯ, ಷಟ್ಪದಿಕಾರರ ಷಟ್ಪದಿ ಸಾಹಿತ್ಯ, ಕೀರ್ತನೆಗಾರರ ಕೀರ್ತನೆ ಸಾಹಿತ್ಯ, ಭಾಗವತ ಕವಿಗಳು, ಸಾಂಗತ್ಯ ಕವಿಗಳ ಸಾಂಗತ್ಯ ಕಾವ್ಯಗಳು, ತ್ರಿಪದಿ ಕವಿಗಳ ತ್ರಿಪದಿ ಸಾಹಿತ್ಯ - ಹೀಗೆ ಅಕ್ಕರ, ಪಿರಿಯಕ್ಕರ, ಏಳೆ, ದ್ವಿಪದಿ, ಚೌಪದಿ, ಛಂದೋವತಂಸ, ಕಿರಿಯಕ್ಕರ, ದೊರೆಯಕ್ಕರ ಮೊದಲಾದ ಛಂದೋ ಪ್ರಕಾರಗಳನ್ನು ಗಮನಿಸಬಹುದು.
  2. ನಡುಗನ್ನಡ ಸಾಹಿತ್ಯ ಪ್ರಕಾರ

ನಡುಗನ್ನಡ ಕಾಲಘಟ್ಟದ ಕವಿ-ಕೃತಿ ವಿಚಾರ

[ಬದಲಾಯಿಸಿ]
ಕಾಲ ಕವಿ ಅಂಕಿತನಾಮ ಮತ ಗ್ರಂಥ ಸ್ವರೂಪ
೧೧೫೦ ಅಲ್ಲಮಪ್ರಭು ಗುಹೇಶ್ವರ ವೀರಶೈವ ೧. ಷಟ್ಸ್ಥಲಜ್ಞಾನಚಾರಿತ್ರ ೨. ಮಂ‍ತ್ರಗೋಪ್ಯ ವಚನ
೧೧೫೦ ಸಕಲೇಶಮಾದರಸ ವೀರಶೈವ ವಚನಗಳು ವಚನ
೧೧೫೦ ಬಸವಣ್ಣ ಕೂಡಲಸಂಗಮದೇವ ವೀರಶೈವ ೧. ಷಟ್ಸ್ಥಲ ವಚನ, ೨. ಕಾಲಜ್ಞಾನ ವಚನ, ೩. ಮಂತ್ರಗೋಪ್ಯ ವಚನ
೧೧೫೦ ಚೆನ್ನಬಸವ ವೀರಶೈವ ೧. ಷಟ್ಸ್ಥಲ ವಚನ, ೨. ಕರಣಹಸುಗೆ, ೩. ಮಿಶ್ರಾರ್ಪಣ, ೪. ಮಂತ್ರಗೋಪ್ಯ, ೫. ಕಾಲಜ್ಞಾನ, ೬. ರುದ್ರಭಾರತದ ದೃಷ್ಟಿ ವಚನ ಮತ್ತು ವ್ಯಾಖ್ಯಾನಗಳು
೧೧೫೦ ಸಿದ್ಧರಾಮ ವೀರಶೈವ ೧. ವಚನಗಳು ೨. ಮಿತ್ರಸ್ತೋತ್ರದ ತ್ರಿವಿಧಿ ೩. ಬಸವಸ್ತೋತ್ರ ತ್ರಿವಿಧಿ ೪. ಅಷ್ಟಾವರನಸ್ತೋತ್ರ ತ್ರಿವಿಧಿ ೫. ಕಾಲಜ್ಞಾನ, ೬. ಮಂತ್ರಗೋಪ್ಯ ವಚನ ಮತ್ತು ತ್ರಿಪದಿ
೧೧೫೦ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ವೀರಶೈವ ೧. ವಚನಗಳು ೨. ಯೋಗಾಂಗತ್ರಿವಿಧಿ ೩. ಸೃಷ್ಟಿಯ ವಚನ ೪. ಅಕ್ಕಗಳ ಪೀಠಿಕೆ ? ವಚನ ತ್ರಿವಿಧಿ ಮತ್ತು ವ್ಯಾಖ್ಯಾನಗಳು
೧೧೬೦ ಮಲ್ಲಿಕಾರ್ಜುನ ಪಂಡಿತಾರಾಧ್ಯ ವೀರಶೈವ ೧. ವಚನಗಳು ೨. ಗಣಸಹಸ್ರನಾಮ ೩. ಇಷ್ಟಲಿಂಗಸ್ತೋತ್ರ ೪. ಬಸವಗೀತ ವಚನ ಮತ್ತು ವ್ಯಾಖ್ಯಾನಗಳು
೧೨೦೦ ಹರಿಹರ ವೀರಶೈವ ೧. ಗಿರಿಜಾಕಲ್ಯಾಣ ೨. ಪಂಪಾಶತಕ ೩. ರಕ್ಷಾಶತಕ ೪. ಮುಡಿಗೆಯ ಅಷ್ಟಕ, ೫. ಶಿವಗಣದ ರಗಳೆಗಳು ಚಂಪೂ, ವೃತ್ತ ಮತ್ತು ರಗಳೆ
೧೨೦೦ ಕೆರೆಯ ಪದ್ಮರಸ ವೀರಶೈವ ದೀಕ್ಷಾ ಬೋಧೆ ರಗಳೆ - ಕೇವಲ ಪದ್ಯ

ಭಕ್ತಿ ಪಂಥ

[ಬದಲಾಯಿಸಿ]
    1. ವಚನ ಕಾವ್ಯ ಮತ್ತು ವಚನ ಕವಿಗಳು :ದೇವರದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಚೆನ್ನಬಸವಣ್ಣ,
    2. ರಗಳೆ ಕಾವ್ಯ ಮತ್ತು ಕವಿ ಹರಿಹರ
    3. ತ್ರಿಪದಿ ಕಾವ್ಯ ಮತ್ತು ಕವಿ ಸರ್ವಜ್ಞ
    4. ಷಟ್ಪದಿ ಕಾವ್ಯ ಮತ್ತು ಕವಿಗಳು ರಾಘವಾಂಕ, ಕುಮಾರವ್ಯಾಸ, ಚಾಮರಸ, ಕುಮುದೇಂದು, ಲಕ್ಷ್ಮೀಶ
    5. ಸಾಂಗತ್ಯ ಕಾವ್ಯ ಮತ್ತು ಕವಿಗಳು ನಂಜುಂಡ, ರತ್ನಾಕರ ವರ್ಣಿ
    6. ಏಳೆ ಕಾವ್ಯ ಮತ್ತು ಕವಿಗಳು
    7. ದ್ವಿಪದಿ ಕಾವ್ಯ ಮತ್ತು ಕವಿಗಳು
    8. ಚೌಪದಿ ಕಾವ್ಯ ಮತ್ತು ಕವಿಗಳು
    9. ಕೀರ್ತನೆಕಾವ್ಯ ಮತ್ತು ಕವಿಗಳು, ಸುಳಾದಿ ಕಾವ್ಯ ಮತ್ತು ಕವಿಗಳು, ಮುಂಡಿಗೆ ಕಾವ್ಯ ಮತ್ತು ಕವಿಗಳು
  1. ಕವಿಗಳ ಅಂಕಿತ ನಾಮ
  2. ಕವಿಗಳ ಕಾವ್ಯನಾಮ

ಹೊಸಗನ್ನಡ ಕಾಲಘಟ್ಟ

[ಬದಲಾಯಿಸಿ]
  1. ನವೋದಯ ಪೂರ್ವ ಸಾಹಿತ್ಯ, ಕವಿಗಳು - ಎಂ. ಗೋವಿಂದ ಪೈ, ಹಟ್ಟಿಯಂಗಡಿ ನಾರಾಯಣ ರಾಯರು,
  2. ಇಂಗ್ಲಿಷ್ ಗೀತಗಳು
  3. ನವೋದಯ, ನವೋದಯ ಸಾಹಿತ್ಯ
  4. ಪ್ರಗತಿಶೀಲ, ಪ್ರಗತಿಶೀಲ ಸಾಹಿತ್ಯ
  5. ನವ್ಯ, ನವ್ಯ ಸಾಹಿತ್ಯ
  6. ಬಂಡಾಯ, ಬಂಡಾಯ ಸಾಹಿತ್ಯ
  7. ದಲಿತ, ದಲಿತ ಸಾಹಿತ್ಯ
  8. ಸ್ತೀವಾದ, ಮಹಿಳಾ ಸಾಹಿತ್ಯ
  9. ಮಾರ್ಗ
  10. ದೇಸಿ
  11. ಸಾನೆಟ್ - ಅಷ್ಟ ಷಟ್ಪದಿ
  12. ಪ್ರಗಾಥ
  13. ಶೋಕಗೀತೆ
  14. ವಾಸ್ತವವಾದ
  15. ಅಸ್ತಿತ್ವವಾದ
  16. ನಿರೀಶ್ವರವಾದ
  17. ಗಾಂಧಿವಾದ
  18. ಲೋಹಿಯಾವಾದ
  19. ಅಂಬೇಡ್ಕರ್ ವಾದ
  20. ಮಾರ್ಕ್ಸ್‌ವಾದ
  21. ಸಮತಾವಾದ
  22. ಸಮಾಜವಾದ
  23. ಅಹಿಂದ
  24. ಮಾನವತಾವಾದ
  25. ಸ್ತ್ರೀವಾದ

ಪ್ರಶಸ್ತಿಗಳು

[ಬದಲಾಯಿಸಿ]

ಕೇರಳದಿಂದ ಕೊಡುವ ಪ್ರಶಸ್ತಿ. ಚಂದ್ರಶೇಖರ ಕಂಬಾರ, ಕೆ.ಎಸ್.ನರಸಿಂಹ ಸ್ವಾಮಿ

ಕ್ರಮ ಸಂಖ್ಯೆ ಹೆಸರು ಕೃತಿ ಹೆಸರು
ಕುವೆಂಪು ಶ್ರೀ ರಾಮಾಯಣ ದರ್ಶನಂ ೧೯೬೮
ದ.ರಾ.ಬೇಂದ್ರೆ ನಾಕುತಂತಿ ೧೯೭೩
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕವೀರರಾಜೇಂದ್ರ ೧೯೮೩
ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು ೧೯೭೭
ವಿನಾಯಕ ಕೃಷ್ಣ ಗೋಕಾಕ ಭಾರತದ ಸಿಂಧುರಶ್ಮಿ ೧೯೯೦
ಯು.ಆರ್.ಅನಂತಮೂರ್ತಿ ಸಮಗ್ರ ಸಾಹಿತ್ಯ ೧೯೯೪
ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ ೧೯೯೮
ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ ೨೦೧೦
ಕ್ರಮ ಸಂಖ್ಯೆ ಹೆಸರು ವರ್ಷ ಕೃತಿ ಹೆಸರು
ಎಸ್.ಎಲ್.ಭೈರಪ್ಪ ೨೦೧೦ ಮಂದ್ರ ಕಾದಂಬರಿ
ವೀರಪ್ಪ ಮೊಯಿಲಿ ೨೦೧೪ ರಾಮಾಯಣ ಮಹಾ­ನ್ವೇಷಣಂ ಮಹಾಕಾವ್ಯ

ಅಕಾಡೆಮಿಗಳು

[ಬದಲಾಯಿಸಿ]
  1. ಕರ್ನಾಟಕ ಸಾಹಿತ್ಯ ಅಕಾಡೆಮಿ -
  2. ಕೇಂದ್ರ ಸಾಹಿತ್ಯ ಅಕಾಡೆಮಿ,
  3. ಕರ್ನಾಟಕ ಚಿತ್ರಕಲಾ ಅಕಾಡೆಮಿ,
  4. ಕರ್ನಾಟಕ ಪತ್ರಿಕಾ ಅಕಾಡೆಮಿ,
  5. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ,
  6. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,
  7. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ
  8. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
  9. ಕರ್ನಾಟಕ ಲಲಿತಕಲಾ ಅಕಾಡೆಮಿ
  10. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
  11. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ
  12. ಕರ್ನಾಟಕ ಶಿಲ್ಪಕಲಾ ಅಕಾಡೆಮಿ
  13. ಕರ್ನಾಟಕ ಉರ್ದು ಅಕಾಡೆಮಿ
  14. ಕರ್ನಾಟಕ ನಾಟಕ ಅಕಾಡೆಮಿ
  15. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ.

ಹೊಸಗನ್ನಡ ಸಾಹಿತ್ಯ ಪ್ರಕಾರ

[ಬದಲಾಯಿಸಿ]
  1. ಕಾವ್ಯ - ನವೋದಯ ಪೂರ್ವ ಕಾವ್ಯ, ನವೋದಯ ಕಾವ್ಯ, ನವ್ಯ ಕಾವ್ಯ, ಬಂಡಾಯ ಕಾವ್ಯ, ದಲಿತ ಕಾವ್ಯ, ಮಹಿಳಾ ಕಾವ್ಯ, ಕವಿಗಳು :
  2. ಕಥೆ - ಕಥೆಗಾರರು :
  3. ಕಾದಂಬರಿ - ಕಾದಂಬರಿಕಾರರು :
  4. ನಾಟಕ - ನಾಟಕಕಾರರು :
  5. ಪ್ರಬಂಧ - ಪ್ರಬಂಧಕಾರರು
  6. ಮಹಾಕಾವ್ಯ - ಮಹಾಕವಿ ಮತ್ತು ಮಹಾಕಾವ್ಯ :
  7. ಜೀವನಚರಿತ್ರೆ
  8. ಪ್ರವಾಸಕಥನ

ಕಾರ್ನಾಡ ಸದಾಶಿವರಾವ್

ಕನ್ನಡ ನಾಡಿನ ಚರಿತ್ರೆ

[ಬದಲಾಯಿಸಿ]

ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ ಬೆಳೆಯುವುದಕ್ಕೆ ಕಾರಣರಾದ ಕರ್ನಾಟಕವನ್ನು ಆಳಿದ ರಾಜರು, ರಾಜವಂಶಗಳು, ಕನ್ನಡ ನಾಡನ್ನು ಹಾಡಿ ಹೊಗಳಿದ ಕವಿಗಳು, ಕನ್ನಡ ನಾಡಿನ ಕುರಿತಂತೆ ಪ್ರಕಟಗೊಂಡ ಹಲವಾರು ಕೃತಿಗಳು ಕನ್ನಡ ನಾಡಿನ ಚರಿತ್ರೆಯ ಮಾಹಿತಿಯನ್ನು ನೀಡುತ್ತವೆ.

ಕರ್ನಾಟಕವನ್ನಾಳಿದ ರಾಜರು

[ಬದಲಾಯಿಸಿ]
  1. ಮೌರ್ಯ - ಚಂದ್ರಗುಪ್ತ ಮೌರ್ಯ, ಬಿಂದುಸಾರ, ಅಶೋಕ
  2. ಕದಂಬ - ಕದಂಬ ವಂಶದ ರಾಜರುಗಳು ಮತ್ತು ಅವರ ಸೇವೆ : ಮಯೂರಶರ್ಮ (೩೪೫ - ೩೬೫), ಕಂಗವರ್ಮ (೩೬೫ - ೩೯೦), ಬಗೀತಾರ್ಹ(೩೯೦ -೪೧೫), ರಘು (೪೧೫ - ೪೩೫), ಕಾಕುಸ್ಥವರ್ಮ(೪೩೫ - ೪೫೫), ಶಾಂತಿವರ್ಮ (೪೫೫ - ೪೬೦), ಮೃಗೇಶವರ್ಮ (೪೬೦ - ೪೮೦), ಶಿವಮಾಂಧಾತಿವರ್ಮ (೪೮೦ – ೪೮೫), ರವಿವರ್ಮ(೪೮೫ – ೫೧೯), ಹರಿವರ್ಮ(೫೧೯ – ೫೨೫) (ತ್ರಿಪರ್ವತ ಶಾಖೆ), ಒಂದನೆಯ ಕೃಷ್ಣ ವರ್ಮ (೪೫೫), ವಿಷ್ಣುವರ್ಮ, ಸಿಂಹವರ್ಮ, ಎರಡನೆಯ ಕೃಷ್ಣವರ್ಮ, ಒಂದನೆಯ ಪುಲಿಕೇಶಿ
  3. ಚಾಲುಕ್ಯ - ಅರಿಕೇಸರಿ, ಮೊದಲನೆಯ ಪುಲಿಕೇಶಿ, ಮೊದಲನೆಯ ವಿಕ್ರಮಾದಿತ್ಯ, ಮೊದಲನೆಯ ಸೋಮೇಶ್ವರ ಆರನೇ ವಿಕ್ರಮಾದಿತ್ಯ
  4. ರಾಷ್ಟ್ರಕೂಟ - ದಂತಿದುರ್ಗ, ನೃಪತುಂಗ,
  5. ಶಾತವಾಹನ - ಸಿಮುಖ, ಒಂದನೆಯ ಶಾತಕರ್ಣಿ, ಹಾಲ, ಗೌತಮಿಪುತ್ರ ಶಾತಕರ್ಣಿ
  6. ಗಂಗ - ಶ್ರೀಪುರುಷ, ರಾಚಮಲ್ಲ
  7. ಹೊಯ್ಸಳ - ಸಳ, ಎರಡನೆಯ ನೃಪಕಾಮ, ಎರಡನೆಯ ವಿನಯಾದಿತ್ಯ, ಎರೆಯಂಗ, ಒಂದನೆಯ ಬಲ್ಲಾಳ, ವಿಷ್ಣುವರ್ಧನ, ಉದಯಾದಿತ್ಯ, ಕುಮಾರಬಲ್ಲಾಳ, ಒಂದನೆಯ ನರಸಿಂಹ, ವಿಜಯನಾರಾಯಣ ಏಚಲದೇವಿ, ಎರಡನೆಯ ಬಲ್ಲಾಳ, ಎಱೆಯಂಗದೇವ, ಎರಡನೆಯ ನರಸಿಂಹ, ಸೋಮೇಶ್ವರ, ಮೂರನೆಯ ನರಸಿಂಹ, ರಾಮನಾಥ, ಮೂರನೆಯ ಬಲ್ಲಾಳ, ವಿರೂಪಾಕ್ಷ (ನಾಲ್ಕನೆಯ ಬಲ್ಲಾಳ) ಹೊಯ್ಸಳ ಕಾಲಘಟ್ಟದಲ್ಲಿದ್ದ ಕನ್ನಡದ ಕವಿಗಳು : ನಾಗಚಂದ್ರ 1105; ಕಾಂತಿ 1108; ರಾಜಾದಿತ್ಯ 12th. c; ಹರಿಹರ 1160–1200; ಉದಯಾದಿತ್ಯ 1150; ವೃತ್ತ ವಿಲಾಸ 1160; ಕೆರೆಯ ಪದ್ಮರಸ 1165; ನೇಮಿಚಂದ್ರ 1170; ಸುಮನೋಬನ 1175; ರುದ್ರಭಟ್ಟ 1180; ಅಗ್ಗಳ 1189; ಪಾಲ್ಕುರಿಕಿ ಸೋಮನಾಥ 1195; ಸುಜನೋತ್ತಮ್ಸ(ಬೋಪಣ್ಣ) 1180; ಕವಿ ಕಾಮ 12th c.; ದೇವಕವಿ 1200; ರಾಘವಾಂಕ 1200–1225; ಭಂದುವರ್ಮ 1200; ಪಾರ್ಶ್ವ ಪಂಡಿತ 1205; ಮಘನಂದ್ಯಾಚಾರ್ಯ 1209; ಜನ್ನ 1209–1230; ಪುಲಿಗೆರೆ ಸೋಮನಾಥ 13th c.; ಹಸ್ತಿಮಲ್ಲ 13th c.; ಸೋಮರಾಜ 1222; ಗುಣವರ್ಮ 1235; ಪೊಳಲ್‍ವದಂದನಾಥ 1224; ಆಂಡಯ್ಯ 1217–1235; ಸಿಸುಮಾಯಣ 1232; ಮಲ್ಲಿಕಾರ್ಜುನ 1245; ನರಹರಿ ತೀರ್ಥ 1281; ಕುಮಾರ ಪದ್ಮರಸ 13th c.; ಮಹಾಬಲ ಕವಿ 1254; ಕೇಶಿರಾಜ 1260; ಕುಮುದೇಂದು 1275; ರಟ್ಟ ಕವಿ 1300; ನಾಗರಾಜ 1331;
  8. ಚೋಳ
  9. ಚೇರ
  10. ಮೈಸೂರು ಸಂಸ್ಥಾನ
  11. ಕರ್ನಾಟಕದ ಏಕೀಕರಣ

ಕನ್ನಡ ಭಾಷೆ ಮತ್ತು ಭಾಷಾ ವಿಜ್ಞಾನ

[ಬದಲಾಯಿಸಿ]

ಭಾಷೆಯ ಕುರಿತ ವ್ಯಾಖ್ಯೆ

[ಬದಲಾಯಿಸಿ]
  1. ಯಾದೃಚ್ಛಿಕ ಧ್ವನಿ ಸಂಕೇತಗಳ ವ್ಯವಸ್ಥೆ ಎಂಬ ವ್ಯಾಖ್ಯೆಯ ವಿವರಣೆ-
  2. ಭಾಷಾ ವೈಶಿಷ್ಟ್ಯಗಳು ಹಾಕೆಟ್ ಹೇಳಿರುವ ಆರು ವೈಶಿಷ್ಟ್ಯಗಳು: ದ್ವಿವಿಧತೆ, ಉತ್ಪಾದಕತೆ, ಯಾದೃಚ್ಛಿಕತೆ, ವಿಶಿಷ್ಟ ಪ್ರಾವೀಣ್ಯತೆ, ವಿನಿಮಯ ಗುಣ, ಸ್ಥಾನಪಲ್ಲಟತೆ, ಸಂಸ್ಕೃತಿ ವಾಹಕತೆ)
  3. ಭಾಷಿಕ ಪುನರ್ನಿರ್ಮಾಣ

ಭಾಷಾ ವರ್ಗೀಕರಣ

[ಬದಲಾಯಿಸಿ]
  1. ಭೌಗೋಳಿಕ ಭಾಷಾ ವರ್ಗೀಕರಣ
  2. ಜಾನಾಂಗಿಕ ಭಾಷಾ ವರ್ಗೀಕರಣ
  3. ರಾಚನಿಕ ಭಾಷಾ ವರ್ಗೀಕರಣ
  4. ವಾಂಶಿಕ ಭಾಷಾ ವರ್ಗೀಕರಣ

ದ್ರಾವಿಡ ಭಾಷೆಗಳು

[ಬದಲಾಯಿಸಿ]

ದ್ರಾವಿಡ ಭಾಷೆಗಳ ಲಕ್ಷಣಗಳು, ದ್ರಾವಿಡ ಭಾಷೆಗಳ ವರ್ಗೀಕರಣ

ಕನ್ನಡ ಭಾಷೆ

[ಬದಲಾಯಿಸಿ]
  1. ಕನ್ನಡ ಭಾಷೆ ಪ್ರಾಚೀನತೆ (ಅಶೋಕಬ್ರಹ್ಮಗಿರಿ ಶಾಸನ, ಶಾತವಾಹನರ ಉಲ್ಲೇಖ, ಗಾಥಾ ಸಪ್ತಶತಿಯ ಉಲ್ಲೇಖ, ಟಾಲೆಮಿಯ ಪ್ರಸ್ತಾಪ, ಅಕ್ಷಿರಿಂಕಸ್ ಪಪೈರಿಯಲ್ಲಿದೆ ಎನ್ನಲಾದ ಕನ್ನಡದ ಮಾತುಗಳು -
  2. ಹಳಗನ್ನಡ
  3. ನಡುಗನ್ನಡ
  4. ಹೊಸಗನ್ನಡ
  5. ಭಾಷಾ ವ್ಯತ್ಯಾಸಗಳ ಸ್ಥೂಲ ಪರಿಚಯ – ಉಪಭಾಷೆ ಮತ್ತು ಆಧುನಿಕ ಕಾಲದ ಕನ್ನಡಉಪಭಾಷೆಗಳು, ಕರಾವಳಿ ಕನ್ನಡ - ಧಾರವಾಡ ಕನ್ನಡಗುಲ್ಬರ್ಗಾ ಕನ್ನಡಮೈಸೂರು ಕನ್ನಡ ಉಪಭಾಷೆಗಳು)

ಕನ್ನಡ ಭಾಷಾಕೋಶದ ಬೆಳವಣಿಗೆ ಮತ್ತು ವ್ಯತ್ಯಾಸಗಳು

[ಬದಲಾಯಿಸಿ]
  1. ಸೌಲಭ್ಯಾಕಾಂಕ್ಷೆ
  2. ಪ್ರಭಾವೀ ವ್ಯಕ್ತಿಗಳ ಪ್ರಯೋಗ
  3. ಸಮೂಹ ಮಾಧ್ಯಮಗಳು
  4. ಅನ್ಯಭಾಷಾ ಸಂಸರ್ಗ
  5. ಆಲಂಕಾರಿಕ ಭಾಷೆ
  6. ಭಾಷಾಕೋಶದ ಪರಿಸರ
  7. ಸೌಮ್ಯೋಕ್ತಿ
  8. ಭಾಷಾ ಗೌರವ
  9. ತಪ್ಪು ತಿಳುವಳಿಕೆ ಪದಗಳು
  10. ಕನ್ನಡಕ್ಕೆ ಸ್ವೀಕೃತವಾದ ಶಬ್ದಗಳು

ಭಾಷಾ ಸ್ವೀಕರಣ

[ಬದಲಾಯಿಸಿ]
  1. ರೂಪಾಂತರ ಭಾಷಾ ಸ್ವೀಕರಣ
  2. ಸ್ಥಾನಾಂತರ ಭಾಷಾ ಸ್ವೀಕರಣ
  3. ಮಿಶ್ರ ಭಾಷಾ ಸ್ವೀಕರಣ
  4. ಸಾಂಸ್ಕೃತಿಕ ಭಾಷಾ ಸ್ವೀಕರಣ

ಭಾಷಾ ವ್ಯತ್ಯಾಸದ ಬಗೆಗಳು

[ಬದಲಾಯಿಸಿ]

ಧ್ವನಿ ಮತ್ತು ಅರ್ಥ ವ್ಯತ್ಯಾಸಗಳು

[ಬದಲಾಯಿಸಿ]

ಭಾಷಾಶಾಷ್ತ್ರದ ದೃಷ್ಟಿಯಿಂದ ಕೆಳಗಿನ ಪದಗಳ ವಿವೇಚನೆ

[ಬದಲಾಯಿಸಿ]

ಧ್ವನಿವ್ಯತ್ಯಾಸ

[ಬದಲಾಯಿಸಿ]

ಇಸ್ಕ್ರೂ, ಲೋಟೀಸು, ಜಲ್ಮ, ದೊಡ್ಡಸ್ತಿಕೆ, ಸುಂಟರಗಾಳಿ, ಅವಳಿಜವಳಿ, ಕೂಡಲಸಂಗಮ, ಕಾಗದಪತ್ರ, ಎಳ್ಳೆಣ್ಣೆ, ತಂಗುಳನ್ನ, ಹೌದು, ಹೀಗೆ, ಹಾಗೆ,ಅಗಸ, ಕಾದಗ, ಅರಲ್, ಹೊಸ್ತಿಲು, ನಾಣಿ, ಶೀನಿ, ಬಂತು, ತಾಂಬಾ, ಪಾಶ್ಚಾತ್ಯ, ದಿವಸ್ಪತಿ, ಬೆಳಕಿಂಡಿ, ವೀರಾಜಪೇಟೆ

ಅರ್ಥವ್ಯತ್ಯಾಸ

[ಬದಲಾಯಿಸಿ]

ಹೊನ್ನು, ಆಳು, ಒಡವೆ, ಎಣ್ಣೆ, ಓಲೆ,ನಾತ, ತಿಥಿ, ಬೈರಾಗಿ,ಕೂಳು, ಸಂತೆ, ಜಾರ, ತವರುಮನೆ, ಅಪರೂಪ, ಅವಸರ,ನೊಗ

ಪ್ರಾದೇಶಿಕ ವ್ಯತ್ಯಾಸ

[ಬದಲಾಯಿಸಿ]

ಪಟ್ಟಾಂಗ,ಬೆಸ್ತವಾರ, ಗುದ್ದಲಿ, ಕುಂದಕನ್ನಡ, ಕತ್ತಿ, ಅಮ್ಮ, ಜಂಬರ, ಪಂಚಾಂಗ

ಸ್ವೀಕರಣ

[ಬದಲಾಯಿಸಿ]

ಅರಿವಳಿಕೆ, ಕಾದಂಬರಿ, ಸಣ್ಣಕತೆ, ಶಾಸಕ, ಶ್ವೇತಪತ್ರ, ಧಾರಾವಾಹಿ, ಸುಗ್ರಿವಾಜ್ಞೆ, ಸಚಿವ ಸಂಪುಟ, ಶೀತಲಸಮರ, ಕಾಲುಚೀಲ

ಅನ್ಯದೇಶೀಯಗಳು

[ಬದಲಾಯಿಸಿ]

ಅಬ್ಕಾರಿ, ಆಸ್ಪತ್ರೆ,ಕಂತ್ರಿ, ಕಂದೀಲು, ಕೇರಿ, ಗಟಾರ, ಚರಂಡಿ, ಚಹ, ಜೀನಸು, ಜುಗಾರಿ, ತಂಬಾಕು, ತರಕಾರಿ, ಕೂಲಿ, ಚಮಚ, ಪಂಚಾಯಿತಿ, ಮೇಜು, ರಜ, ರೈತ, ಸಜ್ಜಿಗೆ, ಸಿಬ್ಬಂದಿ, ಹರತಾಳ

ಸತೀಶ್ ಕುಮಾರ್

ಕನ್ನಡ ಛಂದಸ್ಸು

[ಬದಲಾಯಿಸಿ]

ಕನ್ನಡ ಜಾನಪದ

[ಬದಲಾಯಿಸಿ]

ಕನ್ನಡ ಸಾಹಿತ್ಯ ವಿಮರ್ಶೆ

[ಬದಲಾಯಿಸಿ]

ಕನ್ನಡದಲ್ಲಿ ಜೀವನ ಚರಿತ್ರೆ

[ಬದಲಾಯಿಸಿ]

ಕನ್ನಡದಲ್ಲಿ ಪ್ರಬಂಧ ಸಾಹಿತ್ಯ

[ಬದಲಾಯಿಸಿ]

ಕನ್ನಡದಲ್ಲಿ ಆತ್ಮಕಥನ ಸಾಹಿತ್ಯ

[ಬದಲಾಯಿಸಿ]

ಕನ್ನಡದ ಪ್ರವಾಸಿ ಸಾಹಿತ್ಯ

[ಬದಲಾಯಿಸಿ]

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ರಂ.ಶ್ರೀ ಮುಗಳಿ, ೧೯೯೬. "ಕನ್ನಡ ಸಾಹಿತ್ಯ ಚರಿತ್ರೆ", ಸಮಾಜ ಪುಸ್ತಕಾಲಯ, ಧಾರವಾಡ

[]

  1. http://kea.kar.nic.in/dce/01-kannada.pdf