ಕಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂತಿ - ೧೨ನೇ ಶತಮಾನದ ಕನ್ನಡದ ಕವಯಿತ್ರಿ. ಇವರನ್ನು ಕನ್ನಡದ ಪ್ರಥಮ ಕವಯಿತ್ರಿ ಎಂದು ನಂಬಲಾಗಿದೆ. ಈಕೆ ಸುಮಾರು ಕ್ರಿ.ಶ.೧೧೬೦ ರಲ್ಲಿ ಹೊಯ್ಸಳ ದೊರೆ ಒಂದನೆಯ ಬಲ್ಲಾಳನ ಆಸ್ಥಾನದಲ್ಲಿ ಇದ್ದಳೆಂಬುದು ಒಂದು ಊಹೆ. ಕೆಲ ವಿದ್ವಾಂಸರ ಅಭಿಪ್ರ್ರಾಯದ ಪ್ರಕಾರ ಕಂತಿ ಎನ್ನುವ ಕವಯಿತ್ರಿ ಕೇವಲ ಕಲ್ಪನೆಯ ಕೂಸು. ಏನೇ ಆದರೂ ಕಂತಿ ಹಂಪನ ಸಮಸ್ಯೆಗಳು ಓರ್ವ ಅದ್ಭುತ ಮೇಧಾ ಶಕ್ತಿಯುಳ್ಳ ಮಹಿಳೆಯ ಪ್ರತಿಭೆಯನ್ನು ಸಾದರಪಡಿಸುತ್ತವೆ.

ಆಸ್ಥಾನಕವಿ ಹಂಪನು ( ಅಭಿನವ ಪಂಪ ಬಿರುದಾಂಕಿತ ನಾಗಚಂದ್ರನು) ಕಂತಿಯ ಜಾಣ್ಮೆಯನ್ನು ಪರೀಕ್ಷಿಸಲು ಪದ್ಯರೂಪದಲ್ಲಿ ಕೊಟ್ಟ ಸಮಸ್ಯಾವಾಕ್ಯ ಇಂತಿದೆ:


"..ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್"

ಇದಕ್ಕೆ ಕಂತಿ ನೀಡಿದ ಸಮಾಧಾನ:

"ವನದೊಳಗೆ ಪುಟ್ಟಿ ಬೆಳೆಯುತೆ

ತನಗಂಪ ಪೆತ್ತು ದೆಸೆಗೆ ಬೀರುತಿರ್ಪಾ|

ಘನತರ ಸುರುಚಿರ ಸಚ್ಚಂ-

ದನವಂ ಕಡಿಕಡಿದು ಬಸದಿಗೆಳೆಯುತಿರ್ದರ್||"

ಮರಗೆಲಸದ ಸಲಕರಣೆಗಳಾದ ಮಸೆಕಲ್ಲು, ಬಳ್ಳ, ಕುದುರೆ, ಬಾಚಿ, ಕೊಡಲಿ, ಉಳಿ ಇವುಗಳನ್ನು ಬಳಸಿ ರಚಿಸಿದ ಪದ್ಯ

ಮಸಕಲ್ಗಿಳಿ ಮಾಂಬಳಮಂ ವಸಧಾತಳಕುದುರೆ

ಬಾಚಿ ಎತ್ತಿದಳೋರ್ವಳ್

ಶಶಿಮುಖಿಗೆ ಕೊಡಲಿಕಾವಧು ಪೊಸವಣ್ಣಂ

ಸವಿನೋಡಿ ನಸುವುಳಿಯದಳ್.

"https://kn.wikipedia.org/w/index.php?title=ಕಂತಿ&oldid=1047198" ಇಂದ ಪಡೆಯಲ್ಪಟ್ಟಿದೆ