ಉತ್ತಮಾರ್ಥ
ಗೋಚರ
ಉತ್ತಮಾರ್ಥ
[ಬದಲಾಯಿಸಿ]ಒಂದು ಕಾಲದಲ್ಲಿ ನೀಚ ಅರ್ಥವಿದ್ದು[೧] ಕ್ರಮೇಣ ಅದು ಉತ್ತಮ ಅರ್ಥವನ್ನು ಪಡೆದಿದ್ದರೆ ಉತ್ತಮಾರ್ಥ[೨].[೩].ಭಾಷೆಯಲ್ಲಿ ನಡೆಯುವ ಅರ್ಥ ಮತ್ತು ಧ್ವನಿ ಬದಲಾವಣೆಯಿಂದ ರೂಢಿಯಲ್ಲಿರುವ, ನಿತ್ಯ ಬಳಸುತ್ತಿರುವ ಅನೇಕ ಶಬ್ದಗಳು ಹೊಸ- ಹೊಸ ರೂಪ ಪಡೆದುಕೊಂಡು ಬಳಕೆಗೊಳ್ಳಬಹುದು, ಇಲ್ಲವೇ ಶಬ್ದಗಳಲ್ಲಿ ಕೆಲವು ಉತ್ತಮ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುವುದರ ಮೂಲಕ ಕನ್ನಡ ಭಾಷೆಯ ಶಬ್ದಗಳು ಕಾಲಕ್ರಮದಲ್ಲಿ ಬದಲಾಗುತ್ತಾ ಬಂದುದನ್ನು ಗುರುತಿಸುವೆವು. ಕನ್ನಡ ಭಾಷೆಯಲ್ಲಿ ಧ್ವನಿ ವ್ಯತ್ಯಾಸ ಹೊಂದಿದ ಕೆಲವು ಶಬ್ದಗಳನ್ನು ಉದಾಹರಿಸಬಹುದು.
ಉದಾಹರಣೆ
[ಬದಲಾಯಿಸಿ]- ಇಂಗ್ಲಿಷ್‍ನಲ್ಲಿ 'Knight' ಎಂದರೆ 'Sarvent' ಎಂಬ ಅರ್ಥವಿತ್ತು. ಈಗ ಅದು 'ಸರದಾರ' ಎಂಬ ಅರ್ಥ ಪಡೆದಿದೆ.
- ಇಂಗ್ಲಿಷ್‍ನಲ್ಲಿ 'Madam' ಎಂಬುದು 'ತಲೆಹಿಡುಕ' ಎನ್ನುವ ಅರ್ಥವನ್ನು ನೀಡುತ್ತಿತ್ತು. ಈಗ ಅದು 'ಸ್ತ್ರೀ ಗೌರವ ಸೂಚಕ' ಪದವಾಗಿದೆ.
- 'ಬಂದಿ' ಎಂದರೆ 'ಕಳ್ಳ', 'ಖೈದಿ' ಎನ್ನುವ ಅರ್ಥವನ್ನು ಪಡೆದಿತ್ತು ಆದರೆ ಈಗ 'ಸ್ವಾತಂತ್ರ್ಯ ಹೋರಾಟಗಾರ' ಎನ್ನುವ ಅರ್ಥ ಪಡೆದಿದೆ.
ಶಬ್ದ | ಮೊದಲಿದ್ದ ಅರ್ಥ | ಈಗಿನ ಅರ್ಥ |
---|---|---|
ಮರ್ಯಾದೆ | ಗಡಿ, ಎಲ್ಲೆ | ಗೌರವ |
ಸಭಿಕ | ಜೂಜುಗಾರ | ಸಭೆಯಲ್ಲಿ ಉಪಸ್ಥಿತ[೪] |
ದಿಗ್ಗಜ | ಎಂಟು ದಿಕ್ಕುಗಳನ್ನು ಹೊತ್ತುನಿಂತ ಆನೆಗಳು | ಆಸ್ಥಾನ ಪಂಡಿತ, ಪ್ರಕಾಂಡ ಪಾಂಡಿತ್ಯ ಹೊಂದಿದವ |
ಹೆಚ್ಚಿನ ಮಾಹಿತಿಗೆ
[ಬದಲಾಯಿಸಿ]ಸಾಹಿತ್ಯ ಮತ್ತು ಸಾಧನೆ ಪುಸ್ತಕ ಓದಿ.
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2020-09-18. Retrieved 2018-11-13.
- ↑ https://books.google.co.in/books?id=W1mYAwAAQBAJ&pg=PT229&lpg=PT229&dq=%E0%B2%89%E0%B2%A4%E0%B3%8D%E0%B2%A4%E0%B2%AE%E0%B2%BE%E0%B2%B0%E0%B3%8D%E0%B2%A5&source=bl&ots=tF6JI-ueOY&sig=kjXcqnYdRMvyNy-ToBhQnUPU9Uc&hl=en&sa=X&ved=2ahUKEwj23uzQ0bzeAhVYfCsKHRC-A_wQ6AEwAnoECAcQAQ#v=onepage&q=%E0%B2%89%E0%B2%A4%E0%B3%8D%E0%B2%A4%E0%B2%AE%E0%B2%BE%E0%B2%B0%E0%B3%8D%E0%B2%A5&f=false
- ↑ ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭-೩೮.
- ↑ "ಆರ್ಕೈವ್ ನಕಲು". Archived from the original on 2020-09-18. Retrieved 2018-11-13.