ಅರ್ಥ ವ್ಯತ್ಯಾಸ
ಗೋಚರ
ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ (ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ . ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ . ಉದಾಹರಣೆ ನೋಡಿರಿ :-
- ಊಟ = ಭೋಜನ
- ಊತ = ಬಾತುಕೊಳ್ಳುವಿಕೆ
- ದನ = ಹಸು, ಗೋವು, ಆಕಳು, ಆವು
- ಧನ = ಹಣ, ವಿತ್ತ, ಅರ್ಥ (ಕಾಸು = ಚಲಾವಣೆಯ ನಾಣ್ಯ )
- ಅಸ್ತಿತ್ವ = ಇರುವಿಕೆ
- ಅಸ್ಥಿ = ಮೂಳೆ, ಎಲುಬು
- ಮಣ = ತೂಕದ ಒಂದು ಪ್ರಮಾಣ
- ಮನ = ಮನಸ್ಸು
- ಮಂಡಿ = ಮೊಣಕಾಲು ನಾನಾರ್ಥ: (ನಾಮಪದ) ಸಗಟು ವ್ಯಾಪಾರದ ಅಂಗಡಿ
- ಮಂದಿ = ಜನ ಸಮೂಹ ನಾನಾರ್ಥ : (ನಾಮಪದ) ಅಗ್ಗ , ಸೋವಿ
- ಎಡೆ = ಸ್ಥಳ, ಆಸ್ಪದ (ನಾನಾರ್ಥ (ನಾಮಪದ) ಹತ್ತಿರ, ನೈವೇದ್ಯ , ಊಟ. (ಕ್ರಿಯಾಪದ) ಸಿಪ್ಪೆಯನ್ನು ಸುಲಿ)
- ಎದೆ = ಹೃದಯ, ವಕ್ಷ
- ಕಪ್ಪ = ಕಾಣಿಕೆ , ಪೊಗದಿ , ಕಡಗ
- ಕಬ್ಬ = ಕಾವ್ಯ
- ಚೂಟ = ಚುರುಕು , ಲವಲವಿಕೆ
- ಚೂಡ = ಶಿಖೆ, ಜುಟ್ಟು , ಶಿಖರ
- ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು
- ಕುಂಜ = ಲತಾಗೃಹ
- ಪಲ್ಲವ = ಚಿಗುರು
- ಪಲ್ಲವಿ = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ