ಅರ್ಥಸಂಕೋಚ

ವಿಕಿಪೀಡಿಯ ಇಂದ
Jump to navigation Jump to search

ಅರ್ಥಸಂಕೋಚ[ಬದಲಾಯಿಸಿ]

ಒಂದು ಕಾಲದಲ್ಲಿ ವಿಸ್ತಾರವಾದ ಅರ್ಥವನ್ನು ಪಡೆದಿದ್ದು. ಅದು ಕಾಲ ಕ್ರಮೇಣ ಆ ಅರ್ಥ ಸಂಕುಚಿತವಾದರೆ ಅದನ್ನು ಅರ್ಥ ಸಂಕೋಚ[೧] ಎಂದು ಹೇಳುವರು[೨]. ಆ ಅರ್ಥ ಸಂಕೋಚವು ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಇರುತ್ತದೆ. ಹಿಂದೆ ಸಂಕುಚಿತವಾದ ಅರ್ಥವಿದ್ದು ಈಗ ಅದು ವಿಶಾಲವಾದ ಅರ್ಥವನ್ನು ಹೊಂದಿದೆ[೨]. ಕೆಲವು ಶಬ್ದಗಳು ಕಾಲಾಂತರದಲ್ಲಿ ಅವು ಹೊಂದಿದ ಅರ್ಥದಲ್ಲಿ ವಿಕಾಸ, ಸಂಕೋಚ, ಹೀನ, ಉತ್ತಮ ಹಾಗೂ ಅನ್ಯ– ಅರ್ಥಗಳನ್ನು ಪಡೆದು ಬಳಕೆಗೊಳ್ಳುತ್ತ ಬಂದುದನ್ನು ಗುರುತಿಸುವೆವು. ಇಂಥ ಶಬ್ದಗಳಿಗೆ ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಬಹುದು.

ಉದಾಹರಣೆ[ಬದಲಾಯಿಸಿ]

  1. ಮೃಗ' ಎಂದರೆ ಹಿಂದೆ 'ಜಿಂಕೆ' ಎನ್ನುವ ಸೀಮಿತ ಅರ್ಥ ಇತ್ತು. ಈಗ ಅದು 'ಯಾವುದೆ ಪ್ರಾಣಿ' ಎನ್ನುವ ಅರ್ಥವನ್ನು ಪಡೆದಿದೆ.
ಶಬ್ದ ಮೊದಲಿದ್ದ ಅರ್ಥ ಈಗಿನ ಅರ್ಥ
ಸೀರೆ ವಸ್ತ್ರ ಹೆಂಗಸರು ಉಡುವ ವಸ್ತ್ರ
ಜಂಗಮ ನೆಲೆ ಇಲ್ಲದೆ ಅಲೆದಾಡುವವ ಒಂದು ಜಾತಿಗೆ ಸೇರಿದವ
ಒಡವೆ ಆಸ್ತಿ, ಸಂಪತ್ತು ಆಭರಣ
ಮೀನ್ ಮಿನುಗುವ ವಸ್ತು ಮೀನು
ಕುರುಬ ಗುಡ್ಡಗಾಡು ವಾಸಿ ಕುರಿ ಕಾಯುವ ಜನಾಂಗ ಒಂದು ಜಾತಿಯ ಹೆಸರು
ಶಬ್ಧ ಹಳಹನ್ನಡ ಹೊಸಹನ್ನಡ
ಪೊನ್ ಪೊನ್ ಚಿನ್ನ

'ಪೊನ್' ಎಂದರೆ 'ಲೋಹ' ಎನ್ನುವ ಅರ್ಥ ಹಿಂದೆ ಇತ್ತು. ಆದರೆ ಅದು ಇಂದು ಲೋಹ ಎನ್ನುವ ಅರ್ಥ ಕಳಕೊಂಡು 'ಚಿನ್ನ' ಎನ್ನುವ ಸೀಮಿತ ಅರ್ಥ ಪಡೆದಿದೆ.

ಉದಾಹರಣೆಗೆ ಹಳಗನ್ನಡ ಪದ[ಬದಲಾಯಿಸಿ]

ಶಬ್ದ ಹಳಗನ್ನಡ ಹೊಸಗನ್ನಡ
ಸಮಯ ಧರ್ಮ ವೇಳೆ
ಅಮ್ಮ ತಂದೆ ತಾಯಿ
ಕುನ್ನಿ ಗಂಡುಮಗು ನಾಯಿಮರಿ
ಕೂಸು ಹೆಣ್ಣುಮಗು ಚಿಕ್ಕಮಗು
ಟೀಕೆ ವ್ಯಾಖ್ಯಾನ ಟೀಕಿಸು, ನಿಂದಿಸು
ಭದ್ರ ಮಂಗಳ ಜೋಪಾನ
ಮರ್ಯಾದೆ ಎಲ್ಲೆ, ಗಡಿ ಗೌರವ
ಸೀರೆ ವಸ್ತ್ರ ಹೆಂಗಸರ ಉಡುಪು

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಹೀಗೆ ಅನೇಕ ಶಬ್ದಗಳು ಕಾಲದಿಂದ ಕಾಲಕ್ಕೆ ಅವು ಹೊಂದಿದ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುತ್ತಾ ಬಂದುದನ್ನು ಲಕ್ಷಿಸುವೆವು. ಇದೂ ಒಂದು ರೀತಿಯಲ್ಲಿ ಭಾಷೆಯಲ್ಲಿ ನಡೆಯುವ ಬೆಳವಣಿಗೆಯನ್ನು ಸೂಚಿಸುವಂಥದ್ದಾಗಿದೆ ಎನ್ನಬಹುದು. ಆದರೆ ಕನ್ನಡ ಭಾಷಾ ಬೆಳವಣಿಗೆಯು ಶಬ್ದಗಳಲ್ಲಿ ಇಂಥ ಧ್ವನಿ ಹಾಗೂ ಅರ್ಥ ವ್ಯತ್ಯಾಸಗಳಂತಹ ಆಂತರಿಕ ಬದಲಾವಣೆಗಳಿಗಿಂತ ಅನ್ಯಭಾಷೆಗಳ ಶಬ್ದಗಳನ್ನು ಸ್ವೀಕರಿಸುವುದರ ಮೂಲಕ; ಹೊಸ- ಹೊಸ ಶಬ್ದಗಳ ಸೇರ್ಪಡೆಯು ಕನ್ನಡದ ನಿಘಂಟಿಗೆ ಆಗುವ ಮೂಲಕ ಘಟಿಸುವುದು .ತನ್ಮೂಲಕ ಕನ್ನಡದಲ್ಲಿ ಶಬ್ದಸಂಪತ್ತು ದ್ವಿಗುಣಗೊಂಡು ಭಾಷೆಯ ಬೆಳವಣಿಗೆಗೆ ಎಡೆಮಾಡಿಕೊಡುವುದು

  1. ಅರ್ಥಸಂಕೋಚ

ಉಲ್ಲೇಖ[ಬದಲಾಯಿಸಿ]

  1. http://kanaja.in/?p=101306
  2. ೨.೦ ೨.೧ ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭-೩೮. Check date values in: |year= (help)