ಕುರುಬ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವಾ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.

ಇತಿಹಾಸ ಪೂರ್ವ[ಬದಲಾಯಿಸಿ]

ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.

ಭಾರತ ಇತಿಹಾಸ[ಬದಲಾಯಿಸಿ]

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಕುರಿಗಾಹಿಯಾಗಿದ್ದು, ಆಗಿನ ನಂದ ದೊರೆಗಳ ವಿರುದ್ಧ ಸಿಡಿದೆದ್ದು ತನ್ನದೇ ಆದ ಸಾಮ್ರಾಜ್ಯವನ್ನು ಚಾಣಕ್ಯನ ಸಹಾಯದಿಂದ ಕಟ್ಟಿದನು. ಇದರು ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯಾ ಪಾರ್ಲಿಮೆಂಟ್ ಕಟ್ಟಡದ ೫ನೆ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ , ಅದರ ಕೆಳಗೆ " ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತಿರುವುದು" ಎಂದು ಬರಿಯಲಾಗಿದೆ.

ಇತರೆ ಹೆಸರುಗಳು[ಬದಲಾಯಿಸಿ]

ಕುರುಬರು, ಹಾಲುಮತ ,ಕುರುಬ ಗೌಡರು,ದೊಡ್ಡ ಕುರುಬ

ಕರ್ನಾಟಕದ ಹಾಲುಮತ ಕುರುಬರು[ಬದಲಾಯಿಸಿ]

ಕರ್ನಾಟಕದ ೩ನೆ ಅತಿ ದೊಡ್ಡ ಸಮುದಾಯ, ಕುರುಬ ಸಮುದಾಯ. ಕರ್ನಾಟಕದ ಪ್ರಮುಖ ಸಾಮ್ರಾಜ್ಯಗಳನ್ನು ಕಟ್ಟಿದವರು ಕುರುಬರು

ಕುರುಬ ಸಂಪ್ರದಾಯ[ಬದಲಾಯಿಸಿ]

ಕುರುಬರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿ ಕೊಂಡು ಬಂದವರು, ಕಲ್ಲನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ , ಅದೇ ಸಂಸ್ಕೃತಿ ಬರ ಬರುತ್ತಾ ಶಿವ ಲಿಂಗ ಪೂಜೆಯಾಗಿ ಮಾರ್ಪಟ್ಟಿತು.ಶ್ರೀ ಜಗದ್ಗುರು ರೇವಣ ಸಿದ್ದೇಶ್ವರರು, ಮತ್ತು ಶ್ರೀ ಜಗದ್ಗುರು ಶಾಂತಿಮಯ್ಯ ಒಡೆಯರು ಈ ಜನಾಂಗದ ಆದಿ ಗುರುಗಳು. ಇವರು ಶಿವನ್ನನ್ನು ಬೀರೇಶ್ವರ , ಮೈಲಾರಲಿಂಗ , ಮಾದೇಶ್ವರ , ಮಲ್ಲಪ್ಪ , ಮಲ್ಲಿಕಾರ್ಜುನ ಮುಂತಾದ ಹೆಸರಿನಲ್ಲಿ ಪುಜಿಸುತಾರೆ. ಎಲ್ಲಮ್ಮ , ಭೀಮವ್ವ , ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿ ದೇವಿಯನ್ನು ಪುಜಿಸುತಾರೆ. ಕರ್ನಾಟಕ ಮತ್ತು ಅಂದ್ರ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾಾ ಮೈಲಾರಲಿಂಗೇಶ್ವರ ದೇವಾಲಯವಿರುತ್ತೆ , ಈ ದೇವಾಲಯಗಳ ಪೂಜಾರಿಗಳು ಕುರುಬರಾಗಿರುತ್ತಾರೆ.ಹಾಗು ಹರಿಗೆ ಸೇವೆ ಮತ್ತು ಭೂತ್ತಪ್ಪ ದೇವರನ್ನು ಪೂಜಿಸುತ್ತಾರೆ

ಕುರುಬ ಹಬ್ಬಗಳು[ಬದಲಾಯಿಸಿ]

ಕುರುಬ ಉಪ ಜಾತಿಗಳು[ಬದಲಾಯಿಸಿ]

ಕುರುಬ ಇತಿಹಾಸ ಕತೆಗಳು[ಬದಲಾಯಿಸಿ]

ಕುರುಬ ಜನಪದ ಕಲೆಗಳು[ಬದಲಾಯಿಸಿ]

ಕುರುಬ ಧರ್ಮಕ್ಷೇತ್ರಗಳು[ಬದಲಾಯಿಸಿ]

Shri guru gouri somalingeshwar mayi makanapur Shri yogi amoghsiddeshwar mummet gudda. Jalageri. Dis.vijayapur.

ಕುರುಬ ಇತಿಹಾಸ ಪುರುಷರು[ಬದಲಾಯಿಸಿ]

[[ಚಿತ್ರ:Kuruba janangada gothragalu [KANAKALU GOTHRA]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಕುರುಬ&oldid=740577" ಇಂದ ಪಡೆಯಲ್ಪಟ್ಟಿದೆ