ಮೇಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರೆಯುವ ಮೇಜು

ಮೇಜು ಎಂದರೆ ಚಪ್ಪಟೆಯಾದ ಮೇಲ್ಭಾಗ ಹಾಗೂ ಒಂದು ಅಥವಾ ಹೆಚ್ಚು ಕಾಲುಗಳನ್ನು ಹೊಂದಿರುವ ಪೀಠೋಪಕರಣ ವಸ್ತು. ಇದನ್ನು ಕೆಲಸಮಾಡುವ ಮೇಲ್ಮೈಯಾಗಿ, ತಿನ್ನುವ ಮೇಲ್ಮೈಯಾಗಿ ಅಥವಾ ವಸ್ತುಗಳನ್ನು ಇಡುವ ಸ್ಥಳವಾಗಿ ಬಳಸಲಾಗುತ್ತದೆ.[೧][೨] ಮೇಜುಗಳ ಕೆಲವು ಸಾಮಾನ್ಯ ಪ್ರಕಾರಗಳೆಂದರೆ ಕೂತಿರುವ ಜನರು ಊಟಮಾಡಲು ಬಳಸುವ ಊಟದ ಕೋಣೆಯ ಮೇಜು; ಕೂರುಕೋಣೆಗಳಲ್ಲಿ ವಸ್ತುಗಳನ್ನು ಪ್ರದರ್ಶಿಸಲು ಅಥವಾ ಲಘು ಉಪಹಾರವನ್ನು ಬಡಿಸಲು ಬಳಸಲಾಗುವ ಕಡಿಮೆ ಎತ್ತರದ ಮೇಜಾದ ಕಾಫಿ ಮೇಜು; ಮತ್ತು ಅಲಾರಮ್ ಗಡಿಯಾರ ಮತ್ತು ದೀಪವನ್ನು ಇಡಲು ಬಳಸಲಾಗುವ ಹಾಸಿಗೆಬದಿಯ ಮೇಜು. ಅನೇಕ ವಿಶೇಷೀಕೃತ ಪ್ರಕಾರಗಳ ಮೇಜುಗಳು ಕೂಡ ಇವೆ, ಉದಾಹರಣೆಗೆ ವಾಸ್ತುಶಿಲ್ಪದ ರೇಖಾಚಿತ್ರಗಳನ್ನು ಬಿಡಿಸಲು ಬಳಸಲಾಗುವ ನಕಾಶೆ ತಯಾರಿಯ ಮೇಜು, ಮತ್ತು ಹೊಲಿಗೆಯ ಮೇಜುಗಳು.

ಮೇಲಿನ ಮೇಲ್ಮೈ ವಿವಿಧ ಆಕಾರಗಳದ್ದಾಗಿರಬಹುದು, ಆಯತಾಕಾರ, ಚೌಕಾಕಾರ, ದುಂಡನೆಯ ಆಕಾರ, ಅರ್ಧ ವೃತ್ತಾಕಾರ, ಅಥವಾ ಅಂಡಾಕಾರ. ಕಾಲುಗಳನ್ನು ಎರಡು ಅಥವಾ ಹೋಲುವ ಜೋಡಿಗಳಲ್ಲಿ ಹೊಂದಿಸಲಾಗಿರುತ್ತದೆ. ಮೇಜು ಸಾಮಾನ್ಯವಾಗಿ ನಾಲ್ಕು ಕಾಲುಗಳನ್ನು ಹೊಂದಿರುವುದಾದರೂ, ಕೆಲವು ಮೇಜುಗಳು ಮೂರು ಕಾಲುಗಳನ್ನು ಹೊಂದಿರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Table". Merriam-Webster. Retrieved 2012-05-18.
  2. "table, n.". Oxford English Dictionary (3rd ed.). 2008. Retrieved 29 May 2016.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಮೇಜು&oldid=1126598" ಇಂದ ಪಡೆಯಲ್ಪಟ್ಟಿದೆ